ಸಿಪಿಐ(ಎಂ) ಪಕ್ಷದ ಕಛೇರಿ ಮತ್ತು ಕಾರ್ಯಕರ್ತರ ಮೇಲೆ ಬಿಜೆಪಿ-ಆರೆಸ್ಸೆಸ್ ಕ್ರೂರ ದಾಳಿಗೆ ವ್ಯಾಪಕ ಖಂಡನೆ

ಸಂಪುಟ: 10 ಸಂಚಿಕೆ: 23 Sunday, May 29, 2016

ಐದು ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆ ಮುಗಿದ ನಂತರ ಬಿಜೆಪಿ ಮತ್ತು ಆರ್.ಎಸ್.ಎಸ್ ಗೂಂಡಾ ದಾಳಿ ಭಯಾನಕ ವಾತಾವರಣ ಸೃಷ್ಟಿಸುತ್ತಿದ್ದು, ಅಧಿಕಾರ ಬಲ, ತೋಳ್ಬಲ ಮತ್ತು ಹಣಬಲದಿಂದ ಕಾನೂನು ಸುವ್ಯವಸ್ಥೆಯನ್ನು ಧಿಕ್ಕರಿಸಿ ವ್ಯಾಪಕ ಹಿಂಸಾಚಾರ ನಡೆಸುತ್ತಿದೆ.

ಮೇ 23ರಂದು ದೆಹಲಿಯಲ್ಲಿರುವ ಸಿಪಿಐ(ಎಂ) ಕೇಂದ್ರ ಕಛೇರಿ ಎಕೆಜಿ ಭವನದ ಮೇಲೆ ತನ್ನ ಕೇಸರಿ ಗೂಂಡಾಪಡೆಯಿಂದ ದಾಳಿ ನಡೆಸಿದೆ. ರಾಜಕೀಯ ಮತ್ತು ಸೈದ್ಧಾಂತಿಕ ದ್ವೇಷದಿಂದ ಸಿಪಿಐ(ಎಂ) ಮತ್ತು ಇತರ ಎಡಪಕ್ಷಗಳು ಹಾಗೂ ವಿರೋಧ ಪಕ್ಷಗಳ ಕಛೇರಿಗಳ ಮೇಲೆ ದಾಳಿ ಮಾಡುವುದು, ಕಾರ್ಯಕರ್ತರ ಮತ್ತು ಹಿತೈಷಿಗಳ ಮೇಲೆ ಎಗ್ಗಿಲ್ಲದೇ ಎರಗಿ ಕೊಲೆ ಮಾಡುತ್ತಿರುವ ಅನಾಗರಿಕ ಘಟನೆಗಳು ಸಾಗುತ್ತಿವೆ. ಸಿಪಿಐ(ಎಂ) ಘಟಕಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿವೆ.

ಬೆಂಗಳೂರು :

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮೇ 24ರಂದು ಸಿಪಿಐ(ಎಂ) ನೂರಾರು ಕಾರ್ಯರ್ತರು ಪ್ರತಿಭಟನೆ ನಡೆಸಿ ಸಂಘಪರಿವಾರದ ಧಾಳಿಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಬೆಂ. ಉತ್ತರ ಜಿಲ್ಲಾ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಸಮಿತಿ ಸದಸ್ಯರಾದ ಕೆ.ಎಸ್.ಲಕ್ಷ್ಮಿ ಮುಂತಾದ ಮುಖಂಡರು ಭಾಗವಹಿಸಿದ್ದರು.

ತುಮಕೂರು :

ನಗರದ ಬಿ.ಎಸ್.ಎನ್.ಎಲ್. ಕಛೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಬಿ.ಉಮೇಶ್, ಮುಖಂಡರಾದ ಲೋಕೇಶ್, ರಾಮಚಂದ್ರು, ಶ್ರೀಧರ್, ನಗರ ಕಾರ್ಯದರ್ಶಿ ಎಸ್. ರಾಘವೇಂದ್ರ, ಇ. ಶಿವಣ್ಣ, ಜಿ.ದರ್ಶನ್, ಮಂಜು, ಮುತ್ತುರಾಜ್, ಉಬೇದುಲ್ಲಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ದಾವಣಗೆರೆಯಲ್ಲಿ ಎಡಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಲಬುರಗಿ ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಭೂತ ದಹನ ಮಾಡಿ ಪ್ರತಿಭಟಿಸಿದರು.

Advertisements