12ನೇ ದಕ್ಷಿಣ ಆಫ್ರಿಕಾ ಟಿ.ಯು. ಮಹಾಧಿವೇಶನ

ಸಂಪುಟ 10 ಸಂಚಿಕೆ 4 ಜನವರಿ 24 – 2016 ಜಗದ ಸುತ್ತ – ವಸಂತರಾಜ

‘ಬಂಡವಾಳಶಾಹಿ ವರ್ಗದ ಹಿತಾಸÀಕ್ತಿಗಳನ್ನು ಪ್ರತಿನಿಧಿಸುವ ಸರಕಾರಗಳು ಬಹಿರಂಗವಾಗಿಯೇ ವರ್ಗ ಸಮರ ಘೋಷಿಸಿವೆ. ಕಾರ್ಮಿಕ ವರ್ಗವನ್ನು ಪ್ರತಿನಿಧಿಸುವ ನಾವು ಅದಕ್ಕೆ ಸರಿಯಾದ ಪ್ರÀತಿಸ್ಪಂದನೆ ಕೊಡುವ ರಾಜಕೀಯ ಮತ್ತು ಸಂಘಟನಾ ಸಾಮಥ್ರ್ಯ ಹೊಂದಿದ್ದೇವೆಯೇ ಎಂಬ ಪ್ರಶ್ನೆಗೆ, ಈ ಮಹಾಧಿವೇಶನ ಪ್ರಾಯೋಗಿಕ ಉತ್ತರ ಕಂಡುಕೊಳ್ಳಬೇಕಾಗಿದೆ’ – ಸಿಡುಮೊ ದ್ಲಾಮಿನಿ (ಕೊಸಾಟು ಅಧ್ಯಕ್ಷ)
ಇತ್ತೀಚೆಗೆ (ನವೆಂಬರ್ 23-26) ದಕ್ಷಿಣ ಆಫ್ರಿಕಾ ಟಿ.ಯು.ಗಳ ಕೇಂದ್ರೀಯ ಸಂಘಟನೆ ಕೊಸಾಟು (ದಕ್ಷಿಣ ಆಫ್ರಿಕಾ ಟ್ರೇಡ್ ಯೂನಿಯನ್ ಗಳ ಕಾಂಗ್ರೆಸ್)ನ 12 ನೇ ಮಹಾಧಿವೇಶನÀ ನಡೆಯಿತು. ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕ್ರಾಂತಿ ಮುನ್ನಡೆಸಲು ಕೊಸಾಟು ಐಕ್ಯತೆ ಮತ್ತು ಹೊಂದಾಣಿಕೆÉಗಾಗಿ’ ಎಂಬುದು ಮಹಾಧಿವೇಶನÀದ ಮುಖ್ಯ ಆಶಯವಾಗಿತ್ತು. ದಕ್ಷಿಣ ಆಫ್ರಿಕಾದ 19 ಲಕ್ಷ ಕಾರ್ಮಿಕರ ಟ್ರೇಡ್ ಯೂನಿಯನುಗಳು ಮತ್ತು 18 ಕ್ಷೇತ್ರವಾರು ರಾಷ್ಟ್ರೀಯ ಫೆಡರೇಶನುಗಳನ್ನು ಪ್ರತಿನಿಧಿಸುವ 2563 ಪ್ರತಿನಿಧಿಗಳು ಭಾಗವಹಿಸಿದ್ದರು. 31 ದೇಶಗಳ ಕೇಂದ್ರೀಯ ಟ್ರೇಡ್ ಯೂನಿಯನ್ ಗಳು ಹಾಗೂ ಡಬ್ಲ್ಯೂ.ಎಫ್.ಟಿ.ಯು. ನಂತಹ ಅಂತರ್ರಾಷ್ಟ್ರೀಯ ಟ್ರೇಡ್ ಯೂನಿಯನ್ ಸಂಘಟನೆಗಳನ್ನು ಪ್ರತಿನಿಧಿಸುವ 50 ಪ್ರತಿನಿಧಿಗಳು ಭಾಗವಹಿಸಿದ್ದರು. ಕೊಸಾಟು ದಕ್ಷಿಣ ಆಫ್ರಿಕಾದ ‘ತ್ರಿವಳಿ ಕೂಟ’ದ ಸದಸ್ಯ ಆಗಿರುವುದರಿಂದ ಕೂಟದ ಇನ್ನೆರಡು – ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ ಮತ್ತು ದಕ್ಷಿಣ ಆಫ್ರಿಕಾ ಕಾಂಗ್ರೆಸ್ – ಸದಸ್ಯ ಸಂಘಟನೆಗಳ ದೊಡ್ಡ ಪ್ರತಿನಿಧಿ ಮಂಡಲ ಮಹಾಧಿವೇಶನದಲ್ಲಿ ಭಾಗವಹಿಸಿತ್ತು. ಅವರು ಇತರ 2563 ಪ್ರತಿನಿಧಿಗಳು ಎಲ್ಲಾ ಕಲಾಪಗಳಲ್ಲಿ ಭಾಗವಹಿಸಿದರು. ಬರಿಯ ವೀಕ್ಷಕರಾಗಿರಲಿಲ್ಲ. ಭಾರತದ ಸಿಐಟಿಯುನ ಹಿರಿಯ ನಾಯಕ ಸ್ವದೇಶ್ ದೇವ್ ರಾಯ್ ಡಬ್ಲ್ಯೂ.ಎಫ್.ಟಿ.ಯು. ಉಪ ಪ್ರಧಾನ ಕಾರ್ಯದರ್ಶಿಯಾಗಿ ಭಾಗವಹಿಸಿದ್ದರು.
ಈ ವರ್ಷ ಕೊಸಾಟು ಸ್ಥಾಪನೆಯ 30ನೇ ವರ್ಷ ಹಾಗೂ ದಕ್ಷಿಣ ಆಫ್ರಿಕಾದ ಪ್ರಮುಖ ವಿದ್ಯಮಾನಗಳಾದ ಎಸ್.ಎ.ಸಿ.ಟಿ.ಯು.(ಕೊಸಾಟುವಿನ ‘ಪೂರ್ವಜ’ ಸಂಘಟನೆ) ಸ್ಥಾಪನೆ ಮತ್ತು ಸ್ವಾತಂತ್ರ್ಯ ಚಾರ್ಟರ್ ಗಳ 60ನೇ ವಾರ್ಷಿಕವೂ ಹೌದು. ಕೊಸಾಟು ಇತ್ತೀಚೆಗೆ ಪ್ರಮುಖ ಆಂತರಿಕ ಸಂಘಟನಾ ಕೋಲಾಹಲ ಎದುರಿಸಿತ್ತು. ಜುಲೈನಲ್ಲಿ ನಡೆದ ವಿಶೇಷ ರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ಪ್ರಧಾನ ಕಾರ್ಯದರ್ಶಿ ಜ್ವೆಲಿನ್‍ಜಿûಮಾ ವಾವಿ ಅವರನ್ನು ವಜಾ ಮಾಡಲಾಗಿತ್ತು. ಎನ್.ಯು.ಎಂ.ಎಸ್.ಎ.(ಲೋಹ ಕಾರ್ಮಿಕರ ರಾಷ್ಟ್ರೀಯ ಫೆಡರೇಶನ್) ಸಂಘಟನೆಯ ಕೊಸಾಟು ಸದಸ್ಯತ್ವ ರದ್ದು ಮಾಡಿತ್ತು.
‘ಸರಕಾರಗಳು ವರ್ಗ ಸಮರ ಘೋóಷಿಸಿವೆ’
ಬಂಡವಾಳಶಾಹಿ ವರ್ಗದ ಹಿತಾಸÀಕ್ತಿಗಳನ್ನು ಪ್ರತಿನಿಧಿಸುವ ಸರಕಾರಗಳು ‘ಬಹಿರಂಗವಾಗಿಯೇ ವರ್ಗ ಸಮರ ಘೋಷಿಸಿವೆ. ಕಾರ್ಮಿಕ ವರ್ಗವನ್ನು ಪ್ರತಿನಿಧಿಸುವ ನಾವು ಅದಕ್ಕೆ ಸರಿಯಾದ ಪ್ರÀತಿಸ್ಪಂದನೆ ಕೊಡುವ ರಾಜಕೀಯ ಮತ್ತು ಸಂಘಟನಾ ಸಾಮಥ್ರ್ಯ ಹೊಂದಿದ್ದೇವೆಯೇ ಎಂಬ ಪ್ರಶ್ನೆಗೆ, ಈ ಮಹಾಧಿವೇಶನ ಪ್ರಾಯೋಗಿಕ ಉತ್ತರ ಕಂಡುಕೊಳ್ಳಬೇಕಾಗಿದೆ’ ಎಂದು ಉದ್ಘಾಟನಾ ಭಾಷಣದಲ್ಲಿ ಕೊಸಾಟು ಅಧ್ಯಕ್ಷ ಸಿಡುಮೊ ದ್ಲಾಮಿನಿ ಸಾರಿದರು. ಕಾರ್ಮಿಕ-ವಿರೋಧಿ ನೀತಿಗಳಿಗಾಗಿ ಅವರು ದಕ್ಷಿಣ ಆಫ್ರಿಕಾ ಸರಕಾರವನ್ನು ಕಟುವಾಗಿ ಟೀಕಿಸಿದರು. ಅವರು ತಮ್ಮ ಭಾಷಣದಲ್ಲಿ ದಕ್ಷಿಣ ಆಫ್ರಿಕಾದ ಕಾರ್ಮಿಕ ವರ್ಗದ ಸಂಕಷ್ಟಗಳನ್ನು ವಿವರವಾಗಿ ಬಿಚ್ಚಿಟ್ಟರು. ಅರ್ಧದಷ್ಟು ಕಾರ್ಮಿಕರಿಗೆ ರಾಷ್ಟ್ರೀಯ ಆದಾಯದ ಶೇ. 8 ಸಹ ಸಿಗುತ್ತಿಲ್ಲ. ಅರ್ಧಕ್ಕಿಂತಲೂ ಹೆಚ್ಚು (ಶೇ. 54) ಕಾರ್ಮಿಕರಿಗೆ ನಿಯಮಿತ ಕೂಲಿ ಏರಿಕೆಯೂ ಆಗುವುದಿಲ್ಲ. ಹೀಗಿರುವಾಗ ಮಾಲಕರು ಸಾಮೂಹಿಕ ಚೌಕಾಶಿ ರದ್ದು ಮಾಡಲು ಹೇಗೆ ಒತ್ತಾಯಿಸುತ್ತಾರೆ ಎಂದು ಅವರು ಪ್ರಶ್ನಿಸಿದರು. ದಕ್ಷಿಣ ಆಫ್ರಿಕಾದ ‘ತ್ರಿವಳಿ ಕೂಟ’ದ ಇತರ ಎರಡು ಸಂಘಟನೆಗಳನ್ನು ಪ್ರತಿನಿಧಿಸಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜೇಕಬ್ eóÉೂಮೊ ಮತ್ತು ದಕ್ಷಿಣ ಆಫ್ರಿಕಾ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಬ್ಲೇಡ ಜಿûಮಾಂದೆ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಡಬ್ಲ್ಯೂ.ಎಫ್.ಟಿ.ಯು ಪ್ರಧಾನ ಕಾರ್ಯದರ್ಶಿ ಸಹ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.
ಮಹಾಧಿವೇಶನದ ವರದಿ ಸೃಜನಶೀಲವಾಗಿ ಆಕರ್ಷಕವಾಗಿ – ರಾಜಕೀಯ, ಸಾಮಾಜಿಕ-ಆರ್ಥಿಕ, ಸಂಘಟನಾ, ಅಂತರ್ರಾಷ್ಟ್ರೀಯ, ನಿರ್ಣಯಗಳು, ಹಣಕಾಸು ಲೆಕ್ಕಪತ್ರ ವರದಿ – ಆರು ಪುಸ್ತಕಗಳಲ್ಲಿ ಮುದ್ರಿತವಾಗಿತ್ತು. ಈ ಆರು ವರದಿಗಳನ್ನು ಮಂಡಿಸಿ, ಚರ್ಚಿಸಿ ಸೂಚಿತ ಅಂಗೀಕೃತ ತಿದ್ದುಪಡಿಗಳೊಂದಿಗೆ ಅನುಮೋದಿಸಲಾಯಿತು.
ಈ ವರದಿಗಳಲ್ಲಿ ಕಂಡು ಬಂದ ಕೆಲವು ಆಸಕ್ತಿಕಾರಕ ಅಂಶಗಳು
• ದೇಶದ ಒಟ್ಟು 1.34 ಕೋಟಿ ಕಾರ್ಮಿಕರಲ್ಲಿ ಶೇ. 27.6ರಷ್ಟು ಮಾತ್ರ ಸಂಘಟಿತರಾಗಿದ್ದಾರೆ
• ಸಂಘಟಿತ ಕಾರ್ಮಿಕರಲ್ಲಿ 35-45 ವಯೋಮಾನದವರು ಬಹುಸಂಖ್ಯಾತರು. ಶೇ. 41 ಮಹಿಳೆಯರು
• 1991ರಲ್ಲಿ ಸಾರ್ವಜನಿಕ ಕ್ಷೇತ್ರದ ಕಾರ್ಮಿಕರು ಕೊಸಾಟು ಸದಸ್ಯತ್ವದ ಶೇ. 7 ಮಾತ್ರ ಇದ್ದರು. ಅದು 2012ರ ಹೊತ್ತಿಗೆ ಶೇ. 39 ಕ್ಕೆ ಏರಿದೆ. ಅಂದರೆ ಖಾಸಗಿ ಕ್ಷೇತ್ರದ ಕಾರ್ಮಿಕರ ಪ್ರಮಾಣ ಇಳಿದಿದೆ ಅಂತ ಕೂಡಾ.
• ಖಾಸಗಿ ಕ್ಷೇತ್ರದಲ್ಲಿ ಸಂಘಟಿತ ಕಾರ್ಮಿಕರ ಪ್ರಮಾಣ 1995 ರಿಂದ ಶೇ. 32.4 ರ ಮಟ್ಟದಲ್ಲಿ ಸ್ಥಗಿತಗೊಂಡಿದೆ.
• ಸಾರ್ವಜನಿಕ ಕ್ಷೇತ್ರದಲ್ಲಿ ಸಂಘಟಿತ ಕಾರ್ಮಿಕರ ಪ್ರಮಾಣ 1995ರಲ್ಲಿದ್ದ ಶೇ. 50ರಿಂದ ಶೇ. 68.4 ಕ್ಕೆ ಏರಿದೆ. ಇದು ಕೊಸಾಟು ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ನಡೆಸಿದ ಸತತ ಹೋರಾಟದ ಪರಿಣಾಮವಾಗಿ ಕಾರ್ಮಿಕ ಕಾನೂನುಗಳಲ್ಲಿ ಬಂದ ಬದಲಾವಣೆಗಳಿಂದ ಸಾಧ್ಯವಾಗಿದೆ. ಇದರ ಪರಿಣಾಮವಾಗಿ ಪೋಲಿಸ್, ಮಿಲಿಟರಿಗಳಲ್ಲಿ ಕೆಲಸ ಮಾಡುವರೂ ಯೂನಿಯನ್ ಸದಸ್ಯರಾಗಬಹುದಾಗಿದೆ.
• ಕಾಂಟ್ರಾಕ್ಟ್ ಕಾರ್ಮಿಕರ ಬಗ್ಗೆ ಕೊಸಾಟು ಹೋರಾಟಗಳಿಂದ ಕಳೆದ ಎಪ್ರಿಲ್ ನಿಂದ ಬಂದ ಕಾನೂನು ಪ್ರಕಾರ 3 ತಿಂಗಳುಗಳಿಗಿಂತ ಹೆಚ್ಚಿನ ಕಾಂಟಾಕ್ಟ್ ಇರುವಂತಿಲ್ಲ. 3 ತಿಂಗಳುಗಳಿಗಿಂತ ಹೆಚ್ಚು ಅವಧಿ ಕೆಲಸ ಮಾಡಿದ ಕಾರ್ಮಿಕ ಖಾಯಂ ಆಗುತ್ತಾನೆ.
ತ್ರ್ರಿವಳಿ ಕೂಟದ ಶೃಂಗಸಭೆಗೆ ಕರೆ
ರಾಜಕೀಯ ಪರಿಸ್ಥಿತಿ ಬಗ್ಗೆ ಮಹಾಧಿವೇಶನ ಚರ್ಚೆ ನಡೆಸಿ 2016ರ ಮೊದಲ ಭಾಗದಲ್ಲಿ ತ್ರಿವಳಿ ಕೂಟದ ರಾಷ್ಟ್ರೀಯ ಶೃಂಗಸಭೆ ಸಂಘಟಿಸಬೇಕು. ಅದಕ್ಕಿಂತ ಮೊದಲು ಕೂಟದ ರಾಜಕೀಯ ಮಂಡಳಿಯ ಸಭೆ ಕರೆಯಬೇಕು. ಈ ಮಂಡಳಿ ಈಗಿನ ನವ-ಉದಾರವಾದಿ ನೀತಿಗಳನ್ನು ಬಿಟ್ಟು, ಜನಪರ ಹಾಗೂ ಜನರೇ ನಿರ್ಧರಿಸುವ ಆರ್ಥಿಕ ಬದಲಾವಣೆ ತರುವ ಬಗೆ ಹೇಗೆ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕ್ರಾಂತಿಯ ಪ್ರಗತಿ ಹಾಗೂ ಅದರ ಮುಂದಿರುವ ಸವಾಲುಗಳ ಕೂಲಂಕಷ ವಿಶ್ಲೇಷಣೆ ಮಾಡಬೇಕು ಎಂದು ಮಹಾಧಿವೇಶನ ಒತ್ತಾಯಿಸಿದೆ.
ಕಮ್ಯುನಿಸ್ಟ್ ಪಕ್ಷ ಕಾರ್ಮಿಕ ವರ್ಗದ ರಾಜಕೀಯ ಪಕ್ಷವಾಗಿದ್ದು ಅದನ್ನು ಬಲಪಡಿಸುವುದು, ಅದಕ್ಕೆ ಸಾಮೂಹಿಕ ಬಲ-ಬೆಂಬಲ ಒದಗಿಸುವುದು ಕೊಸಾಟುವಿನ ಕರ್ತವ್ಯ. ಕಾರ್ಖಾನೆಗಳ ಮತ್ತು ಇತರ ಕೆಲಸದ ಸ್ಥಳಗಳಲ್ಲಿ ಕಮ್ಯುನಿಸ್ಟ್ ಪಕ್ಷದ ಶಾಖೆಗಳನ್ನು ರಚಿಸಬೇಕು. ಈಗಾಗಲೇ ಇದ್ದಲ್ಲಿ ಅವನ್ನು ಬಲಪಡಿಸಬೇಕು. ಕೊಸಾಟು-ಕಮ್ಯುನಿಸ್ಟ್ ಪಕ್ಷದ ನಡುವೆ ಸಂಬಂಧಗಳನ್ನು ಆಳಗೊಳಿಸಬೇಕು ಎಂದು ಮಹಾಧಿವೇಶನ ನಿರ್ಧರಿಸಿದೆ. ಕಮ್ಯುನಿಸ್ಟ್ ಪಕ್ಷ ಸ್ವತಂತ್ರವಾಗಿ ಎ.ಎನ್.ಸಿ. ಜತೆ ಮೈತ್ರಿಕೂಟದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಮಹಾಧಿವೇಶನ ಕರೆ ಕೊಟ್ಟಿದೆ.
ಈಗಿನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳು ಅವಿರೋಧವಾಗಿ ಪುನರಾಯ್ಕೆಯಾದರು. ಮಹಾಧಿವೇಶನ ಕಾರ್ಮಿಕರ ಹಕ್ಕೊತ್ತಾಯಗಳನ್ನು ಮಂಡಿಸುವುದಲ್ಲದೆ ಸಂಘಟನೆಯ ಸಮೀಪ ಮತ್ತು ದೂರಗಾಮಿ ಉದ್ದೇಶಗಳನ್ನು ಈಡೇರಿಸುವ ವ್ಯೂಹ-ತಂತ್ರಗಳನ್ನು, ಹಾಗೂ ಅದಕ್ಕೆ ಬೇಕಾದ ಸಂಘಟನಾ ಕ್ರಮಗಳನ್ನು ನಿರೂಪಿಸುವ ಘೊಷಣೆಯನ್ನು ಅಂಗೀಕರಿಸಿತು.
ಅಕ್ಟೋಬರ್ 2016ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಡಬ್ಲ್ಯೂ.ಎಫ್.ಟಿ.ಯು. 17 ನೇ ಮಹಾಧಿವೇಶನಕ್ಕೆ ತಯಾರಿ ಕ್ರಮಗಳನ್ನು, ಡಬ್ಲ್ಯೂ.ಎಫ್.ಟಿ.ಯು. ಮತ್ತು ಕೊಸಾಟು ನಾಯಕರು ವಿಮರ್ಶಿಸಿದರು.

ಬ್ರೆಜಿಲ್ ರಾಜಕೀಯ ಬಿಕ್ಕಟ್ಟು

ಬ್ರೆಜಿಲ್ ಅಧ್ಯಕ್ಷರಾದ ದಿಲ್ಮಾ ರೌಸಫ್ ಅವರ ಪದಚ್ಯುತಿಯ ಪ್ರಕ್ರಿಯೆ ಆರಂಭವಾಗಿದ್ದು ಆ ದೇಶ ತೀವ್ರ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ. ದಿಲ್ಮಾ ರೌಸಫ್ ಅವರ ವರ್ಕರ್ಸ್ ಪಾರ್ಟಿ ಮತ್ತು ಉಪಾಧ್ಯಕ್ಷರ ಡೆಮೊಕ್ರಾಟಿಕ್ ಚಳುವಳಿ ಪಾರ್ಟಿಗಳ ನಡುವೆ ಬಿರುಕು ಉಂಟಾಗಿದ್ದು ಬಿಕ್ಕಟ್ಟು ಇನ್ನಷ್ಟು ತೀವ್ರವಾಗಿದೆ. ಈ ಬಿರುಕಿನಿಂದಾಗಿ ಪಾರ್ಲಿಮೆಂಟಿನ ಕೆಳಮನೆ (ನಮ್ಮ ಲೋಕಸಭೆಯಂತೆ) ರಹಸ್ಯ ಮತದಾನದಿಂಧ ಆರಿಸಿದ ಪದಚ್ಯುತಿ ಸಮಿತಿಯಲ್ಲಿ ಬಲಪಂಥೀಯ ಬಹುಮತವಿದೆ. ಕೆಳಮನೆಯಲ್ಲಿ ದಿಲ್ಮಾ ರೌಸಫ್ ಅವರ ಪರ 199 ಸದಸ್ಯರಿದ್ದರೆ ವಿರುದ್ಧ 272 ಸದಸ್ಯರಿದ್ದಾರೆ. ಆದರೆ ಪ್ರಾಂತೀಯ ಗವರ್ನರುಗಳಲ್ಲಿ ದಿಲ್ಮಾ ಅವರಿಗೆ ಬಹುಮತವಿದೆ.
ಬೂಜ್ರ್ವಾ ಮಧ್ಯಮ, ಕಾರ್ಮಿಕ ವರ್ಗಗಳೆಲ್ಲ ದಿಲ್ಮಾ ಪರ-ವಿರುದ್ಧವಾಗಿ ಇಬ್ಬಾಗವಾಗಿದೆ. ಕಾರ್ಮಿಕ ವರ್ಗದ ದೊಡ್ಡ ವಿಭಾಗ ಮತ್ತು ಎಡ ಪಕ್ಷಗಳು ದಿಲ್ಮಾ ಅವರ ಕಾರ್ಮಿಕ-ವಿರೋಧಿ ನೀತಿಗಳಿಂದ ಅತೃಪ್ತರಾಗಿದ್ದಾರೆ. ಅವರನ್ನು ರಾಜಕೀಯವಾಗಿ ಬೆಂಬಲಿಸುತ್ತಿಲ್ಲ. ಆದರೆ ಇದು ಬಲಪಂಥೀಯ ಸರ್ಕಾರಕ್ಕ ಎಡೆ ಮಾಡಿಕೊಡಬಹುದು. ಆಗ ಕಾರ್ಮಿಕ ವರ್ಗಗಳಿಗೆ ಇನ್ನಷ್ಟು ಹೆಚ್ಚಿನ ಅಪಾಯ ಎಂಬ ಆತಂಕವೂ ಇದೆ. ಮಧ್ಯಮ ವರ್ಗಗಳ ಒಂದು ವಿಭಾಗಕ್ಕೆ ಈಗ ಇರುವ ಅಧ್ಯಕ್ಷೀಯ ಆಕಾಂಕ್ಷಿಗಳಲ್ಲಿ ದಿಲ್ಮಾ ಅವರೊಬ್ಬರೇ ಭ್ರಷ್ಟರಲ್ಲ ಎಂದು ಗೊತ್ತಿದೆ. ಆದರೆ ಬಲಪಂಥೀಯ ನೀತಿಗಳ ಬಗೆಗ ಒಲವು ಇರುವ ಒಂದು ವಿಭಾಗ ಅವರಿಗೆ ವಿರುದ್ಧವಾಗಿದೆ. ಬೂಜ್ರ್ವಾ ವರ್ಗದ ದೊಡ್ಡ ವಿಭಾಗ ಬಲಪಂಥೀಯ ಸರಕಾರದ ಕನಸು ಈಗಾಗಲೇ ಕಾಣುತ್ತಿದೆ. ಆದರೆ ಇನ್ನೊಂದು ವಿಭಾಗ ದಿಲ್ಮಾ ಪದಚ್ಯುತಿ ಆದರೆ ತೀವ್ರ ಅಭದ್ರತೆ, ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು ಎಂದು ಆತಂಕಗೊಂಡಿದೆ.
ಒಟ್ಟಾರೆಯಾಗಿ ಹೀಗೆ ಬ್ರೆಜಿಲಿನಲ್ಲಿ ‘ಪಾರ್ಲಿಮೆಂಟರಿ ಕ್ಷಿಪ್ರಕ್ರಾಂತಿ’ ಮೂಲಕ ಬಲಪಂಥೀಯ ಸರಕಾರ ಬರುವುದರ ಬಗ್ಗೆ ತೀವ್ರ ಆತಂಕವಿದೆ. ಅಧ್ಯಕ್ಷÀ ದಿಲ್ಮಾ ರೌಸಫ್ ಸರಕಾರ ನಿಜವಾದ ಎಡ ನೀತಿಗಳನ್ನು ಜಾರಿಗೊಳಿಸದಿದ್ದರೂ, ವೆನೆಜುವೇಲಾ ಅರ್ಜೆಂಟಿನಾಗಳ ನಂತರ ಬ್ರೆಜಿಲಿಗೂ ಒಂದು ಬಲಪಂಥಿಯ ಸರಕಾರ ಬರುವುದು ಬಹಳ ಜನಕ್ಕೆ ಬೇಕಿಲ್ಲ.

Advertisements