ಸೆಕ್ಯುಲರ್‍ವಾದ ಮರೆಸಲು ಮಾಧ್ಯಮ ‘ಭಯೋತ್ಪಾದನೆ’

ಸಂಪುಟ 10, ಸಂಚಿಕೆ 6 ಫೆಬ್ರವರಿ 07, 2016  – ಮಾಧ್ಯಮ ಮಂಥನಕೆ.. ಸಿದ್ದಯ್ಯ

ಇಂದು ಪುಸ್ತಕಗಳಿಗೆ ಮಾಧ್ಯಮಗಳಲ್ಲಿ ಯಾವುದೇ ಸ್ಥಾನ ಇಲ್ಲ. ಅರಿವಿನ ಗೂಡಾದ ಗಂಭೀರ ಪುಸ್ತಕಗಳ ವಾಸನೆ ಸಹ ಓದುಗರಿಗೆ ದೊರೆಯದಂತೆ ಅವು ನೋಡಿಕೊಳ್ಳುತ್ತವೆ. ಪತ್ರಿಕೆಗಳು ಗಂಭೀರ ಪುಸ್ತಕ ವಿಮರ್ಶೆ ನಿಲ್ಲಿಸಿ ಬಹಳ ಕಾಲವಾಗಿದೆ. ಪುಸ್ತಕ ವಿಮರ್ಶೆಗಳಿಗೆ ಪ್ರಸಿದ್ಧವಾಗಿದ್ದ ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳ ವಿಮರ್ಶಾ ಕಾಲಂಗಳು ತೆಳುವಾಗುತ್ತಾ ನಡೆದಿವೆ. ಟಿವಿ ವಾಹಿನಿಗಳಲ್ಲಂತೂ ಪುಸ್ತಕಗಳಿಗೆ ಯಾವತ್ತೂ ಸ್ಥಾನ ಇರಲಿಲ್ಲ. ಇನ್ನು ಪುಸ್ತಕಗಳ ಬಗ್ಗೆ ಸಂವಾದಕ್ಕೆ ಎಲ್ಲಿನ ಸ್ಥಾನ? ಆದರೆ ಕಳೆದ ವಾರ ಏಕಾಏಕಿ ಕೆಲವು ಪತ್ರಿಕೆಗಳಿಗೆ ಮತ್ತು ಹೆಚ್ಚು ಕಡಿಮೆ ಎಲ್ಲಾ ಟಿವಿ ಚಾನೆಲುಗಳಿಗೆ ಪುಸ್ತಕಗಳ ಬಗ್ಗೆ ವಿಪರೀತ ಪ್ರೀತಿ ಹುಟ್ಟಿತು. ‘ಪುಸ್ತಕಪ್ರೀತಿತಿಂಗಳ ಮಾತುಕತೆಕಾರ್ಯಕ್ರಮದ ಅಂಗವಾಗಿಸೆಕ್ಯುಲರ್ವಾದ: ಸವಾಲುಗಳುಎಂಬ ವಿಷಯದ ಬಗ್ಗೆ ನಡೆಸಿದ ಸಂವಾದದಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ಮಟ್ಟು ಆಶಯ ಭಾಷಣ ಮಾಡಿದರು. ಸಂವಾದದಲ್ಲಿ ಒಂದು ಪತ್ರಿಕೆಯ ವರದಿಗಾರ ಬಿಟ್ಟರೆ ಇತರ ಟಿವಿ ಅಥವಾ ಪತ್ರಿಕೆಯ ವರದಿಗಾರರು ಬಂದಿರಲಿಲ್ಲ. ಮರುದಿನ ವಾರ್ತಾಭಾರತಿ ಮತ್ತು ಉದಯವಾಣಿಗಳಲ್ಲಿ ಸಂವಾದದ ಬಗ್ಗೆ ವರದಿಯಾಯಿತು.

ಸುರೇಶ್ ಕುಮಾರ್ ದಾಳಿ

ಎರಡು ವರದಿಗಳೂ ಪ್ರಧಾನವಾಗಿ ತೆಗೆದುಕೊಂಡದ್ದು ದಿನೇಶ ಅಮಿನ್ ಮಟ್ಟು ಅವರು ಆಶಯ ಭಾಷಣದಲ್ಲಿ ಆಡಿದ ಒಂದು ಮಾತನ್ನು. ಸೆಕ್ಯುಲರ್ ವಾದಕ್ಕೆ ಬಹುಸಂಖ್ಯಾತ ಮತ್ತು ಅಲ್ಪಸಂಖಾತ ಕೋಮುವಾದಗಳಿಂದ ಬಂದಿರುವ ಗಂಭೀರ ಸವಾಲುಗಳ ಸಂದರ್ಭದಲ್ಲಿ, ಅದರ ಹುಟ್ಟು ಪರಿಣಾಮಗಳ ಬಗ್ಗೆ ಚರ್ಚಿಸುತ್ತಾ ನಡೆಸಿದ ಮಾಡಿದ ಕಮೆಂಟು ಅದು. ‘ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಮುನ್ನಾ ಒಂದೆರಡು ದಿನಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ಯುವಕರನ್ನು ಬಂಧಿಸುವ ಮೂಲಕ ಹಿಂದೂ ಸಮುದಾಯದಲ್ಲಿ ಮುಸ್ಲಿಮರು ಭಯೋತ್ಪಾದಕರು ಎಂಬ ತಪ್ಪು ಮಾಹಿತಿ ರವಾನಿಸಲಾಗುತ್ತಿದೆಎಂದು ದಿನೇಶ್ ಅಮೀನ್ ಮಟ್ಟು ಹೇಳಿದರೆಂದು ಉದಯವಾಣಿ ಪ್ರಕಟಿಸಿತು. ಕೂಡಲೇ ದಿನೇಶ್ ಅವರ ರೀತಿಯ ಹೇಳಿಕೆಗೆ ಬಿಜೆಪಿಯ ಮಾಜಿ ಸಚಿವ ಎಸ್.ಸುರೇಶ್ಕುಮಾರ್ ಪತ್ರಿಕಾ ಗೋಷ್ಠಿ ನಡೆಸಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ಮಟ್ಟು ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸೇರಿದಂತೆ ಕೆಲವು ಮುಖಂಡರು ಕೂಡ ಇದಕ್ಕೆ ಬೆಂಬಲ ನೀಡಿದರು. ಅವರ ಮೇಲೆ ಮೊಕದ್ದಮೆ ಹೂಡಿ ಎಂದೂ ಆಗ್ರ್ರಹಿಸಿದರು. ದಿನೇಶ್ ಅವರ ಹೇಳಿಕೆ ಭಯೋತ್ಪಾದನೆಯ ವಿರುದ್ಧ ಕೇಂದ್ರ/ರಾಜ್ಯ ಸರಕಾರಗಳ ಕಾರ್ಯಾಚರಣೆಯನ್ನು ವಿರೋಧಿಸಿದಂತೆ. ಅದು ಭಯೋತ್ಪಾದನೆಯ ವಿರುದ್ಧ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂಬುದು ಅವರ ವಾದವಾಗಿತ್ತು. ಬಿಜೆಪಿಯ ಪ್ರತಿಕ್ರಿಯೆಗೆ ವ್ಯಾಪಕ ಪ್ರಚಾರ ದೊರೆಯಿತುಪತ್ರಿಕೆಗಳಲ್ಲೂ, ಟಿವಿ ಚಾನೆಲುಗಳಲ್ಲೂ. ವಿವಾದದ ನಂತರವೂ ಮೂಲ ಸಂವಾದದಲ್ಲಿ ಏನು ಚರ್ಚೆಯಾಯಿತು, ಯಾವ ಸಂದರ್ಭಧಲ್ಲಿ ಹೇಳಿಕೆ ಬಂದಿದ್ದು ಎಂಬುದು ಯಾವ ಪತ್ರಿಕೆ/ಟಿವಿ ಚಾನೆಲುಗಳಿಗೆ ಮುಖ್ಯ ಅನಿಸಲಿಲ್ಲ ( ಸಂವಾದದ ವರದಿ ಪುಟ 15ರಲ್ಲಿ ಇದೆ)

ನೀವು ಬಿಜೆಪಿ ಬಿಟ್ಟರೆ ನಾನೂ ರಾಜಿನಾಮೆ ಕೊಡುತ್ತೇನೆ”

ದಿನೇಶ್ ಅಮೀನ್ಮಟ್ಟು ಬಗ್ಗೆ ಸ್ಪಷ್ಟನೆ ನೀಡುತ್ತಾ ತಾವು ಭಯೋತ್ಪಾದನೆಯ ವಿರುದ್ಧ ಕೇಂದ್ರ/ರಾಜ್ಯ ಸರಕಾರಗಳ ಕಾರ್ಯಾಚರಣೆಯನ್ನು ವಿರೋಧಿಸಿಲ್ಲ, ಪ್ರಶ್ನಿಸಿಲ್ಲ. ಬದಲಾಗಿ ಬಂಧನಗಳ 1-2 ವರ್ಷಗಳ ನಂತರ ಏನಾಗುತ್ತೆ ಎಂಬುದರ ಬಗ್ಗೆ ನಾನು ಹೇಳಿದ್ದು ಎಂದರು. “ಧಾರ್ಮಿಕ ಕೋಮುವಾದದ ಮೇಲರಿಮೆ ಮತ್ತು ಕೀಳರಿಮೆಗಳ ಕುರಿತು ಸ್ಪಷ್ಟ ಅರಿವು ಇದ್ದಲ್ಲಿ ಮಾತ್ರ ಹಿಂದೂ ಹಾಗೂ ಮುಸ್ಲಿಂ ಎರಡು ಕೋಮುವಾದ ಕೊನೆಗಾಣಿಸಲು ಸರಿಯಾದ ಕಾರ್ಯತಂತ್ರ ರೂಪಿಸಲು ಸಾಧ್ಯಎಂದು ಹೇಳಿದ್ದಾಗಿ ಎಲ್ಲಾ ಪತ್ರಿಕೆಗಳಿಗೆ ಸ್ಪಷ್ಟೀಕರಣ ನೀಡಿದರು. ಆದರೆ ಕೆಲವು ಪ್ರಕಟಿಸಿ ಪತ್ರಿಕಾಧರ್ಮ ಪಾಲಿಸಿದವು. ಇನ್ನು ಕೆಲವು ಪ್ರಕಟಿಸದೆ ಸತ್ಯವನ್ನು ಮರೆಮಾಚಿಸಿದವು. (ಉದಯವಾಣಿಯಲ್ಲಿ ಪ್ರಕಟವಾದ ದಿನೇಶ್ ಪತ್ರ ಲೇಖನದ ಜತೆ ಇದೆ)

ಅಷ್ಟೇ ಅಲ್ಲ, ದಿನೇಶ್ ಅಮೀನ್ಮಟ್ಟು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮತ್ತಿತರರ ಟೀಕೆಗಳಿಗೆ ಉತ್ತರಿಸಿ ಒಂದು ಬಹಿರಂಗ ಪತ್ರ ಬರೆದರು. “ನಾನು ಹಿಂದೂ ಮತ್ತು ಮುಸ್ಲೀಂ ಭಯೋತ್ಪಾದನೆ ಮತ್ತು ಕೋಮುವಾದವನ್ನು ವಿರೋಧಿಸಿಕೊಂಡು ಬಂದವನು. ಆದರೆ ನೀವು(ಸುರೇಶ್ಕುಮಾರ್) ಮುಸ್ಲಿಂ ಭಯೋತ್ಪಾದನೆಯನ್ನು ಮಾತ್ರ ವಿರೋಧಿಸುತ್ತಿದ್ದೀರಿ. ನೀವು ಹೇಳಿದ ದೇವರಲ್ಲಿಗೆ ಬಂದು ಪ್ರಮಾಣ ಮಾಡು ಎಂದರೆ ಹಾಗೆಯೇ ಮಾಡುತ್ತೇನೆ. ನನ್ನ ನಂಬಿಕೆಗಿಂತ ನಿಮ್ಮ ನಂಬಿಕೆಯೇ ಮುಖ್ಯ. ನಾನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆಗೆ ರಾಜಿನಾಮೆ ನೀಡುತ್ತೇನೆ. ಮುಂದೆ ಯಾವ ಪಕ್ಷವನ್ನೂ ಸೇರುವುದಿಲ್ಲ. ನೀವು ಕೂಡ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ಕೊಡಿ. ಇಬ್ಬರೂ ಸೇರಿ ಹಿಂದೂ ಕೋಮುವಾದ ಮತ್ತು ಮುಸ್ಲೀಂ ಭಯೋತ್ಪಾದನೆ ವಿರುದ್ದ ಹೋರಾಟ ಮಾಡೋಣ….” ಎಂದು ಸವಾಲು ಹಾಕಿದರು.

ಭಯೋತ್ಪಾದನೆ” ಒನ್ಪಾಯಿಂಟ್ ಅಜೆಂಡಾ

ಆದರೆ, ದಿನೇಶ್ ಅಮೀನ್ ಮಟ್ಟು ನೀಡಿದ ಹೇಳಿಕೆಯಲ್ಲಿ ದೊಡ್ಡ ಪ್ರಮಾದವೇನೋ ನಡೆದುಹೋಗಿದೆ ಎಂಬಂತೆ ಭಾವಿಸಿದ ಕೆಲವು ದೃಶ್ಯ ಮಾಧ್ಯಮಗಳು ವಾಸ್ತವದಿಂದ ದೂರ ಸರಿದು ಅಮೀನ್ ಮಟ್ಟು ಅವರ ಮೇಲೆ ಮುಗಿ ಬಿದ್ದವು. ಎಲ್ಲಾ ಚಾನೆಲುಗಳಲ್ಲಿ ಇಡೀ ದಿನ ಅದೇ ಚರ್ಚೆ ನಡೆಯಿತು. ಕೆಲವು ಆರ್ಎಸ್ಎಸ್ ಮತ್ತು ಬಿಜೆಪಿ ಬೆಂಬಲಿತ ಮುಖಂಡರನ್ನು ಕರೆತಂದು ಸ್ಟುಡಿಯೋದಲ್ಲಿ ಕೂರಿಸಿ ಅಮೀನ್ ಮಟ್ಟು ವಿರುದ್ದ ಎತ್ತಿಕಟ್ಟುವ ಕೆಲಸ ಮಾಡಿದವು. ಅಷ್ಟೇ ಅಲ್ಲ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರ ನೈತಿಕ ಸ್ಥೈರ್ಯವನ್ನೂ ಕುಗ್ಗಿಸಲು ಹರಸಾಹಸ ಮಾಡಿದವು. ಟಿವಿ ಚರ್ಚೆಯಲ್ಲಿಭಯೋತ್ಪಾದನೆಒನ್ಪಾಯಿಂಟ್ ಅಜೆಂಡಾ ಆಯಿತು. ಚರ್ಚೆಯ ಮೂಲ ವಿಷಯವಾಗಿದ್ದ ಸೆಕ್ಯುಲರ್ವಾದವಾಗಲಿ, ಅದರ ಮುಂದಿರುವ ಸವಾಲುಗಳಾಗಲಿ, ಭಯೋತ್ಪಾದನೆಯ ಮೂಲಕಾರಣಗಲಾಗಲಿ, ಕೋಮುವಾದ ಮೂಲಭೂತವಾದ ಭಯೋತ್ಪಾದನೆಗಳ ಸಂಕೀರ್ಣ ಸಂಬಂಧಗಳಾಗಲಿ ಚರ್ಚೆಯಲ್ಲಿ ಬರಲಿಲ್ಲ. ದಿನೇಶ್ ಸೇರಿದಂತೆ ಒಬ್ಬಿಬ್ಬರು ಅದರ ಬಗ್ಗೆ ಚರ್ಚಿಸಲು ಹೊರಟರೆ ಹೆಚ್ಚಾಗಿ ಆಂಕರ್ ಸಹ ಸೇರಿದಂತೆ ಉಳಿದವರುನೀವು ಭಯೋತ್ಪಾದನೆಯ ಪರವಾ ವಿರುದ್ಧವಾ ಅದು ಮಾತ್ರ ಪ್ರಶ್ನೆಎಂದು ಅದಕ್ಕೆ ತಡೆ ಹಾಕುತ್ತಿದ್ದರು. ಭಯೋತ್ಪಾದನೆಯ ಬಗೆಗೆನೇ ಗಂಭೀರ ಚರ್ಚೆಗೆ ತಯಾರಿರಲಿಲ್ಲಭಯೋತ್ಪಾದನೆಯ ವಿರುದ್ಧ ಕಾರ್ಯಚರಣೆ ನಡೆಯುತ್ತಿರುವಾಗ, ಅದೂ ಗಣರಾಜ್ಯೋತ್ಸವದ ಮುನ್ನಾದಿನಗಳಲ್ಲಿ, ಹಿಂದಿನ ಬಂಧಿತ ಶಂಕಿತ ಪ್ರಕರಣಗಳು ಏನಾದವುಭಯೋತ್ಪಾದನೆಯ ಹುಟ್ಟುವಿಕಾಸದ ಮೂಲಕಾರಣಗಳ ಚರ್ಚೆ ನಡೆಸುವುದು ಸಹದೇಶವಿರೋಧಿಎಂಬ ಭಾವನೆಯನ್ನು ಟಿವಿ ಚಾನೆಲುಗಳು ವ್ಯಾಪಕವಾಗಿ ಬಿತ್ತಿದವು. ಸೆಕ್ಯುಲರ್ವಾದ ಮತ್ತು  ಕೋಮುವಾದದ ಅಪಾಯಗಳನ್ನು ಮರೆಸಲು ಆಳುವವರಿಗೆಭಯೋತ್ಪಾದನೆಅತ್ಯಂತ ಪ್ರಿಯ ವಿಷಯ. ಎಲ್ಲಾ ಟಿವಿ ಚಾನೆಲುಗಳು ದಿನೇಶ್ ಮತ್ತು ಸೆಕ್ಯುಲರ್ವಾದದ ವಿರುದ್ಧಭಯೋತ್ಪಾದನೆ ಕಾರ್ಯಾಚರಣೆಯನ್ನು ಸಂಘಟಿತವಾಗಿ ಕೈಗೊಂಡಂತೆ ಇತ್ತು.

ಹಿಂದೆಯೂ ರಾಮನ ಬಗ್ಗೆ ಭಗವಾನ್ ಹೇಳಿಕೆಯನ್ನು ಇಟ್ಟುಕೊಂಡು ಟಿವಿ ಚಾನೆಲುಗಳು ವಿವಾದದ ರಾಡಿ ಎಬ್ಬಿಸಿದವು. ಡಾ. ಕಲಬುರ್ಗಿ ಅವರ ಮೂಢನಂಬಿಕೆಯ ಬಗೆಗಿನ ಹೇಳಿಕೆಯನ್ನೂ ಸಂದರ್ಭದಿಂದ ಹೊರ ತೆಗೆದು ತಿರುಚಿ ವಿವಾದದ ರಾಡಿ ಎಬ್ಬಿಸಿದ್ದವು ಇದೇ ಮಾಧ್ಯಮಗಳು. ಮಾಧ್ಯಮ ಭಯೋತ್ಪಾದನೆಟಿವಿ ಚರ್ಚೆಯ ಸ್ಟಾಂಡರ್ಡ್ ವಿಧಾನಶೈಲಿಯೋ ಎಂಬಂತೆ ಆಗಿದೆ.

Advertisements

ಶಂಕಿತ ಉಗ್ರರ ಸೆರೆ ನಂತರ ಏನಾಗುತ್ತೆ ?

ಸಂಪುಟ 10 ಸಂಚಿಕೆ 6 ಫೆಬ್ರವರಿ 7, 2016

(ಜನವರಿ 26ರಂದು ಉದಯವಾಣಿಯಲ್ಲಿ ಪ್ರಕಟವಾದ ದಿನೇಶ್ ಪತ್ರ)

kat_240514_mum

ಜನವರಿ 23ರಂದು ಪುಸ್ತಕ ಪ್ರೀತಿ ಎಂಬ ಸಂಸ್ಥೆ ಸೆಕ್ಯುಲರ್ ವಾದ ಎಂಬ ವಿಷಯದ ಮೇಲೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ನಾನು ಮಾತನಾಡಿದ್ದೆ. ಆ ಬಗ್ಗೆ ನಿಮ್ಮ ವರದಿ ಬಹುತೇಕ ಸಮರ್ಪಕವಾಗಿದ್ದರೂ ಗ್ರಹಿಕೆಯ ವೈಫಲ್ಯದಿಂದಾಗಿ ತಪ್ಪು ಅರ್ಥಮಾಡಿಕೊಳ್ಳುವವರ ಕೈಗೆ ವಿವಾದ ಸಿಕ್ಕಿದಂತಾಗುತ್ತದೆ. ಅದು ನನ್ನ ಸುಮಾರು 30 ನಿಮಿಷಗಳ ಭಾಷಣ. ನಾನು ಮಾತನಾಡುತ್ತಿರುವುದು ಸೂಕ್ಷ್ಮ ವಿಷಯವೆಂದು ನನಗೆ ಗೊತ್ತಿರುವ ಕಾರಣ, ಇದನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಿದ್ದೆ. ವಿವಾದಕ್ಕೆ ಕಾರಣವಾದ ನನ್ನ ಮಾತುಗಳ ಮೂಲ ರೂಪದ ಅಂಶಗಳು ಇಲ್ಲಿವೆ:

  1. ಹಿಂದೂ ಮತ್ತು ಮುಸ್ಲಿಮ್ ಕೋಮುವಾದಗಳೆರಡನ್ನೂ ನಾವು ವಿರೋಧಿಸಬೇಕಾಗುತ್ತದೆ, ಈ ಬಗ್ಗೆ ನಮಗೆ ಯಾವುದೇ ಹಿಂಜರಿಕೆ, ಗೊಂದಲಗಳು ಇರಬಾರದು.

  2. ಕೋಮುವಾದವನ್ನು ಕೊನೆಗಾಣಿಸಬೇಕೆಂಬ ಪ್ರಾಮಾಣಿಕ ಇಚ್ಛೆ ನಮಗಿದ್ದರೆ ಮೊದಲು ಯಾವ ಕೋಮುವಾದ ಹೇಗೆ ಹುಟ್ಟಿಕೊಂಡಿತು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ.

  3. ಹಿಂದೂ ಕೋಮುವಾದಕ್ಕೆ ಬಹುಸಂಖ್ಯಾತರೆಂಬ ಮೇಲರಿಮೆ ಮತ್ತು ಅಹಮಿಕೆ ಹಾಗೂ ಮುಸ್ಲಿಮ್ ಕೋಮುವಾದಕ್ಕೆ ಅಲ್ಪ ಸಂಖ್ಯಾತರೆಂಬ ಕೀಳರಿಮೆ ಮತ್ತು ಅಸುರಕ್ಷತೆ ಕಾರಣವಾಗುತ್ತದೆ. ಇದನ್ನು ಅರ್ಥಮಾಡಿಕೊಂಡರೆ ಮಾತ್ರ ಎರಡೂ ಧರ್ಮಗಳ ಕೋಮುವಾದವನ್ನು ಕೊನೆಗಾಣಿಸಲು ಸರಿಯಾದ ಕಾರ್ಯತಂತ್ರವನ್ನು ರೂಪಿಸಲು ಸಾಧ್ಯ.

  4. ಆದರೆ ಇಂದು ಭಯೋತ್ಪಾದಕರ ಹೆಸರಲ್ಲಿ ಮುಸ್ಲ್ಲಿಮ್ ಗುಮ್ಮನನ್ನು ತೋರಿಸಿ ಆ ಮೂಲಕ ಹಿಂದೂ ಧರ್ಮವನ್ನು ಸಂಘಟಿಸಲು ಹೊರಟಿರುವವರು ಹಿಂದೂ ಕೋಮುವಾದವನ್ನು ಬೆಳೆಸುತ್ತಿದ್ದಾರೆ.

  5. ಧರ್ಮವನ್ನು ಬಿಟ್ಟು ಸೆಕ್ಯುಲರ್ ವಾದವನ್ನು ನಾವು ಕಟ್ಟಲಾಗುವುದಿಲ್ಲ. ಬಹುಶಃ ಎಡಪಂಥೀಯರು ಕೋಮುವಾದವನ್ನು ಸಮರ್ಥವಾಗಿ ಎದುರಿಸಲಾಗದೆ ಇರುವುದಕ್ಕೆ ಈ ಜಾತಿ-ಧರ್ಮದ ಕುರುಡು ಕೂಡಾ ಕಾರಣ. ಆದ್ದರಿಂದ ಧರ್ಮವನ್ನು ಸಾರಾಸಗಟಾಗಿ ತಿರಸ್ಕರಿಸದೆ ಧರ್ಮಾವಲಂಬಿಗಳ ಭಾವನೆಗಳನ್ನು ಗೌರವಿಸುತ್ತಲೇ ಸೆಕ್ಯುಲರ್ ವಾದವನ್ನು ಗಟ್ಟಿಕೊಳಿಸಬೇಕಾಗುತ್ತದೆ.

  6. ಪ್ರತಿ ಬಾರಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಮೊದಲು ಒಂದಷ್ಟು ಶಂಕಿತ ಭಯೋತ್ಪಾದಕರ ಬಂಧನ ನಡೆಯುತ್ತಿರುವುದು ಕಳೆದ 10-15 ವರ್ಷಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಇದನ್ನು ನಾನು ಪತ್ರಕರ್ತನಾಗಿ ವರದಿ ಮಾಡಿದ್ದೇನೆ. ಆದರೆ ಬಂಧಿತರ ಸ್ಥಿತಿ ನಂತರ ಏನಾಯಿತೆಂಬ ಬಗ್ಗೆ ಪತ್ರಕರ್ತರೂ ಸೇರಿದ ಹಾಗೆ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಮುಸ್ಲಿಮ್ ಯುವಕರು ಭಯೋತ್ಪಾದಕರೆಂಬ ಅಭಿಪ್ರಾಯ ಮಾತ್ರ ಇನ್ನಷ್ಟು ಜೋರಾಗಿ ಹರಡುತ್ತದೆ. ವಿಚಾರಣಾಧೀನ ಶಂಕಿತ ಭಯೋತ್ಪಾದಕರ ಸಂಖ್ಯೆ ಹೆಚ್ಚುತ್ತಲೇ ಇರುವುದು ಕಳವಳಕಾರಿಯಾದುದು.

  7. ಮೊದಲು ಈ ಧರ್ಮದೊಳಗಿನ ಜಾತೀಯತೆ, ಅಸ್ಪøಶ್ಯತೆ, ತಾರತಮ್ಯದ ನಿವಾರಣೆಯಾಗಬೇಕು. ಪೇಜಾವರ ಸ್ವಾಮಿಗಳಂಥವರು ಈ ಬಗ್ಗೆ ಯೋಚನೆ ಮಾಡಬೇಕು. ದಲಿತರ ಕೇರಿಗೆ ಹೋದರಷ್ಟೇ.

ಅಪ್ಪನ ಹುಟ್ಟುಹಬ್ಬ + ಮಗನ ಸಿನಿಮಾ ಎಂಟ್ರಿ ಸುದ್ದಿ…

ಸಂಪುಟ 10 ಸಂಚಿಕೆ  2 ಜನವರಿ 10 – 2016 ಮಾಧ್ಯಮ ಮಂಥನ – ವಿಶ್ವಾಸ್

ಯಾವ ವಿಚಾರಕ್ಕೆ ಆದ್ಯತೆ ನೀಡಬೇಕು ಎಂಬ ವಿಚಾರದಲ್ಲಿ ಮುಖ್ಯವಾಹಿನಿ ಮಾಧ್ಯಮಗಳು -ಪತ್ರಿಕೆಗಳು ಹಾಗೂ ಟಿವಿ ಚಾನೆಲ್‍ಗಳು- ತಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳುವುದೇ ಇಲ್ಲ ಎಂಬುದನ್ನು ಈಗೊಂದು ವಾರದ ವಿದ್ಯಮಾನಗಳನ್ನು ಅವಲೋಕಿಸಿದಾಗ ಸ್ಪಷ್ಟವಾಗುತ್ತದೆ. `ಹೊಸ ಸಮಾಜದ ನಿರ್ಮಾಣಕ್ಕಾಗಿ’, `ಭರವಸೆಯ ಬೆಳಕು’ ಎಂಬಿತ್ಯಾದಿಯಾದ ಘೋಷಣೆಗಳನ್ನು ಹೊಂದಿದ್ದರೂ ಬಂಡವಾಳಶಾಹಿ ವ್ಯವಸ್ಥೆಯ ಎಲ್ಲಾ ಬಗೆಯ ಅನ್ಯಾಯಗಳನ್ನು ಸ್ಥಾಯಿಗೊಳಿಸಲೇ ನಾವು ಕೆಲಸ ಮಾಡುವುದು ಎಂಬುದನ್ನು ಅವು ಸಾರಿ ಹೇಳುತ್ತಿವೆ.

ಜನತೆಯ ಬದುಕು-ಭಾಷೆ ಹಸನಾಗಬೇಕಾದರೆ ಬಂಡವಾಳಶಾಹಿ ವ್ಯವಸ್ಥೆಯ ಮಿತಿಯ ಒಳಗಡೆಯೇ ಏನೆಲ್ಲಾ ಕೆಲಸಗಳು ಆಗಬೇಕು, ಮಾಡಲು ಸಾಧ್ಯ ಎನ್ನುವುದನ್ನು ಗುರುತಿಸುವಲ್ಲಿ ಕಾರ್ಪೊರೇಟ್ ಹಿಡಿತದಲ್ಲಿರುವ ಮಾಧ್ಯಮಗಳು ವಿಫಲವಾಗಿರುವುದನ್ನು ಈ ಬೆಳವಣಿಗೆಗಳು ತೋರಿಸುತ್ತವೆ.

ವೈಜ್ಞಾನಿಕ ಆಧಾರದೊಂದಿಗೆ ಭಾಷಾವಾರು ರಾಜ್ಯಗಳು ರಚನೆಯಾಗಿ ಆರು ದಶಕಗಳು ಪೂರ್ಣಗೊಂಡ ಸಂದರ್ಭವನ್ನು ಗುರುತಿಸುವಲ್ಲಿ ಕರ್ನಾಟಕದಲ್ಲಿನ ಮಾಧ್ಯಮಗಳು, ಸಾಹಿತ್ಯ ವಲಯ, ತಥಾಕಥಿತ ಕನ್ನಡಪರ ಸಂಘಟನೆಗಳು ಮತ್ತು ಸರಕಾರವೂ ವಿಫಲವಾಗಿರುವಾಗ ಅದನ್ನು ಗುರುತಿಸಿ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲು ಮುಂದಾಗಿದ್ದು ದುಡಿಯುವ ಜನರ ಪ್ರಾಣಮಿತ್ರ `ಜನಶಕ್ತಿ’ ವಾರಪತ್ರಿಕೆ.

`ಭಾಷಾವಾರು ರಾಜ್ಯಗಳ ಅಧಿಕಾರಗಳ ಸವೆತ’ ಸುದ್ದಿ ಅಲ್ಲ

ಡಿಸೆಂಬರ್ 13 ರಂದು ಜನಶಕ್ತಿ ಉತ್ಸವದ ಅಂಗವಾಗಿ ಅದು ಏರ್ಪಡಿಸಿದ್ದ `ಭಾಷಾವಾರು ರಾಜ್ಯಗಳ ಅಧಿಕಾರಗಳ ಸವೆತ’ ವಿಚಾರ ಸಂಕಿರಣ ಒಂದು ಮಹತ್ವದ ಕಾರ್ಯಕ್ರಮವಾಗಿತ್ತು. ಅಧಿಕಾರದ ಕೇಂದ್ರಬಿಂದು ವಿಧಾನಸೌಧದ ಫಾಸಲೆಯಲ್ಲೇ ಇರುವ ಸೆಕ್ರಟಾರಿಯೇಟ್ ಕ್ಲಬ್‍ನಲ್ಲಿ ಈ ಸಂಕಿರಣ ನಡೆಯಿತು. ಸ್ವಾತಂತ್ರ್ಯ ಹೋರಾಟದ ಜತೆಯಲ್ಲೆ ಬೆಸೆದುಕೊಂಡು ಬಂದ ಭಾಷಾವಾರು ರಾಜ್ಯ ರಚನೆಯ ಪರಿಕಲ್ಪನೆ ಹಾಗೂ ಅದರ ಮಹತ್ವವನ್ನು ನೆನಪಿಸಿಕೊಳ್ಳುತ್ತಲೇ ಕರ್ನಾಟಕವೂ ಸೇರಿದಂತೆ ಭಾಷಾವಾರು ರಾಜ್ಯಗಳ ಇಂದಿನ ಸ್ಥಿತಿ ಏನಾಗಿದೆ, ಒಕ್ಕೂಟ ವ್ಯವಸ್ಥೆ ಇದ್ದರೂ ರಾಜ್ಯಗಳು ಯಾವ ರೀತಿಯಲ್ಲಿ ಕೇಂದ್ರದ ಅಡಿಯಾಳಾಗಿ ಇರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಇತ್ಯಾದಿ ಗಂಭೀರ ವಿಚಾರಗಳನ್ನು ಸಂಕಿರಣದಲ್ಲಿ ಚರ್ಚಿಸಲಾಯಿತು. ಕೇರಳದ ಮಾಜಿ ಸಚಿವ ಎಂ.ಎ. ಬೇಬಿ, ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ. ಎಸ್. ಚಂದ್ರಶೇಖರ್, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ, ಚಿಂತಕ ಜಿ.ಎನ್. ನಾಗರಾಜ್, ಹಿರಿಯ ಕಾರ್ಮಿಕ ಮುಖಂಡ ವಿ.ಜೆ.ಕೆ. ನಾಯರ್ ಮೊದಲಾದವರು ರಾಜ್ಯಗಳ ಆಧಿಕಾರಗಳಿಗೆ ಬಂದಿರುವ ಕುತ್ತು, ಜನರ ಜೀವನ ಎದುರಿಸುತ್ತಿರುವ ಅಡ್ಡಿ ಆತಂಕಗಳು ಮುಂತಾದ ಸಂಗತಿಗಳನ್ನು ವಿವರವಾಗಿ ತೆರೆದಿಟ್ಟರು.

ಆದರೆ ಯಾವುದೇ ಟಿವಿ ವಾಹಿನಿಗೆ ಇದೊಂದು ಪ್ರಸಾರ ಮಾಡಬೇಕಾದ ಸುದ್ದಿ ಎನಿಸಲಿಲ್ಲ. ಹೋಗಲಿ, ಮರುದಿನ ಪತ್ರಿಕೆಗಳಲ್ಲಾದರೂ ಈ ಬಗ್ಗೆ ವರದಿಗಳು ಬರಬಹುದು ಎಂಬ ನಿರೀಕ್ಷೆಯೂ ಸುಳ್ಳಾಯಿತು.

ಆದರೆ, ಅದೇ ದಿನ ಅಂದರೆ ಡಿಸೆಂಬರ್ 13 ರಂದು `ಕಲಿ’ ಎಂಬ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮ ಅದು ರಾತ್ರಿಹೊತ್ತು ನಡೆದರೂ ಚಾನೆಲ್‍ಗಳಲ್ಲಿ ಪ್ರಸಾರವಾದವು, ಮರುದಿನ ಪತ್ರಿಕೆಗಳ ಮುಖಪುಟಗಳಲ್ಲೇ ಅದರ ಸುದ್ದಿ ರಾರಾಜಿಸಿದವು. ಶಿವರಾಜ್‍ಕುಮಾರ್ ಮತ್ತು ಸುದೀಪ್ ಒಟ್ಟಾಗಿ ನಟಿಸುತ್ತಾರೆ ಹಾಗೂ ಇದು ನೂರು ಕೋಟಿ ರೂಪಾಯಿ ಬಜೆಟ್‍ನ ಸಿನಿಮಾ ಎನ್ನುವುದು ಮಾಧ್ಯಮಗಳ ಸಂಭ್ರಮಕ್ಕೆ ಕಾರಣವಾಗಿತ್ತು!

ಅಪ್ಪನ ಹುಟ್ಟುಹಬ್ಬ ಪ್ಲಸ್ ಮಗನ ಸಿನಿಮಾ ಎಂಟ್ರಿ.. ಸಂಭ್ರಮದ ಸುದ್ದಿ

ಅದಾದ ಮೂರನೇ ದಿನ ಅಂದರೆ ಡಿಸೆಂಬರ್ 16 ರಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಯವರ 57ನೇ ಹುಟ್ಟುಹಬ್ಬ (ಮತ್ತು). ಅದೇ ಸಂದರ್ಭದಲ್ಲಿ ಅವರ ಮಗ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಕಾರ್ಯಕ್ರಮ. ಕುಮಾರಸ್ವಾಮಿ ಕುಟುಂಬದ ಮಾಲಿಕತ್ವದ ಚಾನೆಲ್‍ನಲ್ಲಿ ಬೆಳಗ್ಗಿನಿಂದಲೇ ಕ್ಷಣ ಕ್ಷಣದ ಮಾಹಿತಿಯ ಪ್ರಸಾರ. ಹೌದು, ತಮ್ಮದೇ ಮಾಲಿಕತ್ವದ ಚಾನೆಲ್‍ನಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು ಎಂದರೆ ಅದು ಸ್ವಲ್ಪ ಮಟ್ಟಿಗೆ ಸಹ್ಯ ಎಂದು ಹೇಳಬಹುದೇನೋ. ಆದರೆ ಆ ದಿನ ಆಗಿದ್ದೇನು? ಇರುವ ಎಲ್ಲಾ ಕನ್ನಡ ಚಾನೆಲ್‍ಗಳ ಪೈಕಿ ಒಂದೋ ಎರಡೋ ವಾಹಿನಿಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲಾ ವಾಹಿನಿಗಳು ಈ `ಸಂಭ್ರಮ’ದ ನೇರ ಪ್ರಸಾರದಲ್ಲಿ ತೊಡಿಗಿಕೊಂಡಿದ್ದವು. ಇರುವ ಒಂದು ಇಂಗ್ಲಿಷ್ ಚಾನೆಲ್ ಕೂಡ ಇದರಿಂದ ಹೊರತಾಗಿರಲಿಲ್ಲ.

ಕುಮಾರಸ್ವಾಮಿಯವರ ಮಗ ಚಿತ್ರರಂಗಕ್ಕೆ ಕಾಲಿಟ್ಟಿದ್ದರಿಂದ ಇಡೀ ರಾಜ್ಯದ ಜನರ, ಯುವಜನರ ಭಾಗ್ಯದ ಬಾಗಿಲು ತೆರೆಯಿತೇನೋ ಎನ್ನುವ ಪರಿಯಲ್ಲಿ ಕಾರ್ಯಕ್ರಮವನ್ನು ಬಿತ್ತರಿಸಲಾಯಿತು. ಮರುದಿನ ಪತ್ರಿಕೆಗಳ ವರದಿಗಳೂ ಹಾಗೇ ಇದ್ದವು.

ನೋಡಿ, ಅವರದೇ ಕುಟುಂಬದ ಚಾನೆಲ್ ಇದ್ದರೂ ನಾವೆಲ್ಲ ಅವರ ಕಾರ್ಯಕ್ರಮವನ್ನೂ ಗರಿಷ್ಟ ಕಾಳಜಿಯೊಂದಿಗೆ ಪ್ರಸಾರ ಮಾಡಿ `ನಿಷ್ಪಕ್ಷಪಾತಿ ಧೋರಣೆ’ ಪ್ರದರ್ಶಿಸಿದ್ದೇವೆ ಎಂದೇನಾದರೂ ಇತರ ಚಾನೆಲ್‍ಗಳು ಹೇಳಿಕೊಳ್ಳುತ್ತವೋ ಏನೋ ಗೊತ್ತಿಲ್ಲ.

ಈ ನಡುವೆ, ಲಕ್ಷಾಂತರ ಜನರ ಬದುಕಿನೊಂದಿಗೆ ಸಂಬಂಧ ಹೊಂದಿರುವ ರೇಷ್ಮೆ ಬೆಳೆಗಾರರ ಬವಣೆಯ ಬಗ್ಗೆ 15 ರಂದು ನಡೆದ ಸಾವಿರಾರು ರೈತರ ವಿಧಾನಸೌಧ ಚಲೋ ಕಾರ್ಯಕ್ರಮ ಚಾನೆಲ್‍ಗಳಿಗೆ ಕಾಣಿಸಲಿಲ್ಲ. ಮರುದಿನದ ಪತ್ರಿಕೆಗಳಲ್ಲಿ ಅಲ್ಪಸ್ವಲ್ಪ ಸಚಿತ್ರ ವರದಿ ಪ್ರಕಟವಾದವು ಎನ್ನುವುದು ಸಮಾಧಾನದ ಸಂಗತಿ.

ಅದೇ ರೀತಿ, ಮೌಢ್ಯವನ್ನು ಪ್ರತಿಪಾದಿಸುವ ಎಡೆಸ್ನಾನಕ್ಕೆ ಪ್ರತಿರೋಧವಾಗಿ ನಡೆದ ಪ್ರತಿಭಟನಾ ಚಳವಳಿಗಳು ಕೂಡ ಪತ್ರಿಕೆಗಳಿಗೂ ಬೇಡವಾಯಿತು, ಇಲೆಕ್ಟ್ರಾನಿಕ್ ಮಾಧ್ಯಮಕ್ಕೂ ಬೇಡವಾಯಿತು. ಸ್ವಲ್ಪ ಸಮಾಧಾನ ಪಡುವ ಸಂಗತಿಯೆಂದರೆ ಒಂದೇ ಒಂದು ವಾಹಿನಿ (ರಾಜ್ ನ್ಯೂಸ್) ಆ ದಿನ ಒಂದು ಪ್ಯಾನೆಲ್ ಚರ್ಚೆ ಏರ್ಪಡಿಸಿತ್ತು. ಅದು ಮೌಢ್ಯವನ್ನು ಪ್ರತಿಪಾದಿಸುವವರ ಮುಖವಾಡವನ್ನು ಬಯಲು ಮಾಡುವಲ್ಲಿ ನೆರವಾಗುವಂತಿತ್ತು.

ಈ ರೀತಿಯಾಗಿ ಗಮನಿಸುತ್ತಾ ಹೋದರೆ ಮಾಧ್ಯಮಗಳು ಒಟ್ಟಾರೆಯಾಗಿ ಸಮಾಜಕ್ಕೆ ಹಿತಬಯಸುವ ಶಕ್ತಿಗಳ ಚಟುವಟಿಕೆಗಳನ್ನು ನಿರ್ಲಕ್ಷಿಸುತ್ತಾ ಸಮಾಜದಲ್ಲಿ ಭ್ರಮೆಯನ್ನು ಹುಟ್ಟಿಸುವ ಪ್ರಕ್ರಿಯೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಕಂಡುಬರುತ್ತದೆ.

nikhil-gowda-debut-movie-jaguar-to-be-official-launched-on-dec-16-14-1450085890

 

ತುಮಕೂರು: ಮಾಧ್ಯಮದವರ ಮೇಲೆ ಹಲ್ಲೆ  ಕಾನೂನು ಕ್ರಮಕ್ಕೆ ಡಿವೈಎಫ್‌ಐ ಆಗ್ರಹ

ಸಂಪುಟ 9 ಸಂಚಿಕೆ 22 – 31 ಮೇ 2015

ಚಂದ್ರಪ್ಪ ತುಮಕೂರಿನ ‘ಪ್ರಜಾವಾಣಿ’ ಪ್ರತಿಕೆಯ ವರದಿಗಾರರು. ಮಾಧ್ಯಮ ವಲಯದಲ್ಲಿ ಸಾಕಷ್ಟು ಒಳ್ಳೆಯ ಹೆಸರನ್ನು ಸಹ ಗಳಿಸಿರುವ ವ್ಯಕ್ತಿ.  ಚಂದ್ರಪ್ಪ ಮತ್ತು ಮಾಧ್ಯಮದ ಅವರ ಸಂಗಡಿಗರು ಮೇ 19, 2015  ರಂದು ಬೆಳಿಗ್ಗೆ ತುಮಕೂರಿನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ವಾಪಸ್ ಬರುವ ಮಾರ್ಗದಲ್ಲಿ ಸ್ಕಾರ್ಪಿಯೋ ವಾಹನವೊಂದು ಚಂದ್ರಪ್ಪ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಈ ವಿಷಯವಾಗಿ ಸಣ್ಣ ಆಕ್ಷೇಪವೆತ್ತಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸೂಚಿಸಿದ್ದೇ ಮಹಾಪರಾಧವೆಂಬಂತೆ ಕಾರಿನಲ್ಲಿದ್ದ ಜಯ ಕರ್ನಾಟಕ ಸಂಘಟನೆಯ ತುಮಕೂರು ಜಿಲ್ಲಾ ಅಧ್ಯಕ್ಷ ಸೋಮಶೇಖರ್ ಮತ್ತು ಏಳು ಜನ ಜೊತೆಗಾರರು ಚಂದ್ರಪ್ಪ ಅವರನ್ನು ಮನಬಂದಂತೆ ಥಳಿಸಿದ್ದಾರೆ. ಚಂದ್ರಪ್ಪ ಅವರ ಜೊತೆಗಾರರು ‘ಚಂದ್ರಪ್ಪ ಪ್ರರ್ತಕರ್ತರು, ಅವರ  ಮೇಲೆ ಹಲ್ಲೆ ಮಾಡಬೇಡಿ’ ಎಂದು ಹೇಳಿದರೂ ಕೇಳದೇ ಕೆಳಗೆ ಬೀಳಿಸಿ ತುಳಿದಿದ್ದಾರೆ. ಇದೇ ದಾಳಿಯಲ್ಲಿ ಚಂದ್ರಪ್ಪ ಅವರ ಸಹಾಯಕ್ಕೆ ಬಂದ ‘ದೂರದರ್ಶನ’ದ ಈರಣ್ಣ, ‘ವಾರ್ತಾ ಭಾರತಿ’ಯ ರಂಗರಾಜು ಅವರ ಮೇಲೆ ಸಹ ಹಲ್ಲೆ ಮಾಡಲಾಗಿದೆ. ಚಂದ್ರಪ್ಪ ಅವರ ಎರಡು ಹಲ್ಲುಗಳು ಮುರಿದಿವೆ. ಮೈಕೈಗಳಲ್ಲಿ ಸಹ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದಾದ ಮೇಲೆ ಸೋಮಶೇಖರ್ ಮತ್ತು ಸಂಗಡಿಗರು ತಲೆ ತಪ್ಪಿಸಿಕೊಂಡಿದ್ದಾರೆಂದು ವರದಿಯಾಗಿದೆ. ತುಮಕೂರು ಡಿವೈಎಫ್‌ಐ ಜಿಲ್ಲಾ ಸಮಿತಿಯು ಈ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ದಾಳಿ ನಡೆಸಿದವರ ಮೇಲೆ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

‘ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಹಾಡು ಹಗಲೇ ಜನನಿಬಿಡ ರಸ್ತೆಯಲ್ಲಿ ಒಬ್ಬ ಜವಾಬ್ದಾರಿಯುತ ಮಾಧ್ಯಮ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದು ಜೊತೆಗೆ ಅವರನ್ನು ಬಿಡಿಸಲು ಹೋದ ಇತರೆ ಮಾಧ್ಯಮ ಸಂಗಾತಿಗಳ ಮೇಲೆ ಸಹ ಹಲ್ಲೆ ನಡೆಸಿರುವುದು ಖಂಡನಾರ್ಹ’ ಎಂದು ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಎಂ.ಜಿ.ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಎಂ.ಆರ್. ನಾಗರಾಜು ತೀವ್ರವಾಗಿ ಖಂಡಿಸಿದ್ದಾರೆ.

ಮೋದಿ ಪ್ರಶ್ನಾತೀತರಲ್ಲ – ಅವರನ್ನು ಠೀಕಿಸುವುದು ಅಪರಾಧವಲ್ಲ

ಸಂಪುಟ 8 ಸಂಚಿಕೆ 36   7 ಸೆಪ್ಟಂಬರ್ 2014

– ನಿತ್ಯಾನಂದಸ್ವಾಮಿ

10410818_852871294724845_8635445050671633618_n

‘ಜನಶಕ್ತಿ’ ವಾರಪತ್ರಿಕೆ ಇದೇ ಅಗಸ್ಟ್ 17ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಉತ್ಸವದ ಅಂಗವಾಗಿ ‘ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ’ ಎಂಬ ವಿಷಯದ ಕುರಿತು ವಿಚಾರ ಸಂಕಿರಣವೊಂದನ್ನು ಎರ್ಪಡಿಸಿತ್ತು. ಪತ್ರಿಕೆಯ ಸಂಪಾದಕನಾಗಿ ನಾನು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದೆ. ರಾಜ್ಯಸಭಾ ಸದಸ್ಯರು, ‘ಪೀಪಲ್ಸ್ ಡೆಮಾಕ್ರಸಿ’ ವಾರಪತ್ರಿಕೆಯ ಸಂಪಾದಕರೂ ಆಗಿರುವ ಸೀತಾರಾಂ ಯೆಚೂರಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ್ದರು. ಹಿರಿಯ ಪತ್ರಕರ್ತರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೂ ಆಗಿರುವ ದಿನೇಶ್ ಅಮೀನ್ಮಟ್ಟು ಅವರು ವಿಚಾರ ಸಂಕಿರಣದ ಆಶಯ ಭಾಷಣ ಮಾಡಿದ್ದರು, ‘ಮುದ್ರಣ ಮಾಧ್ಯಮದ ಸವಾಲುಗಳು ಮತ್ತು ಪರ್ಯಾಯ’ ಎಂಬ ವಿಷಯವನ್ನು ಕುರಿತು ಪರ್ತಕರ್ತ ಎನ್.ಎ.ಎಂ. ಇಸ್ಮಾಯಿಲ್, ‘ಎಲೆಕ್ಟ್ರಾನಿಕ್ ಮಾಧ್ಯಮದ ಸವಾಲುಗಳು ಮತ್ತು ಪರ್ಯಾಯ’ದ ಬಗ್ಗೆ ಪತ್ರಕರ್ತ ನವೀನ್ ಸೂರಿಂಜೆ ಮತ್ತು ‘ಸಾಮಾಜಿಕ ಮಾಧ್ಯಮದ ಸವಾಲುಗಳು ಮತ್ತು ಪರ್ಯಾಯ’ದ ಕುರಿತು ಬರಹಗಾರರಾದ ಜಿ.ಎನ್. ನಾಗರಾಜ್ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ವಿಚಾರ ಸಂಕಿರಣ ತುಂಬ ಅರ್ಥಪೂರ್ಣವಾಗಿ ನಡೆದಿತ್ತು. ವಿಚಾರ ಸಂಕಿರಣದಲ್ಲಿ ಒಂದು ವಿಶಾಲವಾದ ಒಮ್ಮತ ಮೂಡಿತ್ತು. ಅದು ಏನೆಂದರೆ – ಮಾಧ್ಯಮಗಳು ನಮ್ಮ ಪ್ರಜಾಪ್ರಭುತ್ವದ ನಾಲ್ಕನೇಯ ಅಂಗ. ದೇಶದ ಆಗು-ಹೋಗುಗಳ ಮೇಲೆ, ಜನಜೀವನದ ಮೇಲೆ ಅವು ಮಹತ್ತರವಾದ ಪ್ರಭಾವ ಬೀರುತ್ತವೆ, ಆದರೆ ಇಂದು ಕಾರ್ಪೋರೇಟ್ ಸಂಸ್ಥೆಗಳು ಹಾಗೂ ದೊಡ್ಡ ಉದ್ಯಮಿಗಳು ಅವುಗಳನ್ನು ತಮ್ಮ ನಿಯಂತ್ರಣಕ್ಕೆ ಒಳಪಡಿಸುತ್ತಿವೆ. ಮಾಧ್ಯಮಗಳ ಮೂಲಕ ತಮ್ಮ ಅಭಿಪ್ರಾಯಗಳನ್ನೇ(Views) ಸುದ್ದಿ(News)ಗಳಾಗಿ ಬಿಂಬಿಸಿ ಜನರ ದಾರಿತಪ್ಪಿಸುತ್ತಿವೆ. ಮಾಧ್ಯಮ ರಂಗದ ಸ್ವಾತಂತ್ರ್ಯವನ್ನು ಬೆಂಬಲಿಸಿ ಬಲಪಡಿಸುವುದು ನಮ್ಮ ಕರ್ತವ್ಯ ಎಂದು ಒಪ್ಪಿಕೊಳ್ಳುತ್ತಾ ಮಾಧ್ಯಮಗಳು ಸಾಮಾಜಿಕ ಹೊಣೆಗಾರಿಕೆ ಆಧಾರಿತ ಸ್ವಯಂ ನಿಯಂತ್ರಣ ನೀತಿ ಸಂಹಿತೆಗೆ ಒಳಗಾಗಬೇಕಾಗಿದೆ ಎಂಬುದು ವಿಚಾರಸಂಕಿರಣದಲ್ಲಿ ಮೂಡಿಬಂದ ಒಟ್ಟಾಭಿಪ್ರಾಯವಾಗಿದೆ.

ಅಲ್ಲಸಲ್ಲದ ಆರೋಪ ;

   ಅಂದು ಎಲ್ಲವೂ ಸುಸೂತ್ರವಾಗಿ ನಡೆಯಿತು. ಪ್ರೇಕ್ಷಕರೆಲ್ಲರು ತೃಪ್ತಿಭಾವನೆಯಿಂದ ಮರಳಿದರು. ಪ್ರೇಕ್ಷಕರಲ್ಲಿ ಪತ್ರಕರ್ತರು, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ದುಡಿಯುತ್ತಿರುವವರು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿದ್ದರು. ಮರುದಿನ ಪತ್ರಿಕೆಗಳು ವಿಚಾರ ಸಂಕಿರಣದ ಕಲಾಪಗಳನ್ನು ಒಂದು ಪ್ರಮುಖ ಸುದ್ದಿಯಾಗಿ ಪ್ರಕಟಿಸಿದವು.

   ಕನ್ನಡಪ್ರಭ ದಿನಪತ್ರಿಕೆಯು ಅಗಸ್ಟ್ 19ರ ತನ್ನ ಸಂಚಿಕೆಯ ಮುಖಪುಟದಲ್ಲಿ ‘ಪೂರ್ವಗ್ರಹ ಪೀಡಿತ, ಬೇಜವಾಬ್ದಾರಿ ಹೇಳಿಕೆ – ವಿವಾದಕ್ಕೆ ಕಾರಣವಾದ ಮಟ್ಟು ಮಾತು, ಮಾಧ್ಯಮ ವಲಯದಲ್ಲಿ ಭಾರೀ ವಿರೋಧ’ ಎಂಬ ತಲೆ ಬರಹದ ಅಡಿಯಲ್ಲಿ ತನ್ನ Viewsಗಳನ್ನು Newsಆಗಿ ಪ್ರಕಟಿಸಿತು. ಬೇರೆ ಯಾವ ಪತ್ರಿಕೆಯೂ ದಿನೇಶ್ ಅಮೀನ್ ಮಟ್ಟು ಅವರು ಆಡಿದ ಮಾತುಗಳ ಬಗ್ಗೆ ಈ ರೀತಿಯ ಠೀಕೆಯನ್ನಾಗಲಿ, ಅಲ್ಲಸಲ್ಲದ ಆರೋಪಗಳನ್ನಾಗಲಿ ಮಾಡಿಲ್ಲ. ಅಮೀನ್ ಮಟ್ಟು ಅವರ ಮಾತುಗಳಿಗೆ ಮಾಧ್ಯಮ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ ಎಂಬ ಸತ್ಯಕ್ಕೆ ದೂರವಾದ ತಮ್ಮ ಆರೋಪವನ್ನು ಸಾಬೀತುಪಡಿಸಲು ಮೂರು ನಾಲ್ಕು ಬರಹಗಳನ್ನು ಬರೆಯಿಸಿ ಕನ್ನಡ ಪ್ರಭದಲ್ಲಿ ಪ್ರಕಟಿಸಲಾಯಿತು.

   ಪ್ರಧಾನಿ ಮೋದಿಯವರ ಬಗ್ಗೆ ಅಮೀನ್ಮಟ್ಟು ಅವರು ಅವಹೇಳನಕಾರಿ ಮಾತನ್ನಾಡಿದ್ದಾರೆ ಎಂಬುದೇ ಕನ್ನಡಪ್ರಭ ಪತ್ರಿಕೆಯ ಆರೋಪ. ಅಮೀನ್ ಮಟ್ಟು ಅವರ ಅಂದಿನ ಮಾತುಗಳನ್ನು ಕನ್ನಡಪ್ರಭ ಅಗಸ್ಟ್ 18ರ ಸಂಚಿಕೆಯಲ್ಲಿ ಪ್ರಕಟಿಸಿರುವುದನ್ನೇ ಗಮನಿಸಿದರೆ ಈ ಆರೋಪದಲ್ಲಿ ಹುರುಳಿಲ್ಲ ಎಂಬುದು ಸಾಬೀತಾಗುತ್ತದೆ. ಪ್ರಧಾನಿ ಮೋದಿಯವರ ಸ್ವಾತಂತ್ರೋತ್ಸವದ ಭಾಷಣವನ್ನು ಕೆಲವು ಸುದ್ದಿ ವಾಹಿನಿಗಳು ದಿನವೀಡಿ ಬಿತ್ತರಿಸಿದ್ದರ ಕುರಿತು ಒಂದು ವಾಹಿನಿಯ ಮಿತ್ರರೊಬ್ಬರ ಬಳಿ ಮಾತನಾಡುತ್ತಾ ಕೇವಲ ಅಭಿಮಾನದಿಂದ ಈ ರೀತಿ ದಿನವಿಡೀ ಸುದ್ದಿ ಬಿತ್ತರಿಸುವುದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆಯೂ ಸುದ್ದಿ ಪ್ರಸಾರ ಮಾಡಬಹುದಲ್ಲ ಎಂದು ಅಮೀನ್ ಮಟ್ಟು ಕೇಳಿದಾಗ ಅವರ ಮಿತ್ರ ‘ಅದು ಅಭಿಮಾನದಿಂದ ಅಲ್ಲ, ಪ್ಯಾಕೇಜ್ ಸುದ್ದಿ’ ಎಂದಿದ್ದಾರೆ. ಈ ಮಾತುಗಳನ್ನು ಆಲಿಸಿದ ಪ್ರೇಕ್ಷಕರಿಗೆ ಆಶ್ಚರ್ಯವಾಗಲಿ ಅಘಾತವಾಗಲಿ ಆಗಲಿಲ್ಲ. ಕಾಸಿಗಾಗಿ ಸುದ್ದಿ, ಪ್ಯಾಕೇಜ್ ಡೀಲ್ಗಳಿಗೆ ಮಾಧ್ಯಮದವರು ಈಡಾಗುತ್ತಿರುವುದು ಅಮೀನ್ ಮಟ್ಟು ಅವರ ಸಂಶೋಧನೆ ಅಲ್ಲ.

   ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜುರವರು ಮಾಧ್ಯಮ ರಂಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಆ ವಿದ್ಯಮಾನವನ್ನು ಪ್ರಸ್ತಾಪಿಸಿ ಖೇದ ವ್ಯಕ್ತಪಡಿಸಿದ್ದಾರೆ. 16ನೇ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಚುನಾವಣಾ ಪ್ರಚಾರಕ್ಕಾಗಿ 15 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿರುವುದನ್ನು ಮಾಧ್ಯಮಗಳೇ ವರದಿ ಮಾಡಿವೆ. ಹೀಗೆ ವರದಿ ಮಾಡಿದ ಮಾಧ್ಯಮದವರನ್ನು ಕನ್ನಡ ಪ್ರಭ ಇದೇ ರೀತಿ ತರಾಟೆಗೆ ತೆಗೆದುಕೊಂಡಿತ್ತಾ? ಇತ್ತೀಚೆಗೆ ಮಾಧ್ಯಮಗಳ ಸಂಪಾದಕರ ಸಭೆಯಲ್ಲಿ ‘ಕಾಸಿಗಾಗಿ ಸುದ್ದಿ’ಯ ವ್ಯವಹಾರದಲ್ಲಿ ಸಾವಿರಾರು ಕೋಟಿ ರೂಪಾಯಿ ಹಸ್ತಾಂತರ ಆಗಿರುವ ಬಗ್ಗೆ ಚರ್ಚೆಯಾಗಿದ್ದು ಕನ್ನಡಪ್ರಭ ಈ ಕುರಿತು ಯಾಕೆ ಆಕ್ಷೇಪಿಸಿಲ್ಲ?

   ಈ ಹಿನ್ನೆಲೆಯಲ್ಲೇ, ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್ಗಳ ಸಂಪಾದಕರನ್ನು ಲೋಕಪಾಲ್ ವ್ಯಾಪ್ತಿಗೆ ಒಳಪಡಿಸಬೇಕೆಂದು ಅಮೀನ್ ಮಟ್ಟು ಹೇಳಿದ್ದು. ಇದೇ ಮಾತು ಕನ್ನಡಪ್ರಭಕ್ಕೆ ನುಂಗಲಾರದ ತುತ್ತು ಆಗಿದ್ದು, ಆದರೆ, ಅದನ್ನು ಪ್ರಸ್ತಾಪಿಸಿದರೆ ಎಲ್ಲಿ ತನ್ನ ಬಣ್ಣ ಬಯಲಾಗುತ್ತದೊ ಎಂಬ ಭೀತಿಯಿಂದ ಅಮೀನ್ ಮಟ್ಟು ಅವರು ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಸುಳ್ಳು ಆರೋಪ ಮಾಡಿದೆ. ಮೋದಿ ಈಗ ದೇಶದ ಪ್ರಧಾನಿ, ಅವರು ಪ್ರಶ್ನಾತೀತರಲ್ಲ. ಅವರ ನಡೆಯನ್ನು ಪ್ರಶ್ನಿಸುವ, ಠೀಕಿಸುವ ಅಧಿಕಾರ ಎಲ್ಲರಿಗೂ ಇದೆ. ಅವರ ಚುನಾವಣಾ ಪ್ರಚಾರಕ್ಕಾಗಿ ಖರ್ಚುಮಾಡಲಾದ ಮೊತ್ತ ಸಣ್ಣದೇನಲ್ಲ. ಅದು ಯಾರ ಹಣ? ಅದರ ಮೂಲ ಯಾವುದು? ಅದರ ಹಿಂದಿನ ಉದ್ದೇಶವೇನು? ಇದನ್ನು ಪ್ರಶ್ನೆ ಮಾಡುವುದು ಅಪರಾಧವಲ್ಲ.

   ಇಷ್ಟಕ್ಕೆ ಅಮೀನ್ ಮಟ್ಟು ಅವರನ್ನು ವಜಾ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಕನ್ನಡಪ್ರಭದಲ್ಲಿ ಕೂಗಾಡಿದ್ದು ಆ ಪಕ್ಷದ ದಿವಾಳಿಕೋರತನದ ದ್ಯೋತಕವಾಗಿದೆ. ಅಮೀನ್ ಮಟ್ಟು ಅವರು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರು ಮಾತ್ರ. ಅವರು ಕೊಡುವ ಸಲಹೆಗಳನ್ನು ಮುಖ್ಯಮಂತ್ರಿ ಅನುಸರಿಸಲೇ ಬೇಕೆಂಬ ನಿಯಮವೇನಿಲ್ಲ. ಅವರು ಖಾಸಗಿ ವೇದಿಕೆಯಿಂದ ಮಾತನಾಡುವಾಗ ತಮ್ಮ ಅಭಿಪ್ರಾಯವನ್ನು ಹೇಳುವ ಸ್ವಾತಂತ್ರ್ಯ ಅವರಿಗಿದೆ. ಸ್ವೀಕರ್ ಕಾಗೋಡು ತಿಮ್ಮಪ್ಪನವರು ತಮ್ಮ ಸರ್ಕಾರದ ವಿರುದ್ಧವೇ ಮಾತನಾಡುವ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತಿರುವಾಗ ಅಮೀನ್ ಮಟ್ಟು ಅವರು ಇನ್ನೊಂದು ಸರ್ಕಾರ ಪ್ರಧಾನಿಯನ್ನು ಠೀಕಿಸುವ ಸ್ವಾತಂತ್ರ್ಯವನ್ನು ಬಳಸಬಾರದೆ?

ಉಚಿತ ಉಪದೇಶಗಳು :

   ಕನ್ನಡ ಪ್ರಭ ತನ್ನ ‘ಅನುಭವ ಮಂಟಪ’ಕ್ಕೆ ಕೆಲವು ಮಾಧ್ಯಮದವರನ್ನು, ಪತ್ರಕರ್ತರನ್ನು ಕರೆತಂದು ಅಮೀನ್ ಮಟ್ಟು ಅವರಿಗೆ ಕೆಲವು ಉಚಿತ ಉಪದೇಶಗಳನ್ನು ಭೋಧಿಸುವ ಪ್ರಯತ್ನ ಮಾಡಿದೆ. ಸುವರ್ಣ ಸುದ್ದಿವಾಹಿನಿಯ ಸಂಪಾದಕರು ‘ಅಮೀನ್ ಮಟ್ಟು ಅವರಿಗೆ ವಿದ್ಯುನ್ಮಾನ ಮಾಧ್ಯಮಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದು ತಿಳಿದಿಲ್ಲ’ ಎಂದಿದ್ದಾರೆ. ಇಡೀ ವಿಶ್ವಕ್ಕೆ ತಿಳಿದಿರುವ ಸಂಗತಿ ಅಮೀನ್ ಮಟ್ಟು ಅವರಿಗೆ ತಿಳಿದಿಲ್ಲ ಎನ್ನುವುದರಲ್ಲಿ ಕುಚೋದ್ಯವಿದೆ. ‘ಒಂದೆರೆಡು ಕಪ್ಪು ಕುರಿಗಳು ಇದ್ದರೆ ಅದೇ ಪತ್ರಿಕೋದ್ಯಮ ಎಂದು ಕರೆಯಲು ಬರುವುದಿಲ್ಲ’ ಎಂದು ಪಬ್ಲಿಕ್ ಟಿ.ವಿ. ಮುಖ್ಯಸ್ಥರು ಎಚ್ಚರಿಸಿದ್ದಾರೆ. ಎಲ್ಲಾ ಪತ್ರಿಕೋದ್ಯಮದವರು ಭ್ರಷ್ಟರಿದ್ದಾರೆ ಎಂದು ಅಮೀನ್ ಮಟ್ಟು ಹೇಳಿರಲಿಲ್ಲವಲ್ಲ. ಮಾಧ್ಯಮದಲ್ಲಿ ದುಡಿದವರೇ ಮಾಧ್ಯಮಗಳ ಮರ್ಯಾದೆ ಹರಾಜು ಹಾಕುವುದು ನಾಚಿಕೆಗೇಡಿನ ಸಂಗತಿ ಎಂದು ಸಮಯ ಚಾನೆಲ್ ಮುಖ್ಯಸ್ಥರು ಹೇಳಿದ್ದಾರೆ. ಅಂದರೆ ಮಾಧ್ಯಮದವರು ಮಾಡುತ್ತಿರುವ ತಪ್ಪುಗಳನ್ನು ಎತ್ತಿತೋರಿಸಿ ಮಾಧ್ಯಮ ವಲಯವನ್ನು ಶುದ್ಧೀಕರಿಸುವ ಬದಲಾಗಿ ತಪ್ಪುಗಳನ್ನು ಮುಚ್ಚಿಹಾಕಿ ಅದು ಕೊಳೆತು ನಾರುವಂತೆ ಮಾಡುವುದೇ ಲೇಸು ಎಂದಂತಾಯಿತು ಇವರ ಮಾತಿನ ಮರ್ಮ. ಇತ್ತೀಚೆಗೆ ಮಹಿಳೆಯೊಬ್ಬರ ಬಗ್ಗೆ ಫೇಸ್ ಬುಕ್ನಲ್ಲಿ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಮೀನ್ ಮಟ್ಟು ಅವರೇ ನಿಂತು ದೂರು ಕೊಡಿಸಿದ್ದು ತಪ್ಪು ಎಂಬಂತೆ ಪ್ರತಿಕ್ರಿಯಿಸಿದ್ದಾರೆ ಮಲೆನಾಡು ಮಿತ್ರ ಸಂಪಾದಕರು.!

   ಜೆ.ಎಚ್. ಪಟೇಲರ ಪತ್ರಿಕಾ ಕಾರ್ಯದರ್ಶಿಯಾಗಿ ತುಂಬಾ ಯಶಸ್ವಿಯಾಗಿ ನಾಲ್ಕು ವರ್ಷ ಕೆಲಸ ಮಾಡಿದ್ದಾಗಿ ಹೇಳಿಕೊಂಡಿರುವ ಭರತಾದ್ರಿ ಅವರು ತಮ್ಮ ಯಶಸ್ಸಿಗೆ ಕಾರಣವಾದ ಅಷ್ಟ ಸೂತ್ರಗಳನ್ನು ಉಚಿತವಾಗಿ ನೀಡಿದ್ದಾರೆ. ಸರ್ಕಾರದ ಪತ್ರಿಕಾ ಕಾರ್ಯದರ್ಶಿ ತನ್ನ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಎಂದೂ ಬಿಂಬಿಸಬಾರದು ಎಂಬುದು ಅವರ ಹಿತವಚನಗಳಲ್ಲಿ ಒಂದು. ಅಂದರೆ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಇದ್ದೂ ಸತ್ತಂತಿರಬೇಕು ಎಂಬುದೇ ಅದರ ತಾತ್ಪರ್ಯ. ಮಾಧ್ಯಮಗಳಲ್ಲಿ ಬರುವ ಸುದ್ದಿಗಳ ಹಿಂದೆ ‘ಪ್ಯಾಕೇಜ್ ವ್ಯವಸ್ಥೆ’ ಇದೆ ಎಂದು ಅಮೀನ್ ಮಟ್ಟು ಹೇಳಿದ್ದಾರೆ ಎಂದು ಆರೋಪಿಸಿರುವ ಸತೀಶ್ ಕುಮಾರ್ ಅವರು ಇದು ಅವರ ಹುಚ್ಚು ಕಲ್ಪನೆ ಎಂದಿದ್ದಾರೆ. ಈ ವಾದ ಸರಣಿಯ ಅಸಂಬದ್ಧತೆಯನ್ನು ಈಗಾಗಲೇ ಪ್ರಸ್ತಾಪಿಸಿದ್ದೇನೆ. ಇದೇ ಹಿನ್ನೆಲೆಯಲ್ಲಿ ನರೇಶ್ ಶೆಣೈ ಅವರು ಮುಖ್ಯಮಂತ್ರಿಗೆ 20 ಪ್ರಶ್ನೆಗಳನ್ನು ಹಾಕಿ ಅಮೀನ್ ಮಟ್ಟು ಅವರು ಆ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲ ಎಂದು ಪ್ರತಿಪಾದಿಸಲು ತುಂಬಾ ಕಷ್ಟಪಟ್ಟಿದ್ದಾರೆ. ಆದರೆ ಕುಂಬಳ ಕಳ್ಳ ಎಂದಾಕ್ಷಣ ಇವರೆಲ್ಲ ಯಾಕೆ ಹೆಗಲು ಮುಟ್ಟಿ ನೋಡಬೇಕು ಎನ್ನುವುದೇ ಇಲ್ಲಿ ಇರುವ ಪ್ರಶ್ನೆ.

ಜನಾರ್ಧನರೆಡ್ಡಿ ದೈವಭಕ್ತಿಯಿಂದಲೇ ಶ್ರೀಮಂತನಾಗಿದ್ದು…. ನಿಮಗೆ ಗೊತ್ತಾ?

ಆರ್.ಕೆ.

ಸಂಪುಟ 5, ಸಂಚಿಕೆ 40, ಅಕ್ಟೋಬರ್ 02, 2011

ರಾಜ್ಯ ರಾಜಕೀಯದಲ್ಲಿ ಇದು ಮನ್ವಂತರದ ಕಾಲ ಎಂದರೆ ತಪ್ಪಾಗಲ್ಲ. ಏಕೆಂದರೆ ಕಳೆದ ಐದು ವರ್ಷಗಳಲ್ಲಿ ರಾಜ್ಯ ರಾಜಕೀಯ ಹಲವು ಸುಳಿಗಳು, ಸುನಾಮಿಗಳ ನಾಟಕೀಯ ತಿರುವುಗಳನ್ನು ಕಂಡಿದೆ. ಕುಮಾರಸ್ವಾಮಿ ನೇತೃತ್ವದಲ್ಲಿ ಸಿಎಂ ಕುಚರ್ಿಯಲ್ಲೂ ಟಿ-20 ಮ್ಯಾಚ್ ನಡೆದದ್ದು, ಯಡಿಯೂರಪ್ಪ ಸಿಎಂ ಆಗಿದ್ದು, ಗಣಿ ಲಂಚ ಆರೋಪ. ಸಕರ್ಾರ ಪತನ. ವಚನಭ್ರಷ್ಟತೆಯ ಆರೋಪ, ಮರು ಚುನಾವಣೆ. ಅಲ್ಪಮತದ ಸಕರ್ಾರಕ್ಕೆ ಪಕ್ಷೇತರರ ಬೆಂಬಲ. ಆಪರೇಷನ್ ಕಮಲ. ಗಣಿ ದೊರೆಗಳ ಪಾರಮ್ಯ.

ಇದು ಕಳೆದ ಐದು ವರ್ಷಗಳ ರಾಜ್ಯ ರಾಜಕೀಯದ ಟ್ರೈಲರ್. ಈ ಅವಧಿಯಲ್ಲಿ ನಡೆದ ಅಕ್ರಮ-ಅನ್ಯಾಯಗಳ ಫಲ ಎಂಬಂತೆ ಹಲವು ನಾಯಕರು ನ್ಯಾಯಾಲಯದ ಕಟಕಟೆಗೆ ಬಂದಿದ್ದಾರೆ. ಹಾಸನ ಮೆಡಿಕಲ್ ಕಾಲೇಜು ಹಗರಣದಲ್ಲಿ ರಾಮಚಂದ್ರೇಗೌಡ, ತಿರುಪತಿ ತಿಮ್ಮಪ್ಪನ ಲಾಡು ಹಂಚಿದ ಕೃಷ್ಣಪ್ಪ, ಕೆಐಎಡಿಬಿ ಹಗರಣದಲ್ಲಿ ಕಟ್ಟಾ ಮತ್ತವನ ಪುತ್ರ, ಭೂ ಅವ್ಯವಹಾರ ಮತ್ತು ಡಿ-ನೋಟಿಫಿಕೇಶನ್ನಲ್ಲಿ ಯಡಿಯೂರಪ್ಪ, ಗಣಿ ಲೂಟಿಯಲ್ಲಿ ಜನಾರ್ದನ ರೆಡ್ಡಿ ಮುಂತಾದ ನಾಯಕರು ಆರೋಪಗಳ ಸುರಿಮಳೆಯನ್ನೇ ಎದುರಿಸುತ್ತಿದ್ದಾರೆ. ಇನ್ನು ಲೆಕ್ಕ ಹಾಕುತ್ತಾ ಹೋದರೆ ಮುರುಗೇಶ ನಿರಾಣಿ, ಯೋಗೀಶ್ವರ್ ಸೇರಿದಂತೆ ಹಲವು ಶಾಸಕರ ಪಟ್ಟಿಯೇ ಇದೆ. ಬಹುಷಃ ಇದು ರಾಜ್ಯ ರಾಜಕೀಯದ ಇತಿಹಾಸದಲ್ಲೇ ಅತಿ ಭ್ರಷ್ಟ ಸಕರ್ಾರ ಎಂದರೂ ತಪ್ಪಾಗಲ್ಲ.

ಅಕ್ರಮ ಗಣಿ ಕುರಿತ ಲೋಕಾಯುಕ್ತರ ವರದಿ ಸಲ್ಲಿಕೆ ಬಳಿಕ ರಾಜ್ಯ ರಾಜಕೀಯದ ಬೆಳವಣಿಗೆಗಳೂ ಚುರುಕುಗೊಂಡವು. ಯಡಿ ಯೂರಪ್ಪ ಕುಚರ್ಿ ಉಳಿಸಿಕೊಳ್ಳಲು ವರಿಷ್ಠ ರೊಂದಿಗೆ ಪಟ್ಟು ಹಿಡಿದು ರಚ್ಚೆ ಮಾಡಿದ್ದು, ಅಡ್ವಾಣಿ ಆಕ್ಷೇಪದ ಮಧ್ಯೆಯೂ ಯಡ್ಡಿ ರಬ್ಬರ್ ಸ್ಟ್ಯಾಂಪ್ ಡಿವಿ ಸದಾನಂದ ಗೌಡ ಮುಖ್ಯಮಂತ್ರಿ ಯಾದದ್ದು, ಲೋಕಾಯುಕ್ತ ವರದಿ ಅಧ್ಯಯನಕ್ಕೆ ಸಮಿತಿ ರಚಿಸಿದ ಘಟನೆಗಳೂ ನಡೆಯಿತು.
ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಮೂಲಕ ಶ್ರೀರಾಮುಲು ಬ್ಲ್ಯಾಕ್ಮೇಲ್. ಅದರ ಬೆನ್ನಲ್ಲೇ ಸಿಬಿಐನಿಂದ ಜನಾರ್ದನ ರೆಡ್ಡಿಯ ಬಂಧನ ರಾಜ್ಯ ಬಿಜೆಪಿಯ ಒಂದು ವಿಭಾಗದ ಜಂಗಾಬಲವನ್ನೇ ಕುಗ್ಗಿಸಿತು.

ಇಷ್ಟೆಲ್ಲ ಆಗುತ್ತಿರುವಾಗ ರಾಜ್ಯದ ಕೆಲವು ಮಾಧ್ಯಮಗಳು, ಪತ್ರಕರ್ತರು ಮಾತ್ರ ತಮ್ಮ ನೈತಿಕತೆಯನ್ನು ಕಳೆದುಕೊಂಡು ನೈಜ ಸಾಮಾಜಿಕ ಪ್ರಜ್ಞೆ(?)ಯನ್ನು ಪ್ರದಶರ್ಿಸಿದರು. ಜನಾರ್ದನ ರೆಡ್ಡಿ ಬಂಧನ, ಯಡಿಯೂರಪ್ಪ ಬಂಧನ ಸಾಧ್ಯತೆಯನ್ನು ಬಹುದೊಡ್ಡ ಗಂಡಾಂತರಕಾರಿ ಬೆಳವಣಿಗೆ ಎಂಬಂತೆ ಚಿತ್ರಿಸಿದವು. 10 ವರ್ಷಗಳ ಹಿಂದೆ ಚಿಟ್ ಕಂಪೆನಿ ಸ್ಥಾಪಿಸಿ ಪಂಗನಾಮ ಹಾಕಿ ದಿವಾಳಿಯಾಗಿದ್ದ ಜನಾರ್ದನ ರೆಡ್ಡಿ ಕೈಯಲ್ಲಿ ಕುಬೇರನನ್ನೂ ನಾಚಿಸುವ ಸಂಪತ್ತು ಹೇಗೆ ಸೃಷ್ಟಿಯಾಯಿತು ಎಂಬ ಸ್ಪಷ್ಟ ಚಿತ್ರ ನೀಡದೆ, ಆತನ ಆಸ್ತಿ ಎಷ್ಟಿತ್ತು, ಯವ್ಯಾವ ಆಭರಣಗಳು, ಸುಖವೈಭೋಗಗಳಿದ್ದವು ಎಂಬುದನ್ನು ಪಟ್ಟಿ ಮಾಡಲು ಕೂತವು.

ಜೈಲು ಸೇರಿದ ರೆಡ್ಡಿಯ ದಿನಚರಿಯನ್ನು ವೈಭವೀಕರಿಸಿ ಸುದ್ದಿ ಮಾಡುವುದರಲ್ಲಿ ತಲ್ಲೀನವಾದ ಕೆಲವು ಟಿವಿ ಚ್ಯಾನೆಲ್ಗಳು, ಆತನ ಬಟ್ಟೆ ಬರೆ, ಖೈದಿ ನಂಬರ್, ಊಟ-ತಿಂಡಿಯ ಮೆನು, ಮನೆಯಿಂದ ಸರಬರಾಜಾದ ತಿಂಡಿಗಳ ಪಟ್ಟಿ, ಚಾಪೆ ಮೇಲೆ ನಿದ್ದೆ, ಬೆಳಗೆದ್ದ ಮೇಲಿನ ದಿನಚರಿಯನ್ನೂ ಜನರ ಮುಂದಿಟ್ಟವು. ಮತ್ತೊಂದು ಚಾನೆಲ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶ್ರೀರಾಮುಲು ಕುರಿತ ಸರಣಿ ಕಾರ್ಯಕ್ರಮವನ್ನೇ ಪ್ರಸಾರ ಮಾಡಿತು. ಜೀವದ ಗೆಳೆಯ ಜೀವದ ಗೆಳೆಯ, ಆತನೀಗ ಏಕಾಂಗಿ ಎಂಬುದನ್ನು `ಮನಕಲಕುವಂತೆ’ ಪ್ರಸಾರ ಮಾಡಿತು.

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಒಂದೂವರೆ ಕೋಟಿ ಬೆಲೆಯ ಕಾರು, 40 ಲಕ್ಷ ರೂ. ಮೌಲ್ಯದ ಖಡ್ಗ, ತಿರುಪತಿ ತಿಮ್ಮಪ್ಪನಿಗೆ ವಜ್ರಖಚಿತ ಕಿರೀಟ ನೀಡಿದ್ದು ಸೇರಿದಂತೆ ಎಲ್ಲವನ್ನೂ ಎಲ್ಲರನ್ನೂ ಖರೀದಿ ಮಾಡುವಲ್ಲಿ ನಿಸ್ಸೀಮರಾದ ರೆಡ್ಡಿ ಪಾಳಯ, ಪತ್ರಕರ್ತರಿಗೂ ರಾಜ್ಯ ಲೂಟಿ ಮಾಡಿದ ಹಣವನ್ನು ಹಂಚಿದೆ. ಇದನ್ನು ಸ್ವತಃ ಯು.ವಿ. ಸಿಂಗ್ ನೇತೃತ್ವದ ಲೋಕಾಯುಕ್ತ ವರದಿ ಬಯಲಿಗೆಳೆದಿದೆ. ಕೇವಲ ಪ್ರಜಾವಾಣಿ, ದ ಹಿಂದೂ ಪತ್ರಿಕೆಗಳು ಮಾತ್ರ ಈ ವರದಿಯನ್ನು ಪ್ರಕಟಿಸುವ ಧೈರ್ಯ ತೋರಿವೆ. ಕನ್ನಡದ ಪತ್ರಿಕೆಯೊಂದರ ಸಂಪಾದಕ ವಿ. ಭಟ್ಗೆ 75 ಲಕ್ಷ ಮತ್ತು ರೆಡ್ಡಿಯ ಬಂಟ ಎಂದು ತೋರಿಸಿ ಕೊಳ್ಳುತ್ತಿದ್ದ ಟ್ಯಾಬ್ಲಾಯಿಡ್ ವಾರಪತ್ರಿಕೆಯೊಂದರ ಸಂಪಾದಕ ಆರ್ಬಿಗೆ 20 ಲಕ್ಷ ರೂ. ಸೇರಿದಂತೆ ಭ್ರಷ್ಟ ಪತ್ರಕರ್ತ ರಿಗೆ ಕೋಟ್ಯಂತರ ಹಣವನ್ನು ನೀಡಲಾಗಿದೆ. (ವಿ.ಭಟ್ ಎಂದರೆ ವಿಶ್ವೇಶ್ವರ ಭಟ್ ಎಂದೂ, ಆರ್.ಬಿ. ಎಂದರೆ ರವಿಬೆಳಗೆರೆ ಎಂದೂ ಮಾಧ್ಯಮರಂಗದಲ್ಲಿ ಸುದ್ದಿಗಳು ಹರಿದಾಡುತ್ತಿವೆ.) ಇದರ ಬಗ್ಗೆ ಒಂದಿಷ್ಟೂ ಚಕಾರ ಎತ್ತದ ಈ ಪತ್ರಕರ್ತರು, ನಿಯತ್ತಿನ ನಾಯಿಯಂತೆ ಒಡೆಯನ ಅನ್ನದ ಋಣವನ್ನು ತೀರಿಸಿದ್ದಾರೆ. ರೆಡ್ಡಿ ಮಾಡಿದ್ದು ಸರಿ ಎಂಬುದನ್ನು ಸಮಥರ್ಿಸಿ ಕೊಳ್ಳುವ ಮೂಲಕ.

ಬಳ್ಳಾರಿಯ ಪತ್ರಕರ್ತರಂತೂ ತಮ್ಮನ್ನು ಸಾಕಿ ಸಲಹಿದಂತಹ ಗಣಿ ಧಣಿಗಳಿಗೆ ಮತ್ತೊಂದು ಸಹಾಯ ಮಾಡಿದ್ದಾರೆ. ರಾಜ್ಯದಲ್ಲಿ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡಬೇಕೆಂದು `ಬಳ್ಳಾರಿ ರಿಪೋರ್ಟರ್ಸ್ ಗಿಲ್ಡ್’ ಸುಪ್ರೀಂ ಕೋಟರ್್ಗೆ ಮನವಿ ಮಾಡಿದೆ.

ಸುದ್ದಿ ಮಾಡುವುದರಲ್ಲೂ ಚಾನೆಲ್ಗಳು ಪೈಪೋಟಿ ನಡೆಸಿವೆ. ಯಡ್ಡಿ ಹಾಗೂ ನಿರಾಣಿ ವಿರುದ್ಧ ಯಾವುದೇ ಸುದ್ದಿ ಮಾಡದಂತೆ ಸಮಯ ನ್ಯೂಸ್ ತನ್ನ ವರದಿಗಾರರಿಗೆ ತಾಕೀತು ಮಾಡಿದೆ. ನಿರಾಣಿಯವರ ಒಡೆತನದ ಈ ಚಾನೆಲ್, ಜನಾರ್ದನ ರೆಡ್ಡಿ ಜೈಲುಪಾಲಾದಾಗ ಅತಿಉತ್ಸಾಹದಿಂದಲೇ ಸುದ್ದಿಯ ಕಣಕ್ಕೆ ಜಿಗಿಯಿತು. ಅದಕ್ಕೆ ಪ್ರತಿಯಾಗಿ, ಜನಶ್ರೀ ಎಂಬ ರೆಡ್ಡಿಗಳ ಚಾನೆಲ್, ಯಡ್ಡಿ ವಿರುದ್ಧ ಭಯಂಕರವಾಗಿ ಆರ್ಭಟಿಸಿ ಸುದ್ದಿ ಮಾಡಿತು. ಆದರೆ, ಈ ಚಾನೆಲ್ಗಳು, ಪತ್ರಕರ್ತರ ಭ್ರಷ್ಟಾಚಾರದ ಬಗ್ಗೆ, ರಾಜಕಾರಣಿಗಳ ಅವ್ಯವಹಾರದ ಬಗ್ಗೆ ಸಮಗ್ರವಾದ ವರದಿ ಮುಂದಿಡುವ ಧೈರ್ಯ ತೋರಲಿಲ್ಲ.

ಟಿ.ವಿ-9ನಲ್ಲಿ ರೆಡ್ಡಿ ಭಜನೆ
“ಉತ್ತಮ ಸಮಾಜದ ನಿರ್ಮಾಣ”ಕ್ಕಾಗಿ ….ಎಂದು ದಿನ ನಿತ್ಯ ಬೊಬ್ಬೆ ಹೊಡೆಯುವ ಚಾನೆಲ್ ಅದು. ಈ ಟಿ.ವಿ. ಗುಪ್ತ ಕ್ಯಾಮರಾಗಳಲ್ಲಿ ಸಿಲುಕಿಕೊಂಡ ಎಷ್ಟೋ ಜನ ಅಧಿಕಾರಿ ಲಂಚ ತಿಂದದ್ದರ ನೇರ ಸಾಕ್ಷ್ಯಗಳಿಂದ ಕೂಡಲೇ ಅಮಾನತ್ತಾದ್ದದ್ದಿದೆ.

ಇಂತಹ ಹಿನ್ನೆಲೆಗಳಿಂದಲೋ ಏನೋ ನಮ್ಮ ನಾಡಿನ ಎಷ್ಟೋ ಮುಗ್ದ ಜನ ತಮ್ಮ ಜೀವನದಲ್ಲಿ ಭ್ರಷ್ಟತೆಯನ್ನು, ಭ್ರಷ್ಟರನ್ನು ಎದುರಿಸಬೇಕಾಗಿ ಬಂದಾಗ ಟಿ.ವಿ-9 ಗೆ ಫೋನ್ ಮಾಡಿ ಬಿಡ್ತೀನಿ ಅಂತ ಹೇಳುವು ದಿದೆ.
ಟಿ.ವಿ. 9 ಎಂಬ ಚಾನೆಲ್ ರಾಜ್ಯದ ಗಣಿ ಅಕ್ರಮ, ನಿಸರ್ಗ ಸಂಪತ್ತಿನ ಘೋರ ಲೂಟಿ, ಸಂವಿಧಾನ ಕಾನೂನಿನ ಆಡಳಿತ ವನ್ನೇ ಬುಡ ಮೇಲು ಮಾಡುವಂತಹ ಜನಾರ್ಧನ ರೆಡ್ಡಿ ಮತ್ತು ಗ್ಯಾಂಗಿನ ನಾನಾ ಪಾತಕ ಕೃತ್ಯಗಳು, ವಂಚನೆಗಳನ್ನು ಯಾವ ಪರಿಯಾಗಿ ತೋರಿಸುತ್ತದೆ ಎಂದು ಎಷ್ಟೋ ಜನ ಕುತೂಹಲದಿಂದ ಕಾದಿದ್ದರು.

ಅದೇನು ಮಾಯೆಯೋ ಅದೇನು ಮರ್ಮವೋ ?! ಆ ತಿರುಪತಿ ತಿಮ್ಮಪ್ಪನಿಗೆ ಗೊತ್ತು. ಜನಾರ್ಧನ ರೆಡ್ಡಿ ಚುಂಚಲವಾಡ ಜೈಲಿನಲ್ಲಿ ಅನುಭವಿಸುತ್ತಿರುವ ಪಾಡು ಈ ಟಿ.ವಿ.ಯ ಮನಸ್ಸನ್ನು ಕಲಕಿ ಹಾಕಿದೆ. ದೇಶವನ್ನೇ ಬೆಚ್ಚಿ ಬೀಳಿಸುವಂತಹ ಭಯಾನಕ ಹಗರಣಗಳ ನಾನಾ ಮುಖಗಳು ಬಯಲಾಗ ಬೇಕಾದ ಜಾಗದಲ್ಲಿ ಜನಾರ್ಧನ ರೆಡ್ಡಿಯ ಭಜನೆ !!
“ರೆಡ್ಡಿ ಮಹಾನ್ ದೈವ ಭಕ್ತರು..ತಮ್ಮ ದೈವ ಭಕ್ತಿಯಿಂದಾಗಿಯೇ ಅವರು ಇಷ್ಟು ಎತ್ತರಕ್ಕೆ, ಅಷ್ಟು ಶ್ರೀಮಂತರಾಗಿ ಬೆಳೆದಿದ್ದಾರೆ… ಅಂತ ಸುಪ್ರಿಂ ಕೋಟರ್ಿಗಿಂತ ಮುಂಚೆ ತೀರ್ಪನ್ನೇ ಕೊಟ್ಟು ಬಿಟ್ಟಿತು. ಟಿ.ವಿ-9 ಚಾನೆಲ್.
0

“ಕನರ್ಾಟಕದಲ್ಲಿ ತುತರ್ು ಪರಿಸ್ಥಿತಿಯ ವಾತಾವರಣ”

ಕನರ್ಾಟಕ ರಾಜ್ಯದಲ್ಲಿ ತುತರ್ು ಪರಿಸ್ಥಿತಿಯ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಸಿಪಿಐ(ಎಂ) ಪಕ್ಷದ ಪೊಲಿಟ್ ಬ್ಯುರೋ ಸದಸ್ಯರಾದ ಎಂ.ಎ.ಬೇಬಿ ಹೇಳಿದರು. ಸಿಪಿಐ(ಎಂ) ಪಕ್ಷದ `ಮಡೆಸ್ನಾನ ಮತ್ತು ಪಂಕ್ತಿಬೇಧ’ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಉಡುಪಿಗೆ ಆಗಮಿಸಿದ್ದ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ಕಂಡು ಮಾತನಾಡಿದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

baby28dec 2012  1_1

ಮಂಗಳೂರಿನ ಜನ್ಮದಿನಾಚರಣೆಯ ಸಂತೋಷ ಸಮಾರಂಭದ ಮೇಲೆ ಭಜರಂಗದಳದವರು ನಡೆಸಿದ ದಾಳಿ-ಗೂಂಡಾಗಿರಿಯನ್ನು ಚಿತ್ರೀಕರಿಸಿ ಈ ಅಮಾನುಷ
ಕ್ರೌರ್ಯವನ್ನು ಹೊರಜಗತ್ತಿಗೆ ಬಹಿರಂಗಗೊಳಿಸಿದ ದಿಟ್ಟ ಪತ್ರಕರ್ತ ಈ ನವೀನ್ ಸೂರಿಂಜೆ. ಮತಾಂಧ ಮೂಲಭೂತವಾದಿಗಳ ಆಕ್ರಮಣಕ್ಕೆ ಸಾಕ್ಷಿಯಾದ ಇವರನ್ನು ಅಪರಾಧಿಗಳನ್ನು ಶಿಕ್ಷಿಸುವ ಕಾನೂನು ಪ್ರಕಿಯೆಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿ ಬಳಸಿಕೊಳ್ಳುವ ಬದಲಿಗೆ ರಾಜ್ಯದ ಬಿಜೆಪಿ ಸಕರ್ಾರವು ಅಪರಾಧಿಗಳಿಗೆ ಅನ್ವಯಿಸಿರುವ ಅದೇ ಅರೋಪಗಳಡಿ ಈ ಪತ್ರಕರ್ತರನ್ನೂ ಬಂಧಿಸಿದೆ. ಮತ್ತು ಈ ಒಟ್ಟು ಪ್ರಕರಣ ಪ್ರಮುಖ ಸೂತ್ರಧಾರ ನವೀನ್ ಸೂರಿಂಜೆ ಎಂಬಂತಹ ಅರೋಪಗಳನ್ನು ಸಹ ಹೊರಿಸಲಾಗಿದೆ. ಈಗ ನವೀನ ಸೂರಿಂಜೆ ನ್ಯಾಯಾಂಗ ಬಂಧನದಲ್ಲಿದ್ದು ಚಿಕಿತ್ಸೆಯ ಉದೇಶಕ್ಕಾಗಿ ಆಸ್ಪತ್ರೆಯಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಬೇಬಿಯವರು ಕಾನೂನುಬಾಹಿರ ಕೃತ್ಯಗಳು ನಡೆಯುತ್ತಿರುವ ಮಾಹಿತಿ ತಿಳಿದು ಓರ್ವ ಪತ್ರಕರ್ತ ಅಥವಾ ಛಾಯಾಗ್ರಾಹಕ ಅಲ್ಲಿಗೆ ತೆರಳಿ ಆ ಬಗ್ಗೆ ಫೋಟೋ ತೆಗೆದಾಗ ಅಥವಾ ವರದಿ ನೀಡಿದಾಗ ಆತನನ್ನು ಬಂಧಿಸಿ ಸೆರೆಮನೆಗೆ ಕಳುಹಿಸಿರುವುದು ವಿಪಯರ್ಾಸ. ಇದರಿಂದ ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗುತ್ತದೆ. ಸರಕಾರ ಇದರ ಹೊಣೆ ಹೊರಬೇಕಾಗುತ್ತದೆ ಎಂದರು. ಸಂವಿಧಾನದಲ್ಲಿ ನೀಡಲಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿಯಾಗುತ್ತಿರುವ ಪ್ರಕರಣಗಳು ನಡೆಯುತ್ತಿರುವುದನ್ನು ನೋಡಿದಾಗ ತುತರ್ು ಪರಿಸ್ಥಿತಿಯ ವಾತಾವರಣ ನೆನಪಿಗೆ ಬರುತ್ತದೆ. ಸಕರ್ಾರದ ವರ್ತನೆಯನ್ನು ಸಿಪಿಐ(ಎಂ)ಖಂಡಿಸುತ್ತದೆ ಎಂದು ಹೇಳಿದರು.

0

ಟೀಚರ್ ಮಾಸಪತ್ರಿಕೆಯ ರಾಜ್ಯಮಟ್ಟದ ಶೈಕ್ಷಣಿಕ ಹಬ್ಬ

ಮುರುಗೇಶ್

ಗುಲ್ಬುಗರ್ಾದ ಎಸ್.ಎಮ್.ಪಂಡಿತ ರಂಗ ಮಂದಿರದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ಟೀಚರ್ ಮಾಸ ಪತ್ರಿಕೆಯ 11 ನೇ

ವಾಷರ್ಿಕೋತ್ಸವ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬ ಕಾರ್ಯಕ್ರಮವನ್ನು ದಿ: 15.02.2013 ಮತ್ತು 16.02.2013 ರಂದು ಎರಡು

ದಿನಗಳ ಕಾಲ ಯಶಸ್ವಿಯಾಗಿ ಆಯೋಜಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಶಿಕ್ಷಕರು,

ವಿದ್ಯಾಥರ್ಿಗಳು, ವಿಜ್ಞಾನ ಚಳುವಳಿಯ ಕಾರ್ಯ ಕರ್ತರು ಸಡಗರದಿಂದ ಭಾಗವಹಿಸಿದ್ದರು. ಎರಡೂ ದಿನಗಳ ಕಾಲ ವಿಜ್ಞಾನ,

ಶಿಕ್ಷಣದ ಹಕ್ಕು, ಹೈದರಾಬಾದ್ ಕನರ್ಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ, ಮಹಿಳೆಯರ ಸ್ಥಿತಿಗತಿ, ಇತ್ಯಾದಿ ಕುರಿತು ಹಲವು

ವಿಚಾರಗೋಷ್ಟಿಗಳು ಜರುಗಿದವು. ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಪಾರ್ವತಿ ಮೆನನ್,

ಪ್ರಗತಿಪರ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಮತ್ತು ಇತರರು ಭಾಗವಹಿಸಿದ್ದರು.
ಆಶಯ ಭಾಷಣ ಮಾಡಿದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಈ ದೇಶದಲ್ಲಿ ಎಲ್ಲವೂ ಅಂಕೆ ಮೀರುತ್ತಿದೆ. ಜನರು

ಹೊಸದಕ್ಕಾಗಿ ಹಾತೊರೆಯುತ್ತಿದ್ದಾರೆ. ಆ ಹೊಸದಕ್ಕಾಗಿ ಮುಂದಿನ ದಿನಗಳಲ್ಲಿ ಜನರೇ ಸಾತ್ವಿಕ ದಂಗೆ ಏಳುವಂತಹ ಕಾಲ ಬಂದೇ

ಬರುತ್ತದೆ ಎಂದು ಹೇಳಿದರು. ದೆಹಲಿ ಅತ್ಯಾಚಾರ ಪ್ರಕರಣದ ವಿರುದ್ಧ ನಡೆದದ್ದು ಹೋರಾಟವಲ್ಲ ಅದು ಸಾರ್ವಜನಿಕರೊಳಗೆ

ಮಡುಗಟ್ಟಿದ್ದ ಆಕ್ರೋಶದ ದಂಗೆ ಅದರಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾತ್ವಿಕ ದಂಗೆಗಳಾಗುತ್ತವೆ. ಅವುಗಳಾದಾಗಲೇ ನಮಗೆ

ಹೊಸ ರೀತಿಯ ಬದುಕು ಮತ್ತು ಆಲೋಚನೆ ಹಾಗೂ ಸ್ವಾಸ್ಥ್ಯ ಸಮಾಜ ನಿಮರ್ಾಣ ಮಾಡಿಕೊಳ್ಳಲು ಸ್ವಲ್ಪ ಸಹಾಯವಾಗುತ್ತದೆ

ಎಂದು ಹೇಳಿದರು.
ಇಂದಿನ ನಮ್ಮ ಸಾಮಾಜಿಕ ವ್ಯವಸ್ಥೆ ತುಂಬಾ ಕ್ರೂರವಾಗುತ್ತಿದೆ ಚಳುವಳಿಗಳು ಅರ್ಥ ಕಳೆದು ಕೊಳ್ಳುತ್ತಿವೆ. ಪ್ರಾಮಾಣಿಕತೆ

ಮಾಯವಾಗುತ್ತಿದೆ. ಅಪ್ರಾಮಾಣಿಕತೆ ವಿಜೃಂಭಿಸುತ್ತಿದೆ. ರಾಜಕಾರಣಿ, ಅಧಿಕಾರಿ, ಶಿಕ್ಷಕ, ಸಾಹಿತಿ, ಮಠಾಧೀಶ, ವಕೀಲ, ಪೊಲೀಸ್

ಚಿಂತಕರು ಎಲ್ಲರಲ್ಲೂ ಸ್ವಾರ್ಥಕ್ಕೆ ಸಿಲುಕಿ ಭ್ರಷ್ಟರಾಗುತ್ತಿದ್ದಾರೆ. ಅವರ ಎಲ್ಲ ಚಿಂತನೆಗಳಲ್ಲಿ ಭವಿಷ್ಯದ ಭದ್ರ

ಚಿಂತನೆಗಳಿಲ್ಲ ಅದರಿಂದಾಗಿ ನಾವು ಕ್ರೂರತೆಗೆ ತಳ್ಳಲ್ಪಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಠಗಳು ಇಂದು ಕೇವಲ ಡಾಂಭಿಕ ಭಕ್ತಿ ಹಂಚುತ್ತಿವೆ. ಮೂಢನಂಬಿಕೆಯಲ್ಲಿ ಜನರನ್ನು ಉಳಿಸಿಕೊಳ್ಳಲಾಗುತ್ತಿದೆ. ಮಠಾಧೀಶರಲ್ಲೂ

ಸಂಪತ್ತುಗಳಿಕೆ ಚಿಂತೆ ಶುರುವಾಗಿದೆ ಇದರಿಂದಾಗಿ ಅವರೂ ಓಲೈಕೆಗೆ ಬಿದ್ದಿದ್ದಾರೆ. ನಿಜವಾದ ಸನ್ಯಾಸಿಯಾದವನಗೆ ಸತ್ಯ

ಮಾತನಾಡಲಿಕ್ಕೆ ಸತ್ಯವಾಗಿ ಬದುಕಲಿಕ್ಕೆ ಭಯವೇಕೆ ಎಂದು ಪ್ರಶ್ನಿಸಿದರು ಅವರು ಇಂದಿನ ಮಠಗಳು ಭಯದ ನೆರಳಿನಲ್ಲಿವೆ. ಅದೊಂದು

ದೊಡ್ಡ ವಿಷವತರ್ುಲವಾಗಿ ಬೆಳೆಯುತ್ತಿದೆ. ರಾಜ್ಯದಲ್ಲಿ ಎಲ್ಲ ಜಾತಿಗೊಂದರಂತೆ 1500 ಮಠಗಳಿವೆ. ಇದರಲ್ಲಿ 100 ಮಠಗಳು ಸಮಾನ

ಉದ್ದೇಶವನ್ನು ಇಟ್ಟುಕೊಂಡು ಒಟ್ಟಾಗಿ ಹೋರಾಟಕ್ಕೆ ಮುಂದಾದರೆ ಮನುಷ್ಯ ಸಹಜ ಪರಿವರ್ತನೆ ಸಾಧ್ಯವಾಗುತ್ತದೆ ಎಂದು

ಹೇಳಿದರು.
ಒಂದೆಡೆ ಜನಪ್ರತಿನಿಧಿ, ಮತ್ತೊಂದೆಡೆ ಮಠಮಾನ್ಯಗಳು ಸಮಾಜವನ್ನು ಲೂಟಿ ಮಾಡುತ್ತಿವೆ. ಇದು ಹೀಗೆ ಮುಂದುವರಿದರೆ, ಬರುವ

ದಿನಗಳಲ್ಲಿ ಭಿಕ್ಷುಕ ಹಾಗೂ ಭಕ್ಷಕ ಎರಡೇ ವರ್ಗಗಳು ಉಳಿಯಲಿವೆ. ಕನ್ನಡದಲ್ಲಿ ಕಲಿತರೆ ಅನ್ನಕ್ಕೇನು ಮಾಡಬೇಕೆಂಬ ಸ್ಥಿತಿ

ಇರುವಾಗ ಯಾರು ತಾನೆ ಕನ್ನಡ ಕಲಿಯಲು ಮುಂದಾಗಲು ಸಾಧ್ಯ. ಸಕರ್ಾರ ಒಂದೆಡೆ ಕನ್ನಡ ಉಳಿಸುವ ಮಾತನಾಡುತ್ತದೆ ಮತ್ತೊಂದೆಡೆ

ಆಂಗ್ಲ ಶಾಲೆಗಳಿಗೆ ಮಾನ್ಯತೆ ನೀಡಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿದೆ ಇದರಿಂದ ಬರುವ ದಿನಗಳಲ್ಲಿ ಬಡವರು ಶಾಲೆಗೆ

ಹೋಗದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವಿಜಾಪುರ ದಲ್ಲಿ ನಡೆದ ಸಮ್ಮೇಳನದಲ್ಲಿ ಯಾರು ಈ ಬಗ್ಗೆ ಚಕಾರವೆತ್ತಲಿಲ್ಲ.

ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಎಂದು ಸಕರ್ಾರದ ವಿರುದ್ಧ ಬೀದಿಗಿಳಿದು, ಕನ್ನಡದಲ್ಲಿ ಆಡಳಿತ ಮಾಡುವ ಛಾತಿ

ಇದ್ದರೆ ಕುಚರ್ಿ ಹತ್ತಿ, ಇಲ್ಲವೆ ಹತ್ತಬೇಡಿ ಎಂದು ಹೋರಾಟಕ್ಕೆ ಇಳಿಯುವ ಮನಸ್ಸು ಮಾಡಿಲ್ಲ. ಎಲ್ಲ ವಿಚಾರವಷ್ಟೇ

ಆಚಾರದಲ್ಲಿ ಶೂನ್ಯ ಎಂದು ಶ್ರೀಗಳು ಹೇಳಿದರು.
ಈ ಸಲ ಕುಂಭಮೇಳದಲ್ಲಿ 3 ಕೋಟಿ ಜನ ಸ್ನಾನ ಮಾಡಿದ್ದಾರೆ. ಹಿಂದೂ ಆಚರಣೆ ಪ್ರತೀಕ ಎಂದು ಬಿಂಬಿಸಲಾಗುತ್ತಿರುವ ಈ ಮೇಳದಲ್ಲಿ

ಯಾಕೆ ಜಾಗೃತಿ ಮಾತುಗಳನ್ನು ಸ್ವಾಮೀಜಿಗಳು ಸಂತರು ಜನರಿಗೆ ಹೇಳಿಕೊಡಬಾರದು. ಅದನ್ನು ಹೊರತು ಪಡಿಸಿ ನಿಧರ್ಿಷ್ಟ ದಿನದಂದು

ಸ್ನಾನ ಮಾಡಿದರೆ ಪಾಪ ಪರಿಹಾರ ಆಗುತ್ತದೆ ಎನ್ನುವ ಭ್ರಮೆಯನ್ನು ಜನರಲ್ಲಿ ಬಿತ್ತಲಾಗುತ್ತಿದೆ. ಅದರ ಬದಲು ವಾಸ್ತವಿಕ

ಸತ್ಯ ಮತ್ತು ಬದುಕಿನ ಚಿಂತನೆಗಳನ್ನು ತುಂಬಿದಲ್ಲಿ ಇದೇ 3 ಕೋಟಿ ಜನರು ಅನ್ಯಾಯ, ಅಧರ್ಮ, ಅಶಾಂತಿ ಕಂಡಾಗ ರಾಷ್ಟ್ರದ

ರಕ್ಷಣೆಗೆ ಸಿಡಿದೇಳುತ್ತಿದ್ದರು. ಅದನ್ನು ಮಾಡಲು ನಮಗೆ ಸಾಧ್ಯವಾಗುತ್ತಲೇ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಪಾರ್ವತಿ ಮೆನನ್ ರವರು, ವಾಸ್ತವದಲ್ಲಿ ಈ ಭಾಗದ ಅಭಿವೃದ್ಧಿಗೆ 371 ನೇ ವಿಧಿ

ಒಂದು ಸಾಧನವಾಗಲಿದೆ. ಆದರೆ, ಅದಕ್ಕೂ ಮುಂಚೆ ಕೆಲ ಕಾರ್ಯಗಳು ಆಗಬೇಕಿವೆ. ಹೈದ್ರಾಬಾದ ಕನರ್ಾಟಕ ಹಿಂದುಳಿದ ಪ್ರದೇಶವೆಂಬ

ಕಾರಣಕ್ಕೆ ಸಕರ್ಾರದಿಂದ ಸಾಕಷ್ಟು ಅನುದಾನ ನೀಡಲಾಗಿದೆ. ಆದರೆ ಅಭಿವೃದ್ಧಿಯಾಗಿಲ್ಲ. ಆ ಅನುದಾನ ಎಲ್ಲಿಗೆ ಹೋಯಿತು,

ಎಷ್ಟರಮಟ್ಟಿಗೆ ಬಳಕೆಯಾಗಿದೆ ಎಂದು ಪ್ರಶ್ನಿಸಿದ ಮೆನನ್, ಅಭಿವೃದ್ಧಿಗೆ ಪಾರದರ್ಶಕವಾಗಿ ದುಡಿಯುವ ಜನಪ್ರತಿನಿಧಿಗಳು ಬೇಕು

ಎಂದು ಅಭಿಪ್ರಾಯಪಟ್ಟರು.
ಡಾ. ನಂಜುಂಡಪ್ಪ ಆಯೋಗದ ವರದಿ ಅನುಷ್ಠಾನ ಸಮಿತಿ, ಎಚ್ಕೆಡಿಬಿ ಸೇರಿದಂತೆ ಇತರೆ ಯೋಜನೆಗಳಿಗೆ ಸಾಕಷ್ಟು ಹಣ ಬಂದಿದೆ.

ಅದನ್ನು ಬಳಕೆ ಮಾಡಿಕೊಳ್ಳುವಲ್ಲಿ ಆಗಿರುವ ಲೋಪಗಳಿಂದಾಗಿ ಈ ಭಾಗ ಹಿಂದುಳಿದಿದೆ. ಆ ಅನುದಾನ ಎಷ್ಟರಮಟ್ಟಿಗೆ ಬಳಕೆಯಾಗಿದೆ

ಎನ್ನುವುದನ್ನು ತಿಳಿಯಬೇಕಿದೆ. ಹಳೇ ಮೈಸೂರು ಭಾಗದಂತೆ ಉತ್ತರ ಕನರ್ಾಟಕದಲ್ಲಿ ಅಷ್ಟೊಂದು ಪ್ರಭಾವಿಯಾಗಿ ಭೂ ಸುಧಾರಣಾ

ಕಾಯ್ದೆ ಅನ್ವಯವಾಗಿಲ್ಲ. ಹೀಗಾಗಿ, ಈ ಭಾಗದ ಜನರು ರಾಜ್ಯದ ವಿವಿಧ ಪ್ರದೇಶಗಳಿಗೆ ಮತ್ತು ಹೊರರಾಜ್ಯಗಳಿಗೆ ವಲಸೆ

ಹೋಗುತ್ತಿದ್ದಾರೆ. ಒಂದು ವೇಳೆ ಈ ಭಾಗ ಅಭಿವೃದ್ಧಿಯಾಗ ಬೇಕಾದರೆ, ಜನಾವಶ್ಯಕ ವಸ್ತುಗಳು ಪೂರೈಸಲ್ಪಡಬೇಕು. ವಲಸೆ

ಪ್ರಮಾಣ ತಗ್ಗಬೇಕು ಎಂದು ಅಭಿಪ್ರಾಯಪಟ್ಟರು. ಜನತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಬೇಕು,

ಉದ್ಯೋಗ ಖಾತ್ರಿ ಯೋಜನೆ(ನರೇಗಾ) ದಂತಹ ಯೋಜನೆ ಮತ್ತು ಇನ್ನೂ ಹಲವು ಸಕರ್ಾರದ ಮಹತ್ವಾಕಾಂಕ್ಷೆಯ ಯೋಜನೆಗಳು

ಸರಿಯಾಗಿ ಅನುಷ್ಠಾನಗೊಳ್ಳಬೇಕು ಅದರ ಸದ್ಬಳಕೆ ಸರಿಯಾಗಿ ಆಗಬೇಕು ಎಂದು ಹೇಳಿದರು.
ಟೀಚರ್ ವಿಶೇಷ ಸಂಚಿಕೆ ಬಿಡುಗಡೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಬೋಳುವಾರು ಮಹ್ಮದ ಕುಂಞಿ ಅವರು ಟೀಚರ್ ವಿಶೇಷ ಸಂಚಿಕೆ ಬಿಡುಗಡೆ

ಮಾಡಿ ಮಾತನಾಡಿದರು. ದೇಶದಲ್ಲಿ ಮುಸ್ಲಿಮರು ತಾವೂ ಈ ದೇಶಕ್ಕೆ ನಿಷ್ಠರಾಗಿದ್ದೇವೆ ಎನ್ನುವುದನ್ನು ದಿನಕ್ಕೆ 5 ಬಾರಿ

ಸಾಬೀತು ಪಡಿಸಬೇಕಾದ ಪರಿಸ್ಥಿತಿಯ ಒತ್ತಡದಲ್ಲಿದ್ದಾರೆ. ಅವರು ಏನೇ ಮಾಡಿದರೂ ಅದನ್ನು ಸಂಶಯಾಸ್ಪದವಾಗಿ ನೋಡುವ

ವಾತಾವರಣ ಬೆಳೆಯುತ್ತಿದೆ. ದೇಶ ಅಂದರೆ, ಕೇವಲ ಭಕ್ತಿ, ಭೂಮಿ ಅಲ್ಲ, ಮನುಷ್ಯರು, ದನಕರುಗಳು, ಗಿಡ ಮರಗಳು ಎಲ್ಲವುಗಳು

ಇರುವಿಕೆ ದೇಶ ಎಂದಾಗುತ್ತದೆ ಎಂದು ಹೇಳಿದರು.
ಒಂದು ಬಾರಿ ಯಾರೋ ಒಬ್ಬ ವ್ಯಕ್ತಿ ವಿಧಾನಸಭೆಗೆ ಫೋನ್ ಮಾಡಿದರಂತೆ! ನೀವು ಲಿಂಗಾಯತರಾದರೆ ಒಂದನ್ನು ಒತ್ತಿ,

ಒಕ್ಕಲಿಗರಾದರೆ ಎರಡನ್ನು ಒತ್ತಿ, ಕುರುಬರಾದರೆ ಮೂರನ್ನು ಒತ್ತಿ, ಮುಸ್ಲಿಮರಾದರೆ ನಾಲ್ಕನ್ನು ಒತ್ತಿ, ಎಂದಿದ್ದರಂತೆ. ಆಗ

ಮುಸ್ಲಿಂ ವ್ಯಕ್ತಿ ನಾಲ್ಕನ್ನು ಒತ್ತಿದಾಗ… ದಯವಿಟ್ಟು ಕ್ಷಮಿಸಿ. ನಿಮ್ಮದು ಅಂತರರಾಷ್ಟ್ರೀಯ ಕರೆ ಎಂದು ಹೇಳಿದರಂತೆ

ಎಂದು ಹಾಸ್ಯ ಚಟಾಕಿ ಹಾರಿಸಿದರು.
ಶಿಕ್ಷಕರು ಇಂದಿನ ಮುಸ್ಲಿಂ ಮಕ್ಕಳು ಅನುಭವಿಸುವ ಪರಿಸ್ಥಿತಿ ನೋಡಿ, ಅರ್ಧ ಅಂಕವನ್ನು ಹೆಚ್ಚು ನೀಡಬೇಕು. ಇದರಿಂದ ಅವರು

ಇನ್ನಷ್ಟು ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಶಿಕ್ಷಕ ಸಮುದಾಯಕ್ಕೆ ಮನವಿ ಮಾಡಿದರು. ನಾವು ಇಂದು

ಸಂಪೂರ್ಣ ಸತ್ಯ ಮಾತನಾಡಲು ಸಾಧ್ಯವಾಗುವುದಿಲ್ಲ. ನಾನೂ ಸೇರಿಕೊಂಡು ಇಲ್ಲಿ ಯಾರು ಸಂಪೂರ್ಣ ಸತ್ಯ ಮಾತನಾಡಲಿಕ್ಕೆ

ಸಾಧ್ಯವಿಲ್ಲ ನಾನಾದರೂ ಅರ್ಧ ಸತ್ಯವನ್ನಷ್ಟೇ ಹೇಳುತ್ತೇನೆ ಎಂದು ಹೇಳಿದರು
ಟೀಚರ್ ಮಾಸಪತ್ರಿಕೆ ಪ್ರಧಾನ ಸಂಪಾದಕ ಪ್ರೊ. ಬಿ. ಗಂಗಾಧರಮೂತರ್ಿ ಮಾತನಾಡಿ, ಇಂದು ಶಿಕ್ಷಕರ ವರ್ಗ ಹಲವಾರು

ಸ್ಪಧರ್ಾತ್ಮಕ ಕ್ಷಣಗಳನ್ನು ಎದುರಿಸಬೇಕಾಗಿದೆ. ಈ ನಟ್ಟಿನಲ್ಲಿ ಅವರನ್ನು ಗಟ್ಟಿಗೊಳಿಸುವುದು ನಮ್ಮ ಟೀಚರ್ ಪತ್ರಿಕೆ

ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಸಾರ್ಥಕ ಲೇಖನಗಳ ಮೂಲಕ ಶಿಕ್ಷಕ ಸಮುದಾಯದಲ್ಲಿ ಹೊಸ ಚಿಂತನೆ

ಮತ್ತು ವಿಚಾರಗಳನ್ನು ಬಿತ್ತಲಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನದರ್ೇಶಕ ಟಿ.ಜಯರಾಮು ಉದ್ಯಮಿ ಎಸ್.ಎಸ್.ಪಾಟೀಲ ಕಡಗಂಚಿ, ಭಾರತ

ಜ್ಞಾನ ವಿಜ್ಞಾನ ಸಮಿತಿಯ ಶ್ರೀಶೈಲ ಘೂಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯ ನಿದರ್ೇಶಕ

ರುದ್ರಪ್ಪ, ಡಾ. ನಿಂಗು ಸೊಲಗಿ ಇದ್ದರು. ಉಮಾಕಾಂತ ನಿಗ್ಗುಡಗಿ ಸ್ವಾಗತಿಸಿದರು ಲವಿತ್ರ ಕೆ. ವಸ್ತ್ರದ ಕಾರ್ಯಕ್ರಮ

ನಿರೂಪಿಸಿದರು. ಜಿ. ವಿನುತ ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಣ ಹಕ್ಕು ಕಾಯ್ದೆ 2009 ಕುರಿತು ಗೋಷ್ಟಿ:
ಪ್ರಕಾಶ ಕಾಮತ್, ಚಂದ್ರೇಗೌಡ್ರ ಅವರು ಶಿಕ್ಷಣ ಹಕ್ಕು ಕಾಯ್ದೆ 2009 ವಿಷಯ ಕುರಿತು ವಿಷಯ ಮಂಡಿಸಿದರು. ಈ

ಕಾಯ್ದೆಯಲ್ಲಿರುವ ಅಂಶಗಳನ್ನು ಗಮನಿಸಿ ಶಿಕ್ಷಕರು ಹೆಜ್ಜೆ ಇಟ್ಟರೆ ಪ್ರಗತಿ ಸಾಧ್ಯವಾಗುತ್ತದೆ. ಈ ಹಿಂದೆ ಬಿಸಿಯೂಟ

ಯೋಜನೆ ಜಾರಿಗೊಳಿಸಿದಾಗ, ಎಸ್ಡಿಎಮ್ಸಿ ರಚನೆ ಮಾಡಿದಾಗ ಅವುಗಳಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿರೋಧಿಸಿ ತಮ್ಮ

ಬೇಳೆ ಬೇಯಿಸಿಕೊಳ್ಳಲು ಹವಣಿಸಿದ್ದು ಬೆಳಕಿಗೆ ಬಂದ ನಂತರವೇ ವಿರೋಧ ಧ್ವನಿ ಕಡಿಮೆಯಾಯಿತು ಇದರಲ್ಲೂ ಹೀಗೆ ಇದೆ, ಹೀಗಾಗಿ

ಶಿಕ್ಷಕರು ವಿರೋಧಿಸಬಾರದು ಎಂದು ಹೇಳಿದರು.
ಶಾಲೆ ನೋಡದ ಸೋಲಿಗರು, ದಲಿತರು, ಗೊಲ್ಲರಹಟ್ಟಿ ಮಕ್ಕಳು, ಶಾಲೆಯನ್ನು ನೋಡುವಂತಾಗಲು, ಮಕ್ಕಳ ಹಕ್ಕುಗಳನ್ನು ಗೌರವಿಸಲು

ಶಾಲೆಯಲ್ಲಿ ಅವರಿಗೆ ಕುಡಿಯುವ ನೀರು, ಶೌಚಾಲಯ, ಅಗತ್ಯ ಪೀಠೋಪಕರಣಗಳನ್ನು ಒದಗಿಸಲು ಆರ್ಟಿಇ ಬರಬೇಕಾಗಿರಲಿಲ್ಲ.

ಇವುಗಳನ್ನು ನಾವು ಆದ್ಯತೆಯ ಮೇಲೆ ಕಲ್ಪಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು. ಕಡ್ಡಾಯ ಶಿಕ್ಷಣ ಕಾಯ್ದೆಯ

ಅಂಶಗಳನ್ನು ಸರಿಯಾಗಿ ಅಥರ್ೈಸಿಕೊಂಡು ಚೆನ್ನಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲರಿಗೂ ಅನವು ಮಾಡಿಕೊಡಬೇಕು ಎಂದು

ತಿಳಿಸಿದರು.
ಅಧೀವೇಶನದ ಅಧ್ಯಕ್ಷತೆ ವಹಿಸಿದ್ದ ಎಫ್. ಸಿ. ಚೇಗರಡ್ಡಿ ಉಪಾಧ್ಯಕ್ಷ ಬಿಜಿವಿಎಸ್ ರಾಜ್ಯ ಸಮಿತಿ ಮಾತನಾಡಿ, ಯಾವ

ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಘೋಷಿತ ಆಶಯದೊಂದಿಗೆ ಜಾರಿಗೆ ತರಲಾಗಿರುವ ಕಡ್ಡಾಯ ಶಿಕ್ಷಣ

ಕಾಯಿದೆಯಲ್ಲಿನ ಸೂಕ್ಷ್ಮತೆ ಅರಿತುಕೊಳ್ಳದೆ ಹೋದರೆ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಗೆ ಬಂದ ಸ್ಥಿತಿ ಆರ್ಟಿಇಗೂ

ಬರಲಿದೆ ಎಂದು ಹೇಳಿದರು.
ಭಾನಾಮತಿ ಕುರಿತ ವಿಚಾರ ಗೋಷ್ಟಿ:
ಭಾನಾಮತಿ ಕುರಿತು ಗೋಷ್ಠಿಯಲ್ಲಿ ಎಸ್.ಪಿ. ಮೇಲಕೇರಿ ಮತ್ತು ಶಿವಶರಣ ಮೂಳೆಗಾಂವ ಮಾತನಾಡಿ, ಭಾನಾಮತಿ ಹೆಸರಲ್ಲಿ

ಸಮಾಜದ ದುಷ್ಟ ವ್ಯಕ್ತಿಗಳು ನಮ್ಮನ್ನು ಅಧೀರರನ್ನಾಗಿ ಮಾಡಿ ತಮ್ಮ ಕೆಲಸ ಪೂರೈಸಿಕೊಳ್ಳುತ್ತಾರೆ. ಇದಕ್ಕೆ ಜನರಲ್ಲಿ

ಅರಿವು ಮೂಡಿಸುವ ಕೆಲಸ ಭಾರತ ಜ್ಞಾನ ವಿಜ್ಞಾನ ಸಮಿತಿ ಮಾಡಿದೆ ಎಂದರು. ಬಿಜಿವಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ

ಘೂಳಿ ಅಧ್ಯಕ್ಷತೆ ವಹಿಸಿದ್ದರು.
ಇತರೆ ಪ್ರಮುಖ ವಿಚಾರ ಗೋಷ್ಟಿಗಳು:
ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆ ಎಂಬ ಗೋಷ್ಟಿಯಲ್ಲಿ ಐಐಎಸ್ಸಿಯ ಪರಿಸರ ವಿಜ್ಞಾನಿ ಪ್ರೊ.ಟಿ.ವಿ.

ರಾಮಚಂದ್ರ ರವರು ಜಾಗತಿಕ ತಾಪಮಾನದ ಕಾರಣಗಳು, ಅದರಿಂದ ಕೃಷಿ ಮತ್ತು ಜನಜೀವನದ ಮೇಲುಂಟಾಗುವ ಪರಿಣಾಮಗಳು ಮತ್ತು

ಪರಿಹಾರಗಳ ಕುರಿತು ವಿಚಾರ ಮಂಡಿಸಿದರು. ಆಟರ್ಿಕಲ್ 371 ಜೆ.: ಹೈದ್ರಾಬಾದ ಕನರ್ಾಟಕ್ಕೆ ಸಿಗಬಹುದಾದ ಶೈಕ್ಷಣಿಕ ಹಾಗೂ

ಉದ್ಯೋಗಾವಕಾಶಗಳು ಗೋಷ್ಟಿಯಲ್ಲಿ ಶ್ರೀ ಬಸವಂತರಾಯ ಕುರಿ, ಶ್ರೀ ಹೃಷೀಕೇಶ ಬಹಾದ್ದೂರ ದೇಸಾಯಿ ಮತ್ತು ಶ್ರೀ

ಉಮಾಕಾಂತ ನಿಗ್ಗಡಗಿ ವಿಚಾರ ಮಂಡಿಸಿದರು.
ಮಹಿಳೆ ಮತ್ತು ಶಿಕ್ಷಣ ಸಮಸ್ಯೆಗಳು ಮತ್ತು ಸವಾಲುಗಳು ಗೋಷ್ಟಿಯಲ್ಲಿ ಡಾ. ಸಬೀಹಾ ಭೂಮಿಗೌಡ, ಎನ್ ಪ್ರಭಾ ಮತ್ತು ಡಾ.

ಮೀನಾಕ್ಷಿ ಬಾಳಿ ಮಾತನಾಡಿದರು. ನಮ್ಮಲ್ಲಿರುವ ಶಿಕ್ಷಣ ವ್ಯವಸ್ಥೆಯಲ್ಲಿಯೂ ಮಹಿಳಾ ಪರ ಭಾಷೆ ಇಲ್ಲ. ಸಮಾನತೆ

ಬೆಳೆಸುವಲ್ಲಿ ನಮ್ಮ ಪಠ್ಯಪುಸ್ತಕಗಳೂ ಅಡ್ಡಿಯಾಗುತ್ತಿವೆ ಎಂದು ಖ್ಯಾತ ಬರಹಗಾತರ್ಿ ಸಬಿಹಾ ಭೂಮಿಗೌಡ ಆತಂಕ

ವ್ಯಕ್ತಪಡಿಸಿದರು. ಪಠ್ಯಪುಸ್ತಕದಲ್ಲಿನ ಈ ತಾರತಮ್ಯದಿಂದಾಗಿ ಸಮಾನತೆಯನ್ನು ಬೋಧಿಸಬೇಕಾದ ಶಾಲಾ ಕೇಂದ್ರಗಳೂ

ಪುರುಷ ಪ್ರಧಾನತೆಯನ್ನು ಉಣಬಡಿಸುತ್ತಿವೆ. ಸ್ವಾವಲಂಬನೆಗೆ ದಾರಿ ಮಾಡಿಕೊಡಬೇಕಾದ ಶಿಕ್ಷಣ ನೀತಿ ಮತ್ತೆ ಮಹಿಳೆಯನ್ನು

ಅಲಕ್ಷಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಹೈದ್ರಾಬಾದ್ ಕನರ್ಾಟಕದ ಶೈಕ್ಷಣಿಕ ಸವಾಲುಗಳು ಮತ್ತು ಸಾಧ್ಯತೆಗಳು ಗೋಷ್ಟಿಯಲ್ಲಿ ಡಾ. ಪ್ರಭು ಖಾನಾಪುರೆ. ಮತ್ತು ಹಂಪಿ

ವಿಶ್ವವಿದ್ಯಾನಲಯದ ಡಾ. ಎಚ್.ಡಿ. ಪ್ರಶಾಂತ್ ವಿಚಾರ ಮಂಡಿಸಿದರು.
0

ಬಂಡವಾಳಗಾರರ, ಮಾಧ್ಯಮಗಳ ಭ್ರಷ್ಟಾಚಾರ ಮರೆಮಾಚುವ ಪಿತೂರಿ ಹಿಮ್ಮೆಟ್ಟಿಸಿ

ಭ್ರಷ್ಟಾಚಾರ ಈಗ ರಾಷ್ಟ್ರವ್ಯಾಪಿ ಚಚರ್ೆಯ ವಿಷಯ. ಆದರೆ ಭ್ರಷ್ಟಾಚಾರದ ವಿಷಯದಲ್ಲಿ ಜನರ ನಡುವೆ ಚಚರ್ೆಯಾಗಬೇಕಾದ ಎಷ್ಟೋ ವಿಷಯಗಳನ್ನು ಮರೆಮಾಚಿ ಕೆಲವೊಂದು ವಿಷಯಗಳನ್ನಷ್ಟೆ ಹಿಡಿದು ಕೊಂಡು ಹಿಂಜಿ ಹಿಂಜಿ ಒಂದು ಬಗೆಯ ಉನ್ಮಾದದ ಸ್ಥಿತಿಯನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ಕೇವಲ ಆಕಸ್ಮಿಕವಲ್ಲ. ಇದೊಂದು ವ್ಯವಸ್ಥಿತ ಯೋಜಿತ ಕುತಂತ್ರವಾಗಿದೆ. ಇಂತಹ ಸನ್ನಿವೇಶದಲ್ಲಿ ಯುಪಿಎಯೇತರ, ಬಿಜೆಪಿಯೇತರ ಒಂಭತ್ತು ವಿರೋಧ ಪಕ್ಷಗಳು ಸೇರಿ ಭ್ರಷ್ಟಾಚಾರ ನಿಯಂತ್ರಣದ ಪ್ರಶ್ನೆಯಲ್ಲಿ ಆಗಬೇಕಾದುದೇನು, ಲೋಕಪಾಲ್ ನಿಜಕ್ಕೂ ಹೇಗಿರಬೇಕು ಎಂದು ಸಕರ್ಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಆಗಸ್ಟ್ 23 ರಂದು ರಾಷ್ಟ್ರವ್ಯಾಪಿಯಾಗಿ ಪ್ರತಿಭಟನೆ, ರ್ಯಾಲಿಗಳು ನಡೆದಿವೆ. ಬೆಂಗಳೂರಿನಲ್ಲಿ ಸಹ ಈ ಪ್ರತಿಭಟನೆ ಮುಖ್ಯವಾಗಿ ಜೆಡಿ(ಎಸ್),ಸಿಪಿಐ(ಎಂ), ಸಿಪಿಐ ಪಕ್ಷಗಳ ನೇತೃತ್ವದಲ್ಲಿ ನಡೆಯಿತು.

ಅದು ಬೆಂಗಳೂರು ನಗರದ ಆನಂದ ರಾವ್ ವೃತ್ತದ ಸಮೀಪವಿರುವ ಗಾಂಧಿ ಪ್ರತಿಮೆಯ ಮುಂಭಾಗ. ಅಲ್ಲಿ ಜೆಡಿ(ಎಸ್)ನ ಹಸಿರು ಬಾವುಟ, ಎಡ ಪಕ್ಷಗಳ ಕೆಂಬಾವುಟಗಳು ಉತ್ಸಾಹದಲ್ಲಿ ಹಾರುತ್ತಿದ್ದವು. ಜೆಡಿ(ಎಸ್)ನ ಸಾಂಸ್ಕೃತಿಕ ತಂಡವು ಹಾಡಿದ ಹೋರಾಟದ ಹಾಡು ಮಾರ್ಧನಿಸುತ್ತಿತ್ತು. ಅದು ಭ್ರಷ್ಟಾಚಾರದ ವಿರುದ್ದದ ಮಾತುಗಳು ಕೇಳಿ ಬಂದರೂ ಆ ಮಾತುಗಳು, ಪಕ್ಕದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೇಳಿ ಬಂದ ಮಾತುಗಳಿಗಿಂತ ಭಿನ್ನವಾಗಿದ್ದವು.

ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತಾರವರು ಕಾರ್ಯಕ್ರಮ ನಿರೂಪಿಸಿದರು. ಮೊದಲಿಗೆ ಮಾತನಾಡಿದ ಮಾಜಿ ಮಂತ್ರಿಗಳೂ ಜೆಡಿ(ಎಸ್) ಪಕ್ಷದ ಕಾಯರ್ಾಧ್ಯಕ್ಷರೂ ಆದ ಪಿಜಿಆರ್ ಸಿಂಧ್ಯ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 64 ವರ್ಷಗಳು ಆಗಿದ್ದರೂ ಒಂದು ಸಮರ್ಥ ಲೋಕಪಾಲ ಜಾರಿಗೆ ಬರದಿರುವುದಕ್ಕೆ ಮುಖ್ಯವಾಗಿ ಕಾಂಗ್ರೇಸ್ ಪಕ್ಷವೇ ಹೊಣೆ. ಸಮರ್ಥ ಲೋಕಪಾಲ್ ಬೇಕು, ಆದರೆ ಅದರಿಂದ ಭ್ರಷ್ಟಾಚಾರ ಸಂಪೂರ್ಣ ನಿವಾರಣೆ ಯಾಗುವುದಿಲ್ಲ ಎಂದರು.

ಕೋಮುವಾದಿ ಶಕ್ತಿಗಳ ಕುರಿತು ಎಚ್ಚರ ಅಗತ್ಯ- ಪಿಜಿಆರ್ ಸಿಂಧ್ಯ

ಈಗಿನ ಅಣ್ಣಾ ಹಜಾರೆಯವರ ಹೋರಾಟದಲ್ಲಿ ಬೈಲ್ ಮೇಲೆ ಹೊರಗಿರುವವರು, ಜೈಲಿನ ಒಳಗಿಬೇಕಾದವರು ಎಲ್ಲರೂ ತೂರಿಕೊಂಡಿದ್ದಾರೆ. ಕೋಮುವಾದಿ ಶಕ್ತಿಗಳು ಸನ್ನಿವೇಶವನ್ನು ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದೂ ಸಿಂಧ್ಯರವರು ಎಚ್ಚರಿಸಿದರು.

ರಾಜಕೀಯೇತರ ರಾಜಕೀಯ ಒಪ್ಪಲಾಗದು- ವಿಜೆಕೆ ನಾಯರ್
ಅಣ್ಣಾ ಹಜಾರೆಯವರ ಹೋರಾಟದಲ್ಲಿ ರಾಜಕೀಯೇತರ ರಾಜಕೀಯ ಮಾಡಲು ಪ್ರಯತ್ನಿಸಲಾಗುತ್ತಿದೆ. ಅದು ನಮಗೆ ಒಪ್ಪಿಗೆ ಇಲ್ಲ. ಭ್ರಷ್ಟಾಚಾರದ ವಿರುದ್ದದ ಹೋರಾಟದ ಹೆಸರಿನಲ್ಲಿ ಸಂಸತ್ತಿನ ಮೇಲ್ಮೆಗೆ ಚ್ಯುತಿ ತರುವ ಕೆಲಸ ಆಗಬಾರದು ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದಶರ್ಿ ವಿಜೆಕೆ ನಾಯರ್ ಅವರು ಹೇಳಿದರು. ಸಂವಿಧಾನದ 105 ನೇ ವಿಧಿಗೆ ಸೂಕ್ತವಾದ ತಿದ್ದುಪಡಿ ತರಬೇಕು. ನ್ಯಾಯಾಂಗ ದಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಲು ಪ್ರತ್ಯೇಕವಾಗಿ ನ್ಯಾಯಾಂಗ ಉತ್ತರಾಧಿಕಾರತ್ವ ಮಸೂದೆಯನ್ನು ತರಬೇಕು ಎಂದೂ ವಿಜೆಕೆ ನಾಯರ್ ಹೇಳಿದರು. ಬಳ್ಳಾರಿಯಲ್ಲಿ ನಡೆದದ್ದು ಖನಿಜ ಸಂಪತ್ತಿನ ಲೂಟಿ. ಖಾಸಗಿ ಗಣಿಗಾರಿಕೆಗೆ ಅವಕಾಶವಿರುವುದರಿಂದಲೇ ಇಂತಹ ಲೂಟಿ ನಡೆದದದ್ದು ಎಂದೂ ನಾಯರ್ವರು ಹೇಳಿದರು.

ಬಿಜೆಪಿ ಬಾಯಿ ಬಿಟ್ಟಿಲ್ಲ- ಎಂ.ಸಿ. ನಾಣಯ್ಯ
ಪ್ರಧಾನಿಯವರನ್ನು ಲೋಕಪಾಲ ವ್ಯಾಪ್ತಿಗೆ ತನ್ನಿ ಎಂದು ಮಾತ್ರ ಹೇಳುತ್ತಿರುವ ಬಿಜೆಪಿ ಪಕ್ಷವು ಲೋಕಪಾಲದ ಇತರ ವಿಷಯಗಳ ಬಾಯಿ ಬಗ್ಗೆ ಬಿಟ್ಟಿಲ್ಲ. ಲೋಕಪಾಲದ ಹೆಸರಿನಲ್ಲಿ ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಆಗದಿರಲಿ ಎಂದು ಜನತಾದಳದ ಹಿರಿಯ ಮುಖಂಡರಾದ ಎಂ.ಸಿ. ನಾಣಯ್ಯ ಹೇಳಿದರು.

ಎನ್.ಡಿ.ಎ. ಅಧಿಕಾರದಲ್ಲಿದ್ದಾಗ ಯಾಕೆ ಜಾರಿಗೆ ತರಲಿಲ್ಲ ?- ಹೊರಟ್ಟಿ
ಆರು ವರ್ಷಗಳ ಕಾಲ ವಾಜಪೇಯಿಯವರು ಅಧಿಕಾರದಲ್ಲಿದ್ದಾಗ ಯಾಕೆ ಲೋಕಪಾಲ ಮಸೂದೆಯನ್ನು ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದ ಮತ್ತೊಬ್ಬ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿಯವರು ಇಂದು ಕನರ್ಾಟಕದ ಕಡೆ ಎಲ್ಲರೂ ಕೈ ಮಾಡಿ ತೋರಿಸುತ್ತಿದ್ದಾರೆ. ಶಾಸಕರು ರಾಜಿನಾಮೆ ಕೊಟ್ಟರೆ 20 ಕೋಟಿ ಸಿಗುತ್ತದೆ ಎನ್ನುವಂತಹ ಪರಿಸ್ಥಿತಿ ಇಲ್ಲಿ ಬಂದಿದೆ ಎಂದು ಅವರು ವಿಷಾದಿಸಿದರು.

ಬೆಲೆ ಏರಿಕೆ- ರೈತರ ಆತ್ಮಹತ್ಯೆ ನಿರಂತರ – ಎಂ.ಸಿ. ವೆಂಕಟ ರಾಮು
ಯುಪಿಎ ಸರ್ಕಾರ ಸ್ವಚ್ಛವಾದ, ಬಡವರ ಪರವಾದ ಆಡಳಿತ ಕೊಡುತ್ತೇವೆ ಇನ್ನುತ್ತಾ ಬೃಹತ್ ಹಗರಣಗಳನ್ನು ನಡೆಸುತ್ತಿದೆ. ಯುಪಿಎ ಆಡಳಿತದಲ್ಲಿ ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿದೆ. ಅಗತ್ಯವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಒಬ್ಬ ವ್ಯಕ್ತಿಯಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಅದಕ್ಕೆ ದೊಡ್ಡ ಸೈನ್ಯವೇ ಬೇಕು ಎಂದು ಸಿ.ಪಿ.ಐ. ಪಕ್ಷದ ರಾಜ್ಯ ಮುಖಂಡರಾದ ಎಂ.ಸಿ. ವೆಂಕಟರಾಮು ಹೇಳಿದರು.

ಬೃಹತ್ ಬಂಡವಾಳಗಾರರ ಭ್ರಷ್ಟತೆ,ಲೂಟಿ, ಬಂಡವಾಳಶಾಹಿ ಮಾಧ್ಯಮಗಳ ಷಾಮೀಲಾತಿ ಮರೆಸುವ ಪಿತೂರಿ- ಜಿ.ಎನ್. ನಾಗರಾಜ್

ಮಹಾ ತ್ಯಾಗಿ ಎನ್ನಲಾಗುವ ಸೋನಿಯಾ ಗಾಂಧಿ, ಹಾಗೂ ಮಹಾ ಪ್ರಮಾಣಿಕ ಎನ್ನಲಾಗುವ ಮನಮೋಹನ ಸಿಂಗ್ರವರ ಆಡಳಿತದಲ್ಲಿ ವಿರಾಟ್ ಸ್ವರೂಪದ ಭ್ರಷ್ಟಾಚಾರ ನಡೆಯುತ್ತಿದೆ ಎಂದ ಸಿಪಿಐ(ಎಂ) ರಾಜ್ಯ ಮುಖಂಡರಾದ ಜಿ.ಎನ್. ನಾಗರಾಜ್ ಇಡೀ ದೇಶದ ಜುಟ್ಟನ್ನು ಲೋಕಪಾಲಕ್ಕೆ ಒಪ್ಪಿಸುವಂತಹ ಮಸೂದೆ ನಮಗೆ ಒಪ್ಪಿಗೆ ಇಲ್ಲ. ನ್ಯಾಯಾಂಗದ ಮೇಲೆ ಲೋಕಪಾಲದ ಹಿಡಿತ ಬಂದಲ್ಲಿ ಅಧಿಕಾರಸ್ಥರು ಲೋಕಪಾಲರ ಈ ಅಧಿಕಾರವನ್ನು ಬಳಸಿ ನ್ಯಾಯಾಧೀಶರನ್ನು ಬೆದರಿಸುವ ಮೂಲಕ ನ್ಯಾಯಾಂಗವನ್ನು ಬಳಸಿಕೊಂಡು ನ್ಯಾಯಾಂಗದ ಸ್ವತಂತ್ರ ಕಾರ್ಯ ನಿರ್ವಹಣೆಗೆ ಧಕ್ಕೆ ತರುವ ಸಂಭವ ಇದೆ. ಆದ್ದರಿಂದ ನ್ಯಾಯಾಂಗಕ್ಕಾಗಿ ಬೇರೆಯದೇ ವ್ಯವಸ್ಥೆ ಬೇಕು. ಇದಲ್ಲದೇ ಕಾಯರ್ಾಂಗದ ಉನ್ನತಾಧಿಕಾರಿಗಳ ಹಂತದಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲಕ್ಕೆ ಅಧಿಕಾರವನ್ನು ಸೀಮಿತಗೋಳಿಸಬೇಕು. ಕೆಳಹಂತದ ಭ್ರಷ್ಟಾಚಾರ ನಿಯಂತ್ರಣಕ್ಕೆ ಬೇಕಾದಂತಹ ಕುಂದು ಕೊರತೆಗಳ ಆಯೋಗವನ್ನು ಪ್ರತ್ಯೇಕವಾಗಿ ರೂಪಿಸಬೇಕು ಎಂದರು.

ಇತ್ತೀಚಿನ ಬೃಹತ್ ಹಗರಣಗಳ ಕುರಿತು ದೇಶದ ಸಿಎಜಿಯು ವರದಿ ನೀಡಿದಾಗ ಅದರಲ್ಲಿ ಬೃಹತ್ ಬಂಡವಾಳಗಾರರ ರಿಲಯನ್ಸ್, ಟಾಟಾ ಮುಂತಾದ ದೊಡ್ಡ ದೊಡ್ಡ ಕಂಪನಿಗಳ ಬೃಹತ್ ವಂಚನೆ ಭ್ರಷ್ಟಾಚಾರ ಹೊರಬೀಳಲಾರಂಭಿಸಿತು. ಬೃಹತ್ ಕಂಪನಿಗಳ ಭ್ರಷ್ಟಾಚಾರಕ್ಕೆ ಪೂರಕವಾಗಿ ಖಾತೆಗಳಿಗೆ ಸಚಿವರು ಯಾರಾಗಬೇಕೆಂದು ಲಾಬಿ ನಡೆಸುವ ನೀರಾ ರಾಡಿಯಾಗಳಂತಹ ಮಾಧ್ಯಮದ ವ್ಯಕ್ತಿಗಳ ಪಾತ್ರವೂ ಬಯಲಾಗ ತೊಡಗಿತು. ಈ ಬೆಳವಣಿಗೆಯಿಂದ ಗಾಬರಿಗೊಂಡ ಬೃಹತ್ ಬಂಡವಾಳಗಾರರು, ತಮ್ಮ ಜಾಹಿರಾತುಗಳ ಮೇಲೆ ಅವಲಂಬಿಸಿರುವ ಬಂಡವಾಳಶಾಹಿ ಮಾಧ್ಯಮಗಳ ಮೂಲಕ ಜನರ ಗಮನವನ್ನು ಈ ಪ್ರಶ್ನೆಗಳಿಂದ ಬೇರೆಡೆ ಸೆಳೆಯಲು ಕೇವಲ ಅಣ್ಣಾ ಹಜಾರೆಯವರ ನೇತೃತ್ವದ ಚಳುವಳಿಯ ಬಗೆಗೆ ಮಾತ್ರವೇ ರಾತ್ರಿ ಹಗಲು ತತ್ತೂರಿ ಊದುತ್ತಿವೆ ಎಂದರು.

ಭ್ರಷ್ಟಾಚಾರಕ್ಕೆ ಹೊಸ ವ್ಯಾಖ್ಯಾನ- ಎಸ್.ವೈ. ಗುರುಶಾಂತ್
ರ್ಯಾಲಿಯಲ್ಲಿ ಕೊನೆಯ ಮಾತನ್ನಾಡಿ ಸಭೆಯ ಸಮಾರೋಪ ಮಾಡಿದ ಸಿ.ಪಿ.ಐ.(ಎಂ) ರಾಜ್ಯ ಮುಖಂಡರು ಜನಶಕ್ತಿಯ ಸಂಪಾದಕರೂ ಆದ ಎಸ್.ವೈ. ಗುರುಶಾಂತರವರು ಭ್ರಷ್ಟಾಚಾರಕ್ಕೆ ಹೊಸ ವ್ಯಖ್ಯಾನ ಬಿಜೆಪಿಯಿಂದ ಸಿಕ್ಕಿದೆ. ಒಬ್ಬೊಬ್ಬರೇ ಮಂತ್ರಿಗಳು ಜೈಲಿಗೆ ಹೋಗುತ್ತಿದ್ದಾರೆ. ಮೊನ್ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭ್ರಷ್ಟಾಚಾರದ ಬಗೆಗೆ ಸದಾನಂದ ಗೌಡರು ಮಾತೇ ಆಡಲಿಲ್ಲ..ಅಂತಹ ಪರಿಸ್ಥಿತಿಯಲ್ಲಿ ಅವರು ಸಿಕ್ಕಿ ಬಿದ್ದಿದ್ದಾರೆ. ಆದರೆ ಬಿಜೆಪಿಯು ಭ್ರಷ್ಟಾಚಾರದ ವಿರುದ್ದ ಬೊಬ್ಬೆ ಇಡುವುದು ಅಪಹಾಸ್ಯಕಾರಿ ಎಂದರು.