ಡಾ. ಅಸ್ಗರ್ ಅಲಿ ಎಂಜಿನಿಯರ್ ನಿಧನಕ್ಕೆ ಸಿಪಿಐ(ಎಂ) ಸಂತಾಪ.

ಕೋಮು ಸೌಹಾರ್ದಕ್ಕಾಗಿ ಸದಾ ಮಿಡಿಯುತ್ತಿದ್ದ ಹಿರಿಯ ಚೇತನ ಡಾ. ಅಸ್ಗರ್ ಅಲಿ ಎಂಜಿನಿಯರ್ ದೀರ್ಘಕಾಲದ ಅಸ್ವಸ್ಥತೆಯಿಂದ ನಿಧನರಾಗಿದ್ದಾರೆ. 73 ವರ್ಷದ ಅಸ್ಗರ್ ಸಂತಾಕ್ರೂಸ್ನ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.

ಅಸ್ಗರ್ ಅಲಿ ಎಂಜಿನಿಯರ್ ತಮ್ಮ ಜೀವನದುದ್ದಕ್ಕೂ ಕೋಮು ಸೌಹಾರ್ದಕ್ಕಾಗಿ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ಅವಿರತ ಹೋರಾಟ ನಡೆಸಿದವರು. ಅಂಧಶ್ರದ್ಧೆಯನ್ನು ಸದಾ ವಿರೋಧಿಸುತ್ತಾ ಬಂದ ಅವರು ಮೌಢ್ಯದ ವಿರುದ್ಧ ಜನಜಾಗೃತಿ ನಡೆಸಿದರು. ಬಾಬ್ರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಮತ್ತು 1992ರ ಮುಂಬೈ ದಂಗೆ ಸಂದರ್ಭದಲ್ಲಿ ಒಡೆದ ಮನಸುಗಳನ್ನು ಬೆಸೆಯುವ ಮಹಾ ಕಾರ್ಯದಲ್ಲಿ ತೊಡಗಿಸಿಕೊಂಡ ಪ್ರಮುಖರಲ್ಲಿ ಅವರು ಒಬ್ಬರಾಗಿದ್ದರು.

Engineer_

1939ರಲ್ಲಿ ರಾಜಸ್ತಾನದ ಸಾಲುಂಬರ್ನಲ್ಲಿ ಜನಿಸಿದ ಅಸ್ಗರ್, ಸಾಹಿತಿಯಾಗಿ, ಲೇಖಕರಾಗಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ದೇಶಾದ್ಯಂತ ಹೆಸರುವಾಸಿ. ಮುಂಬೈ ಮಹಾನಗರ ಪಾಲಿಕೆಯಲ್ಲಿ 20 ವರ್ಷ ಕಾಲ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಬಳಿಕ ಸ್ವಯಂ ನಿವೃತ್ತರಾದ ಅಸ್ಗರ್, ಜಾತ್ಯತೀತ ಮೌಲ್ಯಗಳಿಗೆ, ಕೋಮು ಸೌಹಾರ್ದಕ್ಕೆ ತಮ್ಮ ಜೀವನವನ್ನು ಅಪರ್ಿಸಿದರು. 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಅವರ ಕೆಲವು ಲೇಖನಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಅವರ ಆತ್ಮಚರಿತ್ರೆಯಾದ “ಎ ಲಿವಿಂಗ್ ಫೇತ್: ಮೈ ಕ್ವೆಸ್ಟ್ ಫಾರ್ ಪೀಸ್, ಹಾರ್ಮನಿ ಆಂಡ್ ಸೋಷಿಯಲ್ ಚೇಂಜ್” ಕೃತಿಗಳ 2011ರಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ನವದೆಹಲಿಯಲ್ಲಿ ಬಿಡುಗಡೆಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

2009ರಲ್ಲಿ ಜಗತ್ತಿನ 500 ಅತಿ ಪ್ರಭಾವಿ ಮುಸ್ಲಿಂ ನಾಯಕರಲ್ಲಿ ಒಬ್ಬರಾಗಿ ಪರಿಗಣಿತರಾಗಿದ್ದ ಅಸ್ಗರ್ 1997ರಲ್ಲಿ ಭಾರತ ಸಕರ್ಾರದಿಂದ ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿ ಪುರಸ್ಕೃತರಾಗಿದ್ದರು. 2004ರಲ್ಲಿ ನೊಬೆಲ್ಗೆ ಪಯರ್ಾಯ ಎನಿಸಿದ ಸ್ವೀಡನ್ ಸಕರ್ಾರದ ರೈಟ್ ಲೈವ್ಲೀ ಹುಡ್ ಪುರಸ್ಕಾರಕ್ಕೂ ಭಾಜನರಾದರು. ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಡಿ.ಲಿಟ್ ಪ್ರಶಸ್ತಿಯ ಗೌರವಕ್ಕೂ ಇವರು ಪಾತ್ರರಾಗಿದ್ದರು.

ಸೀತಾರಾಮ್ ಯೆಚೂರಿ ಯವರ ಸಂತಾಪ
ಅಗಲಿದ ಈ ಹಿರಿಯ ಚೇತನಕ್ಕೆ ಸಿಪಿಎಂ ಪಾಲಿಟ್ಬ್ಯೂರೋ ಸದಸ್ಯ ಸೀತಾರಾಂ ಯೆಚೂರಿ ಸಂತಾಪ ಸೂಚಿಸಿದ್ದಾರೆ. ದೇಶವನ್ನು ಜಾತ್ಯತೀತ ಪ್ರಜಾಸತ್ತಾತ್ಮಕ ತಳಹದಿಯಲ್ಲಿ ಕಟ್ಟಿ ಬೆಳೆಸಲು ದುಡಿಯುತ್ತಿದ್ದ ಅಸ್ಗರ್, ಧಾಮರ್ಿಕ ಮತೀಯವಾದದ ವಿರುದ್ಧ ಗಟ್ಟಿ ಧ್ವನಿ ಎತ್ತಿದವರು. ಗಲಭೆ ಪೀಡಿತರ ನೆರವಿಗೆ ಧಾವಿಸುತ್ತಿದ್ದ ಅವರು ಮಹಿಳೆಯರ ಅದರಲ್ಲೂ ಮುಸ್ಲಿಂ ಮಹಿಳೆಯರ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು ಎಂದು ಯೆಚೂರಿ ನೆನಪಿಸಿಕೊಂಡಿದ್ದಾರೆ.ಅವರ ಅಗಲಿಕೆ ಕೋಮುವಾದ ಮತ್ತು ಧಾಮರ್ಿಕ ಮತಾಂಧತೆಯ ವಿರುದ್ಧದ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿರುವ ಯೆಚೂರಿ, ಅಲಿ ಕುಟುಂಬ ಸದಸ್ಯರಿಗೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

ಡಿವೈಎಫ್ಐನ ಕೇಂದ್ರ ಸಮಿತಿ ಕೂಡ ಅಸ್ಗರ್ ಅಲಿ ಎಂಜಿನಿಯರ್ ನಿಧನಕ್ಕೆ ಅತೀವ ಸಂತಾಪ ಸೂಚಿಸಿದೆ. ಸಾಮಾಜಿಕ ನ್ಯಾಯಕ್ಕಾಗಿ ಅವಿರತವಾಗಿ ಶ್ರಮಿಸಿದ ಎಂಜಿನಿಯರ್ ನಿಧನ ಜಾತ್ಯತೀತ ಹೋರಾಟ ಮತ್ತು ಜನಪರ ಚಳವಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿರುವ ಡಿವೈಎಫ್ಐ, ಅಸ್ಗರ್ ಪುತ್ರ, ಪುತ್ರಿ ಮತ್ತು ಸಂಬಂಧಿಗಳಿಗೆ ಸಂತಾಪ ಸಂದೇಶವನ್ನು ಕಳುಹಿಸಿದೆ. ಡಾ. ಅಸ್ಗರ್ ಅಲಿ ಎಂಜಿನಿಯರ್ ನಿಧನಕ್ಕೆ `ಜನಶಕ್ತಿ’ ಕನ್ನಡ ವಾರಪತ್ರಿಕೆ ಸಂತಾಪ ವ್ಯಕ್ತಪಡಿಸುತ್ತದೆ.
0

Advertisements