ಜಾತಿ ಸಂಘಟನೆಯಲ್ಲ; ಜಾತಿ ಪದ್ಧತಿ ವಿರುದ್ಧ ಚಳವಳಿ

Karnataka Dalit Rights Committee - Convener Gopalakrishna Aralahalli
ಅರಳಹಳ್ಳಿ ಗೋಪಾಲಕೃಷ್ಣ ಸಂದರ್ಶನ – ಮುರಳಿ ಕೆ.
ಸಂಪುಟ 10 ಸಂಚಿಕೆ 01 ಜನವರಿ 03, 2016

ರಾಜ್ಯದಲ್ಲಿ ದಲಿತರ ಮೇಲಿನ ಹಲ್ಲೆ, ದೌರ್ಜನ್ಯ, ಹತ್ಯೆ, ಜಾತಿ ತಾರತಮ್ಯ ಮತ್ತು ದಲಿತರು ಪ್ರಮುಖವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಕರ್ನಾಟಕ ದಲಿತ ಹಕ್ಕುಗಳ ಸಮಿತಿ ರಾಜ್ಯದಲ್ಲಿ ಜಾಥಾ ಕೈಗೊಂಡಿತ್ತು. ರಾಜ್ಯದಲ್ಲಿ ದಲಿತ ಸಮುದಾಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಅನಾವರಣವಾಗಿತ್ತು.

ದಲಿತರು ಇಂದಿಗೂ ಕೈಯಲ್ಲಿ ಅರ್ಜಿಗಳನ್ನು ಹಿಡಿದು ನಮ್ಮನ್ನು ರಕ್ಷಿಸಿ ಎಂದು ಬೇಡುವ ದೈನೇಸಿ ಪರಿಸ್ಥಿತಿಗೆ ಈ ಜಾಥಾ ಸಾಕ್ಷಿಯಾಯಿತು. ಜಾಥಾ ಮುನ್ನಡೆಸಿದವರಲ್ಲಿ ಒಬ್ಬರಾದ ಮತ್ತು ಕರ್ನಾಟಕ ದಲಿತ ಹಕ್ಕುಗಳ ಸಮಿತಿಯ ಸಂಚಾಲಕರಾಗಿರುವ ಅರಳಹಳ್ಳಿ ಗೋಪಾಲಕೃಷ್ಣ ‘ಜನಶಕ್ತಿ’ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ ಕೆಲವು ಪ್ರಮುಖ ಭಾಗಗಳು ಇಲ್ಲಿವೆ:

ಪ್ರ: ಜಾಥಾ ಹೇಗಿತ್ತು ಮತ್ತು ಈ ಸಂದರ್ಭದಲ್ಲಿ ಎಂತಹ ಪರಿಸ್ಥಿತಿಗಳನ್ನು ಅನುಭವಿಸಿದಿರಿ?
ಉ: ಜಾಥಾ ಆರಂಭಕ್ಕೆ ಮುನ್ನ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ, ಸ್ಪಂದಿಸುತ್ತಾರೆ ಎನ್ನುವ ಅಂದಾಜು ಇರಲಿಲ್ಲ. ಆದರೆ ಜಾಥಾ ಮುನ್ನಡೆದಂತೆ ದಲಿತ ಸಮುದಾಯಗಳೂ ಅಪೂರ್ವವಾಗಿ ಸ್ಪಂದಿಸಿದವು. ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲು, ನಮ್ಮ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಅಸಮಾನ ಧೋರಣೆಗಳನ್ನು ನಿವಾರಿಸುವವರೇ ಯಾರೂ ಇಲ್ಲ ಎಂದು ಜನ ಅಂಗಲಾಚುತ್ತಿದ್ದರು. ನಮ್ಮ ಜಾಥಾ ಒಂದೂರಿನಿಂದ ಮತ್ತೊಂದು ಊರಿಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ದಲಿತರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಡುತ್ತಿದ್ದರು. ನಮ್ಮ ಜಾಥಾ ಅವರಲ್ಲಿ ಹೊಸ ಭರವಸೆಗಳನ್ನು ಮೂಡಿಸಿದೆ.

ಪ್ರ: ದಲಿತ ಸಂಘಟನೆಗಳು ಹಲವು ಇವೆಯಲ್ಲ, ನಿಮ್ಮ ಜಾಥಾ ಮತ್ತು ಮತ್ತೊಂದು ಸಂಘಟನೆ ಅಗತ್ಯವಿದೆಯೇ?
ಉ: ದಲಿತ ಸಂಘಟನೆಗಳು ಇಂದು ನಿಷ್ಕ್ರಿಯಗೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ದಲಿತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡುವವರು ಇಲ್ಲವಾಗಿದೆ. ಇಂದು ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ದಲಿತರ ಕಗ್ಗೊಲೆಗಳಾಗುತ್ತಿದ್ದರೂ ರಾಜ್ಯ ಮಟ್ಟದಲ್ಲಿ ಅವರ ಪರ ಧ್ವನಿ ಎತ್ತುವವರು ಇಲ್ಲವಾಗಿದ್ದಾರೆ. ಸರ್ಕಾರಗಳು ಸಹ ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅವರಲ್ಲಿ ಬದುಕುವ ಆಸೆಯೇ ಇಲ್ಲವಾಗಿದೆ. ಹೀಗಾಗಿ ನಮ್ಮಂತಹ ಸಂಘಟನೆಗಳು ಮತ್ತು ಜಾಥಾಗಳು ಅಗತ್ಯವಾಗಿದೆ.

ಪ್ರ: ಜಾಥಾ ಸಂದರ್ಭದಲ್ಲಿ ಕಂಡು ಬಂದ ದಲಿತ ಸಮುದಾಯ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಯಾವುವು?
ಉ: ಮರಕುಂಬಿಯಲ್ಲಿ ದಲಿತರ ಮೇಲೆ ದೌರ್ಜನ್ಯವಾಯಿತು. ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಚಾಮರಾಜ ನಗರದಲ್ಲಿ ದಲಿತರ ಕಗ್ಗೊಲೆಯಾಯಿತು. ಅವರಿಗೆ ಯಾರೂ ಸ್ಪಂದಿಸಲಿಲ್ಲ. ಹೀಗೆ ಪ್ರತಿದಿನ ಪ್ರತಿ ಹಳ್ಳಿಯಲ್ಲೂ ಒಂದಲ್ಲ ಮತ್ತೊಂದು ರೀತಿಯ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ನಮ್ಮ ಜಾಥಾ ಹಳ್ಳಿಗಳನ್ನು ಪ್ರವೇಶಿಸುತ್ತಿದ್ದಂತೆ ಜನ ಅರ್ಜಿಗಳನ್ನು ಹಿಡಿದು ನಮ್ಮ ಬಳಿಗೆ ಬರುತ್ತಿದ್ದರು. ಕೆಲವು ಗ್ರಾಮಗಳಲ್ಲಿ ದಲಿತರು ಉಸಿರೆತ್ತಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ದೇವಸ್ಥಾನಗಳಿಗೆ ಇನ್ನೂ ಪ್ರವೇಶ ನೀಡುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕೂರುವಂತಿಲ್ಲ. ಮಹಿಳೆಯರ ಮೇಲಂತೂ ಹೆಚ್ಚಿನ ದೌರ್ಜನ್ಯಗಳು ನಡೆಯುತ್ತಿವೆ. ಹಲವಾರು ಪ್ರಕರಣಗಳಲ್ಲಿ ದಲಿತರಿಗೆ ಪರಿಹಾರ ಮಂಜೂರಾಗಿದ್ದರೂ ನಾಲ್ಕಾರು ವರ್ಷಗಳಿಂದ ಪರಿಹಾರವೇ ಸಿಕ್ಕಿಲ್ಲ. ಇಂತಹ ಹಲವಾರು ಸಮಸ್ಯೆಗಳನ್ನು ಕಂಡೆವು.

ಪ್ರ: ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಒಂದು ಜಾತಿ ಸಂಘಟನೆ ಮತ್ತು ದಲಿತ ಸಂಘಟನೆಗಳಿಗೆ ಪರ್ಯಾಯ ಎನಿಸುವುದಿಲ್ಲವೆ.
ಉ: ಇದು ಖಂಡಿತ ತಪ್ಪು ಅಭಿಪ್ರಾಯ. ನಮ್ಮ ಸಮಿತಿ ಒಂದು ಜಾತಿ ಸಂಘಟನೆಯಲ್ಲ. ಆದರೆ ಜಾತಿ ಪದ್ಧತಿ ವಿರುದ್ಧ ಹೋರಾಡುವ ಸಂಘಟನೆಯಾಗಿದೆ. ಯಾವುದೇ ಜಾತಿ ಇರಲಿ ಜಾತಿತಾರತಮ್ಯಕ್ಕೆ ಒಳಗಾದರೆ ಅಂತಹವರ ಪರವಾಗಿ ನಿಲ್ಲುತ್ತದೆ. ಜಾತಿ ಪದ್ಧತಿ ವಿರುದ್ಧ ಹೋರಾಡುವ ಯಾವುದೇ ಸಂಘಟನೆ, ಸಂಸ್ಥೆ ವ್ಯಕ್ತಿಗಳು ನಮ್ಮೊಂದಿಗೆ ಬರಬಹುದು. ಹೀಗಾಗಿ ಇದು ಜಾತಿ ಸಂಘಟನೆಯಲ್ಲ.

ಪ್ರ: ದಲಿತ ಸಂಘಟನೆಗಳು ಇದನ್ನು ಹೇಗೆ ಸ್ವೀಕರಿಸುತ್ತವೆ?
ಉ: ಹಲವಾರು ದಲಿತ ಸಂಘಟನೆಗಳು ನಮ್ಮನ್ನು ಬೆಂಬಲಿಸಿವೆ. ಟಿ. ನರಸೀಪುರದಲ್ಲಿ ದಲಿತ ಸಂಘರ್ಷ ಸಮಿತಿಯೇ ಜಾಥಾವನ್ನು ಬರಮಾಡಿಕೊಂಡು ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದವು. ಅವರೇ ಆತ್ಮೀಯವಾಗಿ ಬೀಳ್ಕೊಟ್ಟರು. ಇಂದು ಎಲ್ಲ ದಲಿತ ಸಂಘಟನೆಗಳು ದಲಿತ ಸಮುದಾಯದ ಸಮಸ್ಯೆಗಳ ಆಧಾರದಲ್ಲಿ ಬಲಿಷ್ಠ ಚಳವಳಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ಸಂಘಟನೆಯತ್ತ ದಲಿತ ಸಮುದಾಯ ಭರವಸೆಯ ನೋಟ ಹರಿಸಿದೆ.

ಪ್ರ: ಸಂಘಟನೆಯ ಮುಂದಿನ ಯೋಜನೆಗಳು?
ಉ: ಜಾಥಾ ಮುಕ್ತಾಯಗೊಂಡ ನಂತರ ಬೆಂಗಳೂರಿನಲ್ಲಿ ಒಂದು ಯಶಸ್ವಿ ಸಮ್ಮೇಳನ ಮಾಡಿದ್ದೇವೆ. ರಾಜ್ಯದ ವಿವಿಧ ಭಾಗಗಳಿಂದ 305 ಪ್ರತಿನಿಧಿಗಳು ಆಗಮಿಸಿದ್ದರು. 39 ಮಂದಿ ಸಂಘಟನಾ ವರದಿ ಮೇಲೆ ಚರ್ಚೆ ನಡೆಸಿದರು. ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂಬ ಅಜೆಂಡಾ ಆಧಾರದಲ್ಲಿ ರಾಜ್ಯಾದ್ಯಂತ ಸಂಘಟನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ. ನಾನು ರಾಜ್ಯ ಸಂಚಾಲಕನಾಗಿದ್ದು 16 ಮಂದಿ ಸಹ ಸಂಚಾಲಕರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಲಿಷ್ಠ ಸಂಘಟನೆ ಅದರ ಜೊತೆಗೆ ಬಲಿಷ್ಠ ದಲಿತ ಚಳವಳಿ ಕಟ್ಟುವ ಯೋಜನೆ ಹೊಂದಲಾಗಿದೆ.

Advertisements

“ಶ್ರಮ ಜೀವಿಗಳು ತಮ್ಮ ಹಿತ ಕಾಪಾಡಿಕೊಳ್ಳಲು ತುರ್ತು ಪರಿಸ್ಥಿತಿಯ ಅನುಭವಗಳಿಂದ ಪಾಠ ಕಲಿಯುವುದು ಅವಶ್ಯವಾಗಿದೆ”

ವಿಜೆಕೆ ನಾಯರ್‌ರವರೊಡನೆ ಸಂದರ್ಶನ

ಸಂಪುಟ 9, ಸಂಚಿಕೆ 27, 5 ಜುಲೈ 2015

 

ವಿಜೆಕೆ
ವಿ.ಜೆ.ಕೆ.  ನಾಯರ್

ಜೂನ್ 25, 1975 ರಿಂದ ಮಾರ್ಚ್ 21, 1977 ರವರೆಗೆ, 21 ತಿಂಗಳುಗಳ ಕಾಲದಲ್ಲಿ, ನಮ್ಮ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಲಾಗಿತ್ತು. ದೇಶಾದ್ಯಂತ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಮಂದಿಯನ್ನು ಸೆರೆಮನೆಗೆ ತಳ್ಳಲಾಗಿತ್ತು. ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ ವಿರುದ್ಧ ಪಾರ್ಲಿಮೆಂಟಿನಲ್ಲಿ ಸಿಪಿಐ(ಎಂ) ಮುಖಂಡರಾಗಿದ್ದ ಎ.ಕೆ.ಗೋಪಾಲನ್ ಮಾಡಿದ ಭಾಷಣ ಮುದ್ರಿಸಿದ್ದಕ್ಕೆ ಕಾಂ. ವಿ.ಜೆ.ಕೆ.ನಾಯರ್, ಹಾಗೂ ಇಂದಿರಾ ಗಾಂಧಿಯವರಿಗೆ ಆಪ್ತರಾಗಿದ್ದ ಮಾಜಿ ಚಲನಚಿತ್ರ ತಾರೆ ದೇವಿಕಾ ರಾಣಿಯವರ ಒಡೆತನದ ತಾತಗುಣಿ ಎಸ್ಟೇಟ್‌ನ ಕಾರ್ಮಿಕರ ಹೀನಾಯ ಶೋಷಣೆಯ ವಿರುದ್ಧ ಹೋರಾಟ ಮಾಡಿದ ಕಾರಣಕ್ಕಾಗಿ ಕರ್ನಾಟಕದ ಪ್ರಮುಖ ಕಾರ್ಮಿಕ ಮುಖಂಡರಾಗಿದ್ದ ಕಾಂ. ಸೂರ್ಯನಾರಾಯಣ ರಾವ್ ಮತ್ತು ಕಾಂ. ಪಿ.ಜಗನ್ನಾಥ ತುರ್ತುಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿದವರು.

ತುರ್ತುಪರಿಸ್ಥಿತಿ ಹೇರಿಕೆಯ 40ನೇ ವರ್ಷದ ಸಂದರ್ಭದಲ್ಲಿ ಕಾಂ. ವಿಜೆಕೆಯವರನ್ನು ಸಂದರ್ಶಿಸಿದಾಗ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಮತ್ತು ಅನುಭವಗಳ ಸಾರವನ್ನು ಇಲ್ಲಿ ಕೊಡಲಾಗಿದೆ.

* ಜೂನ್ 25, 1975 ರಂದು ತುರ್ತುಪರಿಸ್ಥಿತಿ ಘೋಷಣೆಯಾದಾಗ ನಿಮಗೆ ಅನಿಸಿದ್ದೇನು?

ವಿಜೆಕೆ: ತುರ್ತುಪರಿಸ್ಥಿತಿ ಘೋಷಣೆಯಾಗುವ ಕೆಲವು ಗಂಟೆಗಳ ಮುನ್ನ, ಪಾರ್ಲಿಮೆಂಟಿನಲ್ಲಿ ಸಿಪಿಐ(ಎಂ) ಉಪ ನಾಯಕರಾಗಿದ್ದ ಕಾಂ. ಜ್ಯೋತಿರ್ಮಯಿ ಬಸು ಅವರ ಭಾಷಣದ ಒಂದು ಸಾರ್ವಜನಿಕ ಸಭೆಯನ್ನು ಆ ದಿನ ಸಂಜೆ ಬೆಂಗಳೂರಿನ ಚಿಕ್ಕಲಾಲ್‌ಬಾಗ್‌ನಲ್ಲಿ ಏರ್ಪಡಿಸಿದ್ದೆವು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕಾಂ. ಬಸುರವರು ಕೇಂದ್ರ ಸರ್ಕಾರವು ಒಂದು ರೀತಿಯ ದಬ್ಬಾಳಿಕೆಯ ಆಡಳಿತ ಹೇರುವ ಸನ್ನಾಹದಲ್ಲಿದೆಯೆಂದು ಎಚ್ಚರಿಸಿದ್ದರು. ಕಾಂ. ಇ.ಎಂ.ಎಸ್ ನಂಬೂದಿರಿಪ್ಪಾಡ್ ಅವರು ಫ್ಯಾಸಿಸ್ಟ್ ಅಪಾಯದ ಬಗ್ಗೆ ಬರೆದ ಸರದಿ ಲೇಖನಗಳು ಮಲೆಯಾಳಂ ದಿನಪತ್ರಿಕೆಗಳಲ್ಲಿ ಜೂನ್ ಮೊದಲ ವಾರದಲ್ಲಿ ಪ್ರಕಟವಾಗಿದ್ದವು. ಅದನ್ನು ಇಂಗ್ಲೀಷಿಗೆ ಭಾಷಾಂತರಿಸಿ ನಾವು ಅದಾಗಲೆ ಹಂಚಿದ್ದೆವು.

ತುರ್ತುಪರಿಸ್ಥಿತಿ ಘೋಷಣೆಯಾಗಿರುವುದು ನಮಗೆ ಜೂನ್ 26ರ ಬೆಳಗ್ಗೆ ತಿಳಿಯಿತು. ನಾವು ಮೈಸೂರ್ ಬ್ಯಾಂಕ್ ವೃತ್ತದ ಬಳಿ ಸೇರಿ, ಅಲ್ಲಿಂದ ಒಂದು ಪ್ರತಿಭಟನಾ ರ‍್ಯಾಲಿಯಲ್ಲಿ ಮಹಾತ್ಮಾ ಗಾಂಧಿ ರಸ್ತೆಗೆ ತೆರಳಿ ನಡೆಸಿದ ಸಭೆಯಲ್ಲಿ, ಹಿಂದಿನ ದಿನ ಬೆಂಗಳೂರಿಗೆ ಆಗಮಿಸಿದ್ದ ವಿರೋಧ ಪಕ್ಷದ ಪಾರ್ಲಿಮೆಂಟ್ ಸದಸ್ಯರ ಬಂಧನವನ್ನು ಖಂಡಿಸಿದೆವು.

* ಈ ಆಂತರಿಕ ತುರ್ತುಪರಿಸ್ಥಿತಿ ಹೇರಲು ಮುಖ್ಯವಾದ ಕಾರಣಗಳೇನು?

ವಿಜೆಕೆ: ಆಂತರಿಕ ತುರ್ತುಪರಿಸ್ಥಿತಿ ಹೇರಲು ಮುಖ್ಯವಾದ ಕಾರಣವೆಂದರೆ, ಜನರು ಮೂಲಭೂತ ಹಕ್ಕುಗಳನ್ನು ಚಲಾಯಿಸದಂತೆ ಅವುಗಳನ್ನು ಅಮಾನತ್ತಿನಲ್ಲಿಡುವುದು, ವಿರೋಧ ಪಕ್ಷದವರ ಬಾಯಿಗೆ ಬೀಗ ಜಡಿಯುವುದು, ಪ್ರಜಾಪ್ರಭುತ್ವ ಹಕ್ಕುಗಳಡಿಯಲ್ಲಿ ಪ್ರಕಟವಾಗುವ ಪ್ರತಿಭಟನೆಗಳನ್ನು ಹತ್ತಿಕ್ಕುವುದು ಮತ್ತು ಶ್ರೀಮತಿ ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ಅಲಹಾಬಾದ್ ಹೈಕೋರ್ಟ್ ಅನೂರ್ಜಿತಗೊಳಿಸಿದ್ದುದನ್ನು ಧಿಕ್ಕರಿಸಿ ಅವರೇ ಅಧಿಕಾರದಲ್ಲಿ ಮುಂದುವರಿಯುವುದು ಮತ್ತು ಅದಕ್ಕಾಗಿ ಪಾರ್ಲಿಮೆಂಟಿನ ಅವಧಿಯನ್ನು ಒಂದು ವರ್ಷಕಾಲ ವಿಸ್ತರಿಸುವುದು ಇತ್ಯಾದಿ. ವಾಕ್ ಸ್ವಾತಂತ್ರ್ಯದ ಹಕ್ಕನ್ನು ಅಮಾನತಿನಲ್ಲಿಟ್ಟ ಕಾರಣದಿಂದಾಗಿ ಪತ್ರಿಕೆಗಳ ಮೇಲೆ ಹತೋಟಿ ಸಾಧಿಸಿ, ಆ ಮೂಲಕ, ಆಂತರಿಕ ಭದ್ರತೆ ಕಾಯ್ದೆಯಡಿಯಲ್ಲಿ ವಿರೋಧ ಪಕ್ಷದ ನಾಯಕರನ್ನು ಬಂಧಿಸುವುದನ್ನು ಒಂದು ಸಾಮಾನ್ಯ ಘಟನೆಯಂತೆ ಪರಿಗಣಿಸುವುದೇ ಆಗಿತ್ತು.

 * ನಿಮ್ಮನ್ನು ಬಂಧಿಸಲು ಕಾರಣವೇನು? ಮತ್ತು ನಿಮ್ಮ ಜೈಲು ವಾಸದ ಅನುಭವಗಳೇನು?

ವಿಜೆಕೆ: ಸಿಪಿಐ(ಎಂ) ಪಕ್ಷದ ಎಂ.ಪಿ. ಕಾಂ. ಏ.ಕೆ. ಗೋಪಾಲನ್ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಪಾರ್ಲಿಮೆಂಟಿನಲ್ಲಿ ಮಾಡಿದ ಭಾಷಣದ ಕನ್ನಡ ಅನುವಾದದ ಪ್ರತಿಗಳನ್ನು ಮುದ್ರಣ ಮಾಡಿಸುವ ಸಂದರ್ಭದಲ್ಲಿ, ಪ್ರಿಂಟಿಂಗ್ ಪ್ರೆಸ್‌ನ ಮಾಲೀಕನನ್ನು ಪೋಲೀಸರು ಹಿಡಿದು ಆತನನ್ನು ನನ್ನ ಮನೆಗೆ ಕರೆತಂದು, (ಆಗ ಪಕ್ಷದ ಕಛೇರಿ ನನ್ನ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು) ನನ್ನನ್ನು ಆಗಸ್ಟ್ 1975 ರಲ್ಲಿ ಭಾರತದ ರಕ್ಷಣೆಯ ಕಾಯ್ದೆಯಡಿಯಲ್ಲಿ ಬಂಧಿಸಿ, ಮಾಜಿಸ್ಟ್ರೇಟ್ ಕೋರ್ಟ್ ಆದೇಶದ ಮೇಲೆ ಅಕ್ಟೋಬರ್ 1976 ರಲ್ಲಿ ಜೈಲಿನಲ್ಲಿದ್ದ ನನ್ನನ್ನು ಬಿಡುಗಡೆ ಮಾಡಲಾಯಿತು. ಹಿರಿಯ ನ್ಯಾಯವಾದಿ ಕೆ. ಸುಬ್ಬಾರಾವ್ ಮತ್ತು ಅವರ ಕಿರಿಯ ಸಹೋದ್ಯೋಗಿ ವಿ.ಗೋಪಾಲ ಗೌಡ (ಅವರು ಈಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರು) ನನ್ನ ಪರವಾಗಿ ಕೋರ್ಟಿನಲ್ಲಿ ವಕಾಲತ್ತು ನಡೆಸಿದ್ದರು. ತನ್ನ ಭಾಷಣವನ್ನು ಪ್ರಕಾಶ ಮಾಡುವ ಹಕ್ಕು ಮತ್ತು ಸವಲತ್ತು ಒಬ್ಬ ಪಾಲಿಮೆಂಟ್ ಸದಸ್ಯನಿಗೆ ಇದೆ ಅದು ಮೊಟಕಾಗಿಲ್ಲ ಎಂಬ ನಮ್ಮ ವಕೀಲರ ವಾದವನ್ನು ಕೋರ್ಟ್ ಒಪ್ಪಿ ನನ್ನನ್ನು ಬಿಡುಗಡೆ ಮಾಡಿತು. 1976 ರಲ್ಲಿ ವಿ.ವಿ. ಪುರಂ ಲಾ ಕಾಲೇಜಿನಲ್ಲಿ ಪೋಲೀಸ್ ಬೆಂಗಾವಲಿನಲ್ಲಿ ನನ್ನ ಎರಡನೆ ವರ್ಷದ ಎಲ್‌ಎಲ್‌ಬಿ ಪರೀಕ್ಷೆಗೆ ಹಾಜರಾಗಿ ಬರೆಯುವ ಅವಕಾಶ ದೊರಕಿತ್ತು. ಜೈಲು ವಾಸದ ಅವಧಿಯಲ್ಲಿ ನನಗೆ ರಾಷ್ಟ್ರೀಯ ನಾಯಕರಾದ ಎಲ್.ಕೆ. ಆದ್ವಾನಿ, ಎಸ್.ಎನ್.ಮಿಶ್ರ, ಮಧು ದಂಡವತೆ, ದೇವೇಗೌಡ, ರಾಮಕೃಷ್ಣ ಹೆಗಡೆ ಮುಂತಾದವರ ಜೊತೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುವ ಅವಕಾಶ ಸಿಕ್ಕಿತ್ತು. ಜೈಲಿನಲ್ಲಿದ್ದಾಗ, ಜನತಾ ಪಕ್ಷದ ರಚನೆಯಲ್ಲಿ ಸಹಾಯ ಮಾಡಿದ್ದೇನೆ

* ತುರ್ತು ಪರಿಸ್ಥಿತಿಯ ವಿರುದ್ಧ ಕರ್ನಾಟಕದ ಜನತೆ ಮತ್ತು ಕಾರ್ಮಿಕ ವರ್ಗದ ಪ್ರತಿಕ್ರಿಯೆ ಯಾವ ರೀತಿಯಲ್ಲಿತ್ತು?

ವಿಜೆಕೆ: ಕಾರ್ಮಿಕ ವರ್ಗದ ಮೇಲೆ ಭೀಕರ ದಾಳಿ ನಡೆದಿತ್ತು. ಆದರೆ, ಅವರಿಗೆ ಅದನ್ನು ಪ್ರತಿರೋಧಿಸುವ ಅವಕಾಶವಾಗಲಿಲ್ಲ. ತುರ್ತುಪರಿಸ್ಥಿತಿಯ ನಂತರ, 1978ರ ತರುವಾಯ, ಕಾರ್ಮಿಕ ವರ್ಗ ಹಿಂದೆ ತನ್ನ ಮೇಲೆ ಆದ ದಬ್ಬಾಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿತು. ಜನತಾ ಪಾರ್ಟಿಯ ಸರ್ಕಾರವು ಇಂದಿರಾ ಗಾಂಧಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಮುಂದುವರೆಸಿತ್ತು. ಇಂದಿರಾ ಗಾಂಧಿಯವರು 1980ರಲ್ಲಿ ಅಧಿಕಾರಕ್ಕೆ ಮರಳಿದ ನಂತರ ಬೆಂಗಳೂರಿನ ಕಾರ್ಮಿಕ ವರ್ಗ ಕೀರ್ತಿಶಾಲಿ ಹೋರಾಟಗಳನ್ನು ನಡೆಸಿ, ಕರ್ನಾಟಕದ ರಾಜಕೀಯದಲ್ಲಿ ತನ್ನದೇ ಆದ ಒಂದು ಛಾಪು ಮೂಡಿಸಿತು. ಕಾರ್ಮಿಕ ವರ್ಗವು ಸರ್ವಾಧಿಕಾರಿ ಧೋರಣೆಯ ವಿರುದ್ಧ ನಡೆಸದೆ ಉಳಿದಿದ್ದನ್ನು ಬಾಕಿಯನ್ನು ತನ್ನ 1980-81ರ ಹೋರಾಟಗಳ ಮೂಲಕ ಪೂರ್ಣಗೊಳಿಸಿತು. ಕಾರ್ಮಿಕ ವರ್ಗವು ರೈತ ಚಳುವಳಿಗಳಿಗೆ ನೆರವಾಗಿದ್ದು ಮಲಪ್ರಭಾ ಹೋರಾಟ ಬೆಳೆದು ಬಂತು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ರಾಮಕೃಷ್ಣ ಹೆಗಡೆ ಸರ್ಕಾರ ಅಧಿಕಾರ ಹಿಡಿಯುವಲ್ಲಿ ಒಂದು ಮುಖ್ಯವಾದ ಪಾತ್ರ ನಿರ್ವಹಿಸಿತು.

* ತುರ್ತು ಪರಿಸ್ಥಿತಿಯ ವಿರುದ್ಧವಾಗಿ ಪ್ರತಿರೋಧದ ಚಳುವಳಿ ನಡೆಯಿತೆ?

ವಿಜೆಕೆ: ಅಲ್ಲಲ್ಲಿ ಪ್ರತಿರೋಧ ಇತ್ತು. ಆರ್‌ಎಸ್‌ಎಸ್ ಮತ್ತು ಎಬಿವಿಪಿ ಪ್ರತಿಭಟಿಸಿದವು. ಪಿಜಿಆರ್ ಸಿಂಧ್ಯಾ ಮತ್ತು ಸುರೇಶ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಸಮಾಜವಾದಿ ಪಕ್ಷದ ಫೆರ್ನಾಂಡಿಜ್ ಸಹೋದರರು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದರು. ಲಾರೆನ್ಸ್  ಫೆರ್ನಾಂಡಿಜ್ ಅವರನ್ನು ಬಂಧಿಸಿ ಹಿಗ್ಗಾ ಮುಗ್ಗಾ ಥಳಿಸಿ ಅವರ ಸಹೋದರ ಮೈಕೆಲ್ ಫೆರ್ನಾಂಡಿಜ್ ಜೊತೆಯಲ್ಲಿ ಜೈಲಿಗೆ ಹಾಕಿದರು. ಅವರ ಜೊತೆಯಲ್ಲಿ ಬಂಧಿಸಿದ್ದ ಸ್ನೇಹಲತಾ ರೆಡ್ಡಿ ತುರ್ತುಪರಿಸ್ಥಿತಿ ಕೊನೆಗೊಳ್ಳುವ ಮುನ್ನವೇ ಮೃತರಾದರು.

* ತುರ್ತುಪರಿಸ್ಥಿತಿಯ ಅವಧಿಯಲ್ಲಿ ಸಿಐಟಿಯು ಮತ್ತು ಸಿಪಿಐ(ಎಂ) ಯಾವ ರೀತಿಯಲ್ಲಿ ತಮ್ಮ ಕಾರ್ಯ ನಿರ್ವಹಿಸಿದವು?

ವಿಜೆಕೆ: ಸಿಪಿಐ(ಎಂ) ನಾಯಕರಲ್ಲಿ ಕೆಲವರನ್ನು ಬಂಧಿಸಲಾಗಿತ್ತು. ಸಿಪಿಐ(ಎಂ) ನಾಗರಿಕ ಹಕ್ಕುಗಳ ಪರವಾಗಿ ಚಳುವಳಿ ನಡೆಸುವ ನಿಲುವು ತೆಗೆದುಕೊಂಡಿತ್ತು. ಬಂಗಾಳದಲ್ಲಿ ಅರೆ-ಫ್ಯಾಸಿಸ್ಟ್ ದಬ್ಬಾಳಿಕೆಯ ಆಡಳಿತ ಅದಾಗಲೇ ದಟ್ಟವಾಗಿತ್ತು. ಕೇರಳದಲ್ಲಿ ಅಚ್ಯುತ ಮೆನನ್ ಸರ್ಕಾರ ಸಿಪಿಐ(ಎಂ) ಮತ್ತು ನಕ್ಸಲೀಯರನ್ನು ದಮನ ಮಾಡುತ್ತಿತ್ತು. 1978ರಲ್ಲಿ ಜಲಂಧರ್‌ನಲ್ಲಿ ಜರುಗಿದ ಸಿಪಿಐ(ಎಂ) ಮಹಾಧಿವೇಶನದ ನಂತರವಷ್ಟೇ ಸಿಪಿಐ(ಎಂ) ಜನರ ಸಮಸ್ಯೆಗಳನ್ನು ಪರಿಹರಿಸಲು ತನ್ನ ಚಟುವಟಿಕೆಗಳನ್ನು ಚುರುಕಾಗಿ ನಡೆಸಲು ಸಾಧ್ಯವಾಯಿತು.

* ಸರ್ವಾಧಿಕಾರಿ ಮನೋಭೂಮಿಕೆಯುಳ್ಳ ಮೋದಿಯವರು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡುವ ಸಾಧ್ಯತೆ ಇದೆಯೆಂದು ನಿಮಗನಿಸುತ್ತದೆಯೇ?

ವಿಜೆಕೆ: ದೇಶದಲ್ಲಿ ಆಗ ಇದ್ದ ಪರಿಸ್ಥಿತಿ ಈಗ ಅದೇ ರೀತಿಯಲ್ಲಿಲ್ಲ. ಆದರೆ, ಪಾರ್ಲಿಮೆಂಟರಿ ಪ್ರಜಾಪ್ರಭುತ್ವದ ಮೇಲೆ ಎಡೆ ಬಿಡದೆ ನಡೆಸುತ್ತಿರುವ ವ್ಯವಸ್ಥಿತ ದಾಳಿಗಳು, ವಿಮರ್ಶೆಯನ್ನು ಸಹಿಸದ ಅಸಹನೆ ಮತ್ತು ಸರ್ವಾಧಿಕಾರಿ ಧೋರಣೆಗಳು ಕೊಡುವ ಸಂಕೇತಗಳು ಒಂದು ಫ್ಯಾಸಿಸ್ಟ್ ಮಾದರಿಯ ಬೆಳವಣಿಗೆಯನ್ನು ಸೂಚಿಸುತ್ತವೆ. ಫ್ಯಾಸಿಸಂ ಅಂದರೆ, ಏಕಸ್ವಾಮ್ಯ ಕಂಪೆನಿಗಳು ಮತ್ತು ಹಣಕಾಸು ಬಂಡವಾಳಗಳ ಆಧಿಪತ್ಯದ ನಗ್ನ ಸರ್ವಾಧಿಕಾರವಲ್ಲದೆ ಮತ್ತೇನೂ ಅಲ್ಲ. ತನ್ನ ಆಳ್ವಿಕೆಗೆ ಧಕ್ಕೆಯಾದರೆ ಸರ್ವಾಧಿಕಾರದತ್ತ ವಾಲುವ ಎಲ್ಲ ಸಾಧ್ಯತೆಗಳನ್ನು ಮೋದಿಯವರು ಪ್ರದರ್ಶಿಸಿದ್ದಾರೆ.

* ತುರ್ತುಪರಿಸ್ಥಿತಿ ಘೋಷಣೆಯ ನಲವತ್ತನೆ ವರ್ಷದ ಸಂದರ್ಭದಲ್ಲಿ ಕರ್ನಾಟಕದ ಶ್ರಮಜೀವಿಗಳಿಗೆ ನೀವು ಕೊಡುವ ಸಂದೇಶವೇನು?

ವಿಜೆಕೆ: ಸರ್ವಾಧಿಕಾರಿ ಧೋರಣೆಗಳು ತಲೆ ಎತ್ತುತ್ತಿರುವ ಹಿನ್ನೆಲೆಯಲ್ಲಿ ಶ್ರಮ ಜೀವಿಗಳು ತಮ್ಮ ಹಿತ ಕಾಪಾಡಿಕೊಳ್ಳಲು ಹಿಂದೆ ನಡೆದ ಘಟನೆಗಳಿಂದ ಪಾಠ ಕಲಿಯುವುದು ಅವಶ್ಯವಾಗಿದೆ. 1972ರ ನಂತರ ಬಂಗಾಳದಲ್ಲಿ ಅರೆ-ಫ್ಯಾಸಿಸ್ಟ್ ದಬ್ಬಾಳಿಕೆಯ ಆಡಳಿತ, 1973ರ ವೇತನ ಸ್ಥಂಭ,1974ರ ರೈಲ್ವೆ ಮುಷ್ಕರ ಮತ್ತು 1975ರಲ್ಲಿ ಜೀವ ವಿಮಾ ನಿಗಮದಲ್ಲಿ ಆಗಿದ್ದ ವೇತನ ಒಪ್ಪಂದದ ರದ್ದತಿ ಮುಂತಾದ ಅಂಶಗಳು ಆಂತರಿಕ ತುರ್ತುಪರಿಸ್ಥಿತಿಯ ಘೋಷಣೆಯಲ್ಲಿ ಪರ್ಯವಸಾನಗೊಂಡವು. ಸದ್ಯದಲ್ಲಿ ಕಾರ್ಮಿಕ ವರ್ಗ ಮತ್ತು ರೈತಾಪಿ ವರ್ಗದ ಮೇಲೆ ಭೀಕರ ದಾಳಿ ನಡೆಯುತ್ತಿದೆ. ಅವರೆಲ್ಲರೂ ಒಟ್ಟಾಗಿ ನಿಂತು ಭಾರತದ ಪ್ರಜಾಪ್ರಭುತ್ವವನ್ನು ಉಳಿಸಬೇಕು.

ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದಲ್ಲಿ ಆರೆಸ್ಸೆಸ್/ಬಿಜೆಪಿ ಪಾತ್ರವೇನು?

ಈಗ ಬಿಜೆಪಿಯ ಬೆಂಬಲಿಗರಾಗಿರುವ ಸುಬ್ರಮಣಿಯನ್ ಸ್ವಾಮಿಯವರು ಜೂನ್ 13, 2000ದ ’ದಿ ಹಿಂದು’ ಪತ್ರಿಕೆಯಲ್ಲಿ ತುರ್ತು ಪರಿಸ್ಥಿತಿಯ 25ನೇ ವಾರ್ಷಿಕದ ಸಂದರ್ಭದಲ್ಲಿ ಬರೆದ ಲೇಖನ “Unlearnt lessons of the Emergency” (ತುರ್ತು ಪರಿಸ್ಥಿತಿಯ ಕಲಿಯದ ಪಾಟಗಳು)ದಲ್ಲಿ ಏನು ಹೇಳಿದ್ದರು ನೋಡಿ:

…1975-77ರಲ್ಲಿ ಹೆಚ್ಚಿನ ಬಿಜೆಪಿ/ಆರೆಸ್ಸೆಸ್ ಮುಖಂಡರು ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟಕ್ಕೆ ವಿಶ್ವಾಸಘಾತ ಬಗೆದರು. ಆಗಿನ ಆರೆಸ್ಸೆಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಪುಣೆಯಲ್ಲಿನ ಯರವಡಾ ಜೈಲಿನಿಂದ ಇಂದಿರಾ ಗಾಂಧಿಯವರಿಗೆ, ಜೆಪಿ ನೇತೃತ್ವದ ಆಂದೋಲನದಲ್ಲಿ ಆರೆಸ್ಸೆಸ್‌ನ ಸಹಯೋಗ ಇಲ್ಲ ಎನ್ನುವ ಮತ್ತು ಕುಖ್ಯಾತ 20 ಅಂಶಗಳ ಕಾರ್ಯಕ್ರಮಕ್ಕೆ ಕೆಲಸ ಮಾಡುವುದಾಗಿ ಹೇಳುವ ಹಲವು ಕ್ಷಮಾಪಣೆ ಪತ್ರಗಳನ್ನು ಬರೆದರು ಎಂಬುದು ಮಹಾರಾಷ್ಟ್ರ ವಿಧಾನಸಭೆಯ ಕಲಾಪಗಳ ದಾಖಲೆಗಳಲ್ಲಿ ಇದೆ. ಅವರು ಈ ಯಾವ ಪತ್ರಗಳಿಗೂ ಉತ್ತರಿಸಲಿಲ್ಲ. ಶ್ರೀ ಅಟಲ ಬಿಹಾರಿ ವಾಜಪೇಯಿ ಕೂಡ ಇಂದಿರಾ ಗಾಂಧಿಯವರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದರು, ಅವನ್ನು ಗಮನಕ್ಕೆ ತಗೊಂಡರು. 20 ತಿಂಗಳ ತುರ್ತು ಪರಿಸ್ಥಿತಿಯ ಕಾಲದಲ್ಲಿ ಹೆಚ್ಚಿನ ಅವಧಿಯಲ್ಲಿ ಶ್ರೀ ವಾಜಪೇಯಿ ಸರಕಾರದ ವಿರುದ್ಧ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂಬ ಲಿಖಿತ ಭರವಸೆ ಕೊಟ್ಟು ಪೆರೋಲ್‌ನಲ್ಲಿ ಹೊರಗೇ ಇದ್ದರು. ಒಳ್ಳೆಯ ವರ್ತನೆಯ ಭರವಸೆ ನೀಡಿ ಜೈಲುಗಳಿಂದ ಹೊರನಡೆದ ಆಗಿನ ಜನಸಂಘದ ಇತರ ಸುಯೋಗ್ಯರ ವಿಶದವಾದ ವರ್ಣನೆ ಅಕಾಲಿ ಮುಖಂಡ ಶ್ರೀ ಸುರ್ಜಿತ್ ಸಿಂಗ್ ಬರ್ನಾಲಾ ರವರು ಬರೆದ ಒಂದು ಪುಸ್ತಕದಲ್ಲಿ ಇದೆ.

———————————————————————————————————————————–

ಈ ಲಿಂಕ್‌ಗಳನ್ನು ನೋಡಿ:

http://www.thehindu.com/2000/06/13/stories/05132524.htm

http://www.firstpost.com/politics/vajpayee-rss-cowered-before-indira-gandhi-can-bjp-ignore-swamys-account-of-emergency-2312104.html

http://archive.tehelka.com/story_main13.asp?filename=op070205And_Not_Even.asp

” ಮೂಢನಂಬಿಕೆ ಎಂಬುದು ಬರೀ ನಂಬಿಕೆಯಲ್ಲ. ಅದು ಜನರು ಪ್ರಶ್ನೆ ಮಾಡದಿರುವಂತೆ ಕಲ್ಪಿಸಿಕೊಂಡಿರುವ ಸಾಧನ”

ಆರ್.ಕೆ

ಮೂಢನಂಬಿಕೆಗಳನ್ನು ನಿಷೇಧಿಸುವ ಕಾಯ್ದೆಯ ಬಗೆಗೆ ಕಾಯ್ದೆಯ ಪರವಾಗಿ ಮತ್ತು ವಿರೋಧವಾಗಿ ರಾಜ್ಯದಲ್ಲಿ ವ್ಯಾಪಕವಾದ ಚಚರ್ೆಯಾಗುತ್ತಿದೆ. ಕಾಯ್ದೆಯು ಜನರ ನಂಬಿಕೆಗಳನ್ನು ನಿಯಂತ್ರಿಸಲು ಹೊರಟಿದೆ, ಕಾಯ್ದೆಯಿಂದ ಜನರ ದಾಮರ್ಿಕ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂಬ ಟೀಕೆಗಳಿಂದ ಹಿಡಿದು ಈ ಕಾಯ್ದೆಯು `ಬಹುಸಂಖ್ಯಾತ ಹಿಂದೂಗಳ ಮೇಲಿನ ದಾಳಿ’, `ಹಿಂದೂ ಧರ್ಮದ ಮೇಲಿನ ಹಲ್ಲೆ’ ಎಂಬಲ್ಲಿಯವರೆಗೆ ಟೀಕೆಗಳು, ವಿರೋಧಗಳು ವ್ಯಕ್ತವಾಗುತ್ತಿವೆ.

ಈ ಹಿನ್ನೆಲೆಯಲ್ಲಿ `ಹೊಸತು’ ಪತ್ರಿಕೆಯ ಸಂಪಾದಕರು ಹಾಗೂ ಚಿಂತಕರೂ ಆದ ಡಾ. ಜಿ. ರಾಮಕೃಷ್ಣ ಅವರನ್ನು `ಜನಶಕ್ತಿ’ಯು ಸಂದಶರ್ಿಸಿತು. ಡಾ. ಜಿ.ಆರ್. ಅವರು ಈ ಕಾಯ್ದೆಯ ಕರಡು ಸಿದ್ದಗೊಳ್ಳುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರು. ವಿಚಾರದ ಕುರಿತು ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

3

ಜನಶಕ್ತಿ: ಪ್ರಸ್ತಾವಿತ ಮೂಢನಂಬಿಕೆ ನಿಷೇಧ ಕಾಯ್ದೆಯ ಮುಖ್ಯತತ್ವ ಏನು ?
ಡಾ. ಜಿ. ರಾಮಕೃಷ್ಣ: ನಮ್ಮ ಭಾರತೀಯ ಪರಂಪರೆಯಲ್ಲೇ `ಕಾರ್ಯಕಾರಣ ಭಾವ’ ಎಂಬುದಕ್ಕೆ ಪ್ರಧಾನ್ಯತೆ ಕೊಡಲಾಗಿದೆ. ಬೌದ್ಧ, ಸಾಂಖ್ಯ, ಚಾವರ್ಾಕ, ಲೋಕಾಯತ, ಶರಣ ಪರಂಪರೆ ಮುಂತಾದವುಗಳೂ ಈ `ಕಾರ್ಯಕಾರಣ ಭಾವ’ ಆಧರಿಸಿವೆ. ಅದೇ ತತ್ವವೇ ಈ ಕಾಯ್ದೆಯ ಒಂದು ಮುಖ್ಯ ಆಧಾ ರ. ಅಂದರೆ ನಾವು ಮಾಡುತ್ತಿರುವುದರ ಅರ್ಥ ಏನು ? ಅದರಿಂದ ಉದ್ದೇಶಿತ ಗುರಿ ಈಡೇರುವುದೇ ಎಂಬ `ಕಾರ್ಯ’ ಮತ್ತು `ಕಾರಣ’ಗಳ ಸಂಬಂಧಗಳ ಕುರಿತ ವಿವೇಚನೆ. ಆದರೆ ಇಲ್ಲಿ ಜನರ ನಂಬಿಕೆಯ ಪ್ರಶ್ನೆ ಬರುತ್ತದೆ. ಜನರ ನಂಬಿಕೆಗಳನ್ನು ಯಾರೂ ನಿಯಂತ್ರಿಸಲಾಗದು. ಯಾರಿಗೂ ಅಪಾಯವಿಲ್ಲದಂತಹ, ಬೇರೆ ವ್ಯಕ್ತಿಗೆ ಘಾಸಿಯಾಗದಂತಹ ನಂಬಿಕೆಯನ್ನು ಇಟ್ಟುಕೊಳ್ಳುವುದಕ್ಕೆ ಮತ್ತು ಆಚರಿಸುವುದಕ್ಕೆ ಜನರು ಸ್ವತಂತ್ರರು.

ಯಾವುದೇ ಆಚರಣೆ `ಮನುಷ್ಯತ್ವದ ಘನತೆಗೆ ಚ್ಯುತಿ’ ತರುವಂತಿದ್ದರೆ ಹಿಂಸೆಯನ್ನು ಪ್ರಚೋದಿಸಿದರೆ ಅದನ್ನು ನಿಷೇಧಿಸಬೇಕಾಗುತ್ತದೆ. ಬೆತ್ತಲೆ ಸೇವೆ, ನರಬಲಿ, ಅಘೋರಿ, ಸಿದ್ದುಭುಕ್ತಿ, ಮಾಟ, ಸಿಡಿ, ಗಾವು ಸಿಗಿತ, ಮುಂತಾದವು ಅಂಥವು. `ಮಡೆಸ್ನಾನ’ದಂತಹ ಆಚರಣೆ ಕುರಿತು `ಸ್ವತಃ ಅವರೇ ಮಾಡುತ್ತಿದ್ದಾರೆ’ ಎಂಬುದು ಈ ಆಚರಣೆಯ ಸಮರ್ಥನೆಗೆ ಆಧಾರ ಆಗುವುದಿಲ್ಲ. ಅದು ಜನರ ಪ್ರಜ್ಞೆಗೆ ಸಂಬಂಧಪಟ್ಟ ವಿಚಾರ. ಜ್ಯೋತಿ ಬಾಪುಲೆಯಂತಹವರು ಬರುವ ಮುಂಚೆ ಅಸ್ಪೃಶ್ಯತೆಯನ್ನು ಅಸ್ಪೃಶ್ಯ ಜನರೇ ಒಪ್ಪಿಕೊಂಡು ಆಚರಿಸುತ್ತಿದ್ದರು. ಚರಿತ್ರೆಯಲ್ಲಿ ಇದು ಯಾಕೆ ಬಂದಿದೆ ಎಂದು ನೋಡುವುದು ಮುಖ್ಯ.

ಮಲೆಕುಡಿಯರೇ ಯಾಕೆ ಹೆಚ್ಚಾಗಿ ಮಡೆಸ್ನಾನ ಆಚರಿಸುತ್ತಾರೆ? ಅವರು ಪ್ರಶ್ನೆ ಕೇಳಬಾರದು-ಅಂತಹ ಸ್ಥಿತಿಯಲ್ಲಿ ಇರಬೇಕು. 15 ರೂಪಾಯಿ ಕೂಲಿಗೆ ಕೆಲಸ ಮಾಡುತ್ತಾರೆ-ಅವರು ಹೆಚ್ಚು ಕೂಲಿ ಕೇಳಬಾರದು. ಎಂಜಲ ಮೇಲೆ ಉರುಳಾಡುವುದರಿಂದ ಕುಷ್ಠರೋಗ ವಾಸಿಯಾಗುತ್ತದೆ ಎನ್ನುವವರು ತಾವೇ ಬಂದು ಅಲ್ಲಿ ಉರುಳಾಡುತ್ತಾರೋ ? ಪೇಜಾವರರಿಗೆ ಕುಷ್ಠರೋಗ ಹಿಡಿದಿರುವುದು ಅವರ ಮಿದುಳಿಗೆ. ಅವರು ಎಲ್ಲಿ ಹೋಗಿ ಉರುಳಿದರೂ ಅದು ವಾಸಿಯಾಗುವುದಿಲ್ಲ.

ಮೂಢನಂಬಿಕೆ ಎಂಬುದು ಬರೀ ನಂಬಿಕೆಯಲ್ಲ. ಅದು ಜನರು ಪ್ರಶ್ನೆ ಮಾಡದಿರುವಂತೆ ಕಲ್ಪಿಸಿಕೊಂಡಿರುವ ಸಾಧನ. ಮೂಢನಂಬಿಕೆಗಳನ್ನು ಉದ್ದೇಶಪೂರ್ವಕವಾಗಿ ಬೆಳೆಸಲಾಗಿದೆ. ಮೂಢನಂಬಿಕೆ ಬಲಿಯಾದ ವ್ಯಕ್ತಿಗೆ ಈ ಆಚರಣೆಗೆ ಸಮ್ಮತಿ ಇತ್ತು ಅನ್ನುವುದು ಕೂಡ ಒಪ್ಪಲಾಗದಂತಹ ವಾದ.

ಜನರ ಪ್ರಜ್ಞಾವಲಯವನ್ನು ವಿಸ್ತರಿಸಲು ನಾವು ಏನು ಮಾಡಬೇಕು ಎಂಬುದು ಮುಖ್ಯ. ಸಕರ್ಾರ ಒಂದು ಒಳ್ಳೆಯ ಆಸ್ಪತ್ರೆಯನ್ನು ಕಟ್ಟಿಸಿ ಅಲ್ಲಿ ವೈದ್ಯರು ಬಂದ ರೋಗಿಗಳನ್ನ ಸರಿಯಾಗಿ ಮಾತನಾಡಿಸಿ ಚಿಕಿತ್ಸೆ-ಔಷಧಿಕೊಟ್ಟರೆ ಕ್ರಮೇಣ ಜನರು ಆಸ್ಪತ್ರೆಗೆ ಬರುತ್ತಾರೆ. ಅವರು (ಬೆಂಗಳೂರಿನ)`ಕಾಟನ್ ಪೇಟೆ’ಯಲ್ಲಿ ಹೋಗಿ ಕ್ಯೂ ನಿಂತು ಯಂತ್ರ-ತಾಯತ ಕಟ್ಟಿಸುವುದು ತಪ್ಪುತ್ತದೆ.
ಐಟಿ ವಲಯದಲ್ಲಿ ಉದ್ಯೋಗದ ಅಸ್ಥಿರತೆ ಇದೆ. ಕೆಲಸ ಹೋಗಬಾರದು. ಅತಂತ್ರ ಸ್ಥಿತಿಯಲ್ಲಿರುವ ಅವರಿಗೆ ಆತು ಕೊಳ್ಳಲು ಏನಾದರೂ ಬೇಕು. ಮೂಢನಂಬಿಕೆಗಳಿಗೆ ಜೋತು ಬೀಳುತ್ತಾರೆ. ಜನರ ಜೀವನದ ಅಭದ್ರತೆ ನಿವಾರಿಸುವುದು ಮುಖ್ಯ.

ಜನಶಕ್ತಿ: ಈ ಕಾಯ್ದೆ ಹಿಂದೂ ಧರ್ಮದ ವಿರುದ್ದ ಹಲ್ಲೆ, ಬಹುಸಂಖ್ಯಾತರ ನಂಬಿಕೆಯ ಮೇಲಿನ ಧಾಳಿ ಅಂತ ಬಹಳ ಪ್ರಚಾರ ನಡೆದಿದೆಯಲ್ಲ !!!
ಜಿ.ಆರ್.: ಕಾಯ್ದೆಯು ಯಾವುದೇ ಒಂದು ಧರ್ಮದ ವಿರುದ್ಧ ಇಲ್ಲ. ಅದು ಸ್ಪಷ್ಟವಾಗಿದೆ. ಕಾಯ್ದೆಯ ಕರಡಿನಲ್ಲಿ `ಕಾನೂನಿನ ಸ್ವರೂಪ ಸೂಚಿಯಲ್ಲಿ’ `ಯಾವುದೇ ಮತಧರ್ಮಕ್ಕೆ ಸಂಬಂಧಿಸಿದ ಮೌಢ್ಯಪ್ರೇರಕ … …” ಎಂಬ ಭಾಗವನ್ನು ನೋಡಿ.

ಕಾಯ್ದೆಯಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆಯಾಗುತ್ತದೆ ಎಂಬ ವಾದವೂ ಇದೆ. ಕೆಲವು ಮೂಢನಂಬಿಕೆಯ ಆಚರಣೆಗಳನ್ನು ನಿಷೇಧಿಸುವುದರಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆ ಹೇಗಾಗುತ್ತದೆ!! ಹಾಗಿದ್ದರೆ ಭಾರತೀಯ ಸಂಸ್ಕೃತಿ ಅಷ್ಟು ದುರ್ಬಲವೇ, ಅಷ್ಟು ಪೇಲವವೇ ಎಂಬ ಪ್ರಶ್ನೆ ಏಳುತ್ತದೆ. ಭಾರತೀಯ ಸಂಸ್ಕೃತಿ ಅಷ್ಟು ದುರ್ಬಲ ಅಲ್ಲ. ಅದು ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದಿದೆ.

ಸಂಪ್ರದಾಯ, ನಂಬಿಕೆ ಹೆಸರಿನಲ್ಲಿ ಒಬ್ಬ ವ್ಯಕ್ತಿ ತನಗೆ ತಾನೆ ಹಿಂಸೆ ಮಾಡಿಕೊಂಡರೂ ಅದು ತ್ಯಾಜ್ಯವೇ. ಅದನ್ನು ಬಿಡಬೇಕಾಗುತ್ತದೆ. ಯಾವುದೇ ಧರ್ಮದಲ್ಲಿ ಇಂತಹ ಆಚರಣೆ ಇರಲಿ ಅದನ್ನು ನಿಷೇಧಿಸಬೇಕಾಗುತ್ತದೆ. ಎಲ್ಲ ಧರ್ಮಕ್ಕೂ ಇದು ಅನ್ವಯಿಸುತ್ತದೆ. ನಮ್ಮ ಧರ್ಮದ ಮೇಲೆ ಹಲ್ಲೆ ನಡೆಯುತ್ತಿದೆ, ಧಾಳಿ ನಡೆಯುತ್ತಿದೆ ಎಂದು ಜನರನ್ನು ಎತ್ತಿಕಟ್ಟಲು ಯತ್ನಿಸುವವರಿಗೆ ಜನರಲ್ಲಿ ಭೀತಿ ಉಂಟುಮಾಡಿ ರಾಜಕೀಯ ಲಾಭ ಮಾಡಿಕೊಳ್ಳುವ ದುರುದ್ದೇಶವಿರುತ್ತದೆ. ಈ ಪ್ರಚಾರ ಮತ್ತು ಪ್ರಯತ್ನದ ಹಿಂದೆ ಕೋಮುವಾದಿ ಶಕ್ತಿಗಳು ಕೆಲಸ ಮಾಡುತ್ತಿರುತ್ತವೆ.

ಜನಶಕ್ತಿ: ಜನರ ನಂಬಿಕೆಗಳನ್ನು ಪ್ರಶ್ನಿಸಲು `ಸಾಹಿತಿ-ಬುದ್ದಿಜೀವಿ’ಗಳಿಗೇನು ಅಧಿಕಾರ ಇದೆ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಅದಕ್ಕೆ ನೀವೇನು ಹೇಳುವಿರಿ. ?
ಜಿ.ಆರ್.: ಕನರ್ಾಟಕ ರಾಜ್ಯ ಸಕರ್ಾರವು ಮೂಢನಂಬಿಕೆ ವಿರೋಧಿ ಕಾಯ್ದೆಯ ಕರಡು ರೂಪಿಸಿಕೊಡಿ ಎಂದು ರಾಷ್ಟ್ರೀಯ ಕಾನೂನು ಶಾಲೆ (ಎನ್ಎಲ್ಎಸ್ಐಯು)ಗೆ ಅಧಿಕೃತವಾಗಿ ಪತ್ರ ಬರೆದಿತ್ತು.

ಈ ರಾಷ್ಟ್ರೀಯ ಕಾನೂನು ಶಾಲೆ ‘ಕನರ್ಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ, 2013’ರ ಕರಡು ರೂಪಿಸಿ ಸಕರ್ಾರಕ್ಕೆ ಸಲ್ಲಿಸಿದೆ. ಇಂತಹ ಕರಡು ರೂಪಿಸುವ ಪ್ರಕ್ರಿಯೆಯಲ್ಲಿ ಕಾನೂನು ಶಾಲೆಯವರು ತಮಗೆ ಸಂಪರ್ಕದಲ್ಲಿರುವ ಹಲವರನ್ನು ಕರೆದು ಚಚರ್ಿಸಿದ್ದಾರೆ. ಇದೇನು ಅಧಿಕೃತ ಸಮಿತಿ ಸಭೆಯಲ್ಲ. ಸಲಹೆ ಪಡೆದುಕೊಳ್ಳಲು ಕರೆದ ಅನೌಪಚಾರಿಕ ಸಭೆಯಷ್ಟೆ ಅದು. ಇಂತಹ ಕೆಲವು ಸಭೆಯಲ್ಲಿ ವಿನಂತಿಸಿದ್ದರಿಂದ ನಾನು ಸಭೆಯ ಅಧ್ಯಕ್ಷತೆ ವಹಿಸಿದ್ದೆ. ನಾನಿಲ್ಲದಾಗ ಬೇರೆಯವರೂ ಅಧ್ಯಕ್ಷತೆ ವಹಿಸಿದ್ದಾರೆ. ಅದು ಸಭೆಯ ಅಧ್ಯಕ್ಷತೆ ಅಷ್ಟೆ. ಕಾನೂನು ಶಾಲೆ ರೂಪಿಸಿ ಕೊಟ್ಟಿರುವುದು ಕರಡು ಮಸೂದೆಯಷ್ಟೆ. ಇದನ್ನೇ ಅಂಗೀಕರಿಸಿಬಿಡಬೇಕು ಅಂತ ಎಲ್ಲೂ ಹೇಳಿಲ್ಲ. ಈ ಕರಡು ಮಸೂದೆಯ ಬಗೆಗೆ ವ್ಯಾಪಕವಾದ ಚಚರ್ೆ ನಡೆಯಬೇಕು. ಸಮಾಜದ ಎಲ್ಲ ವಿಭಾಗಗಳಿಂದ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ಶಾಸಕಾಂಗ ಮಸೂದೆಯ ಕುರಿತು ಚಚರ್ೆಮಾಡಿ ಯಾವುದೇ ಅಂಶವನ್ನು ತಿದ್ದುಪಡಿ ಮಾಡಬಹುದು, ಯಾವುದೇ ಅಂಶವನ್ನು ಸೇರ್ಪಡೆ ಮಾಡಬಹುದು. ತೆಗೆದುಹಾಕಬಹುದು.

ಇದಲ್ಲದೇ ಕಾನೂನು ರೂಪಿಸುವದರಿಂದಷ್ಟೆ ಮೂಢನಂಬಿಕೆಗಳ ನಿವಾರಣೆ ಆಗುವುದಿಲ್ಲ. ವ್ಯಾಪಕವಾದ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬುದನ್ನು ಕರಡು ಕಾಯ್ದೆಯಲ್ಲಿಯೂ ಸಹ ಸೂಚಿಸಲಾಗಿದೆ.
0

ಶಿವಮೊಗ್ಗದ ಕಮ್ಯೂನಿಸ್ಟ್ ಮುಖಂಡರೊಬ್ಬರ ನೆನಪುಗಳು ಜಿ.ಎಸ್. ನಾಗರಾಜ್ ಸಂದರ್ಶನ

ಸಂದರ್ಶಕ: ಆರ್. ರಾಮಕೃಷ್ಣ.

ಶಿವಮೊಗ್ಗ ಜಿಲ್ಲೆಯಲ್ಲಿ ಕಮ್ಯೂನಿಸ್ಟ್ ಚಳುವಳಿಯ ಒಂದು ದೊಡ್ಡ ಇತಿಹಾಸವಿದೆ. ಅದನ್ನು ನೆನಪಿಸಿಕೊಳ್ಳುವ ಅವಶ್ಯಕತೆ ಇದೆ. ಜಿ.ಎಸ್. ನಾಗರಾಜ್ ಅವರು 50ರ ದಶಕದ ಕೊನೆಯಲ್ಲಿ ಕಮ್ಯೂನಿಸ್ಟ್ ಚಳುವಳಿಗೆ ಸೇರಿ ದೀರ್ಘಕಾಲ ದುಡಿದಂತಹ ನಾಯಕರು. 60 ರ ದಶಕದ ಕೊನೆ ಮತ್ತು 70ರ ದಶಕದ ಆರಂಭದಲ್ಲಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದ ತೀಕ್ಷ್ಣ ಭೂ ಹೋರಾಟದಲ್ಲಿ ಪಾಲ್ಗೊಂಡ ಮುಖಂಡರು ಅವರು. ಗೇಣಿದಾರರ ಚಳುವಳಿ, ಭೂಹೋರಾಟ, ಕಮ್ಯೂನಿಸ್ಟ್ ಚಳುವಳಿ, ವಿದ್ಯಾಥರ್ಿ ಚಳುವಳಿ. ಹೀಗೆ ಅವರ ನೆನಪುಗಳ ಪುಟಗಳನ್ನು ತಿರುವಿ ಹಾಕಿದಾಗ ಸಿಕ್ಕ ಮಾಹಿತಿಗಳು ನಿಮಗಾಗಿ.

ಜನಶಕ್ತಿ: ನೀವು ಕಮ್ಯೂನಿಸ್ಟ್ ಚಳುವಳಿ ಪ್ರವೇಶಿದ್ದು ಹೇಗೆ ? ಅಂದಿನ ಸಂದರ್ಭ ಹೇಗಿತ್ತು. ?
ಶಿವಮೊಗ್ಗದಲ್ಲಿ 1941-42 ರಲ್ಲಿಯೇ ಕೆಂಬಾವುಟದ ಸಂಘ ಆರಂಭವಾಗಿತ್ತು. ಮೈಸೂರು ಕಾಗದ ಕಾಖರ್ಾನೆ(ಎಂಪಿಎಂ)ಯಲ್ಲಿ ಎಐಟಿಯುಸಿ ನೇತೃತ್ವದಲ್ಲಿ ಕಾಮರ್ಿಕರನ್ನು ಸಂಘಟಿಸುವ ಮೂಲಕ. ಎನ್.ಡಿ. ಶಂಕರ್ ಆಗಿನ ಮುಖಂಡರಾಗಿದ್ದರು. ಅದು 1958-59. ಎನ್.ಎಲ್. ಉಪಾಧ್ಯಾಯ, ಎನ್.ಕೆ. ಉಪಾಧ್ಯಾಯ, ಬಿ.ವಿ. ಕಕ್ಕಿಲ್ಲಾಯ, ಮೊಟಯ್ಯ, ಹೊಳ್ಳ ಅಂಥವರೆಲ್ಲಾ ಪಕ್ಷದ ರಾಜ್ಯ ಮುಖಂಡರಾಗಿದ್ದರು. ಆವಾಗ ಶಿವಮೊಗ್ಗ ಜಿಲ್ಲೆಯಲ್ಲಿ ಚಂದು ಕುಟ್ಟಿ ನಾಯರ್ ಕಮ್ಯೂನಿಸ್ಟ್ ಪಕ್ಷದ ನಾಯಕರು. ಶಿವಮೊಗ್ಗದಲ್ಲಿ ಆ ಕಾಲದಲ್ಲಿ ಇದ್ದದ್ದು ಆಟೋಮೊಬೈಲ್ ಕಾಮರ್ಿಕರು, ಅದೂ ಸಣ್ಣ ಪ್ರಮಾಣದಲ್ಲಿ. ತೀರ್ಥಹಳ್ಳಿಯವರಾದ ಬಿ. ಎನ್. ಅಪ್ಪಣ್ಣ ಹೆಗಡೆ, ಮತ್ತೊಬ್ಬ ಪ್ರಮುಖರಾದ ಕೆ.ಎಂ. ಶ್ರೀನಿವಾಸ್ ಅವರುಗಳು 57-58ರಲ್ಲಿ ಕಾನೂನು ಶಿಕ್ಷಣ ಮುಗಿಸಿ ವಕೀಲಿ ಪ್ರಾರಂಭಿಸಿದರು. ಮತ್ತು ಅವರು ಕಮ್ಯೂನಿಸ್ಟ್ ಪಕ್ಷದ ಜೊತೆ ಗುರುತಿಸಿಕೊಂಡರು.

1957 ರಲ್ಲಿ ಕೇರಳದಲ್ಲಿ ಇಎಂಎಸ್ ನಂಬೂದರಿಪಾದ್ ಅವರ ನೇತೃತ್ವದಲ್ಲಿ ಕಮ್ಯೂನಿಸ್ಟ್ ಪಕ್ಷದ ಸಕರ್ಾರ ಅಧಿಕಾರಕ್ಕೆ ಬಂದಿತ್ತು. ಅದರ ಪ್ರಭಾವದಿಂದ ಹೊಸಬರು ಪಕ್ಷದ ಕಡೆಗೆ ಆಕಷರ್ಿತರಾಗುತ್ತಿದ್ದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಸೊರಬ, ಮಲೆನಾಡು ಗೇಣಿ ಪದ್ದತಿ ಪ್ರಧಾನವಾದ ಪ್ರದೇಶ. ಗೇಣಿ ಸಮಸ್ಯೆ ತುಂಬಾ ಇತ್ತು. ಸಮಾಜವಾದಿ ಪಕ್ಷ ಗೇಣಿದಾರರನ್ನು ಸಂಘಟಿಸಿ ಸಾಗರ, ತೀರ್ಥಹಳ್ಳಿ, ಸೊರಬ ಮುಂತಾದ ಕಡೆ ಚಳುವಳಿ ನಡೆಸುತ್ತಿತ್ತು. ಶಾಂತವೇರಿ ಗೋಪಾಲಗೌಡರು, ಜೆ.ಎಚ್. ಪಟೇಲರು, ಕಾಗೋಡು ತಿಮ್ಮಪ್ಪ, ಸದಾಶಿವ ರಾಯರು ಇವರೆಲ್ಲ ಅದರ ಮುಖಂಡರಾಗಿದ್ದರು.

ಕೆ.ಜಿ. ವಡೆಯರ್ ಸಾಗರದಲ್ಲಿ ದೊಡ್ಡ ಭೂಮಾಲಕರು. ಎಂ.ಪಿ. ಆಗಿದ್ದರು. 52-53 ರಲ್ಲಿ ಹೋರಾಟ ಪ್ರಬಲವಾಯಿತು. ಸಾಗರದಿಂದ ಪ್ರಾರಂಭವಾಗಿ ತೀರ್ಥಹಳ್ಳಿ, ಸೊರಬ ಎಲ್ಲ ಕಡೆಗೂ ಹರಡಿತು. ಲೋಹಿಯಾ ಸಾಗರಕ್ಕೆ ಬಂದಿದ್ದರು. ಬಂಧನಕ್ಕೂ ಒಳಗಾಗಿದ್ದರು. 1952 ರಲ್ಲಿ ಮೊದಲ ಚುನಾವಣೆ. ಕೊಪ್ಪ-ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಶಾಂತವೇರಿ ಗೋಪಾಲಗೌಡ ಶಾಸಕರೂ ಆದರು.

ದೀವರು-ಅಂದರೆ ಈಡಿಗರು. ಗೇಣಿದಾರರಲ್ಲಿ ಈಡಿಗರು ಮತ್ತು ಒಕ್ಕಲಿಗರು ಹೆಚ್ಚಾಗಿದ್ದರು. ಗೇಣಿದಾರರ ಸಮಸ್ಯೆಗಳು-ಸಂಕಟಗಳು ಹೆಚ್ಚುತ್ತಿದ್ದವು. ಭೂ ಮಾಲೀಕರು ಗೇಣಿ ಬಹಳ ತೆಗೆದುಕೊಳ್ಳುತ್ತಿದ್ದರು. ಬೇಕು ಬೇಕೆಂದಾಗ ಗೇಣಿ ಬಿಡಿಸುವುದು ಮಾಡುತ್ತಿದ್ದರು. ತೀರ್ಥಹಳ್ಳಿಯ ಪ್ರಭಾವಿ ಮನೆತನದ ಅಪ್ಪಣ್ಣ ಹೆಗಡೆ ಚಳುವಳಿ ಆರಂಭಿಸಿದರು.

1950ರ ದಶಕದಲ್ಲಿ `ಟೆನೆಂಟ್ ಆಕ್ಟ್-ಗೇಣಿ ಕಾಯ್ದೆ’ ಮೂಲಕ ಒಕ್ಕಲೆಬ್ಬಿಸುವಿಕೆ ವಿರುದ್ದ ಗೇಣಿದಾರರಿಗೆ ಕೆಲವು ಕಾನೂನು ರಕ್ಷಣೆಯ ಅವಕಾಶ ಸಿಕ್ಕಿತ್ತು. ಈ ಸೌಲಭ್ಯಗಳು ವಾಸ್ತವಿಕವಾಗಿ ಗೇಣಿದಾರರಿಗೆ ದಕ್ಕಿರಲಿಲ್ಲ. ಹೀಗಾಗಿ ಕಾನೂನು ಹೋರಾಟ ಮತ್ತು ಕಾನೂನೇತರ ಹೋರಾಟಗಳು ಆರಂಭವಾಗಿ ತೀರ್ಥಹಳ್ಳಿಯ ಹೋರಾಟ ಮುಂಚೂಣಿಗೆ ಬಂತು.

ನಾನು 57-58 ರಲ್ಲಿ ಪಿ.ಯು.ಸಿ. ಓದುತ್ತಿದ್ದೆ. ನಮ್ಮ ಅಣ್ಣ ಸತ್ಯ ನಾರಾಯಣ ಕಮ್ಯೂನಿಸ್ಟ್ ಸಾಹಿತ್ಯ- ಪುಸ್ತಕಗಳನ್ನು ಓದುತ್ತಿದ್ದರು. ಪಕ್ಷದ ಪೂಣರ್ಾವಧಿ ಕಾರ್ಯಕರ್ತರಾಗಿದ್ದರು. ನಾನು ಬಿಎಸ್ಸಿಗೆಂದು ಸಹ್ಯಾದ್ರಿ ಪದವಿ ಕಾಲೇಜಿಗೆ ಸೇರಿದ ತತ್ಕ್ಷಣ ಎಐಎಸ್ಎಫ್- ವಿದ್ಯಾಥರ್ಿ ಸಂಘಟನೆ ಶುರುಮಾಡಿದೆವು. ಕಕ್ಕಿಲ್ಲಾಯ, ಎನ್.ಎಲ್. ಉಪಾಧ್ಯಾಯ, ನಂತರ ಎಂ.ಎಚ್.ಕೃಷ್ಣಪ್ಪ ಮುಂತಾದವರು ಬರುತ್ತಿದ್ದರು. ಅಮೇರಿಕದ ಸಾಮ್ರಾಜ್ಯಶಾಹಿ ಆಕ್ರಮಣಗಳ ವಿರುದ್ದ ವಿದ್ಯಾಥರ್ಿಗಳ ದೊಡ್ಡ ಚಳುವಳಿ ನಡೆದವು. ಶಿವಮೊಗ್ಗದಲ್ಲಿ ಕೋಟೆ ರಸ್ತೆಯಲ್ಲಿ ಎಐಎಸ್ಎಫ್ನಿಂದ ಒಂದು ಲೈಬ್ರರಿಯನ್ನು ಆರಂಭಿಸಿದ್ದೆವು. ಅದರ ಎದುರು ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದವು. ಯುದ್ದವಿರೋಧಿ ಶಾಂತಿ ಚಳುವಳಿ ನಡೆಯುತ್ತಿತ್ತು. ಮುಖಂಡರಾದ ಮಂಡಲ್ ಅವರು ಶಿವಮೊಗ್ಗಕ್ಕೆ ಬಂದಿದ್ದರು. 1959 ರಲ್ಲಿ ಕೇರಳದ ಇಎಂಎಸ್ ಸಕರ್ಾರವನ್ನು ಕೇಂದ್ರ ಕಾಂಗ್ರೆಸ್ ಸಕರ್ಾರ ವಜಾ ಮಾಡಿದಾಗ ಆದಾಗ ಅದನ್ನು ಖಂಡಿಸಿ ಎಐಎಸ್ಎಫ್ನಿಂದ ಪ್ರತಿಭಟನೆ ನಡೆಸಿದ್ದೆವು.
ಶಿವಮೊಗ್ಗದ ಪುರಭವನದಲ್ಲಿ ಪ್ರತಿಭಟನಾ ಸಭೆ ಸಂಘಟಿಲಾಗಿತ್ತು. ಡಿ.ಪಿ. ಒಡೆಯರ್ ಸೇರಿದಂತೆ ವಕೀಲರು, ಪತ್ರಕರ್ತರು, ಊರಿನ ಗಣ್ಯರು ಸುಮಾರು 300-400 ಜನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ತೀರ್ಥಹಳ್ಳಿಯಲ್ಲಿ 1958ರ ಸುಮಾರಿನಲ್ಲಿ ಅಪ್ಪಣ್ಣ ಹೆಗಡೆ ತಾಲ್ಲೂಕು ಬೋಡರ್್ ಚುನಾವಣೆಗೆ ನಿಂತು ಒಮ್ಮೆ ಕಸಬ ಕ್ಷೇತ್ರದಿಂದ ಮತ್ತೊಮ್ಮೆ ಆಗುಂಬೆ ಕ್ಷೇತ್ರದಿಂದ ಗೆದ್ದರು. ನಾನು ಪದವಿ ಮುಗಿಸಿ ಕಾನೂನು ಕಲಿಯಲು ಬೆಂಗಳೂರಿಗೆ ಬಂದೆ. ನನಗೆ ಕಮ್ಯೂನಿಸ್ಟ್ ಪಕ್ಷದ ನಿರಂತರ, ಸಕ್ರಿಯ ಒಡನಾಟವಿತ್ತು. ಅಲ್ಲಿಯೂ ವಿದ್ಯಾಥರ್ಿ ಚಳುವಳಿಯಲ್ಲಿ ಪಾಲ್ಗೊಂಡೆ. ನಂತರ 66-67 ರಲ್ಲಿ ಪಕ್ಷದ ಪೂಣರ್ಾವಧಿ ಕಾರ್ಯಕರ್ತನಾದೆ. ಪಕ್ಷ ನನಗೆ ರೈತರಂಗದಲ್ಲಿ ಜವಾಬ್ದಾರಿ ಕೊಟ್ಟು ತೀರ್ಥಹಳ್ಳಿಗೆ ಕಳುಹಿಸಿತು. ನಾನು ಪ್ರಾಂತ ರೈತ ಸಂಘದ ತೀರ್ಥಹಳ್ಳಿ ತಾಲ್ಲೂಕು ಕಾರ್ಯದಶರ್ಿಯಾಗಿ ಆಯ್ಕೆಯಾದೆ. ಕನರ್ಾಟಕ ಪ್ರಾಂತ ರೈತಸಂಘಕ್ಕೆ ಎಂ.ಎಚ್.ಕೃಷ್ಣಪ್ಪ ಪ್ರಾಂತ ಪ್ರಧಾನ ಕಾರ್ಯದಶರ್ಿ. ನಾನು, ಎಚ್.ಎಸ್. ರಾಮರಾವ್ ಕಾರ್ಯದಶರ್ಿಗಳು. ಗೇಣಿದಾರರ ಸಮಸ್ಯೆ ತೀವ್ರವಾಗುತ್ತಿದ್ದವು. ಆದ್ದರಿಂದ ತುಂಬಾ ಸಂಘಷರ್ಾತ್ಮಕ ಹೋರಾಟಗಳು ಮೂಡಿಬಂದವು.

ಈ ನಡುವೆ ಶಿವಮೊಗ್ಗದಲ್ಲಿ ಒಮ್ಮೆ ಪಕ್ಷದ ರಾಜ್ಯಮಟ್ಟದ ಶಾಲೆಯನ್ನು ಸಂಘಟಿಸಲಾಗಿತ್ತು. ಒಂದು ವಾರಗಳ ಕಾಲ ಇಎಂಎಸ್ ಅವರು ಶಾಲೆಯಲ್ಲಿದ್ದು ಪಾಠಗಳನ್ನು ನಡೆಸಿಕೊಟ್ಟಿದ್ದರು. ಆಗ ಶಿವಮೊಗ್ಗದ (ಹಳೇ)ಮಾರುಕಟ್ಟೆ ಸಮೀಪದಲ್ಲಿ ನಮ್ಮ ಮನೆ ಇತ್ತು. ಅದಕ್ಕೆ ಹೊಂದಿಕೊಂಡಂತೆ ನಮ್ಮದೇ ಜಾಗದಲ್ಲಿ ಪಕ್ಷದ ಕಚೇರಿ ಇತ್ತು. ಶಾಲೆ ಅಲ್ಲಿಯೇ ನಡೆಯಿತು. ಇಎಂಎಸ್ ಅವರಿಗೆ ಶಿವಮೊಗ್ಗದಲ್ಲಿ ಪೌರ ಸನ್ಮಾನ ಸಹ ಸಂಘಟಿಸಲಾಗಿತ್ತು. ಇಎಂಎಸ್ ಬಾರ್ ಕೌನ್ಸಿಲ್ನಲ್ಲಿ ಸಹ ಮಾತನಾಡಿದ್ದರು.

`ಉಳುಮೆ’ಯ ಚಳುವಳಿ ಹಾಗೂ ಅಡಿಕೆ ಗೊನೆ ಮೆರವಣಿಗೆ

ಆಗುಂಬೆ ಸಮೀಪ ಕೆಂದಾಳಬಯಲು ಹತ್ತಿರ ಕುಂದ ಅಂತ. ರೈತರು-ಅಣ್ಣಪ್ಪ, ಮತ್ತು ಇನ್ನೊಬ್ಬರು. ಭೂಮಾಲಿಕರು ಅವರ ಗೇಣಿ ಬಿಡಿಸಿಬಿಟ್ಟಿದ್ದರು. ರೈತಸಂಘದ ಮುಖಂಡತ್ವದಲ್ಲಿ ಆತನಿಗೆ ರಕ್ಷಣೆಕೊಟ್ಟು ಭೂಮಾಲಕರ ದಬ್ಬಾಳಿಕೆ ವಿರುದ್ದ ಸಭೆ ಮಾಡಿ ಬಲವಂತವಾಗಿ ಉಳುವುದೆಂದು ತೀಮರ್ಾನವಾಯಿತು. ಮೊದಲು ನಾವೇ ಉತ್ತೆವು. ಆಮೇಲೆ ರೈತರಿಗೆ ಧೈರ್ಯ ಬಂತು. ಅವರು ಉಳುಮೆ ಮುಂದುವರಿಸಿದರು.

ಮತ್ತೊಂದು ಪ್ರಕರಣದಲ್ಲಿ ಭೂಮಾಲಿಕರು ಗೇಣಿದಾರರಿಂದ ತೋಟ ಬಿಡಿಸಿ ತೋಟ ಕಾಯಲು ಗೂರ್ಖನನ್ನು ಇಟ್ಟಿದ್ದರು. ಗೇಣಿದಾರರರು ಹೆದರುತ್ತಿದ್ದರು. ರೈತಸಂಘದಿಂದ ಜನರನ್ನು ಸೇರಿಸಿ ಧೈರ್ಯ ತುಂಬಿದೆವು. ಭೂಮಾಲಿಕರ ಪರವಾಗಿ ಅಡ್ಡಬಂದ 3-4 ಜನರನ್ನು ನಾನು ದೂರ ತಳ್ಳಿ ಓಡಿಸಿದೆ. ತೋಟದಿಂದ ಅಡಿಕೆ ಗೊನೆ ಕಿತ್ತುಕೊಂಡು ಬಂದು ಗೇಣಿದಾರರ ಮನೆಗೆ ಹಾಕಿದೆವು. ಭೂಮಾಲೀಕರ ಪರವಾಗಿ ಪೋಲಿಸನನ್ನು ಕಳುಸಹಿಲಾಯಿತು. ಆತ ಬಂದ. ಗೊನೆಯನ್ನು ಎತ್ತಿಕೊಂಡು ಪೊಲೀಸ್ ಸ್ಟೇಷನ್ಗೆ ತಂದ. ಪೋಲಿಸರು ರೈತರ ವಿರುದ್ದ ಕೇಸ್ ಮಾಡಿದರು. ನಾವು ಬಿಡಲಿಲ್ಲ. ಐಜಿಗೆ ದೂರು ಕೊಟ್ಟೆವು.
ಹೋರಾಟಕ್ಕೆ ಯಶಸ್ಸು ಸಿಕ್ಕಿತು. ಆಮೇಲೆ ಆ ಅಡಿಕೆ ಗೊನೆಯನ್ನು ಮೆರವಣಿಗೆಯಲ್ಲಿ ವಾಪಸ್ ಊರಿಗೆ ತೆಗೆದುಕೊಂಡು ಹೋದೆವು. ಊರಿನ ಜನರೆಲ್ಲ ಸೇರಿದ್ದರು. ಗೇಣಿಯ ಹಕ್ಕು ಉಳಿಯಿತು.

ತೀರ್ಥಹಳ್ಳಿ ಪೋಲಿಸ್ ಠಾಣೆಯ ಮೇಲೆ ಕೆಂಪು ಬಾವುಟ
ಅದು ತೀರ್ಥಹಳ್ಳಿ ತಾಲ್ಲೂಕಿನ ಮುತ್ತೂರು ಹೋಬಳಿಯ ರೈತರ ಪ್ರಶ್ನೆ. ಅಪ್ಪಣ್ಣ ಹೆಗಡೆ ಈ ಸಂಬಂಧ ಕೇಸ್ ನಡೆಸಿ ಭೂಮಾಲಿಕರ ವಿರುದ್ದ ತಡೆಯಾಗ್ನೆ ಕೊಡಿಸಿದ್ದರು. ಗೇಣಿದಾರರ ಪರ ತೀರ್ಥಹಳ್ಳಿಯಲ್ಲಿ ಸಭೆ ನಡೆಯಿತು. ಗೇಣಿದಾರ ರೈತರು ಭತ್ತ ಕೊಯ್ಲಿಗೆ ಹೋದರು. ಭೂಮಾಲೀಕರ ಪರ ಮಧ್ಯ ಪ್ರವೇಶಿಸಿದ ಪೋಲಿಸರು ಆ ರೈತರನ್ನು ಬಂಧಿಸಿ ಪೋಲಿಸ್ ಠಾಣೆಗೆ ತಂದರು. ಈ ಬಂಧನ ವಿರೋಧಿಸಿ ಗೇಣಿದಾರರ ಭೂಮಿ ಹಕ್ಕಿಗಾಗಿ ತೀರ್ಥಹಳ್ಳಿ ಪೋಲಿಸ್ ಸ್ಟೇಷನ್ ಮೆಟ್ಟಿಲ ಮೇಲೆ ಸತ್ಯಾಗ್ರಹ ಆರಂಭಿಸಿದೆವು. ತಮ್ಮೊಂದಿಗೆ ವಾಗ್ವಾದ ಮಾಡುತ್ತ ಮೈಮೇಲೆ ಬರುತ್ತಿದ್ದ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ನನ್ನು ರೈತರು ಹಿಂದಕ್ಕೆ ದಬ್ಬಿದರು. ಪ್ರತಿಭಟನಾರ್ಥವಾಗಿ ಪೋಲಿಸ್ ಠಾಣೆಯ ಮೇಲೆ ಕೆಂಪು ಬಾವುಟ ಹಾರಿಸಲಾಯಿತು. ಆಗ ಗರುಡಾಚಾರ್ ಅವರು ಶಿವಮೊಗ್ಗ ಜಿಲ್ಲಾ ಎಸ್.ಪಿ. ಆಗಿದ್ದರು. ಈ ಎಲ್ಲ ಹೋರಾಟಗಳ ಫಲವಾಗಿ ರೈತರಿಗೆ ಗೇಣಿ ಹಕ್ಕು ಉಳಿಯಿತು. ನಂತರ ರೈತಸಂಘದ ಜಿಲ್ಲಾ ಸಮ್ಮೇಳನ ನಡೆಯಿತು. ಎ.ಕೆ.ಗೋಪಾಲನ್ ಬಂದಿದ್ದರು.
ತೀರ್ಥಹಳ್ಳಿ ತಾಲ್ಲೂಕಿನ ಸಾಲೂರು ಗ್ರಾಮದಲ್ಲಿ ಪ್ರಾಂತ ರೈತಸಂಘದ ರಾಜ್ಯಮಟ್ಟದ ತರಬೇತಿ ಶಾಲೆಯನ್ನು ಸಂಘಟಿಸಿದ್ದೆವು. ಎಂಟು ದಿನಗಳ ಈ ಶಾಲೆಯಲ್ಲಿ ನಾನಾ ಜಿಲ್ಲೆಗಳ 60-70 ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಭೂ ಸುಧಾರಣಾ ಕಾಯ್ದೆಗಾಗಿ ರಾಜ್ಯದಾದ್ಯಂತ ಚಳುವಳಿ ಬಲಗೊಂಡಿತು. ರೈತಸಂಘದಿಂದ ರಾಜ್ಯದ ರಾಜಧಾನಿಗೆ ಕಾಲ್ನಡಿಗೆ ಜಾಥಾಗಳನ್ನು ಸಂಘಟಿಸಿಲಾಗಿತ್ತು. ಮಂಗಳೂರಿನಿಂದ ಎಂ.ಎಚ್. ಕೃಷ್ಣಪ್ಪ, ಕೋಲಾರದಿಂದ ಎಚ್.ಎಸ್.ರಾಮರಾವ್, ಚಿತ್ರದುರ್ಗದಿಂದ ಹನುಮಂತರೆಡ್ಡಿಯವರ ನೇತೃತ್ವದಲ್ಲಿ ಜಾಥಾಗಳು ನಡೆದವು. ಈ ಚಳುವಳಿ ಸಂದರ್ಭದಲ್ಲಿ ಬೆಂಗಳೂರಿಗೆ ಪಿ.ರಾಮಮೂತರ್ಿ ಬಂದಿದ್ದರು ಎಂದು ನೆನಪು.

ಈ ಎಲ್ಲ ಒಟ್ಟು ಚಳುವಳಿಗಳ ಪರಿಣಾಮವಾಗಿ ವ್ಯಾಪಕವಾಗಿ ರೈತರ ಗೇಣಿ ಹಕ್ಕು ಉಳಿಯಿತು. ಆ ನಂತರ ಭೂಸುಧಾರಣಾ ಕಾಯ್ದೆ ಬಂತು. ಆ ಸಂದರ್ಭದಲ್ಲಿ ಸಹಸ್ರಾರು ರೈತರು ಅಜರ್ಿ ಹಾಕಿ ಭೂಮಿಯ ಮೇಲಿನ ಹಕ್ಕು ಪಡೆದರು. ಅಪ್ಪಣ್ಣ ಹೆಗಡೆ ವಕೀಲರಾಗಿ ಸಹ ಸಹಸ್ರಾರು ರೈತರ ಅಜರ್ಿ ತುಂಬಿಸಿಕೊಟ್ಟರು. ತಹಸೀಲ್ದಾರ್ ಕೋಟರ್್ ಹಾಗೂ ಟ್ರಿಬ್ಯೂನಲ್ ಕೋಟರ್್ಗಳಲ್ಲಿ ವಾದಿಸಿ ರೈತರಿಗೆ ಭೂಮಿ ಹಕ್ಕು ದೊರೆಯಲು ಶ್ರಮಿಸಿದರು.

ಚುನಾವಣಾ ಹೋರಾಟ
1972 ರ ವಿಧಾನಸಭಾ ಚುನಾವಣೆ. ತೀರ್ಥಹಳ್ಳಿ ಕ್ಷೇತ್ರದಿಂದ ಸಿಪಿಐ(ಎಂ) ಪಕ್ಷದ ಪರವಾಗಿ ಅಪ್ಪಣ್ಣ ಹೆಗಡೆ ಅಭ್ಯಥರ್ಿ. ಕಾಂಗ್ರೆಸ್ನಿಂದ ದಾನಮ್ಮ, ಸಮಾಜವಾದಿ ಪಕ್ಷದಿಂದ ಕೋಣಂದೂರು ಲಿಂಗಪ್ಪ. ಕೋಣಂದೂರಿನಲ್ಲಿ ಚುನಾವಣಾ ಪ್ರಚಾರದ ಉದ್ಘಾಟನೆಗೆ ಎ.ಕೆ. ಗೋಪಾಲನ್, ಸಮಾರೋಪಕ್ಕೆ ಇಎಂಎಸ್ ಬಂದಿದ್ದರು. ತಾಲ್ಲೂಕಿನ ಎಲ್ಲ ಕಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಸಭೆಗೆ ಜನರು ಬಂದಿದ್ದರು. ನೂರಕ್ಕೂ ಹೆಚ್ಚಿನ ಎತ್ತಿನ ಬಂಡಿಗಳಲ್ಲಿ ಆಗುಂಬೆ ಕಡೆಯಿಂದ, ಮಂಡಗದ್ದೆ, ಹಾರಗದ್ದೆ ಮುಂತಾದ ಕಡೆಯಿಂದ ನಡೆದುಕೊಂಡು ಸಹ ಜನರು ಬಂದಿದ್ದರು. ತೀರ್ಥಹಳ್ಳಿಯಲ್ಲಿ ಎಲ್ಲಿ ನೋಡಿದರೂ ಕೆಂಪು ಬಾವುಟಗಳು ಹಾರಾಡುತ್ತಿದ್ದವು. ಸಭೆ ತುಂಬಾ ಉತ್ಸಾಹದಿಂದ ನಡೆಯಿತು. ಚುನಾವಣೆಯಲ್ಲಿ ಬಹುತೇಕ ಸಿಪಿಐ(ಎಂ) ಗೆಲ್ಲುತ್ತದೆ ಅಂತ ಜನ ಮಾತಾಡುತ್ತಿದ್ದರು.

ಇದನ್ನೆಲ್ಲಾ ನೋಡಿ ಪ್ರತಿಗಾಮಿಗಳೆಲ್ಲಾ ಒಂದಾದರು. ರೈತ ಸಂಘದ ಸಾಲೂರು ಶಾಲೆ ಸಂದರ್ಭದಲ್ಲಿ ಪ್ರತಿನಿಧಿಗಳಿಗೆ ಡ್ರಿಲ್ ಮಾಡಿಸಲಾಗುತ್ತಿತ್ತು. ಆಗ `ನಕ್ಸಲ್ಬಾರಿ’ಯಲ್ಲಿ ಎಡ ದುಸ್ಸಾಹ ವಾದಿ ಚಳುವಳಿ ಭುಗಿಲೆದ್ದಿತ್ತು. ನಕ್ಸಲ್ವಾದದ ಕುರಿತು ವ್ಯಾಪಕ ಚಚರ್ೆಗಳು ಮತ್ತು ಅದರ ಆಧಾರದಲ್ಲಿ ಸಿಪಿಐ(ಎಂ) ಬಗ್ಗೆಯೂ ಗುಮಾನಿ ಮೂಡಿಸುವ ಅಪಪ್ರಚಾರ ನಡೆಯುತ್ತಿದ್ದವು. ಶಿವಮೊಗ್ಗದಲ್ಲಿಯೂ ಪತ್ರಿಕೆಗಳಲ್ಲಿ ಇಂತಹ ಪ್ರಚಾರಗಳು ನಡೆದಿದ್ದವು. ಚುನಾವಣೆಯ ಪ್ರಚಾರ, ಬಹಿರಂಗ ಸಭೆಯಲ್ಲಿ ಸೇರಿದ್ದ ಬಾರಿ ಜನ ಇವನ್ನೆಲ್ಲಾ ನೋಡಿ ಹೆದರಿದ ಪ್ರತಿಗಾಮಿಗಳು ಸಿಪಿಐ(ಎಂ) ಬಗ್ಗೆ ಒಳಗಿಂದೊಳಗೆ ಕೆಟ್ಟ ಪ್ರಚಾರಗಳನ್ನು ನಡೆಸಿದರು. ಗೆಲ್ಲುತ್ತದೆ ಎಂದು ನಿರೀಕ್ಷಿಸಲಾದ ನಮ್ಮ ಪಕ್ಷ ಸುಮಾರು ಒಂದು ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿತು. ನಮ್ಮ ಪಕ್ಷ ಮೂರನೇ ಸ್ಥಾನ ಗಳಿಸಿತು.
ಜನಶಕ್ತಿ: ಬೆಂಗಳೂರಿನಲ್ಲಿ ಕಮ್ಯೂನಿಸ್ಟ್ ಪಕ್ಷ ಮತ್ತು ಚಳುವಳಿ ಅನುಭವದ ಕುರಿತು ಹೇಳಿ.

1963-64 ರಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡು ಪಕ್ಷ ವಿಭಜನೆಯಾಯಿತು. ಈ ಅವಧಿಯಲ್ಲಿ ಸುಲ್ತಾನ್ ಪೇಟೆ ಆಫೀಸ್ನಲ್ಲಿ ನಾನು ಮತ್ತು ಕುಟ್ಟಪ್ಪ ಇರುತ್ತಿದ್ದೆವು.

ಎಂ.ಎಚ್. ಕೃಷ್ಣಪ್ಪ, ಸೂರಿ, ಎಚ್.ಎಸ್. ರಾಮರಾವ್ ಅವರು ಪಕ್ಷದೊಳಗಿನ ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ನಡೆದ ತೆನಾಲಿ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು.

1965 ರಲ್ಲಿ ಭಾರತ-ಪಾಕಿಸ್ತಾನ ಯುದ್ದ ನಡೆಯಿತು. ಈ ಅವಧಿಯಲ್ಲಿ ಸಕರ್ಾರ ಕಮ್ಯೂನಿಸ್ಟರನ್ನು ಬಂಧಿಸಲು ಆರಂಭಿಸಿತು. ಕೃಷ್ಣಪ್ಪ ಭೂಗತರಾಗಿದ್ದರು. ಕುಟ್ಟಪ್ಪ ಹೊರಗೆ ಇದ್ದರು. ಪಕ್ಷದ ನಿಲುವು ವಿವರಿಸಲು ಒಂದು ಸಣ್ಣ ಸಮಿತಿ ಮಾಡಿದ್ದರು-ಎಲ್ಲ ಜಿಲ್ಲೆಗಳಿಗೆ ಪಕ್ಷದ ನೀತಿ ನಿಲುವು ವರದಿ ಮಾಡಲು. ಅದರಲ್ಲಿ ನನಗೆ ಸಹ ಜವಾಬ್ದಾರಿ ಕೊಟ್ಟಿದ್ದರು. ಆಗ ಮಾರುಕಟ್ಟೆ ಪ್ರದೇಶದ ಬಾಳೆಕಾಯಿ ಮಂಡಿಯಲ್ಲಿ ಎಐಟಿಯುಸಿ ಆಫೀಸ್ ಇತ್ತು. ಅದನ್ನು `ಸೂರಿ ಆಫೀಸ್ ಅಂತ ಕರೆಯುವುದೇ ರೂಢಿಯಲ್ಲಿತ್ತು. ಸೂರಿ ಮೊದಲೇ ಅರೆಸ್ಟ್ ಆಗಿದ್ದರು. ರಾಮಕೃಷ್ಣ ಅಂತ ವಕೀಲರು, ಎಲ್.ಆರ್. ಭೂತೆ ನಮ್ಮ ಆಗಿನ ಜೊತೆಗಾರರು. ಈ ಇಬ್ಬರ ಅರೆಸ್ಟ್ ಆಗಿತ್ತು. ನನ್ನ ಮೇಲೆ ಸಹ ವಾರೆಂಟ್ ಇತ್ತು. ನನಗೆ ಗೊತ್ತಾಯಿತು. ನಾನು ಪಕ್ಷದ ನಿದರ್ೇಶನದಂತೆ ಭೂಗತನಾದೆ. ಆಮೇಲೆ ಶಿಕ್ಷಣದ ಮುಂದುವರಿಕೆ ದೃಷ್ಟಿಯಿಂದ ಪಕ್ಷದ ನಿದರ್ೇಶನದಂತೆ ನಾನು ಶರಣಾದೆ. ನಾಲ್ಕು ತಿಂಗಳು ಸೆಂಟ್ರಲ್ ಜೈಲಿನಲ್ಲಿ ಇಟ್ಟಿದ್ದರು. ಎನ್. ಎಲ್. ಉಪಾಧ್ಯಾಯ, ಅಪ್ಪಸ್ವಾಮಿ ರೆಡ್ಡಿ, ರಾಮರಾವ್ ಮತ್ತು ಮುಸ್ಲಿಂ ಮುಖಂಡರು ಜೈಲಿನಲ್ಲಿದ್ದರು. ನಾಲ್ಕು ತಿಂಗಳ ನಂತರ ನಮ್ಮನ್ನು ಬೇರೆ ಬೇರೆ ಜೈಲಿಗೆ ಹಾಕಿದರು. ಸೂರಿಯವರನ್ನು ಮೊದಲೇ ಗುಲ್ಬರ್ಗ ಜೈಲಿಗೆ ಕಳುಹಿಸಿದ್ದರು. ಆ ನಂತರ ನನ್ನನ್ನು ಗುಲ್ಬರ್ಗ ಜೈಲಿಗೆ ಕಳಿಸಿದರು. ಅಲ್ಲಿ ಆರು ತಿಂಗಳು. ನನ್ನ ತಾಯಿಗೆ ಹುಷಾರಿಲ್ಲದ್ದರಿಂದ ನಾನು ಪೆರೋಲ್ ಮೇಲೆ ಹೊರಬಂದೆ. ಆಮೇಲೆ ಬಿಡುಗಡೆಯೂ ಆಯ್ತು.

ಇದಕ್ಕೆ ಮೊದಲೇ ಕಾಮರ್ಿಕರ ಸಂಘಟನೆಗಳ ಜಂಟಿ ಸಮಾವೇಶವೊಂದು ಬಾಂಬೆಯಲ್ಲಿ ನಡೆದಿತ್ತು. ಅಲ್ಲಿಗೆ ನಾನು ಹೋಗಿದ್ದೆ. ಪಶ್ಚಿಮ ಬಂಗಾಲದ ಬಾಲಸೂರ್ನಲ್ಲಿ ಕಿಸಾನ್ ಸಮ್ಮೇಳನ ನಡೆಯಿತು. ಅದೇ ರೀತಿ ಪಂಜಾಬ್ಗೆ ಸಹ ಹೋಗಿದ್ದೆ. ಆ ನಂತರ ನನ್ನನ್ನು ಪಕ್ಷವು ರೈತ ರಂಗದಲ್ಲಿ ಕೆಲಸ ಮಾಡಲು ತೀರ್ಥಹಳ್ಳಿಗೆ ಕಳಿಸಿದ್ದು.

ನಾನಾ ಹೊಣೆ ನಿಭಾಯಿಸುತ್ತಿರುವ ನಗುಮುಖದ ಸಂಗಾತಿ

ಜಿಲ್ಲೆಯ ಕಮ್ಯೂನಿಸ್ಟ್ ಚಳುವಳಿಯ ಬಗೆಗೆ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿ ವಿವರಗಳನ್ನು ಕೊಡಿ ಎಂದು ಕೇಳಿದಾಗ ಜಿ.ಎಸ್. ನಾಗರಾಜ್ ತುಂಬಾ ಪ್ರೀತಿ, ಆದರಗಳಿಂದ ಮಾಹಿತಿಗಳನ್ನು ನೀಡಿದ್ದಾರೆ. ಶಿವಮೊಗ್ಗದ ಹಿರಿಯ ವಕೀಲರರಾಗಿರುವ ಈ ಸಂಗಾತಿ ಪ್ರಸ್ತುತ `ಇಂಡೋ-ಚೀನಾ ಫ್ರೆಂಡ್ಶಿಪ್ ಅಸೋಸಿಯೇಷನ್ನ ಹಾಲಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಶಿವಮೊಗ್ಗದ `ನ್ಯಾಷನಲ್ ಎಜುಕೇಷನ್ ಸೊಸೈಟಿ’ಯ ಉಪಾಧ್ಯಕ್ಷರು, ಸಿಐಟಿಯು ಸಂಘಟನೆಯ ಶಿವಮೊಗ್ಗ ಜಿಲ್ಲಾ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಅವರು `ಕನರ್ಾಟಕ ರಾಜ್ಯ ಬಾರ್ ಕೌನ್ಸಿಲ್ಗೆ ಎರಡು ಅವಧಿಗೆ ಚುನಾಯಿತ ಅಧ್ಯಕ್ಷರಾಗಿ ದುಡಿದಿದ್ದಾರೆ. ಒಮ್ಮೆ ಶಿವಮೊಗ್ಗ ನಗರಸಭೆ ಸದಸ್ಯರಾಗಿಯೂ ಅವರು ದುಡಿದಿದ್ದಾರೆ.

ಪೊಲೀಸರ ದಮನ ಎದುರಿಸಿ ವಿಯೆಟ್ನಾಂ ಹೋರಾಟಕ್ಕೆ ಬೆಂಬಲ

ಜನಶಕ್ತಿ: ಬೆಂಗಳೂರಿನಲ್ಲಿದ್ದಾಗಿನ ವಿದ್ಯಾಥರ್ಿ ಚಳುವಳಿಯ ಅನುಭವಗಳನ್ನು ಹೇಳಿ.
ನಾನು ಬೆಂಗಳೂರಿಗೆ ಬಂದಾಗ ಅಲ್ಲೂ ನನಗೆ ಸ್ನೇಹಿತರಿದ್ದರು. ಕೋಲಾರದ ಯುವಕರು. ಅವರ ಮೇಲೆ ಕಮ್ಯೂನಿಸ್ಟ್ ಪಕ್ಷದ ಪ್ರಭಾವವಿತ್ತು. ಡಾ. ಲಕ್ಷಣ ರೆಡ್ಡಿ, ವೆಂಕಟರಾಮರೆಡ್ಡಿ ಸಹೋದರರು, ರಿಸರ್ವ ಬ್ಯಾಂಕ್ ಉದ್ಯೋಗಿ ಗುಣಶೀಲ, ಬಂಗಾಳಿ ಅನಿಲ ಕುಮಾರ್ ದತ್ ಮುಂತಾದವರು ಜೊತೆಗಾರರರಾಗಿದ್ದರು. ಬೆಂಗಳೂರಿನ ಎಂಟಿಆರ್ ಬಳಿ ಮಾವಳ್ಳಿಯಲ್ಲಿ ಒಂದು ಲೈಬ್ರರಿ ಮಾಡಿದ್ದೆವು.

ಆಗ ಕಂಠಿ ವಿದ್ಯಾಮಂತ್ರಿ ಆಗಿದ್ದರು. ನಿಜಲಿಂಗಪ್ಪ ಮುಖ್ಯಮಂತ್ರಿ. ಸಕರ್ಾರ ವಿವಿಧ ಶಿಕ್ಷಣ ಶುಲ್ಕಗಳನ್ನು ಹೆಚ್ಚಳ ಮಾಡಿತು. ಅಖಿಲ ಭಾರತ ವಿದ್ಯಾಥರ್ಿ ಫೆಡರೇಷನ್ (ಎಐಎಸ್ಎಫ್)ನಿಂದ ನಾವು ಕರಪತ್ರ ಹಾಕಿ ತೀವ್ರವಾದ ಚಳುವಳಿ ನಡೆಸಿದೆವು. ಚಳುವಳಿ ರಾಜ್ಯದ ತುಂಬ ಹರಡಿತು. ಕಾಲೇಜ್ ಬಂದ್, ಮೆರವಣಿಗೆ, ಸರದಿ ಉಪವಾಸ ನಡೆಯಿತು. ಈ ಹೋರಾಟ ಸುಮಾರು ಹದಿನೈದು ಇಪ್ಪತ್ತು ದಿನದವರೆಗೆ ನಡೆಯಿತು. ಕೊನೆಗೆ ಸಕರ್ಾರ ಶುಲ್ಕಗಳನ್ನು ಕಡಿಮೆ ಮಾಡಿತು.

ಅಮೆರಿಕದ ಆಕ್ರಮಣದ ವಿರುದ್ದ ವಿಯೆಟ್ನಾಂ ಹೋರಾಟಕ್ಕೆ ಬೆಂಬಲ
ಆಗ ಜಾನ್ಸನ್- ಅಮೆರಿಕದ ಅಧ್ಯಕ್ಷನಾಗಿದ್ದ. ಕಮ್ಯೂನಿಸಂ ಹರಡುವುದನ್ನು ತಡೆಯುವ ಹೆಸರಿನಲ್ಲಿ ವಿಯೆಟ್ನಾಂ ದೇಶದ ಮೇಲೆ ಅಮೆರಿಕ ಕ್ರೂರ ಆಕ್ರಮಣ ಮಾಡುತ್ತಿತ್ತು. ಈ ಕ್ರೂರ ಸಾಮ್ರಾಜ್ಯಶಾಹಿ ದಾಳಿಯನ್ನು ಖಂಡಿಸಿ ವಿಯಟ್ನಾಂ ಸೌಹಾರ್ದ ವಾರಾಚರಣೆ ಮಾಡಬೇಕೆಂದು, ವಿಯೆಟ್ನಾಂ ಹೋರಾಟಕ್ಕೆ ನಿಧಿ ಸಂಗ್ರಹ ಮಾಡಬೇಕೆಂದು ಎಐಎಸ್ಎಫ್ನಿಂದ ಇತ್ತು. ವಾರಾಚರಣೆಯ ಕಡೆ ದಿನ ಮೆರವಣಿಗೆ ಇತ್ತು. ಆಗ ಬೆಂಗಳೂರಿನ ಕಾಪರ್ೊರೇಷನ್ ಕಚೇರಿ ಎದುರು ಅಮೆರಿಕದ ರಾಯಭಾರ ಕಚೇರಿ ಇತ್ತು. ಅಲ್ಲಿ ನಾವು ಅಮೆರಿಕ ಬಾವುಟ ತೆಗೆದು ಕೆಂಪುಬಾವುಟ ಹಾಕಿದೆವು. ಪೋಲಿಸರು ನಾವು ಮಾಡಬೇಕೆಂದಿದ್ದ ಭೂತದಹನಕ್ಕೆ ಅಡ್ಡಿ ಮಾಡಿದರು. ಕೆಂಪೇಗೌಡ ಸರ್ಕಲ್ನಲ್ಲಿ ನಮ್ಮ ಮೇಲೆ ದಾಳಿ ನಡೆಯಿತು. ತುಂಬಾ ಜನಕ್ಕೆ ಏಟು ಬಿತ್ತು. ಡಾ. ಲಕ್ಷಣ ರೆಡ್ಡಿ, ರಾಮರಾವ್, ಗುಣಶೀಲ ಮತೊಬ್ಬ ವಿದ್ಯಾಥರ್ಿಗೆ ತುಂಬಾ ಏಟುಗಳು ಬಿದಿದ್ದವು. ಪೋಲೀಸರು ಮೊಕದ್ದಮೆ ಕೂಡ ಹಾಕಿದರು. ಕೇಸ್ ತುಂಬಾ ದಿನ ನಡೆಯಿತು.

ನಾನು ಎಐಎಸ್ಎಫ್ನ ಬೆಂಗಳೂರು ಜಿಲ್ಲಾ ಕಾರ್ಯದಶರ್ಿಯಾಗಿದ್ದೆ. ಬೆಂಗಳೂರಿನ ಗಾಜಿನ ಮನೆಯಲ್ಲಿ ನಡೆದ ಎಐಸಿಸಿ ಸಭೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜನವಿರೋಧಿತನವನ್ನು ಖಂಡಿಸಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ವಿದ್ಯಾಥರ್ಿಗಳು ಕಪ್ಪುಬಾವುಟ ತೋರಿಸಿದೆವು. 10-12 ಜನ ಆರೆಸ್ಟ್ ಆಗಿದ್ದೆವು. ಸಭೆ ಮುಗಿಯುವವರೆಗೆ ಬಿಟ್ಟಿರಲಿಲ್ಲ. 4-5 ದಿನಗಳ ಕಾಲ ಬಸವನಗುಡಿ ಪೋಲಿಸ್ ಠಾಣೆಯಲ್ಲಿ ಇಟ್ಟಿದ್ದರು.
0

“ಮಡೆಸ್ನಾನ-ಪಂಕ್ತಿಭೇಧ ಇವು ಮಾನವ ಘನತೆಗೆ ಮಾಡುವ ಅಪಚಾರ ”

ಸಂದರ್ಶಕರು : ಬಿ. ರಾಜಶೇಖರಮೂತರ್ಿ

ಸಂಪುಟ – 06, ಸಂಚಿಕೆ 13, ಮಾಚರ್್ 25, 2012

13

ಮನುಷ್ಯತ್ವದ ಘನತೆಗೆ ಮಸಿ ಬಳಿಯುವ ನೀಚ ಆಚರಣೆ, ಜಾತಿ ತಾರತಮ್ಯದ, ಜಾತೀಯತೆಯ ಆಚರಣೆಯ ಕಣ್ಣು ಕುಕ್ಕುವ ಉದಾರಹರಣೆಯಾದ ಮಡೆಸ್ನಾನದ ಆಚರಣೆಯನ್ನು ನಿಷೇದಿಸಬೇಕೆಂದು ಸಕರ್ಾರವನ್ನು ಒತ್ತಾಯಿಸಿ ಶ್ರೀ ನಿಡುಮಾಮಿಡಿ ಮಠವು ಮತ್ತೊಂದು ಸುತ್ತಿನ ಬೃಹತ್ ಹೋರಾಟದ ನಾಯಕತ್ವ ವಹಿಸಿದೆ. ಇದೇ ಮಾಚರ್್ 26 ರಂದು ಬೆಂಗಳೂರಿನಲ್ಲಿ ಬೃಹತ್ ಧರಣಿ ಏರ್ಪಡಿಸಿದೆ. 136 ಮಠಾಧೀಶರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿಡುಮಾಮಿಡಿ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿಯರನ್ನು `ಜನಶಕ್ತಿ’ ಸಂದಶರ್ಿಸಿತು.

ಜನಶಕ್ತಿ: ಮಡೆ ಸ್ನಾನ – ಪಂಕ್ತಿಬೇಧ ಪದ್ಧತಿ ಬಗ್ಗೆ ತಮ್ಮ ವಿಶ್ಲೇಷಣೆ ಏನು?
ಸ್ವಾಮೀಜಿ: ಮಡೆ ಸ್ನಾನ ಎನ್ನುವುದು ಒಂದು ಅಮಾನವೀಯ ಪದ್ಧತಿ. ಇಂಥ ಹೇಯ ಪದ್ಧತಿಯನ್ನು ಕೆಲವರು ಸಂಪ್ರಾದಾಯ ಎಂದು ಧರ್ಮದ ಹೆಸರಿನಲ್ಲಿನ ಸಮರ್ಥನೆ ಮಾಡುವುದು ವಿಷಾದಕರ. ಮೇಲ್ಜಾತಿ ಜನ ಊಟ ಮಾಡಿಬಿಟ್ಟ ಎಂಜಲೆಯ ಮೇಲೆ ಹಿಂದುಳಿದ ಮತ್ತು ಕೆಳವರ್ಗದ ಜನರನ್ನು ಉರುಳಾಡಿಸುವಂತಹ ಕೆಟ್ಟ ಪದ್ಧತಿ ಖಂಡಿತ ನಿಲ್ಲಬೇಕು.

ಕೆಲವರು ಮೇಲ್ಜಾತಿ ಜನರೂ ಮಡೆಸ್ನಾನ ಪದ್ಧತಿಯನ್ನು ಆಚರಿಸುತ್ತಾರೆಂದು ಸರ್ಮಧರ್ಿಸುವ ಕಾರಣ ಹೇಳುತ್ತಾರೆ. ಇದು ಮೇಲ್ಜಾತಿ ಕೆಳಜಾತಿ ಪ್ರಶ್ನೆಯೇ ಅಲ್ಲ. ಇದು ಮಾನವ ಘನತೆಯ ಪ್ರಶ್ನೆ. ಮಾನವ ಘನತೆಯಲ್ಲಿ ನಂಬಿಕೆ ಇಟ್ಟಿರುವರೆಲ್ಲರೂ ಇದನ್ನು ವಿರೋಧಿಸಬೇಕು. ಬಡವರನ್ನು, ದುರ್ಬಲ ಜಾತಿ ಜನರನ್ನು ಅವಮಾನಿಸುವಂತಹ ಕೆಟ್ಟ ಪದ್ಧತಿಗಳು ನಿಲ್ಲಬೇಕು.

ಪಂಕ್ತಿ ಬೇಧ ಬಹಳ ಸ್ವಷ್ಠವಾಗಿ ವರ್ಗ ಮತ್ತು ಜಾತಿ ಪದ್ಧತಿಯ ಆಚರಣೆ. ಮೇಲು ಜಾತಿಯ ಜನರಿಗೆ ಮಾತ್ರ ಒಂದು ಪಂಕ್ತಿ. ಉಳಿದವರಿಗೆಲ್ಲಾ ಒಂದು ಪದ್ಧತಿ ಎಂಬುದೇ ಬ್ರಾಹ್ಮಣೇತರ ಸಮುದಾಯವನ್ನು ಅಪಮಾನಗೊಳಿಸುವ ಸಂಗತಿ. ಸಮಾಜಕ್ಕೆ ಕೇಡು ಬಗೆಯುವ ಇಂತಹ ಆಚರಣೆಗಳು ಖಂಡಿತ ಇರಬಾರದು.ಈ ಪಂಕ್ತಿಬೇಧ ಬ್ರಾಹ್ಮಣ ಮಠಗಳಲ್ಲದೆ ಜೈನ ಮಠಗಳಲ್ಲಿ ಹಾಗೂ ಕೆಲ ವೀರಶೈವ ಮಠಗಳಲ್ಲಿ ಆಚರಣೆಯಲ್ಲಿದೆ.

ಜನಶಕ್ತಿ: ಮೂಢನಂಬಿಕೆಗಳು ಇನ್ನೂ ಇರಲು ಕಾರಣವೇನು?
ಸ್ವಾಮೀಜಿ:- ಮುಖ್ಯವಾದ ಕಾರಣಗಳಿವು. ಮೊದಲನೆಯದು ಅನಕ್ಷರತೆ. ಎರಡನೆಯದು ವಿದ್ಯಾವಂತರ ಅಜ್ಞಾನ. ಮೂರನೇಯದು ಜನರಲ್ಲಿ ಇರುವ ಅಭದ್ರತೆ. ನಾಲ್ಕನೆಯದು ನಂಬಿಕೆಗಳ ವ್ಯಾಪಾರೀಕರಣ. ಐದನೆಯದು ಪುರೋಹಿತ ಶಾಹಿಗಳ ಸ್ವಾರ್ಥ.

ಜನಶಕ್ತಿ: ಇಂಥವುಗಳ ವಿರುದ್ಧ ಹೋರಾಟದ ಅನಿವಾರ್ಯತೆ ಏನು?
ಸ್ವಾಮೀಜಿ: ನಮ್ಮ ಸಮಾಜದಲ್ಲಿ ಪ್ರಜ್ಞಾವಂತರ ಹೋರಾಟಕ್ಕೆ ಬೇಕಾದಷ್ಟು ವಿಷಯಗಳಿವೆ. ಅವುಗಳಲ್ಲಿ ಅಮಾನವೀಯ ಪದ್ಧತಿಗಳು. ಮೂಢನಂಬಿಕೆಗಳು ಇಲ್ಲವಾಗಬೇಕೆಂಬುದು ಒಂದು ಪ್ರಮುಖ ವಿಷಯ. ಅಜ್ಞಾನದ ಕಾಲದಲಿ ್ಲ ಮೂಢನಂಬಿಕೆಗಳನ್ನು ಆಶ್ರಯಿಸುತ್ತಿದ್ದುದು ಆ ಕಾಲದ ಮಿತಿ. ಇಂದಿನ ವೈಜ್ಞಾನಿಕ ಕಾಲದಲ್ಲಿ ಮೂಢನಂಬಿಕೆಗಳನ್ನು ಬೆಳೆಸುತ್ತಿರುವುದು ಪಟ್ಟಭದ್ರ ಹಿತ್ತಾಸಕ್ತಿಗಳ ಸ್ವಾರ್ಥ. ಮಾನವ ಸಮಾಜದ ವಿಕಾಸಕ್ಕೆ ಕಂಟಕವಾಗದಿರುವ ಕೆಲ ನಂಬಿಕೆಗಳಿದ್ದರೆ ತೊಂದರೆ ಏನು ಇಲ್ಲ. ಆದರೆ ಸಮಾಜಕ್ಕೆ ಕೇಡು ಬಗೆಯುವ ನಂಬಿಕೆಗಳು ಅಪಾಯಕಾರಿ. ಇಂತಹ ಕೇಡು ಬಗೆಯುವ ನಂಬಿಕೆಗಳ ವಿರುದ್ಧ ಬಹುದೊಡ್ಡ ಜನಾಂದೋಲನದ ಅಗತ್ಯವಿದೆ. ಈ ಕಾರ್ಯವನ್ನು ಕಳೆದ ಮೂರು ದಶಕಗಳಲ್ಲಿ ಸಂಘಟನೆಗಳ ಮೂಲಕವು ವ್ಯಕ್ತಿಗತವಾಗಿಯೂ ಅನೇಕರು ಹೋರಾಡುತ್ತಾ ಬಂದಿದ್ದಾರೆ. ಅದರೂ ನೀರಿಕ್ಷಿಸಿದಷ್ಟೂ ಪರಿಣಾಮ ಆಗಲಿಲ್ಲ. ಕಾರಣ ನಮ್ಮ ಹೋರಾಟಗಳು ನಿಸ್ತೇಜಗೊಳ್ಳುತ್ತಿರುವುದು. ಅಶಕ್ತಗೊಳ್ಳುತ್ತಿರುವುದು ಕೂಡದು. ಹೋರಾಟಗಳಿಲ್ಲದ ಸಮಾಜ ಬಡವಾಗುತ್ತದೆ. ಹೋರಾಟಗಳು ಒಂದು ಸಮಾಜದ ಜೀವಂತಿಕೆಯ ಸಂಕೇತ.

ಜನಶಕ್ತಿ: ಈ ಪ್ರಶ್ನೆಗಳನ್ನು ಮಠಾದೀಶರು ಎತ್ತಿ ಕೊಳ್ಳುವುದಕ್ಕೆ ಬೇರೆ ಬೇರೆ ಮಠಾದೀಶರ ಬೆಂಬಲ ವಿದೆಯೇ?
ಸ್ವಾಮೀಜಿ: ಯಾವುದೇ ಪ್ರಜ್ಞಾವಂತರು ಮಡೆಸ್ನಾನ ದಂತಹ ಕೊಳಕು ಪದ್ಧತಿ ಯನ್ನು ಸಮಥರ್ಿಸುವುದಿಲ್ಲ. ಮಠಾಧೀಶರಲ್ಲಿಯೂ ಎಲ್ಲರೂ ಕರ್ಮಠರೇ ಇಲ್ಲ. ಅಲ್ಲಿಯೂ ಚಿಂತನಶೀಲ ಮನಸ್ಸುಗಳಿವೆ. ಮಾನವತೆಯ ತುಡಿತಗಳನ್ನು ಹೊಂದಿರುವ ಅನೇಕರು ಈ ಅನಿಷ್ಠ ಪದ್ಧತಿಯ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಅಮಾನವೀಯ ಪದ್ಧತಿಯನ್ನು ನಿಷೇಧ ಮಾಡಬೇಕೆಂದು ಒತ್ತಾಯಿಸಲು 131 ಮಠಾಧೀಶರು ಮತ್ತು ಸಾಧಕರು ಇದೇ 26-03-2012ರಂದು ಸೋಮವಾರ ಬೆಳಿಗ್ಗೆ 10-30ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಿಡುಮಾಮಿಡಿ ಮಹಾ ಸಂಸ್ಥಾನ ಮಠದಿಂದ ಏರ್ಪಡಿಸಿರುವ ಧರಣಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದೇ ಸಾಕ್ಷಿ. ಇದು ಬಹುಜನರ ಆತ್ಮಗೌರವವನ್ನು ಕಾಪಾಡುವಂತಹ ಕಾರ್ಯಕ್ರಮವಾಗಿದೆ.

ಜನಶಕ್ತಿ: ಮುಖ್ಯವಾಗಿ ಕರಾವಳಿ ಪ್ರದೇಶದಲ್ಲಿ ಪ್ರತಿಕ್ರಿಯೆ ಹೇಗಿದೆ?
ಸ್ವಾಮೀಜಿ: ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಫಿಯಾಗಳು ಕೆಲಸ ಮಾಡುತ್ತಿರುವಂತೆ ಕರಾವಳಿ ಪ್ರದೇಶವೂ ಕೂಡ ಧಾಮರ್ಿಕ ಮಾಫಿಯಾಗಳ ಕೈಯಲ್ಲಿದೆ. ಬಹುಪಾಲು ಜನ ಈ ಧಾಮರ್ಿಕ ಮಾಫಿಯಾಗಳ ಕೈಗೆ ಸಿಕ್ಕಿ ನಲುಗುತ್ತಿದ್ದಾರೆ. ಅಲ್ಲಿ ಶೋಷಣೆಗೆ ಒಳಗಾದ ಜನ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹೇಳಿ ಕೊಳ್ಳಲಿಕ್ಕೂ ಸ್ವಾತಂತ್ರ್ಯವಿಲ್ಲ. ಅಷ್ಟೊಂದು ಅಸಹಾಯಕತೆ ಆವರಿಸಿದೆ. ಈ ಧಾಮರ್ಿಕ ಮಾಫಿಯಾದ ಕಪ್ಪು ಹಿಡಿತದಿಂದ ದುರ್ಬಲ ಜನರನ್ನು ವಿಮೋಚನೆಗೊಳಿಸಬೇಕಾಗಿದೆ.

ಜನಶಕ್ತಿ: ತಮ್ಮ ನೇತೃತ್ವದ ಹೋರಾಟಕ್ಕೆ ಸಕರ್ಾರದ ಸ್ವಂದನೆ ಹೇಗಿದೆ? ಮತ್ತು ಈ ಆಂದೊಲನದ ಮುಂದಿನ ಸ್ವರೂಪವೇನು ?
ಉತ್ತರ:- ಮಡೆಸ್ನಾನ ಮತ್ತು ಪಂಕ್ತಿ ಬೇಧವನ್ನು ನಿಷೇಧ ಮಾಡಿ ಎಂದು ಅನೇಕ ರೀತಿಯಲ್ಲಿ ಸಕರ್ಾರದ ಮೇಲೆ ಒತ್ತಡ ತಂದಿದ್ದೇವೆ. ನಾಡಿನ ಬಹುಪಾಲು ಪ್ರಜ್ಞಾವಂತರೆಲ್ಲರೂ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಸಾಮಾನ್ಯ ಜನರೂ ಇದನ್ನು ವಿರೋಧಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ನಾಡಿನ ಜನತೆ ತುಂಬಾ ಗಂಭೀರವಾಗಿ ತೆಗೆದುಕೊಂಡ ವಿಷಯಗಳಲ್ಲಿ ಇದೂ ಒಂದು. ನಾಡಿನಾದ್ಯಂತ ಇಷ್ಟೊಂದು ತೀವ್ರ ವಿರೋಧ ಬಂದರೂ ಸಕರ್ಾರ ಮಡೆಸ್ನಾನವನ್ನು ನಿಷೇಧ ಮಾಡದಿರುವುದು ದುರದೃಷ್ಟಕರ. ಜನರ ಭಾವನೆಗಳಿಗೆ ಗೌರವ ಕೊಡಬೇಕಾದದ್ದು ಯಾವುದೇ ಪ್ರಜಾಸತ್ತಾತ್ಮಕ ಸಕರ್ಾರದ ಕರ್ತವ್ಯ. ಸಕರ್ಾರ ನಮ್ಮ ವೇದಿಕೆಯನ್ನೂ ಲಘುವಾಗಿ ತೆಗೆದುಕೊಂಡಿರುವುದು ನನ್ನಂಥವರ ಮನಸ್ಸಿಗೆ ತುಂಬಾ ನೋವಾಗಿದೆ. ಬಹು ಜನರ ಆತ್ಮಗೌರವದ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ನ್ಯಾಯವನ್ನು ಒದಗಿಸಬೇಕೆಂದೇ ಎರಡನೆಯ ಹಂತದ ಹೋರಾಟವನ್ನು ಪ್ರಾರಂಭಿಸಿದ್ದೇವೆ. ಸಕರ್ಾರ ಚಿಂತಶೀಲ ಮಠಾಧೀಶರ ಹೋರಾಟವನ್ನು ಗೌರವಿಸುತ್ತದೆ ಎಂದು ಭಾವಿಸಿದ್ದೇನೆ. ಒಂದು ವೇಳೆ ಸಕರ್ಾರ ಈ ಹೋರಾಟವನ್ನು ಉಪೇಕ್ಷೆ ಮಾಡಿದರೆ ಜನರ ಅಭಿಪ್ರಾಯದಂತೆ ಮುಂದಿನ ಕಾರ್ಯಕ್ರಮವನ್ನು ರೂಪಿಸಲಾಗುವುದು.

ಸ್ವಾಮೀಜಿಯವರು 26ರ ಕಾರ್ಯಕ್ರಮದ ತಯಾರಿಯಲ್ಲಿ ಪೂರ್ಣಮಗ್ನರಾಗಿದ್ದರು. ಈ ನಡುವೆಯೂ ಸಂದರ್ಶನ ನೀಡಿದ್ದಕ್ಕೆ ಧನ್ಯವಾದ ಹೇಳಿ ಹೊರಟೆ.
0

ಧಾಮರ್ಿಕ ಸ್ವಾತಂತ್ರ್ಯ ಎಂದರೆ ತಾರತಮ್ಯದ ಸಮರ್ಥನೆ ಅಲ್ಲ

ಸಂದರ್ಶನ: ಎಸ್.ವೈ. ಗುರುಶಾಂತ್ ಮತ್ತು ಕೆ. ಮಹಾಂತೇಶ್

ಸಂಪುಟ – 06, ಸಂಚಿಕೆ 05, ಜನವರಿ, 29, 2012

2

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಚರಣೆಯಲ್ಲಿರುವ ಪಂಕ್ತಿಬೇಧ (ವಿಭಿನ್ನ ಜಾತಿಯ ಜನರಿಗೆ ವಿಭಿನ್ನ ಸಾಲಿನಲ್ಲಿ ಕುಳ್ಳಿಸಿ ಊಟ ಬಡಿಸುವ ಪದ್ಧತಿ) ವು ಮಾನವ ಸಮಾಜಕ್ಕೆ ಮಾಡುವ ಅಪಮಾನದ ಸಂಕೇತವಾಗಿದೆ. ಇತ್ತೀಚಿಗೆ ಗೌಡಸಾರಸ್ವತ ಜನಾಂಗಕ್ಕೆ ಸೇರಿದ ಮಹಿಳಾ ಅಧಿಕಾರಿಯೊಬ್ಬರು ತನಗೆ ಗೊತ್ತಿಲ್ಲದೆ ಬ್ರಾಹ್ಮಣರಿಗೆ ಮೀಸಲಾದ ಪಂಕ್ತಿಯಲ್ಲಿ ಊಟಕ್ಕೆ ಕುಳಿತಾಗ ಮಠದ ಹಿತಾಸಕ್ತಿಗಳು ಅವರನ್ನು ಪಂಕ್ತಿಯಿಂದಲೇ ಎಬ್ಬಿಸಿ ಅಪಮಾನ ಮಾಡಿದರು. ಇದು ಅಮಾನವೀಯ ಮತ್ರವಲ್ಲ, ಸಂವಿಧಾನ ವಿರೋಧಿ ಕೂಡ. ಇಂತಹ ಸನ್ನಿವೇಶದಲ್ಲಿ ಉಡುಪಿ ಮಠವೂ ಸೇರಿದಂತೆ ರಾಜ್ಯದ ವಿವಿದೆಡೆ ಆಚರಿಸಲ್ಪಡುವ ಇಂತಹ ಅನಿಷ್ಠ ಪದ್ಧತಿಗಳು ತೊಲಗಬೇಕೆನ್ನುವುದು ಸಿಪಿಐ(ಎಂ) ಮತ್ತು ಜನತೆಯ ಆಗ್ರಹ. ಜನವರಿ-26 ರಂದು ಈ ಬೇಡಿಕೆಯನ್ನಿಟ್ಟುಕೊಂಡು ನಡೆಸುತ್ತಿರುವ ಉಡುಪಿ ಚಲೋ ಕಾರ್ಯಕ್ರಮ ಮುಂದಿನ ಎಲ್ಲಾ ಇಂತಹ ತಾರತಮ್ಯಗಳ ವಿರುದ್ಧದ ಹೋರಾಟಗಳಿಗೆ ಮುನ್ನಡೆಯಾಗಬಹುದು. ಈ ಹೋರಾಟದ ಹಿನ್ನೆಲೆಯಲ್ಲಿ ರಾಜ್ಯದ ಹಿರಿಯ ವಕಿಲರು ಸಂವಿಧಾನ ತಜ್ಞರು ಆದ ಪ್ರೊ| ರವಿವರ್ಮ ಕುಮಾರ್ ಅವರನ್ನು ಜನಶಕ್ತಿ ಸಂದರ್ಶನ ನಡೆಸಿತು. ಅವರ ಸಂಕ್ಷಿಪ್ತ ವಿವರ ಇಲ್ಲಿದೆ.

ಜನಶಕ್ತಿ : ಸಮಾಜದಲ್ಲಿ ಆಚರಣೆಯಲ್ಲಿರುವ ಇಂತಹ ಪಂಕ್ತಿಬೇಧ ಜಾತಿ ತಾರತಮ್ಯಗಳ ಬಗ್ಗೆ ಸಂವಿಧಾನ ವಿಶ್ಲೇಷಣೆ ಏನು ? ಪ್ರೊ| ರವಿವರ್ಮಕುಮಾರ್ : ಭಾರತದ ಸಂವಿಧಾನ ಸಮಾನತೆಯ ವಿಷಯವಾಗಿ ಎರಡು ಹೆಜ್ಜೆಗಳಲ್ಲಿ ತನ್ನ ಸಾಧನೆ ಮಾಡಲಾಗಿದೆ. 1) ಈಗಾಗಲೇ ಇರುವ ಅಪಮಾನಗಳನ್ನು ತಡೆಯುವುದು. 2)ಅಂತಹ ಅಪಮಾನಗಳಿಂದು ಂಟಾಗಿರುವ ಪರಿಣಾಮಗಳನ್ನು ಸರಿಪಡಿಸುವುದು. ಇಂತಹ ಅಪಮಾನಗಳಿಂದ ನೊಂದಿರುವ ಜನತೆಗೆ ಮತ್ತು ಅಸಮಾನತೆಗಳಿಗೆ ಪರಿಹಾರ ಸಿಗಬೇಕು. ಅಂದರೆ ಸಮಾನ ಅವಕಾಶಗಳು, ಸೌಲತ್ತುಗಳನ್ನು ಕಲ್ಪಿಸಿ ಅವರನ್ನು ಸಮಾನರನ್ನಾಗಿ ಕಾಣಬೇಕು.

ಈ ಹಿನ್ನೆಲೆಯಲ್ಲಿ ಸಂವಿಧಾನ ಕತರ್ೃ ಡಾ|| ಬಿ.ಆರ್.ಅಂಬೇಡ್ಕರ್ ಎರಡು ಪ್ರಮುಖ ಘಟ್ಟಗಳನ್ನು ಗುರುತಿಸುತ್ತಾರೆ. 1) ಸಾಮಾಜಿಕ ಒಡನಾಟ(ಛಿಠಟಿಟಿಣಛಣಟ) 2) ಸಮಾನ ಆಹಾರ ಪದ್ಧತಿ(ಛಿಠಟಟಜಟಿಚಿಟಣಥಿ) ಸಾಮಾಜಿಕ ಒಡನಾಟವೆಂದರೆ ಒಂದು ಸಮಾಜ ಎಂದ ಮೇಲೆ ಅಲ್ಲಿ ಕೊಡುವ ಮತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಇರಬೇಕು. ಮದುವೆ ಎನ್ನುವ ಸಾಮಾಜಿಕ ಒಡನಾಟವಿರಬೇಕು. ಆ ಮೂಲಕ ಒಂದು ಭಾಂದವ್ಯ ಏರ್ಪಡುತ್ತದೆ. ಈ ಒಡನಾಟ ಸಾಧ್ಯವಾಗಬೇಕಾದರೆ ನಮ್ಮ ಸಮಾಜದಲ್ಲಿ ಹೆಚೆಚ್ಚು ಅಂತರಜಾತೀಯ ಮದುವೆಗಳು ಆಗಬೇಕು.

ಮತ್ತೊಂದು ನಮ್ಮ ಸಮಾಜದಲ್ಲಿ ನಡೆಯುವ ಪ್ರಮುಖ ಒಡನಾಟವೆಂದರೆ, ಆಹಾರ ಪದ್ಧತಿ ಸಮಾಜದಲ್ಲಿ ಪ್ರತಿನಿತ್ಯ ಜರುಗುವ ಹಬ್ಬ-ಹರಿದಿನಗಳ ಹಬ್ಬದೂಟ. ಇಲ್ಲಿ ಸಮಾಜದ ಎಲ್ಲರೂ ಜಾತಿ-ಬೇಧ ಎಂಬ ತಾರತಮ್ಯವಿಲ್ಲದೆ ಒಂದಾಗಿ ಕುಳಿತು ಊಟ ಮಡುವ ವ್ಯವಸ್ಥೆಯಿರಬೇಕು. ಆಗ ಮಾತ್ರ ಈ ಸಾಮಾಜಿಕ ಸಮಾನತೆಯು ಸಾಕಾರಗೊಳಿಸುತ್ತದೆ.

ಅಂದರೆ ಭಾರತದ ಸಂವಿಧಾನವು ಇಂತಹ ಸಮಾನತೆಯ ನಿಮರ್ಾಣಕ್ಕಾಗಿ ತನ್ನೊಳಗೆ ನಿದರ್ಿಷ್ಠ ನಿಯಮಗಳನ್ನು ಕಲ್ಪಿಸಿದೆ. (ಅಮೇರಿಕಾದಲ್ಲಿ ಇಂತಹ ನಿಯಮಗಳಿಲ್ಲದಿದ್ದರೂ ಅಲ್ಲಿ ಸಮಾನತೆಯನ್ನು ಜಾರಿ ಮಾಡಲಾಯಿತು. ಬ್ಲಾಕ್ಸ ನೋಡಿ)

ಆದ್ದರಿಂದ ಭಾರತದ ಸಂವಿಧಾನವನ್ನು ಒಪ್ಪಿಕೊಂಡಿರುವ ಮತ್ತು ಅದರ ಅಡಿಯಲ್ಲೇ ಬರುವ ಎಲ್ಲಾ ಧಾಮರ್ಿಕ ಸ್ವಾತಂತ್ರ್ಯವು ಅದಕ್ಕೆ ಬದ್ಧವಾಗಿರಬೇಕಾಗುತ್ತದೆ. ಹಾಗಾಗಿಯೇ ಭಾರತದ ಸಂವಿಧಾನದ ಪರಿಚ್ಛೇದಗಳಾದ 14, 15 ಮತ್ತು 17 ಗಳು ಆಚರಣೆಯಲ್ಲಿರುವ ಎಲ್ಲಾ ರೀತಿಯ ಪಂಕ್ತಿಬೇಧಗಳನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಮಾತ್ರವಲ್ಲ ಕಲಂ 17 ರ ಪ್ರಕಾರ ಅಂತಹ ಯಾವುದೇ ತೆರನಾದ ತಾರತಮ್ಯ ಆಚರಣೆಗಳು ಕೂಡ ಅಸ್ಪೃಶ್ಯ ಆಚರಣೆ ಎಂದೇ ಪರಿಗಣಿಸಬೇಕು ಎನ್ನುತ್ತದೆ.

ಜನಶಕ್ತಿ : ಕೆಲವು ಧಾಮರ್ಿಕ ಗುರುಗಳು ಇದನ್ನು ನಂಬಿಕೆ ಮತ್ತು ಶಾಸ್ತ್ರದ ನೆಲೆಗಟ್ಟಿನಲ್ಲಿ ಮತ್ತು ಧಾಮರ್ಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಥರ್ಿಸುತ್ತಿದ್ದಾರೆ ಇದು ಸರಿನಾ ? ಪ್ರೊ| ರವಿವರ್ಮ ಕುಮಾರ್ : ನಮ್ಮ ಸಂವಿಧಾನದ ಕಲಂ 25 ರ ಪ್ರಕಾರ ನಮ್ಮ ದೇಶದಲ್ಲಿ ಧಾಮರ್ಿಕ ಸ್ವಾತಂತ್ರ್ಯ ವನ್ನು ಉತ್ಕೃಷ್ಠವಾಗಿ ನೀಡಲಾಗಿದೆ. ಯಾವುದೇ ಪ್ರಜೆ ತನಗೆ ಸರಿ ಎನಿಸುವ ಧರ್ಮವನ್ನು ಅನುಸರಿಸಬಹುದು, ಸೇರಬಹುದು ಮತ್ತು ಪ್ರಚಾರ ಮಾಡಬಹುದು. ಹೀಗೆ ಮಾಡುವಾಗ ಅದರಲ್ಲಿ ಮತಾಂತರ ಮಾಡುವ ಉದ್ದೇಶವೂ ಇರಬಹುದು, ಅದು ತಪ್ಪಲ್ಲ. ಯಾಕೆಂದರೆ ಪ್ರಚಾರ ಮಾಡುವ ಉದ್ದೇಶವೇ ಅವರವರ ಧರ್ಮಕ್ಕೆ ಹೊರಗಿನ ಜನರನ್ನು ಆಕಷರ್ಿಸಬೇಕು ಎನ್ನುವುದಾಗಿರುತ್ತದೆ.

ಆದರೆ ಹಾಗೆಂದ ಮಾತ್ರಕ್ಕೆ ಮನಸ್ಸಿಗೆ ಬಂದಂತೆ ಯಾವುದೆ ಧಾಮರ್ಿಕ ಪಂಗಡ ಅಥವಾ ಗುಂಪು ತಮ್ಮಲಿಯ ಧಾಮರ್ಿಕ ಆಚರಣೆಗಳನ್ನು ಮೌಢ್ಯತೆಗಳನ್ನು, ಕಂಧಚಾರಗಳನ್ನು ಜನತೆಯ ಮೇಲೆ ಹೇರಲು ನಮ್ಮ ಸಂವಿಧಾನ ಅವಕಾಶ ನೀಡುವುದಿಲ್ಲ. ಅಂದರೆ, ಧಾಮರ್ಿಕಸ್ವಾತಂತ್ರ್ಯ ನೀಡುವುದರೊಂದಿಗೆ ಅದಕ್ಕೆ ಪ್ರಮುಖ ಮೂರು ತರಹದ ಕಡಿವಾಣಗಳನ್ನು ಹಾಕಲಾಗಿದೆ.

ಯಾವುದೆ ಧಾಮರ್ಿಕ ಸ್ವಾತಂತ್ರ್ಯವೂ.. 1) ಮತ್ತೊಬ್ಬರ ಶಾಂತಿಗೆ ಭಂಗ ತರುವಂತಿಲ್ಲ. 2) ನೈತಿಕತೆಗೆ ಬದ್ಧವಾಗಿರಬೇಕು. 3) ಜನರ ಆರೋಗ್ಯಕ್ಕೆ ದಕ್ಕೆ ತರುವಂತದ್ದಾಗಿರಬಾರದು. ಮೇಲಿನ ಆಶಯಗಳಿಗೆ ಅನುಗುಣ ವಾಗಿಯೇ ನಮ್ಮ ದೇಶದಲ್ಲಿ ಸತಿಸಹಗಮನ ಪದ್ಧತಿ, ದೇವದಾಸಿ ಪದ್ಧತಿ, ಹೆಣ್ಣುಭ್ರೂಣಹತ್ಯೆ, ವೇಶ್ಯಾವಾಟಿಕೆಯಂತಹ ಪದ್ದತಿಗಳ ಮೇಲೆ ನಿಷೇಧಗಳು ಜಾರಿಯಲ್ಲಿವೆ. ಅದರ ಭಾಗವಾಗಿಯೇ ನಿಷೇಧವಾಗಬೇಕಿರುವುದು ಮಡೆಸ್ನಾನದಂತಹ ಅನಿಷ್ಠ ಪದ್ಧತಿ.

ಇದರ ಜೊತೆಯಲ್ಲೇ ಸಂವಿಧಾನದ ಪರಿಚ್ಛೇದ 51(ಎ)(ಎಚ್) ಎಲ್ಲಾ ಭಾರತೀಯರಿಗೆ ಕೆಲವು ಪ್ರಮುಖ ಕರ್ತವ್ಯಗಳನ್ನು ನೇರವೇರಿಸಬೇಕೆಂದು ತಾಕೀತು ಮಾಡುತ್ತದೆ.

ಅದರಲ್ಲಿ ಪ್ರಮುಖವಾಗಿ 1) ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಲು ಎಲ್ಲರೂ ಶ್ರಮಿಸಬೇಕು. 2) ಸಮಾಜದಲ್ಲಿರುವ ಮೌಢ್ಯತೆಗಳನ್ನು ಹೋಗಲಾಡಿಸಲು ಮುಂದಾಗಬೇಕು. 3) ಧಾಮರ್ಿಕ ಸುಧಾರಣೆಗಳಿಗಾಗಿ ಕೆಲಸ ಮಾಡಬೇಕು.

ನಾವೇ ಒಪ್ಪಿಕೊಂಡಿರುವ ಸಂವಿಧಾನವು ಹೀಗೆ ನಮ್ಮ ಕರ್ತವ್ಯಗಳನ್ನು ಸ್ಪಷ್ಠಪಡಿಸಿರುವಾಗ ಅದರ ಅಡಿಯಲ್ಲಿಯೇ ಬರುವ ಧಾಮರ್ಿಕ ಸಂಸ್ಥೆಗಳು ಮಡೆಸ್ನಾನ, ಪಂಕ್ತಿಬೇಧದಂತಹ ತಾರತಮ್ಯಗಳನ್ನು ಧಾಮರ್ಿಕಸ್ವಾತಂತ್ರ್ಯದ ಹೆಸರಿನಲ್ಲಿ ಸಮಥರ್ಿಸಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ. ಸಂವಿಧಾನದ ಹೆಸರಲ್ಲಿ ಸಚಿವರಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ|| ವಿ.ಎಸ್. ಆಚಾರ್ಯ ಮಡೆಸ್ನಾನದಿಂದ ಜನರ ರೋಗ-ರುಜಿನಗಳು ವಾಸಿಯಾಗುತ್ತವೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಇಂಡಿಯನ್ ಮೆಡಿಕಲ್ ಕೌನ್ಸಿಲ್(ಟಛಿ) ಕೂಡಲೇ ಅವರ ವೈದ್ಯಕೀಯ ಪದವಿಯನ್ನು ರದ್ದು ಮಡಬೇಕು.

ಜನಶಕ್ತಿ : ನಾವು ಸಕರ್ಾರದ ಯಾವುದೇ ಕೃಪಾಕಟಾಕ್ಷದಲ್ಲಿಲ್ಲ. ಹಾಗಾಗಿ ನಮ್ಮ ಮೇಲೆ ನಿಯಂತ್ರಣ ಹೇರುವ ಹಕ್ಕು ಸಕರ್ಾರಕ್ಕಿಲ್ಲ ಎನ್ನುವ ವಾದದ ಬಗೆಗೆ ನಿಮ್ಮ ಅಭಿಪ್ರಾಯ ? ಪ್ರೊ| ರವಿವರ್ಮ ಕುಮಾರ್ : ಭಾರತದ ಸಂವಿಧಾನವೇ ಎಲ್ಲರಿಗೂ ಶ್ರೇಷ್ಠ. ಅದರ ಅಡಿಯಲ್ಲಿ ಬರುವುದೇ ಧಾಮರ್ಿಕ ಸ್ವಾತಂತ್ರ್ಯ. ಅಲ್ಲದೆ ಸಂವಿಧಾನ ಇರುವುದು ಕೇವಲ ಸಕರ್ಾರಕ್ಕೆ ಮತ್ತು ಧಾಮರ್ಿಕ ಸಂಸ್ಥೆಗಳಿಗಲ್ಲ. ಬದಲಾಗಿ ಎಲ್ಲಾ ಭಾರತೀಯರಿಗೂ ಅದು ಅನ್ವಯವಾಗುತ್ತದೆ. ಹಾಗಾಗಿ ಯಾವುದೇ ಧಾಮರ್ಿಕ ಸಂಸ್ಥೆ ಧಾಮರ್ಿಕ ಆಚರಣೆ ಸಂವಿಧಾನ ವಿರೋಧಿಯಾಗಿದ್ದರೆ, ಅದನ್ನು ನಿಯಂತ್ರಿಸುವ ಎಲ್ಲಾ ಹಕ್ಕು ಸಂವಿಧಾನ ಬದ್ಧವಾಗಿ ರಚನೆಯಾಗುವ ಎಲ್ಲಾ ಸಕರ್ಾರಗಳಿಗೂ ಇದ್ದೇ ಇರುತ್ತದೆ. ಆದ್ದರಿಂದ ಯಾವುದೆ ತೆರನಾದ ಪಂಕ್ತಿಭೇಧಗಳಿರಲಿ, ಮಡೆಸ್ನಾನ ದಂತಹ ಕಂದಾಚಾರದ ಕೃತ್ಯಗಳನ್ನು ನಿಯಂತ್ರಿಸುವ ಹಕ್ಕು ಸಕರ್ಾರಕ್ಕೆ ಇದೆ.

ಜನಶಕ್ತಿ : ನ್ಯಾಯಾಂಗ ಈ ವಿಷಯವಾಗಿ ಹೇಗೆ ಮಧ್ಯ ಪ್ರವೇಶಿಸಬಹುದು ? ಪ್ರೊ| ರವಿವರ್ಮ ಕುಮಾರ್ : ಖಂಡಿತವಾಗಿ ನ್ಯಾಯಾಂಗ ಈ ವಿಷಯವಾಗಿ ಮಧ್ಯ ಪ್ರವೇಶಿಸಲು ಅವಕಾಶವಿದೆ. ಜನಶಕ್ತಿ: ಇಂತಹ ಸನ್ನಿವೇಶದಲ್ಲಿ ಜನತೆಯ ಪಾತ್ರ ಏನು ? ಪ್ರೊ| ರವಿವರ್ಮ ಕುಮಾರ್: ಜನರು ಸ್ವತಃ ಪ್ರಜ್ನಾವಂತರಾಗಬೇಕಾದುದ್ದು ಅವಶ್ಯಕವಿದೆ. ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಮಾಜದಲ್ಲಿರುವ ಪ್ರಜ್ನಾವಂತರೆಲ್ಲರೂ ಮಾಡಬೆಕಿದೆ. ಇಂತಹ ಕೆಲಸವನ್ನು ಕೈಗೆತ್ತಿಕೊಂಡಿರುವ ಸಿಪಿಐ(ಎಂ) ಪಕ್ಷದ ಪ್ರಯತ್ನ ಸಂತೋಷದ ಸಂಗತಿ. ಮುಂದುವೆಯಿರಿ ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ.

0

‘ಮಡೆಸ್ನಾನ, ಪಂಕ್ತಿಬೇಧದ ಪದ್ಧತಿಗಳು ಎಲ್ಲರೂ ವಿರೋಧಿಸಬೇಕಾದ ಆಚರಣೆಗಳು’

ಸಂದರ್ಶನದಲ್ಲಿ ಎಂ.ಎ.ಬೇಬಿ ಸಂದರ್ಶನಕಾರರು: ನಿತ್ಯಾನಂದಸ್ವಾಮಿ, ಗುರುಶಾಂತ್ ಎಸ್.ವೈ,

baby2

ಸಿಪಿಐ(ಎಂ) ಪಕ್ಷದ ಪೊಲಿಟ್ ಬ್ಯೂರೋ ಸದಸ್ಯರೂ, ಕೇರಳದ ಮಾಜಿ ಶಿಕ್ಷಣ ಸಚಿವರಾದ ಕಾಂ. ಎಂ.ಎ.ಬೇಬಿಯವರು ಡಿಸೆಂಬರ್ 27ರಂದು ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಗಳೂರಿಗೆ ಬಂದಿದ್ದರು. ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಅನುಭವವಿರುವ ಅವರೊಂದಿಗೆ ಈ ನಡುವೆ ಜನಶಕ್ತಿ ನಡೆಸಿದ ಸಂದರ್ಶನ

ಜನಶಕ್ತಿ: ಜಾತಿ ತಾರತಮ್ಯ, ಮಡೆಸ್ನಾನ, ಪಂಕ್ತಿಬೇಧದಂತಹ ಪ್ರಶ್ನೆಗಳನ್ನು ಸಿಪಿಐ(ಎಂ) ಪಕ್ಷವು ಕೈಗೆತ್ತಿಕೊಂಡು ಹೋರಾಟ ನಡೆಸುತ್ತಿದೆ.ಪ್ರಸಕ್ತ ವಾಗಿ ಇದರ ಮಹತ್ವವೇನು? ಇದು ವರ್ಗ ಹೋರಾಟದೊಂದಿಗೆ ಹೇಗೆ ಮಿಳಿತವಾಗಿದೆ?

ಕಾಂ.ಎಂ.ಎ.ಬೇಬಿ: ಭಾರತೀಯ ಇತಿಹಾಸವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿರುವ ಖ್ಯಾತ ಇತಿಹಾಸ ಸಂಶೋಧಕರಾದ ಡಿ.ಡಿ.ಕೋಸಾಂಬಿಯವರು `ವರ್ಗ ವೈವಿಧ್ಯತೆಯಿರುವ ಭಾರತದಲ್ಲಿ ಜಾತಿಯು ಸಹ ಬಹಳ ಪ್ರಧಾನವಾದ ಪಾತ್ರವನ್ನು ವಹಿಸುತ್ತದೆ’ ಎಂಬುದನ್ನು ಗುರುತಿಸಿದ್ದಾರೆ. ವರ್ಗ ಹಾಗೂ ಜಾತಿ ಪ್ರಶ್ನೆಗಳನ್ನು ಒಟ್ಟೊಟ್ಟಿಗೇ ಎತ್ತಿಕೊಳ್ಳದೇ ಪ್ರಗತಿಪರ, ಪ್ರಜಾಸತ್ತಾತ್ಮಕ ಚಳುವಳಿಯು ಬಹುತೇಕ ದುಡಿವ ಜನಕೋಟಿಯನ್ನು ಸಂಘಟಿಸಲು ಸಾಧ್ಯವಿಲ್ಲ. ಭಾರತ ದೇಶದ ದುಡಿಯುವ ವರ್ಗದ ಚಳುವಳಿಯ ಇತಿಹಾಸದಲ್ಲಿ ಇದರ ಅನುಭವವಿದೆ. ಜಾತಿ ದಮನ, ಮತ್ತು ಜಾತಿ ತಾರತಮ್ಯಗಳ ವಿರುದ್ಧ ಕಮ್ಯೂನಿಸ್ಟ್ ಚಳುವಳಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಉದಾಹರಣೆಗೆ ಕೇರಳದ ಕಮ್ಯೂನಿಸ್ಟರು ಈ ವಿಷಯದಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಅಂದಿನ ಸಮಾಜ ಸುಧಾರಕರಾದ ಶ್ರೀ ನಾರಾಯಣಗುರು, ಚೆಟ್ಟಯ್ಯಂಗಾಳಿ ಅಂತಹವರು ನಡೆಸಿದ ಪುನರುಜ್ಜೀವನದ ಚಳುವಳಿಯನ್ನು ಮುಂದಕ್ಕೊಯ್ಯಲು ಕಮ್ಯೂನಿಸ್ಟರು ಶ್ರಮಿಸಿದರು. ಇ.ಎಂಎಸ್.ನಂಬೂದ್ರಿಪಾಡ್ ಸ್ವತಃ, ಅಲ್ಲದೇ ವಿ.ಟಿ.ಭಟ್ಟಾದ್ರಿಪಾಡ್, ಎಂ.ಬಿ.ಭಟ್ಟಾದ್ರಿಪಾಡ್ ಮುಂತಾದವರೊಂದಿಗೆ ಹೋರಾಟದ ದೀವಿಗೆ ಇನ್ನಷ್ಟು ಪ್ರಜ್ವಲವಾಗಿ ಉರಿಯುವಂತೆ ಮಾಡಿದರು. ನಂಬೂದರಿ ಸಮುದಾಯ ದವರನ್ನು ಮನುಷ್ಯರನ್ನಾಗಿ ಪರಿವತರ್ಿಸಿದರು. ಕೆಳ ಜಾತಿಗಳಿಗೆ ತಳ್ಳಲ್ಪಟ್ಟ ದಲಿತರೂ ಸಹ ಮಾನವರು ಎಂಬುದನ್ನು ತಿಳಿಸಿದರು. ಪಿ.ಕೃಷ್ಣಪಿಳ್ಳೆ, ಎ.ಕೆ.ಜಿ. ಈ ಹಿನ್ನೆಲೆಯಲ್ಲಿ ಸ್ಮರಣೀಯರಾಗಿದ್ದಾರೆ.

ಜನಶಕ್ತಿ:ಅಲ್ಲಿ ಅಂದು ನಡೆದ ಗಮನಾರ್ಹ ಹೋರಾಟಗಳ್ಯಾವುವು?
ಬೇಬಿ: ಹಲವು ಇವೆ. ಮುಖ್ಯವಾಗಿ ಕಮ್ಯೂನಿಸ್ಟ್ ನಾಯಕ ಎ.ಜಿ.ವೇಲಾಯುಧನ್ ಹುತಾತ್ಮರಾದ ಪಾಳಿಯಂ ಹೋರಾಟ. ಅಂದು ಸಾಮಾನ್ಯ ರಸ್ತೆಗಳಲ್ಲಿ ಕೆಳಜಾತಿಯವರು ನಡೆಯಕೂಡದು, ಮೇಲ್ಜಾತಿಗಳವರು ನಡೆವ ರಸ್ತೆಗಳಲ್ಲಿ ಕೆಳಜಾತಿಯವರು ಓಡಾಡಬಾರದು ಎಂಬ ನಿರ್ಭಂದದ ವಿರುದ್ಧ ಅತ್ಯಂತ ತೀಕ್ಷ್ಣವಾದ ಹೋರಾಟ ನಡೆಯಿತು. ಗುರುವಾಯೂರು ದೇವಸ್ಥಾನದೊಳಗೆ ದಲಿತರ ಪ್ರವೇಶಕ್ಕಾಗಿ ಎ.ಕೆ.ಜಿ.ಯವರ ನೇತೃತ್ವದಲ್ಲಿ ನಡೆದ ಹೋರಾಟ ಚಿರಸ್ಮರಣೀಯ.

ಜನಶಕ್ತಿ:ಪಂಕ್ತಿಭೇದ,ಮಡೆಸ್ನಾನದಂತಹ ಜಾತಿ ತಾರತಮ್ಯದ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಹೇಗೆ ಅಥರ್ೈಸುತ್ತೀರಿ?
ಬೇಬಿ: ಕನರ್ಾಟಕವನ್ನೂ ಒಳಗೊಂಡು ದೇಶದ ಇತರೆಡೆಗಳಲ್ಲಿ ಕಾಲ ಬಾಹೀರವಾದ ,ಅಮಾನವೀಯ ಜಾತಿ ಅಸ್ಪೃಶ್ಯತೆಯ ಆಚರಣೆಗಳನ್ನು ಈಗಲೂ ಅನುಸರಿಸಲಾಗುತ್ತಿದೆ. ವಿಶೇಷವಾಗಿ ಆರಾಧನಾ ಸ್ಥಳಗಳಲ್ಲಿ ಈ ಬೇಧಗಳಿವೆ. ಶತ, ಶತಮಾನಗಳ ಹಿಂದೆಯೇ ಇಂತಹ ಪ್ರವೃತ್ತಿಗಳ ವಿರುದ್ಧ , ‘ಕಾಯಕವೇ ಕೈಲಾಸ’ ವೆಂದು ಸಾರಿ, ಆ ತತ್ವವನ್ನು ಎತ್ತಿ ಹಿಡಿದ ಸುಪ್ರಸಿದ್ಧ ವಚನಕಾರರ ಹೋರಾಟದ ಇತಿಹಾಸವಿರುವ ಕನರ್ಾಟಕದ ಈ ನೆಲದಲ್ಲಿ ಇನ್ನೂ ಅಂಥಹವನ್ನು ಆಚರಿಸಲಾಗುತ್ತಿರುವುದು ಒಂದು ವಿಪಯರ್ಾಸ. ಆರಾಧನಾ ಸ್ಥಳಗಳಲ್ಲಿ ‘ಆಪ್ತವಾಕ್ಯಂ’ನಂತಹ (ಪಂಕ್ತಿಬೇಧ, ಮಡೆಸ್ನಾನ)ಅಸಂಬದ್ಧ ಆಚರಣೆಗಳು ಇನ್ನೂ ಜೀವಂತವಿರುವುದು ದುರದೃಷ್ಟಕರ.

ಜನಶಕ್ತಿ:ಪಂಕ್ತಿಬೇಧ, ಮಡೆಸ್ನಾನ ದಂತಹ ಪದ್ಧತಿಗಳನ್ನು ವಿರೋಧಿಸಿ ನಡೆದಿರುವ ಹೋರಾಟಗಳ ಬಗ್ಗೆ ನಿಮ್ಮ ಅನಿಸಿಕೆ ಏನು?
ಬೇಬಿ: ಇದು ನಿಜಕ್ಕೂ ಐತಿಹಾಸಿಕ ಚಳುವಳಿ. ಪಂಕ್ತಿಬೇಧ, ಮಡೆಸ್ನಾನದಂತಹ ಪದ್ಧತಿಗಳು ಮಾನವನ ಘನತೆ, ಸಮಾನತೆಯ ನಡೆಸಿರುವ ಧಾಳಿಗಳಾಗಿವೆ. ಇವುಗಳ ವಿರುದ್ಧ ಮುಂಚೂಣಿಯ ಪಾತ್ರ ವಹಿಸಿದ ದುಡಿಯುವ ವರ್ಗದ ಈ ಹೋರಾಟಕ್ಕೆ ಐತಿಹಾಸಿಕ ಮಹತ್ವವಿದೆ. ಈ ಪದ್ಧತಿಗಳನ್ನು ಯಾವುದೇ ಜಾತಿ, ಧರ್ಮಕ್ಕೆ ಸೇರಿದ ಯಾರೂ ಒಪ್ಪಬಾರದು, ಸಹಿಸಬಾರದು. ಮಾನವ ಘನತೆಯನ್ನು ಎತ್ತಿಹಿಡಿಯಲು ಅವರೆಲ್ಲರೂ ಈ ಆಂದೋಲನದಲ್ಲಿ ಭಾಗಿಯಾಗಬೇಕು. ಜಾಗೃತ ಜನತೆಯನ್ನು ಅಣಿ ನೆರೆಸಬೇಕು.

ಜನಶಕ್ತಿ:ಜಾಗೃತಿಯೆಂದರೆ?
ಬೇಬಿ: ಈ ಅನಿಷ್ಟ ಪದ್ಧತಿಗಳ ವಿರುದ್ದ ಜನತೆಗೆ ತಿಳುವಳಿಕೆ ನೀಡಿ ಜಾಗೃತಿ ಉಂಟು ಮಾಡುವುದೂ ಅಗತ್ಯವಿದೆ. ಈ ದೆಶೆಯಲ್ಲಿ ಮೊದಲ ಹಂತದ ಹೋರಾಟದ ಭಾಗವಾಗಿ ಸಿಪಿಐ(ಎಂ) ಪಕ್ಷವು ಇದೇ 2012ರ ಡಿಸೆಂಬರ್ 21 ರಿಂದ 27 ರ ವರೆಗೆ ಕುಕ್ಕೆ ಸುಬ್ರಹ್ಮಣ್ಯದಿಂದ ಉಡುಪಿಯವರೆಗೆ ಜನಜಾಗೃತಿ ಮೂಡಿಸಲು ವಾಹನ ಜಾಥಾ, ಪಾದಯಾತ್ರೆ ನಡೆಸಿದೆ. ನಿಡುಮಾಮಿಡಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಮಂಗಳೂರಿನಿಂದ ಉಡುಪಿಯವರೆಗೆ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದ್ದಾರೆ.ಜನತೆಯ ಸ್ಪಂದನ ಉತ್ತಮವಾಗಿ ದೊರೆತಿದೆ. ಇದು ಇನ್ನಷ್ಟು ಮುಂದುವರಿಯಲಿದೆ.
ಜನಶಕ್ತಿ:ಗದುಗಿನ ತೋಂಟದಾರ್ಯ ಶ್ರೀಗಳು ಸಹ ತಮ್ಮ ಶುಭ ಹಾರೈಕೆಗಳನ್ನು ಕೋರಿದ್ದಾರೆ. ಧಾಮರ್ಿಕ ಕ್ಷೇತ್ರವನ್ನೂ ಒಳಗೊಂಡು ಇತರೆ ಕ್ಷೇತ್ರಗಳ ಗಣ್ಯರೂ ಇದಕ್ಕೆ ಬೆಂಬಲಿಸಿದ್ದಾರೆ. ಆದರೆ ಈ ಅನಿಷ್ಟ ಪದ್ಧತಿಯನ್ನು ಸಮಥರ್ಿಸುವ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅಲ್ಲಿಯ ಜನತೆಗೇ ಇವು ಬೇಕಾಗಿವೆಯೆಂದೂ, ಅದರಲ್ಲೂ ಆದಿವಾಸಿ ಸಮುದಾಯವಾದ ಮಲೆಕುಡಿಯ ಜನಾಂಗವನ್ನು ತಮ್ಮ ಕುತಂತ್ರಗಳಿಗೆ ಬಳಸುತ್ತಿದ್ದಾರಲ್ಲ?
ಬೇಬಿ: ಈ ಹಿನ್ನಲೆಯಲ್ಲಿ ನಾವು ಎರಡು ಪ್ರಶ್ನೆಗಳನ್ನು ಚಚರ್ಿಸಬೇಕು. ಮೊದಲನೆಯದಾಗಿ ಕೆಳ ಜಾತಿ, ಸಮುದಾಯದವರನ್ನೇ ಬಳಸಿ ಕೋಟರ್್ನಲ್ಲಿ ಈ ಪದ್ಧತಿ ಮುಂದುವರಿಯಬೇಕು ಎಂದು ಕೇಳಿರುವ ವಿಷಯ. ಇದು ಹೊಸತೇನಲ್ಲ. ಹಿಂದೆ ಟ್ರಾವಂಕೂರು ಪ್ರಜಾಸಭಾದಲ್ಲಿ ಹಿಂದುಳಿದ ಜಾತಿಗೆ ಸೇರಿದ ನಾಮನಿದರ್ೇಶಿತ ಪ್ರತಿನಿಧಿಯೊಬ್ಬ ಹಿಂದುಳಿದ ಜಾತಿಗಳಿಗೆ ಸಾಮಾನ್ಯ ರಸ್ತೆಯಲ್ಲಿ ನಡೆವ ಅವಕಾಶ ನೀಡುವುದರ ವಿರುದ್ಧ ಮತ ಹಾಕಿದ! ಇತಿಹಾಸದಲ್ಲಿ ಇಂತಹ ಅಸಂಖ್ಯಾತ ಉದಾಹರಣೆಗಳಿವೆ. ದಮನಿತರ ಬೆಂಬಲ ಪಡೆದಿದ್ದೇವೆಂದು ತೋರಿಸಲು ದಮನಕಾರರು ಹೀಗೆ ಮಾಡುತ್ತಾರೆ.

ಎರಡನೆಯದಾಗಿ, ಇದಕ್ಕೆ ಕೆಲವು ರಾಜೀ ಸೂತ್ರಗಳನ್ನು ರೂಪಿಸಲಾಗುತ್ತದೆ. ಮಡೆಸ್ನಾನದ ಬದಲು ಎಡೆಸ್ನಾನ ಎನ್ನುತ್ತಾರೆ. ಪ್ರಶ್ನೆಯೆಂದರೆ ಉರುಳಲು ಎಂಜಲೆಲೆಯೋ ಅಥವಾ ಅನ್ನಪ್ರಸಾದವೋ, ಉರುಳುವವರಲ್ಲಿ ಬ್ರಾಹ್ಮಣ ಅಥವಾ ಮೇಲ್ ಜಾತಿಯವರೂ ಉರುಳುತ್ತಾರೆಂಬುದೋ ಅಲ್ಲವೇ ಅಲ್ಲ. ಇದೊಂದು ಮೂಢ ನಂಬಿಕೆ ಮಾತ್ರವಲ್ಲ ಅದು ಜಾತಿ ತಾರತಮ್ಯವನ್ನು ಪ್ರತಿಪಾದಿಸುತ್ತದೆ.
ಇಲ್ಲಿ ಸಮಾಜದ ಆತ್ಮಾವಲೋಕನ ಅಗತ್ಯವಿದೆ. ಪರಂಪರಾಗತವಾಗಿ ಬಂದಿವೆ ಎನ್ನಲಾದ ಯಾವ ಆಚರಣೆ, ಸಂಪ್ರದಾಯಗಳನ್ನು ಎತ್ತಿ ಹಿಡಿಯಬೇಕು, ಯಾವುವನ್ನು ಕೈ ಬಿಡಬೇಕು ಎಂಬುದನ್ನು ನಿರ್ಧರಿಸಬೇಕು. ಕೆಲವನ್ನು ತಿದ್ದುಪಡಿ ಮಾಡಿ ಪುನರ್ ರೂಪಿಸಬೇಕಾಗಬಹುದು. ಇದರತ್ತ ಸಂವಾದ-ಚಿಂತನ-ಮಂಥನ ಸಾಧ್ಯವಾಗಬೇಕು. ಆದರೆ ಜಾತಿ ತಾರತಮ್ಯ, ಅಂಧಶೃದ್ಧೆಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಇವು ಕಾಲಬಾಹೀರ, ಸಮಾಜವಿರೋಧಿ. ಸಮಾನತೆ, ಮಾನವನ ಘನತೆಗೆ ವಿರುದ್ಧವಾಗಿವೆ. ಇವುಗಳಿಗೆ ಅವಕಾಶ ನೀಡುವುದೂ ಭಾರತದ ಸಂವಿಧಾನದ ವಿರೋಧಿಯಾಗಿವೆ. ಇಂತಹ ಗಂಭೀರ ಪ್ರಶ್ನೆಯನ್ನು ಕನರ್ಾಟಕದ ಶ್ರಮಿಕ ವರ್ಗದ ಚಳುವಳಿ ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹವಾಗಿದೆ.

ಜನಶಕ್ತಿ: ಈ ಆಂದೋಲನವನ್ನು ಹೇಗೆ ಕೊಂಡೊಯ್ಯಬೇಕೆಂದು ಬಯಸುತ್ತೀರಿ?
ಬೇಬಿ: ಇದನ್ನು ವಿಶಾಲವಾದ ವೇದಿಕೆಯಡಿ ಮುನ್ನಡೆಸಬೇಕಾಗಿದೆ. ಇಲ್ಲಿ ವಿವಿಧ ಸಂಘಟನೆಗಳು, ಬರಹಗಾರರು, ಕಲಾವಿದರು, ಚಿಂತಕರು, ವಿವಿಧ ರಂಗಗಳ ಪರಿಣಿತರು, ಸಾಮಾಜಿಕ ಗುಂಪುಗಳು ಹೀಗೆ ವಿವಿಧ ವಿಭಾಗಗಳನ್ನು ಒಂದಾಗಿಸಬೇಕು. ಸಮಾಜ ಸುಧಾರಣೆಯ, ಪುನರುಜ್ಜೀವನದ, ಸ್ವಾತಂತ್ರ್ಯ ಚಳುವಳಿಯ ಉನ್ನತ ಮೌಲ್ಯಗಳನ್ನು ಎತ್ತಿ ಹಿಡಿದು ಹೋರಾಟಕ್ಕೆ ಅಣಿ ನೆರೆಸಬೇಕಿದೆ. ಹಾಗೆಯೇ ವಿವಿಧ ಪ್ರದೇಶಗಳಲ್ಲಿರುವ ಇಂತಹ ಜ್ವಲಂತ ಸಾಮಾಜಿಕ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಬೇಕು.

ಜನಶಕ್ತಿ: ಈ ಹೋರಾಟ ಬೆಳೆಯತೊಡಗಿರುವಂತೆ ಕೆಲವರು ಇದು ಹಿಂದೂ ಧರ್ಮದ ಪ್ರಶ್ನೆ, ಬೇರೆ ಧಮರ್ೀಯರು ಇದರಲ್ಲಿ ಪ್ರವೇಶಿಸಬಾರದು ಎನ್ನುತ್ತಾರಲ್ಲ?
ಬೇಬಿ: ಅದು ಸರಿಯಲ್ಲ. ಇಂತಹ ಯಾವುದೇ ಪ್ರತಿರೋಧ ಆಯಾ ಧರ್ಮದ ಒಳಗಿನಿಂದಲೇ ಬರಬೇಕು. ಮಹಾತ್ಮಗಾಂಧೀಜಿ ಅದನ್ನೇ ಮಾಡಿದರು. ನಿಜ, ಅದರರ್ಥ ಬೇರೆ ಧಮರ್ೀಯರು ಭಾಗವಹಿಸಬಾರದು ಎಂಬುದಲ್ಲ. ಹಿಂದಿನ ಹಲವಾರು ಸಾಮಾಜಿಕ ಸುಧಾರಣೆಯ ಹೋರಾಟಗಳಲ್ಲಿ ಜಾತಿ, ಮತಬೇಧಗಳಿಲ್ಲದೇ ದೇಶದ ನಾಗರೀಕರಾಗಿ ಎಲ್ಲರೂ ಭಾಗವಹಿಸಿದ್ದಾರೆ, ಬದಲಾವಣೆಗಳಾಗಿವೆ.

ಜನಶಕ್ತಿ: ಹೌದು ಇದೇ ಹೊತ್ತಿನಲ್ಲಿ ನೀವ್ಯಾಕೆ ಮುಸ್ಲಿಂ, ಕ್ರಿಶ್ಚಿಯನ್ ಧಮರ್ೀಯರಲ್ಲಿರುವ ಕಂದಾಚಾರಗಳ ಬಗ್ಗೆ ದನಿ ಎತ್ತುವುದಿಲ್ಲ, ವಿಶೇಷವಾಗಿ ಮಹಿಳೆಯರ ಸಮಾನತೆ ಕೇಳುವ ನೀವು ಮಸೀದಿಗಳಲ್ಲಿ ಮಹಿಳೆಯರ ಬಗೆಗಿನ ತಾರತಮ್ಯಗಳ ಬಗ್ಗೆ ಏನು ಹೇಳುತ್ತೀರಿ ಎಂದು ಜಾಥಾ ಸಂದರ್ಭಗಳಲ್ಲಿ ಕೆಲವರು ಕೇಳಿದ್ದಾರೆ?
ಬೇಬಿ: ಈ ಮೊದಲು ಹೇಳಿದಂತೆ ಒಂದು ಧಾಮರ್ಿಕ ಸಮುದಾಯದಲ್ಲಿರುವ ಕಂದಾಚಾರಗಳ ವಿರುದ್ಧ ಆಯಾ ಧಮರ್ೀಯರೇ ದನಿ ಎತ್ತಬೇಕು. ಆಗ ಅವರಿಗೆ ಎಲ್ಲಾ ಪ್ರಗತಿಪರರ ಬೆಂಬಲ ದೊರೆಯುತ್ತದೆ. ಮಸೀದಿಯಲ್ಲಿ ಪ್ರಾರ್ಥನೆ ಮಾತ್ರವಲ್ಲ, ಕೆಲವೆಡೆ ಮಹಿಳೆಯು ಶಿಕ್ಷಣ ಪಡೆಯುವ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಇತ್ತೀಚೆಗಿನ ಮಲಾಲಳ ಪ್ರಕರಣವು ಸಮಾಜದ ಎಲ್ಲಾ ವಿಭಾಗಗಳ ಗಮನ ಸೆಳೆಯುತ್ತಿದೆ. ತಾಲಿಬಾನ್ ಶಕ್ತಿಗಳು ಮುಸ್ಲಿಂ ಯುವತಿಯರು ಶಿಕ್ಷಣ ಪಡೆಯುವುದನ್ನೇ ವಿರೋಧಿಸುತ್ತಾರೆ. ಇದಕ್ಕೆ ಎಲ್ಲೆಡೆ ವಿರೋಧವೂ ವ್ಯಕ್ತವಾಗಿದೆ. ಆ ಸಂದರ್ಭದಲ್ಲಿ ಇಸ್ಲಾಮಿಕ್ ರಾಷ್ಟ್ರಗಳು ಸಹ ಯುವತಿಯರ ಶಿಕ್ಷಣವನ್ನು ಬೆಂಬಲಿಸಿದವು. ಅಲ್ಲದೇ ಪ್ರಜಾಸತ್ತಾತ್ಮಕ ಸಾರ್ವಜನಿಕ ಅಭಿಪ್ರಾಯ ಮುಸ್ಲಿಂ ಬಾಲಕಿಯರ ಶಿಕ್ಷಣದ ಪರವಾಗಿದೆ. ನನಗೆ ಖಾತ್ರಿಯಿದೆ ಮುಸ್ಲಿಂ ಮಹಿಳೆಯರು ಹೆಚ್ಚೆಚ್ಚು ಶಿಕ್ಷಣ ಪಡೆದಂತೆ ಅವರೇ ಮಸೀದಿಗಳಿಗೆ ಪ್ರವೇಶ, ಶಿಕ್ಷಣದ ಹಕ್ಕಿಗಾಗಿ ಆಗ್ರಹ ಪಡಿಸಬಲ್ಲರು.

ಇದೇ ಹೊತ್ತಿನಲ್ಲಿ ಒಂದು ಸಂಗತಿ ಮರೆಯಬಾರದು. ಹಿಂದೂ ಸಮಾಜದೊಳಗೇ ಪ್ರಶ್ನಾತೀತ ಕಾನೂನು ಎಂದೇ ಒಂದು ಹಂತದಲ್ಲಿ ಪರಿಗಣಿತವಾದ ಮನುಸ್ಮೃತಿಯು ‘ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ’ ಎಂದೇ ಪ್ರತಿಪಾದಿಸುತ್ತದೆ. ಪ್ರಾಚೀನ ಕಾಲದಲ್ಲಿ ವಿದ್ವಾಂಸಳಾದ ಗಾಗರ್ಿ ಇಂತಹದ್ದನ್ನು ಪ್ರಶ್ನಿಸಿದ್ದಾಳೆ. ಮಹಿಳೆಯನ್ನು ದಮನಿಸುವ ಪ್ರವೃತ್ತಿ ಬಹಳಷ್ಟು ಸಂಘಟಿತ ಧರ್ಮಗಳಲ್ಲಿದೆ. ಅಂದಹಾಗೆ ಬೌದ್ಧ, ಜೈನ ಧರ್ಮಗಳಂತಹವನ್ನು ಹೊರತು ಪಡಿಸಿ.

ಜನಶಕ್ತಿ: ಹಾಗೇ ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ನಿರ್ಬಂಧವಿರುವ ಬಗ್ಗೆ ಎಡ ಶಕ್ತಿಗಳ ನಿಲುವೇನು?
ಬೇಬಿ: ಅಲ್ಲಿ ನಿದರ್ಿಷ್ಟ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಮಾತ್ರ ನಿರ್ಭಂಧವಿದೆ. ಮುಟ್ಟಾಗುವವರು ದೇವಾಲಯದ ಕೆಲವು ಆಚರಣೆಗಳನ್ನು ಮಾಡುವಂತಿಲ್ಲ ಎಂದು ದೇವಸ್ಥಾನ ಮಂಡಳಿಯವರು ಹೇಳುತ್ತಾರೆ. ಅದು ಅಲ್ಲಿಯ ಸಂಪ್ರದಾಯ. ಉಳಿದಂತೆ ಮಹಿಳೆಯರು ಪ್ರವೇಶಿಸಬಹುದು. ಇಲ್ಲಿ ಜಾತಿ ತಾರತಮ್ಯದ ಪ್ರಶ್ನೆಯಿಲ್ಲ, ಲಿಂಗ ಸಂಬಂಧಿ ಅಂಶವಿದೆ. ಮಹಿಳೆಯರು ಇದನ್ನು ವಿರೋಧಿಸಲು ಮುಂದಾದರೆ ನಾವೂ ಬೆಂಬಲಿಸುತ್ತೇವೆ.
ಜನಶಕ್ತಿ: ಮಡೆಸ್ನಾನ, ಪಂಕ್ತಿಬೇಧವನ್ನು ವಿರೋಧಿಸಿ ಪ್ರಜಾಸತ್ತಾತ್ಮಕವಾಗಿ ಚಳುವಳಿ ನಡೆದಿರುವಾಗ ಸರಕಾರದ ಪ್ರತಿಕ್ರಿಯೆಯ ಬಗ್ಗೆ ನೀವೇನು ಹೇಳ ಬಯಸುತ್ತೀರಿ?
ಬೇಬಿ: ಸರಕಾರದ ಪ್ರತಿಕ್ರಿಯೆ ಸಮರ್ಥನೀಯವಲ್ಲ. ಮಾತ್ರವಲ್ಲ ಖಂಡನೀಯ. ಜಾತಿ ತಾರತಮ್ಯದ ವಿರುದ್ಧದ ಹೋರಾಟ ನಡೆಸುತ್ತಿರುವವರ ಮೇಲೆ ಪೋಲೀಸರನ್ನು ಬಿಟ್ಟು ಆಕ್ರಮಣ ನಡೆಸಿ ದಮನ ಮಾಡುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ದಮನಕಾರಿ ಪ್ರಯತ್ನಗಳಿಂದ ನಾವು ವಿಚಲಿತರಾಗುವುದಿಲ್ಲ ವೆಂಬುದನ್ನು ಹೇಳಬಯಸುತ್ತೇವೆ. ಸರಕಾರ ಈಗ ಹೂಡಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂಪಡೆಯಬೇಕು. ಲಾಠಿ ಚಾಜರ್ಿಗೆ ಕಾರಣರಾದವರ ಮೇಲೆ ಕ್ರಮವಹಿಸಬೇಕು ಎಂದೂ ಆಗ್ರಹಿಸುತ್ತೇವೆ. ಈ ಹೋರಾಟ ಇನ್ನಷ್ಟೂ ವ್ಯಾಪಕತೆ ಪಡೆದು ಮುಂದೆ ಸಾಗಲಿದೆ. ನಮಗೆ ಖಂಡಿತ ಯಶ ಕಾಣುವ ವಿಶ್ವಾಸವಿದೆ.
0

“ನಾವು ಜನರನ್ನು ಎಚ್ಚರ ಮಾಡಬೇಕು. ಹೊಟ್ಟೆ ತುಂಬ ಉಂಡಿದ್ದೀರಾ ಎಂದು ಕೇಳಬೇಕು”

ಸಂದರ್ಶನದಲ್ಲಿ ಖ್ಯಾತ ಚುಟುಕು ಕವಿ `ವಿಡಂಬಾರಿ’
ಸಂದರ್ಶಕರು: ಎಸ್.ವೈ. ಗುರುಶಾಂತ್, ಆರ್. ರಾಮಕೃಷ್ಣ.

vidam

`ವಿಡಂಬಾರಿ’ ಎಂದ ತಕ್ಷಣ ನೆನಪಾಗುವುದು ನಾಲ್ಕು ಸಾಲಿನ ಹರಿತ ಪದಗಳ ಚುಟುಕು. ಖ್ಯಾತನಾಮರಾದ ಎಷ್ಟೋ ಚುಟುಕು ಕವಿಗಳು ಕೂಡ ಪ್ರಾಸದ ಚಪಲಕ್ಕಾಗಿ, ಪತ್ರಿಕೆಯ ದೈನಂದಿನ ಕೋಟಾ ಪೂರೈಸುವ ಸಲುವಾಗಿ, ಏನಾದರೂ ಚುಟುಕು ಬರೆಯಲೇ ಬೇಕು ಬರೆಯುವುದು, ಹಾಸ್ಯ, ಪಂಚಿಂಗ್ಗಳ ಖಯಾಲಿಯಲ್ಲಿ ಮಹಿಳಾ ವಿರೋಧಿ, ನಿರಾಶಾವಾದಿ ಸಿನಿಕತನ ಬೆಳೆಸುವ, ಪ್ರಗತಿ ವಿರೋಧಿ ನಿಲುವುಗಳನ್ನು ಲೇಖನಿಯಿಂದ ಹರಿಸುವುದನ್ನು ನೋಡುತ್ತಿದ್ದೇವೆೆ. ಆದರೆ `ವಿಡಂಬಾರಿ’ ಕಾವ್ಯನಾಮದ ವಿ.ಜಿ.ಭಂಡಾರಿ ಯವರ ಚುಟುಕುಗಳು ಎಂದರೆ ನಮ್ಮ ಸಮಾಜದಲ್ಲಿನ ಶೋಷಣೆ, ಅನ್ಯಾಯ, ಮೌಢ್ಯ, ವಿಕಾರಗಳನ್ನು ಎತ್ತಿ ತೋರುವ, ಜನರಲ್ಲಿ ಆ ಬಗೆಗೆ ಜಾಗೃತಿ, ಚಿಕಿತ್ಸಕ ದೃಷ್ಟಿಕೋನ ಬೆಳೆಸುವ ಸತ್ವಯುತ ಅಭಿವ್ಯಕ್ತಿ ಅನ್ನುವುದು ಖಚಿತ.

ಶೋಷಿತ-ವಂಚಿತ ದಲಿತ ದೇವದಾಸಿಯ ಮಗನಾಗಿ ಹುಟ್ಟಿ ಕಡುಬಡತನ ಸಂಕಷ್ಟಗಳನ್ನೇ ಉಂಡು ಬೆಳೆದವರು ವಿ.ಜಿ.ಭಂಡಾರಿ. ತುಣುಕು ಪದಗಳಲ್ಲಿ ಪ್ರಖರ ವಿಶ್ಲೇಷಣೆ, ವಂಚಕ ಸಾಮಾಜಿಕ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆಯ ಆಶಯಗಳ ಸಮರ್ಥ ಅಭಿವ್ಯಕ್ತಿ ಇವರ ಸಾಹಿತ್ಯದ ವಿಶೇಷ. ಸಮಾಜಮುಖಿ ಚಿಂತನೆಯ ಈ ಹೆಮ್ಮೆಯ ಚುಟುಕು ಕವಿ ಈಗ ಮಾಚರ್್ 2-3, 2013 ರಂದು ಮುಂಡಗೋಡದಲ್ಲಿ ನಡೆಯುವ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಒಂದು ಸಂದರ್ಶನ.

ಜನಶಕ್ತಿ: ಈಗ ನೀವು ಉತ್ತರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. ಆ ಬಗ್ಗೆ ನಿಮಗೆ ಏನನ್ನಿಸುತ್ತಿದೆ. ?
ವಿಡಂಬಾರಿ: ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ. ನನ್ನಷ್ಟಕ್ಕೆ ನಾನು ಕೆಲಸ ಮಾಡಿಕೊಂಡಿದ್ದೇನೆ. ನಿರೀಕ್ಷೆ ಇರಲಿಲ್ಲ. ಸಂತೋಷವಾಗಿದೆ.

ಜನಶಕ್ತಿ: ಸಮ್ಮೇಳನದ ಅಧ್ಯಕ್ಷರಾಗಿ ನೀವು ಯಾವ ವಿಷಯಗಳಿಗೆ ಒತ್ತು ಕೊಡುತ್ತೀರಿ. ?
ವಿಡಂಬಾರಿ: ದೇಶದ ಶೇ. 50 ರಷ್ಟು ಜನರು ಈಗಲೂ ಬಡತನ ರೇಖೆಯ ಕೆಳಗೇ ಇದ್ದಾರೆ. ರೈತರ ಸಮಸ್ಯೆ -ದಲಿತರ ಸಮಸ್ಯೆಗಳು, ಮಹಿಳೆಯರ ಸಮಸ್ಯೆಗಳು ಉಲ್ಬಣಿಸುತ್ತಿವೆ. ಸಾಮಾನ್ಯರಿಗೆ ಉನ್ನತ ಶಿಕ್ಷಣ ಕನಸೇ ಆಗಿದೆ. ಆಳುವ ವರ್ಗಗಳಿಗೆ ವಂಚಿಸುವ ಉದ್ದೇಶ ಇದೆ. ಶಾರದಾ ಮಾತೆಯನ್ನು ಕಡು ಲೋಭಿಗಳಿಗೆ ಹರಾಜು ಹಾಕಿದ್ದಾರೆ. ಈ ಅಂಶಗಳ ಬಗೆಗೆ ಒತ್ತು ಕೊಡಬೇಕಾಗಿದೆ.

ಜನಶಕ್ತಿ: ಶೋಷಿತ ಸಮುದಾಯವನ್ನು ಪ್ರತಿನಿಧಿಸುವ ನೀವು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ತುಂಬಾ ಸಂತೋಷದ ವಿಷಯ. ಸಾಹಿತ್ಯದಲ್ಲಿ ಈ ಶೋಷಿತರ ಬದುಕು ಹೇಗೆ ಪ್ರತಿಫಲನಗೊಂಡಿದೆ.
ವಿಡಂಬಾರಿ: ನಾನು ಚಿಕ್ಕಂದಿನಲ್ಲೇ ಬಹಳ ಕಷ್ಟಗಳನ್ನು ಅನುಭವಿಸಿದೆ. ಬಡತನ. ಕೂಲಿ ಕೆಲಸಕ್ಕೆ ಹಾಕಿದ್ದರು. 3ನೇ ಈಯತ್ತೆ ನಂತರ ಕಲೀಲಿಕ್ಕೂ ಆಗಲಿಲ್ಲ. ಕನ್ನಡ ಓದಲೂ ಬರುತ್ತಿರಲಿಲ್ಲ. ನಾನು ಕುಡಿಯುತ್ತಿದ್ದೆ. ಡಾ. ಆರ್.ವಿ. ಭಂಡಾರಿ ಅವರು ಕೊಟ್ಟ ಪುಸ್ತಕಗಳು ನನ್ನನ್ನು ಮನುಷ್ಯನನ್ನಾಗಿ ರೂಪಿಸಿದವು. ಮನುಷ್ಯನಾಗಿ ಹುಟ್ಟಿ, ಒಂದಷ್ಟು ತಿಂದು ಸಾಯುವುದಲ್ಲ ಎಂದು ನಾಡಿನ ಪ್ರಸಿದ್ದ ಸಾಹಿತಿಗಳು ಹೇಳಿದ್ದಾರೆ. `ನಿಜವಾದ ಮಾನವನಾಗಿ’ ಬೆಳೆದು ಬದುಕಿ ಮಣ್ಣಲ್ಲಿ ಮಣ್ಣಾಗಬೇಕು. 9 ತಿಂಗಳು ಹೊತ್ತು ಹೆತ್ತು ಸಾಕಿದ ಮಹಾತಾಯಿಯ ಋಣ ತೀರಿಸಬೇಕು.
ಪ್ರಾಚೀನ ಋಗ್ವೇದ ಕಾಲದಿಂದ ಇಲ್ಲಿಯ ಕೆಲವರು ಉಂಡುಟ್ಟು ಬಲಿತರೆ ಸಾಕು ಎಂದು ದಲಿತರನ್ನು ತುಳಿಯುತ್ತ ಬರಲಾಗಿದೆ. ಹೀಗಾಗಿ ನಾನು ದಲಿತರ ಪರವಾಗಿ ಮತ್ತು ನೊಂದವರ ಪರವಾಗಿ ಬರೆಯಲು ಪ್ರಾರಂಭಿಸಿದೆ.
ಸಮ್ಮೇಳನದ ಸಂದರ್ಭದಲ್ಲಿ ಗುಡಿ-ಗುಂಡಾರ, ಮಠಗಳ ಪರವಹಿಸಿ ಏನನ್ನೂ ಹೇಳುವುದಿಲ್ಲ. ಬಹುಸಂಖ್ಯಾತರು ಜ್ಞಾನ ತಿಳಿದು ನಿಂತರೆ ಸೈನ್ಯವೂ ಕೂಡ ತಡೆಯುವುದು ಅಸಾಧ್ಯ ಎಂಬುದು ನಮ್ಮ ರಾಜಕಾರಣಿಗಳಿಗೆ ಗೊತ್ತಿದೆ. ಅದರಿಂದಾಗಿಯೇ ಶಿಕ್ಷಣವನ್ನು ವಂಚಿಸುತ್ತಿದ್ದಾರೆ. ಆದ್ದರಿಂದಲೇ ಜನರಲ್ಲಿ ಮೌಢ್ಯವನ್ನು ಬಿತ್ತುತ್ತಾ ಇದ್ದಾರೆ.

ಜನಶಕ್ತಿ: ಸಾಹಿತ್ಯ ರಂಗದಲ್ಲಿನ ಇತ್ತೀಚಿಗಿನ ಪ್ರವೃತ್ತಿ-ಬೆಳವಣಿಗೆಗಳ ಬಗೆಗೆ ಏನನ್ನಿಸುತ್ತದೆ?
ವಿಡಂಬಾರಿ: ಆರೋಗ್ಯಕರವಾಗಿ ಹೋಗುತ್ತಿದೆ ಅಂತ ಅನಿಸುತ್ತಿಲ್ಲ. ಹಣ ಸಿಗುವ ಕಡೆ ದೊಡ್ಡ ದೊಡ್ಡ ಸಾಹಿತಿಗಳು ಇದ್ದಾರೆ. ಪ್ರಶಸ್ತಿ ಇಟ್ಟಿದ್ದಾರಲ್ಲ !! ಸಂತೋಷ ಎಂದರೆ ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಸಾಹಿತಿಗಳು ಬೆಳೆಯುತ್ತಾ ಇದ್ದಾರೆ. ಬಹಳಷ್ಟು ಮುಂದೆ ಬಂದಿದ್ದಾರೆ.

ಜನಶಕ್ತಿ: ನೀವು ಚುಟುಕು ಸಾಹಿತಿಯಾಗಿ ರೂಪುಗೊಳ್ಳಲು ಪ್ರೇರಣೆ ಏನು ?
ವಿಡಂಬಾರಿ: ಒಂದು ಪದವಿ ಕಾಲೇಜಿನಲ್ಲಿ ನಡೆದ ವಿಷಯ. ಲೆಕ್ಚರರ್ ಒಬ್ಬರು (`ಕಳುಹಿದನಾ ಕೌರವ ರಾಯ’) ಎಂಬ ಕಾವ್ಯ ಭಾಗವೊಂದನ್ನು ತಪ್ಪಾಗಿ ವಿವರಿಸಿದ್ದರು. ಆ ಹಿನ್ನೆಲೆಯಲ್ಲಿ ನಾನು ಒಂದು ಚುಟುಕು ಬರೆದಿದ್ದೆ.
ಬೀದಿಯಲಿ ತಿರುಗುತಿಹ ಹಲವಾರು ಎಮ್ಮೆ
ಇಣುಕಿಣುಕಿ ನೋಡಿದವು ಹತ್ತಿರದಿ ಒಮ್ಮೆ
ಅವುಗಳಲ್ಲಿ ಹಿಂಡುವವು ಹತ್ತಕ್ಕೆ ಎರಡು
ಉಳಿದ ಎಮ್ಮೆಗಳೆಲ್ಲ ಸಂಪೂರ್ಣ ಬರಡು
ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಈ ಚುಟುಕು ಖ್ಯಾತ ಚುಟುಕು ಕವಿ ದಿನಕರ ದೇಸಾಯಿ ಅವರ ಕಣ್ಣಿಗೆ ಬಿತ್ತು. ಹತ್ತು ಚುಟುಕುಗಳೊಂದಿಗೆ ಬರಲು ಹೇಳಿ ಕಳಿಸಿದರು. ಅಂಚೆ ಇಲಾಖೆ ನೌಕರನಾಗಿ ಅವರ ಮನೆಗೆ ಅಂಚೆ ಪತ್ರ, ಟೆಲಿಗ್ರಾಂ ಇತ್ಯಾದಿ ಕೊಡುತ್ತಿದ್ದೆ. ಆದರೆ ಮಾತನಾಡಿಸಿರಲಿಲ್ಲ. ಹೋದಾಗ ನಡುಗುತ್ತಿದ್ದೆ. ದಿನಕರ ದೇಸಾಯಿಯವರು ಚುಟುಕುಗಳನ್ನು ಮೆಚ್ಚಿಕೊಂಡು ಬೆನ್ನು ತಟ್ಟಿದರು. ಆಮೇಲೆ ಕಂಡಾಗ …ಓಹೋಹೋ ಚುಟುಕು ಕವಿ ಮಹಾರಾಜರು, ಬರೆಯುತ್ತಿರಿ…ಎನ್ನುತಿದ್ದರು. ತುಂಬಾ ಪ್ರೋತ್ಸಾಹಿಸಿದರು.

ಜನಶಕ್ತಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳನ್ನು ಹುಟ್ಟು ಹಾಕುವ ವ್ಯವಸ್ಥಿತ ಸಂಚುಗಳು ಸಕ್ರಿಯವಾಗಿವೆ. ಹಿಂದೆ ಭಟ್ಕಳ ಮುಂತಾದಲ್ಲಿ ಕೋಮುಗಲಭೆಗಳು ನಡೆದಾಗ ಸಾಹಿತಿಗಳು ಸ್ಪಂದಿಸಿದ್ದಿತ್ತು. ಕೋಮುವಾದ ಜಾತಿವಾದಗಳ ಬಗೆಗೆೆ ನಿಮ್ಮ ಅನಿಸಿಕೆ ?
ವಿಡಂಬಾರಿ: ಹಿಂದೆ ಭಟ್ಕಳದಲ್ಲಿ ಕೋಮುಗಲಭೆಗಳು ನಡೆದಾಗ ಸಾಹಿತಿಗಳು ಸಕ್ರಿಯವಾಗಿ ಮಧ್ಯ ಪ್ರವೇಶ ಮಾಡಿದ್ದೆವು. ಡಾ. ಎನ್.ಆರ್. ನಾಯಕರು, ನಾನು ಕೂಡಿ ಹೋಗಿದ್ದೆವು. ಸೌಹಾರ್ದತೆಗಾಗಿ ಕವಿಗೋಷ್ಠಿಯನ್ನೂ ಮಾಡಿದ್ದೆವು. ರಂಜಾನ್ ದಗರ್ಾ ಅವರು ಬಂದಿದ್ದರು. ಕೋಮುಗಲಭೆ ರಾಜಕೀಯ ಪ್ರೇರಿತ. ಬಸ್ಸಿಗೆ ಕಲ್ಲು ಹೊಡೆಯುವುದು… ಮುಸ್ಲಿಮರ ಮೇಲೆ ಹಾಕುವುದು. ಬಹಳಷ್ಟು ಸಂದರ್ಭಗಳಲ್ಲಿ ಮುಸ್ಲಿಮ್ ಯುವಕರು ಹಾಗೇ ಮಾಡಿರುವುದಿಲ್ಲ.

ಜಾತಿವಾದದ ಬೆಳವಣಿಗೆ ಕೂಡ ಇದೆ. ಮೇಲ್ನೋಟಕ್ಕೆ ಅಷ್ಟು ಕಾಣುವುದಿಲ್ಲ. ಒಳಗೊಳಗೆ ಇದೆ. ಎಸ್ಸಿ ವ್ಯಕ್ತಿ ಬಂದರೆ ಹೊರಗೆ. ಕೂಲಿ ಬಂದರೆ ಹೊರಗೆ. ಆದರೆ ಎಸ್ಸಿ ತಹಸೀಲ್ದಾರ್ ಬಂದರೆ ಒಳಗೆ ಇಂತಹದ್ದು ಇದೆ. ಕ್ಯಾತ್ಯಾಯಿನಿ ಅವರ್ಸಾ ಅಂತ ಅಲ್ಲಿ ಒಂದು ದೇವಿ ಮಂದಿರ. ಅಲ್ಲಿ ಮಡೆಸ್ನಾನ ಇದೆಯಂತೆ. ಈ ವರ್ಷ ಅಲ್ಲಿ ಚಳುವಳಿ ಕೂಡ ನಡೆದಿದೆ.

ಜನಶಕ್ತಿ: ಉತ್ತರ ಕನ್ನಡ ಜಿಲ್ಲೆಯ ಜನರು ಎದುರಿಸುತ್ತಿರುವ ಗಂಭೀರ ಪ್ರಶ್ನೆ ಏನು ? ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಏನಾಗಬೇಕಿದೆ.?
ಜಿಲ್ಲೆಯ ಜೋಯಿಡಾದಂತಹ ಊರಿನಲ್ಲಿ ಕಾಲು ಸಂಕ(ಬೊಂಬು ಅಥವಾ ಮರಮುಟ್ಟಿನಿಂದ ಸ್ಥಳೀಯರೆ ನಿಮರ್ಿಸಿಕೊಂಡ ಕಿರು ಸೇತುವೆ) ದಂತಹದ್ದನ್ನು ದಾಟಿ (ನದಿ-ಹೊಳೆಯ)ಆಚೆ ಬದಿಗೆ ಹೋಗುವಂತಹ ಪರಿಸ್ಥಿತಿ ಇದೆ. ಡಾ. ಆರ್.ವಿ. ಭಂಡಾರಿಯವರು ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಇಂತಹ ಸಮಸ್ಯೆಗಳ ಬಗೆಗೆ ಹೇಳಿದ್ದರು. ಸಮಸ್ಯೆಗಳು ಈಗಲೂ ಹಾಗೇ ಇವೆ.
ಅಡವಿ ಜನರನ್ನು ಒಕ್ಕಲೆಬ್ಬಿಸುವುದು ಜೋಯಿಡಾದಲ್ಲಿ ತುಂಬಾ ನಡೆಯುತ್ತಿದೆ. ಆರು ದಶಕಗಳಿಂದ ಎಲ್ಲ ಪಕ್ಷಗಳನ್ನು ನೋಡುತ್ತಿದ್ದೇವೆ. ಎಡಪಂಥೀಯ ಪಕ್ಷದಿಂದ ಮಾತ್ರ ಬಡತನ ನಿವಾರಣೆ, ನೋವು ನಿವಾರಣೆ ಸಾಧ್ಯ. ಹಲವಾರು ರಾಜಕೀಯ ಪಕ್ಷಗಳನ್ನು ಜಾಲಾಡಿ ನೋಡಿದ್ದೇನೆ. ಆಡುವುದೊಂದು ಮಾಡುವುದೊಂದು. ಎಡಪಕ್ಷ ಬಂದರೆ ಜನರಿಗೆ ಒಳ್ಳೆಯದಾದೀತು ಎನ್ನುವುದು ನನ್ನ ನಂಬಿಕೆ. ಜನರನ್ನು ನಾವು ಎಚ್ಚರ ಮಾಡಬೇಕು. ಹೊಟ್ಟೆ ತುಂಬ ಉಂಡಿದ್ದೀರ ಎಂದು ಕೇಳಬೇಕು.

ಜನಶಕ್ತಿ: ನೀವು ಇಲ್ಲಿಯವರೆಗೆ ಎಷ್ಟು ಚುಟುಕುಗಳನ್ನು ಪ್ರಕಟಿಸಿದ್ದೀರಿ. ಪ್ರಕಟಿತ ಕೃತಿಗಳು ಯಾವುವು ?
ವಿಡಂಬಾರಿ: ಇಲ್ಲಿಯವರೆಗೆ ಸುಮಾರು 7,000 ಚುಟುಕುಗಳನ್ನು ಬರೆದಿದ್ದೇನೆ. ಹುಬ್ಬಳ್ಳಿಯ ಪಿ.ಎಂ. ಬಂಕಾಪುರ್ ಅವರು ತಮ್ಮ `ವಿಶಾಲ ಕನರ್ಾಟಕ’ ಪತ್ರಿಕೆಯ `ಮಸಿಗುಂಡು’ ಎಂಬ ಶಿಷರ್ಿಕೆಯಲ್ಲಿ ಸತತವಾಗಿ ಮೂರು ವರ್ಷಗಳ ಕಾಲ ಚುಟುಕುಗಳನ್ನು ಪ್ರಕಟಿಸಿದರು.

ಒಗ್ಗರಣೆ(1981), ಕವಳಿ(1986), ಕುದಿಬಿಂದು(2003), ಅಂಚೆಪೇದೆಯ ಆತ್ಮಕತೆ(2005), ವಿಡಂಬಾರಿ ಕಂಡದ್ದು(2007) ಇವು ಪ್ರಕಟಿತ ಕೃತಿಗಳು.
ವಿಡಂಬಾರಿಯವರನ್ನು `ಜನಶಕ್ತಿ’ ಮಾತನಾಡಿಸಿದ್ದು ಶಿರಸಿಯಲ್ಲಿ. ಸಿಐಟಿಯು ಸಂಘಟನೆಯ 12ನೇ ರಾಜ್ಯ ಸಮ್ಮೇಳನದ ಸಂದರ್ಭಕ್ಕೆ ಅವರು ಬಂದಿದ್ದಾಗ. ಸಂದರ್ಶನದ ಕೊನೆಯಲ್ಲಿ ಜನಶಕ್ತಿಯ ಪರವಾಗಿ ಧನ್ಯವಾದ ಹೇಳಿದಾಗ ಅವರು ಹೇಳಿದರು. “ಎಷ್ಟೋ ಪತ್ರಿಕೆಗಳಲ್ಲಿ ನನ್ನ ಚುಟುಕುಗಳು ಪ್ರಕಟವಾಗಿರಬಹುದು. ಆದರೆ ಜನಶಕ್ತಿಯಲ್ಲಿ ಪ್ರಕಟವಾದಾಗ ಆಗುವ ಸಂತೋಷವೇ ಬೇರೆ. `ಜನಶಕ್ತಿ’ ನನ್ನ ಮನೆಯ ಪತ್ರಿಕೆ.”
ಪತ್ರಿಕೆಯ ಬಗೆಗಿನ ತುಂಬು ಅಭಿಮಾನಕ್ಕೆ ವಿಡಂಬಾರಿಯವರಿಗೆ ಧನ್ಯವಾದ ಮತ್ತು ಶುಭಾಶಯ ಹೇಳಿ ಬೀಳ್ಕೊಂಡೆವು.

0

‘ಪೂರ್ಣ ಸಂತೃಪ್ತಿಗೆ ನಮ್ಮಲ್ಲಿ ಜಾಗವಿಲ್ಲ. ಇನ್ನಷ್ಟು ಸಾಧಿಸಬೇಕಿದೆ’ ವಿಶೇಷ ಸಂದರ್ಶನದಲ್ಲಿ ‘ಮಾಣಿಕ್ ಸರ್ಕಾರ’

Image

ಸಂದರ್ಶನ-ಎಸ್.ವೈ.ಗುರುಶಾಂತ್
ಅದಾಗಲೇ ನೂತನವಾಗಿ ಆಯ್ಕೆಯಾಗಿದ್ದ ಸಿಪಿಐ(ಎಂ)ನ ಶಾಸಕರ ಸಭೆಯಲ್ಲಿ ನಾಯಕರಾಗಿ ಚುನಾಯಿತರಾದ ಬಳಿಕ ಕಾಂ| ಮಾಣಿಕ್ ಸರ್ಕಾರ ಅಲ್ಲಿಂದಲೇ ನೇರವಾಗಿ ಬಂದಿದ್ದು `ಜನಶಕ್ತಿ’ಯ ಸಂದರ್ಶನಕ್ಕೇ. ಅವರು ನಾಲ್ಕನೆಯ ಬಾರಿಗೆ ಎಡರಂಗದ ಮುಖ್ಯಮಂತ್ರಿಯಾಗಿ ಮಾಚರ್್ 6ಕ್ಕೆ ಪ್ರಮಾಣವಚನ ಸ್ವೀಕರಿಸಬೇಕಿತ್ತು. ರಾಜ್ಯದೆಲ್ಲೆಡೆಯಂತೆ ಗೆಲುವಿನ ಸಂಭ್ರಮದ ಹೊನಲು ಅಲ್ಲೂ.

ಈ ಬಾರಿಯೂ ಜಯಭೇರಿ ಬಾರಿಸಿದ ಎಡರಂಗಕ್ಕೆ, ಅದರ ನೇತೃತ್ವ ವಹಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯರೂ ಆಗಿರುವ ಕಾಂ.ಮಾಣಿಕ್ ಸರ್ಕಾರ್ರವರಿಗೆ ಹಾದರ್ಿಕ ಅಭಿನಂದನೆಗಳನ್ನು ಸಲ್ಲಿಸುತ್ತಾ ಜನಶಕ್ತಿಯ ಸಂದರ್ಶನ ಆರಂಭವಾಯಿತು. ‘ನಿಮಗೆ ಧನ್ಯವಾದಗಳು’ ಎಂದು ಮಾತು ಆರಂಭಿಸಿದರು.

ಜನಶಕ್ತಿ: ಈ ಐತಿಹಾಸಿಕ ಮಹತ್ವದ ಗೆಲುವನ್ನು ತಾವು ಹೇಗೆ ವಿಶ್ಲೇಷಿಸುತ್ತೀರಿ?
ಮಾಣಿಕ್ ಸರ್ಕಾರ್: ಇದು ದೊಡ್ಡ ಪ್ರಶ್ನೆ. ನಾವಿನ್ನೂ ವಿವರವಾಗಿ ವಿಶ್ಲೇಷಣೆ ಮಾಡಿಲ್ಲ. ಅದಕ್ಕೆ ಸಮಯ ಹಿಡಿಯುತ್ತದೆ. ಚುನಾವಣಾ ಪ್ರಚಾರದಲ್ಲಿ ನಾವು ಶಾಂತಿ ಸ್ಥಾಪನೆಗೆ, ಜಾತ್ಯಾತೀತ ಸಂರಚನೆಯನ್ನು ಕಾಪಾಡಲು, ಪ್ರಜಾಪ್ರಭುತ್ವ ಉಳಿಸಲು. ಜನತೆಗೆ ಕೇಳಿದ್ದೆವು. ಆಭಿವೃದ್ಧಿ ಯೋಜನೆಗಳು, ಅವುಗಳ ಅನುಷ್ಠಾನದ ಮುಂದುವರಿಕೆಗೆ ವಿನಂತಿಸಿದೆವು. ಬಹುತೇಕವಾಗಿ ಜನತೆ ನಮ್ಮ ಈ ಮನವಿಯನ್ನು ಪುರಸ್ಕರಿಸಿದರು. ಈ ಬಾರಿಯಂತೂ ಮಹಿಳೆಯರ ಸ್ಪಂದನ ಅಪೂರ್ವ. ಅವರು ದೊಡ್ಡ ಪ್ರಮಾಣದಲ್ಲಿ ಎಡರಂಗವನ್ನು ಬೆಂಬಲಿಸಿದ್ದಾರೆ.

ಈ ಬಾರಿ ಸೋಲಬಹುದು ಎಂಬ ಪ್ರಚಾರವಿತ್ತು. ಆದರೆ ಗೆಲ್ಲ್ಲುವ ವಿಶ್ವಾಸ ತಮಗಿತ್ತು? ಈ ಆತ್ಮವಿಶ್ವಾಸ ಬಂದಿದ್ದಾದರೂ ಹೇಗೆ?

ನಮ್ಮ ಆತ್ಮವಿಶ್ವಾಸದ ಕಾರಣ, ನಾವು ಮಾಡಲಾಗದ್ದನ್ನು ಎಂದೂ ಜನರಿಗೆ ಹೇಳಲಿಲ್ಲ. ಸಾಧ್ಯವಿರುವುದನ್ನು ಮಾಡಿದೆವು. ನಿಗದಿತ ಸಮಯದೊಳಗೆ ಮಾಡುವ, ಅದಕ್ಕಿರುವ ನಮ್ಮ ಮಿತಿಗಳನ್ನು ತಿಳಿಸಿದೆವು. ಬಹಳಷ್ಟು ಯೋಜನೆಗಳನ್ನು ಹೆಚ್ಚಿನ ಗಂಭೀರತೆಯಿಂದ, ಪ್ರಾಮಾಣಿಕತೆಯಿಂದ ಜಾರಿಗೆ ತಂದೆವು. ಇವನ್ನೆಲ್ಲಾ ನೋಡಿದ ಜನರು ನಮ್ಮ ಮೇಲೆ ವಿಶ್ವಾಸವಿರಿಸಿದರು. ಇನ್ನು ಜನರಲ್ಲುಂಟಾದ ವಿಶ್ವಾಸವೇ ನಮಗೂ ವಿಶ್ವಾಸ ಮೂಡಿಸಿತು. ಒತ್ತಿ ಹೇಳ ಬಯಸುವುದೇನೆಂದರೆ: ನಮ್ಮ ಜನರಿಗೆ, ನಮ್ಮ ರಾಜ್ಯಕ್ಕೆ ಹಾನಿ ತರುವ ಯಾವುದನ್ನೂ ನಾವು ಮಾಡಲಿಲ್ಲ. ಹೀಗಿರುವಾಗ ಜನ ನಮ್ಮನ್ನೇಕೆ ಆರಿಸುವುದಿಲ್ಲ? ಸಹಕಾರ ನೀಡುವುದಿಲ್ಲ?

ಈ ಅವಧಿಯಲ್ಲಿನ ಗಮನಾರ್ಹ ಸಾಧನೆಗಳೇನು?
ಶಾಂತಿಯ ಸ್ಥಾಪನೆ. ಒಂದು ವಿಶಿಷ್ಟ ಸಂದರ್ಭದಲ್ಲಿ ಉಗ್ರಗಾಮಿತ್ವದ ಹಾವಳಿ ತ್ರಿಪುರದಲ್ಲಿ ವ್ಯಾಪಕವಾಗಿತ್ತು. ಅದನ್ನು ನಾವು ಪರಿಣಾಮಕಾರಿಯಾಗಿ ಎದುರಿಸಿದೆವು. ಈಗ ಶಾಂತಿ ನೆಲೆಸಿದೆ. ಆದಾಗ್ಯೂ ನಾವು ಸಂತೃಪ್ತರೇನಲ್ಲ. ಆ ಶಕ್ತಿಗಳು ಪುನಃ ಸಂಘಟಿತವಾಗಬಹುದು, ಸಮಸ್ಯೆ ತರಲು ಯೋಜಿಸಬಹುದು. ಈ ಹಿನ್ನೆಲೆಯಲ್ಲಿ ಜನರನ್ನು ನಾವು ಜಾಗೃತವಾಗಿರಿಸಿದ್ದೇವೆ. ಶಾಂತಿ ಸ್ಥಾಪನೆಯಲ್ಲಿ ಒಂದು ಗಮನಾರ್ಹ ಮುನ್ನಡೆ ಸಾಧ್ಯವಾಗಿದೆ.

ಎರಡನೆಯದಾಗಿ, ಸಮಾಜದ ಜಾತ್ಯಾತೀತ ಸ್ವರೂಪವನ್ನು ಕಾಯ್ದುಕೊಳ್ಳುವುದು. ದೇಶದ ಇಂದಿನ ಸಂದರ್ಭದಲ್ಲಿ ಯೋಚಿಸಿದಾಗ, ವಿಶೇಷವಾಗಿ ನೀವು ಪ್ರತಿನಿಧಿಸುವ ರಾಜ್ಯದ ಸನ್ನಿವೇಶವನ್ನೂ ಗಮನದಲ್ಲಿರಿಸಿದಾಗ ಈ ಅಂಶದ ಮಹತ್ವ ಅರ್ಥವಾದೀತು. ತ್ರಿಪುರಾದಲ್ಲಿನ ಸೌಹಾರ್ದತೆ, ಸಾಮರಸ್ಯದ ವಾತಾವರಣ ಗಮನಾರ್ಹ. ಅವರವರ ಧರ್ಮ ಅನುಸರಣೆ, ಆರಾಧನೆಗೆ ಇಲ್ಲಿ ಎಳ್ಳಷ್ಟ್ಟೂ ಭಂಗವಿಲ್ಲ. ಇನ್ನೊಂದು ಅಂಶವೆಂದರೆ, ತಳಮಟ್ಟದವರೆಗೂ ಪ್ರಜಾಪ್ರಭುತ್ವದ ವಿಸ್ತರಣೆ. ಪ್ರಜಾಪ್ರಭುತ್ವದ ಅರ್ಥ ಕೇವಲ 5 ವರುಷಗಳಿಗೊಮ್ಮೆ ಓಟು ಹಾಕಿ ಕೂಡುವುದಲ್ಲ. ಇಲ್ಲಿ ಜನತೆಗೆ ಪರಮಾಧಿಕಾರವಿರಬೇಕು. ಅದನ್ನು ನಾವು ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ, ನಗರ ಪಂಚಾಯತ್ಗಳ ಮೂಲಕ, ಸಂವಿಧಾನದ ಆರನೇ ಷೆಡ್ಯೂಲ್ ಪ್ರಕಾರ ಬುಡಕಟ್ಟು ಜನರು ವಾಸಿಸುವ ಪ್ರದೇಶದಲ್ಲಿ ಸ್ವಾಯತ್ತ ಮಂಡಳಿಗಳ ರಚನೆಯನ್ನು ಮಾಡಿದ್ದೇವೆ. ಈ ಸಮಿತಿಗಳನ್ನು ಕೇವಲ ಆಯ್ಕೆ ಮಾಡಿದ್ದಷ್ಟೇ ಅಲ್ಲ, ಅವುಗಳಿಗೆ ಹೆಚ್ಚಿನ ಅಧಿಕಾರ ನೀಡಿದೆವು, ಸಾಧ್ಯವಿರುವಷ್ಟು ಹೆಚ್ಚಿನ ಸಂಪನ್ಮೂಲ ಒದಗಿಸಿ ನಿಜಕ್ಕೂ ಪರಿಣಾಮಕಾರಿಯಾಗುವಂತೆ ನೋಡಿಕೊಂಡೆವು.

ಮತ್ತೊಂದು ಮಹತ್ವದ ಅಂಶ: ಹಿಂದೆ ಕಾಂಗ್ರೆಸ್ ಆಡಳಿತವಿರುವಾಗ ಬುಡಕಟ್ಟು ಜನರು ಹಸಿವು ತಾಳದೆ ನಮ್ಮ ತಾಯಂದಿರು ಅನ್ನ ಹುಡುಕಿಕೊಂಡು ಅಲೆಯುತ್ತಿದ್ದರು. ಮಕ್ಕಳನ್ನು ಮಾರುತ್ತಿದ್ದರು. ಅನ್ನ ಹುಡುಕಿ ಹೋದವರು ಮನೆಗೆ ಮರಳುತ್ತಿದ್ದುದು ಕಡಿಮೆ. ಕುಟುಂಬಗಳು ಒಡೆದು ಹೋಗಿದ್ದವು. ಅಲ್ಲಿ ಹಲವಾರು ದುರಂತಗಳ ಸರಮಾಲೆಗಳಿದ್ದವು. ಆದರೀಗ ಅಂತಹ ನಕಾರಾತ್ಮಕ ಅಂಶಗಳು ಕೇವಲ ನೆನಪು, ಅದು ಇತಿಹಾಸದ ಭಾಗವಷ್ಟೆ. ಈಗ ಜನ ಸಾಮಾನ್ಯರ ಜೀವನ ಮಟ್ಟ ಸುಧಾರಿಸಿದೆ. ಇದರ ಪ್ರತಿಫಲನ ನಮ್ಮ ಸಮಾಜದ ವಿವಿಧ ಸ್ಥರಗಳಲ್ಲಿ ಕಾಣುತ್ತೇವೆ. ಅಂದ ಮಾತ್ರಕ್ಕೆ ಪೂರ್ಣ ಸಂತೃಪ್ತಿಗೆ ನಮ್ಮಲ್ಲಿ ಜಾಗವಿಲ್ಲ. ಇನ್ನಷ್ಟು ಸಾಧಿಸಬೇಕಿದೆ.

ಜನರಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ. ಅದು ತಪ್ಪಲ್ಲ. ಅದನ್ನು ಈಡೇರಿಸಲು ಶ್ರಮಿಸುತ್ತೇವೆ.
ದೇಶದೆಲ್ಲೆಡೆ ತೀವ್ರವಾದ ಕಾಷರ್ಿಕ ಬಿಕ್ಕಟ್ಟನ್ನು ಕಾಣುತ್ತಿದ್ದೇವೆ. ರೈತರ ಆತ್ಮಹತ್ಯೆ, ಕೂಲಿಕಾರರ ವಲಸೆಗಳು ಇತ್ಯಾದಿ ನಡೆದಿವೆ. ತ್ರಿಪುರಾದಲ್ಲಿನ ಸ್ಥಿತಿಯೇನು?

ತ್ರಿಪುರಾದಲ್ಲಿ ರೈತರ ಆತ್ಮಹತ್ಯೆಗಳಿಲ್ಲ. ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದೇವೆ. ಇಲ್ಲಿ ಕೇಂದ್ರ ಸರ್ಕಾರ ನಮಗೆ ಸಹಾಯ ನೀಡುವುದರಲ್ಲಿ ಹಲವು ಅಡ್ಡಿ ಉಂಟು ಮಾಡುತ್ತಿದೆ. ಆದರೂ ನಾವು ರೈತರಿಗೆ ಸಹಾಯ ಮಾಡಲು ನಿರಂತರ ಪ್ರಯತ್ನ್ನಿಸುತ್ತಿದ್ದೇವೆ. ಒಂದಂತೂ ಸತ್ಯ, ಇಡೀ ದೇಶವೇ ಆಳವಾದ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ತ್ರಿಪುರಾ ಪ್ರತ್ಯೇಕವಾಗಿ ಅದರಿಂದ ಹೊರಗಿರಲು ಸಾಧ್ಯವಿಲ್ಲ. ನಮ್ಮದು ಸಣ್ಣ ರಾಜ್ಯ. ಆದರೆ ಸಣ್ಣ ಪುಟ್ಟ ರೈತರಲ್ಲಿ, ಕೂಲಿಕಾರರಲ್ಲಿ ಒಂದು ವಿಶ್ವಾಸ ಬೆಳೆಸಲು ಸಾಧ್ಯವಾಗಿದೆ. ಅದೇನೆಂದರೆ ತ್ರಿಪುರಾದ ಎಡರಂಗ ಸರ್ಕಾರ ನಮ್ಮನ್ನು ಕೈ ಬಿಡುವುದಿಲ್ಲ ಸಾಧ್ಯವಿರುವುದೆಲ್ಲವನ್ನೂ ಮಾಡುತ್ತಿದೆ’ ಎಂಬುದು.(ರಬ್ಬರ್ ಫ್ಲಾಂಟೇಶನ್ ಉತ್ಪಾದನೆ, ವಿವಿಧ ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ, ಮಾರುಕಟ್ಟೆ ಒದಗಿಸುವ ಪ್ರಯತ್ನಗಳು, ರೇಗಾ ಯೋಜನೆ ಪರಿಣಾಮಕಾರಿ ಜಾರಿ, ಸಾರ್ವತ್ರಿಕ ಪಡಿತರ ವ್ಯವಸ್ಥೆ ಮುಂ.ಗಳು ಗ್ರಾಮೀಣ ಜನತೆಯನ್ನು ರಕ್ಷಿಸಲು ಸಹಕಾರಿಯಾಗಿವೆ.-ಸಂದರ್ಶಕ)

ಕೃಷಿ – ಕೈಗಾರಿಕೆ ಬೆಳವಣಿಗೆಗೆ ಸಂಬಂಧಿಸಿಂತೆ ಕೇಂದ್ರ ಸರ್ಕಾರದ ವರ್ತನೆ ಹೇಗಿದೆ? ಯೋಜನೆಗಳ ಅಂಗೀಕಾರ ಅಥವಾ ಸಂಪನ್ಮೂಲಗಳ ನೀಡಿಕೆ ವಿಷಯದಲ್ಲಿ ಹಿಂದಿನ ತಾರತಮ್ಯವೇ ಮುಂದುವರಿದಿದೆಯೇ ಹೇಗೆ?.

ನೋಡಿ ಇಷ್ಟು ಹೇಳಬಲ್ಲೆ. ಭಾರತ ಸಕರ್ಾರ ನಮ್ಮ ಅಗತ್ಯಗಳು, ಕೇಳಿಕೆಗಳನ್ನು ಈಡೇರಿಸುವಷ್ಟು ಉದಾರಿ ಅಲ್ಲ! ಅವರು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಮ್ಮ ಕೈ ತಿರುವಲು, ಸಂಕಷ್ಟದಲ್ಲೇ ಇರಿಸಲು ಯತ್ನಿಸುತ್ತಾರೆ. ಆದರೆ ಅದೂ ಹೆಚ್ಚಿಗೆ ಮಾಡಲು ಆಗುತ್ತಿಲ್ಲ. ಕಾರಣ, ನಮ್ಮ ಎಡರಂಗ ಸರಕಾರದ ಸಾಧನೆಗಳು, ನಮ್ಮ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಜನರ ಭಾಗಿತ್ವ. ಅಲ್ಲಿಂದ ಸಿಗುವ ಹಣ ಅದು ನಮ್ಮ ಪಾಲು. ಅದೇನೂ ಅವರ ಕಾಣಿಕೆಯೇನಲ್ಲ. ಆದ್ದರಿಂದ ನಮ್ಮ ಪಾಲು ನಮಗೆ ಕೊಡಿ ಎನ್ನುತ್ತೇವೆ.

ಇನ್ನು ಕೈಗಾರಿಕೆ ಬೆಳವಣಿಗೆಯೆಂದರೆ ನಮ್ಮಲ್ಲಿ ಬೃಹತ್ ಕೈಗಾರಿಕೆಗಳಿಲ್ಲ, ಏನಿದ್ದರೂ ಸಣ್ಣವು. ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ನಾವು ನಿಮರ್ಿಸಿದ್ದೇವೆ. ಜನರಲ್ಲಿ ಕೊಳ್ಳುವ ಶಕ್ತಿ ಬೆಳೆಯುತ್ತಿದೆ. ಸಾಕ್ಷರತೆ ಪ್ರಮಾಣ ಶೇ 90% ಇದೆ. ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಲ್ಲಿ ನಾವು ದೇಶದಲ್ಲಿ 3ನೆಯ ಸ್ಥಾನದಲ್ಲಿದ್ದೇವೆ. ಶಿಕ್ಷಣದ ಗುಣಮಟ್ಟವೂ ಹೆಚ್ಚಿದೆ. ರಾಜಕೀಯ ಸ್ಥಿರತೆ, ಶಾಂತಿ ಇದೆ. ಕೈಗಾರಿಕಾ ಬೆಳವಣಿಗೆಗೆ ಅವಕಾಶವಿರುವ ಇನ್ನೊಂದು ರಾಜ್ಯ ಇದು ಎಂದು ಹಲವಾರು ಉದ್ಯಮಿಗಳು ಗುರುತಿಸುತ್ತಿದ್ದಾರೆ.

ನಾವು ದೇಶದ ಹಲವಾರು ಕಡೆ ವ್ಯಾಪಕವಾಗಿ ಭ್ರಷ್ಟಚಾರದ ಹಗರಣಗಳನ್ನು ಕಾಣುತ್ತೇವೆ. ರಾಜಕೀಯ ಕ್ಷೇತ್ರ ಮತ್ತು ಆಡಳಿತ ಯಂತ್ರ ಭ್ರಷ್ಟಗೊಂಡಿವೆ. ಇಲ್ಲಿ ಪರಿಸ್ಥಿತಿ ಹೇಗಿದೆ? ಭ್ರಷ್ಟಾಚಾರವನ್ನು ಎದುರಿಸುವಲ್ಲಿ ಕೈಗೊಂಡಿರುವ ಕ್ರಮಗಳೇನು?ಯಾವುದಾದರೂ ಸಂಸ್ಥೆ ಇದೆಯೇ? ಉದಾ: ನಮ್ಮಲ್ಲಿ ಲೋಕಾಯುಕ್ತ ಇದೆ. . .

ನಮ್ಮಲ್ಲಿಯೂ ಲೋಕಾಯುಕ್ತ ಇದೆ. ಆದರೆ ಭ್ರಷ್ಟಾಚಾರ ತಡೆಯಲು ಅದಷ್ಟೇ ಮುಖ್ಯವಾಗೋಲ್ಲ. ಮುಖ್ಯವಾಗಿ, ರಾಜಕೀಯ ಸಂಸ್ಕೃತಿ, ಪಾರದರ್ಶಕ ವ್ಯವಸ್ಥೆ, ಅಂತಹ ಒಂದು ವಾತಾವರಣ ಬೇಕು. ಯಾರು ಸರ್ಕಾರವನ್ನು ನಡೆಸುತ್ತಾರೋ ಅವರು ಶುದ್ದರಾಗಿರಬೇಕು, ನುಡಿ ನಡೆ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿರಬೇಕು. ಆಡಳಿತದಲ್ಲಿನ ಭ್ರಷ್ಟಾಚಾರ ಮೇಲಿನಿಂದ ಕೆಳಗೆ ಹರಿಯುತ್ತದೆ. ನಾವು ಅಧಿಕಾರ ನಡೆಸುವವರು ಶುದ್ಧವಾಗಿದ್ದಲ್ಲಿ ಪ್ರಾಮಾಣಿಕವಾಗಿದ್ದಲ್ಲಿ ಅಧಿಕಾರಶಾಹಿಯೂ ಅದನ್ನೇ ಅನುಸರಿಸಬೇಕಾಗುವುದು. ಒಂದು ವೇಳೆ ಅಂತಹ ಯಾವುದಾದರೂ ಭ್ರಷ್ಟಾಚಾರದ ದೂರುಗಳು ಬಂದರೆ ಅದನ್ನು ನಾವು ಗಂಭೀರವಾಗಿ ಪರಿಗಣಿಸಿ ತಕ್ಷಣ ವಿಚಾರಣೆ ನಡೆಸಿ ನಿಷ್ಟುರ ಕ್ರಮ ಕೈಗೊಳ್ಳುತ್ತೇವೆ. ಭ್ರಷ್ಟ್ಟಾಚಾರದೊಂದಿಗೆ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ. ಇದು ನಮ್ಮ ರಾಜಕೀಯ ಸಂಸ್ಕೃತಿಯೂ ಹೌದು. ಈ ಸಂಗತಿ ಇಡೀ ದೇಶಕ್ಕೆ ಗೊತ್ತು. ತ್ರಿಪುರಾ ಭ್ರಷ್ಟಾಚಾರ ರಹಿತವಾದ, ಪಾರದರ್ಶಕತೆಯುಳ್ಳ ರಾಜ್ಯ ಎಂದು.

ತ್ರಿಪುರಾದ ಸುತ್ತಲಿನ ರಾಜ್ಯಗಳಲ್ಲಿಯೂ, ಇದರ ಗಡಿಗೆ ಹೊಂದಿಕೊಂಡಿರುವ ದೇಶಗಳಲ್ಲಿಯೂ ಭಯೋತ್ಪಾದನೆ, ಉಗ್ರಗಾಮಿಗಳ ಹಾವಳಿ ಇದೆ. ಇದರ ಪರಿಣಾಮ ತ್ರಿಪುರಾದ ಮೇಲೆ ಹೇಗಾಗಿದೆ?.

ಹೌದು! ಇದೆ. ಇಂದು ಭಯೋತ್ಪಾದನೆ, ಉಗ್ರಗಾಮಿಗಳ ಹಾವಳಿ ಜಾಗತಿಕ ಕಾರಣಗಳಿರುವ ಸಮಸ್ಯೆ ಕೂಡ. ಇದರ ಎಲ್ಲಾ ಆಯಾಮಗಳನ್ನು ಜನತೆಗೆ ವಿವರಿಸಿ ಜಾಗೃತಗೊಳಿಸಿದ್ದೇವೆ. ಆ ಬಗ್ಗೆ ವ್ಯಾಪಕವಾಗಿ ಪ್ರಚಾರಾಂದೋಲನ ನಡೆಸಿದ್ದೇವೆ. ಉಗ್ರಗಾಮಿತ್ವವನ್ನು ಎದುರಿಸಲು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿಯೂ ಕ್ರಮಗಳನ್ನು ಕೈಗೊಂಡಿದ್ದೇವೆ. ಇದರಲ್ಲಿ ಜನಸಮೂಹಗಳನ್ನು ತೊಡಗಿಸಿ ಹಿಮ್ಮೆಟ್ಟಿಸಿದ್ದೇವೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರವೇನಿತ್ತು?
ಕಾಂಗ್ರೆಸ್ ಪಕ್ಷ ‘ಮನಿ, ಮಸಲ್ ಅಂಡ್ ಮೀಡಿಯಾ’ (ಹಣ, ತೋಳ್ಬಲ ಮತ್ತು ಮಾಧ್ಯಮ) ಶಕ್ತಿಯನ್ನು ಎಡರಂಗ ಮತ್ತು ಸಕರ್ಾರದ ವಿರುದ್ದ ಬಳಸಿತು. ಹತ್ತಾರು ಸುಳ್ಳುಗಳ ಪ್ರಚಾರ ಧಾಳಿ ನಡೆಸಿತು. ಆದರೆ ನಾವು ನಿಜ ಸಂಗತಿಗಳನ್ನು ಜನರ ನಡುವೆ ವಿವರಿಸಿ ಬಯಲಿಗೆಳೆದೆವು. ಪ್ರಜಾಸತ್ತಾತ್ಮಕ ಜನ ವಿಭಾಗಗಳನ್ನು ಒಂದಾಗಿಸಿದೆವು. ನಮ್ಮ ಸೈದ್ಯಾಂತಿಕ, ರಾಜಕೀಯ ನಿಲುವುಗಳ ಆಧಾರದಲ್ಲಿ ಪ್ರತ್ಯುತ್ತರ ನೀಡಿದೆವು. ಹೀಗಾಗಿ ಮತದಾರರನ್ನು ಹೆಚ್ಚು ಮರುಳು ಮಾಡಲಾಗಲಿಲ್ಲ.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿ ತ್ರಿಪುರಾ ಅನುಭವ ಅತ್ಯುತ್ತಮವಾಗಿದೆಯೆಂದು ಪ್ರಶಂಸೆ ವ್ಯಕ್ತವಾಗಿದೆ. ಹಾಗೆಯೇ ವಸತಿ ಪ್ರಶ್ನೆಯನ್ನು ಪರಿಹರಿಸಲು ಹೇಗೆ ಕ್ರಮ ವಹಿಸಿದ್ದೀರಿ? ನಮ್ಮಲ್ಲಿ ಇದು ಗಂಭೀರ ಪ್ರಶ್ನೆಯಾಗಿದೆ. ಚಳುವಳಿಯೂ ನಡೆದಿದೆ…

ಉತ್ತರ : ನಮ್ಮಲ್ಲಿ ವಸತಿ ವ್ಯವಸ್ಥೆ ಉತ್ತಮವಿದೆ. ಆದರೂ ಸಮಸ್ಯೆ ಇನ್ನೂ ಇದೆ. ನಮಗೆ ಕೇಂದ್ರದಿಂದ ಹೆಚ್ಚಿನ ನೆರವು ಬೇಕು. ಕೇಂದ್ರ ಸರ್ಕಾರ ಯೋಜನೆಗಳನ್ನು ಸದ್ಬಳಕೆ ಮಾಡಿದ್ದೇವೆ. ಅವರು ಇಲ್ಲಿ ಕೋಟಾ ನಿಗದಿ ಮಾಡಿರುವುದು ಒಂದು ತೊಂದರೆ.

ನಿವೇಶನ ಮತ್ತು ಮನೆ ಕಟ್ಟಿ ಕೊಡಲು ರಾಜ್ಯ ಸರಕಾರ ಏನಾದರೂ ಕ್ರಮ ವಹಿಸಿದೆಯೇ?
ಉತ್ತರ: ಬಿ.ಪಿ.ಎಲ್. ಕುಟುಂಬಗಳಿಗೆ ರಾಜ್ಯ ಸಕರ್ಾರ ಉಚಿತವಾಗಿ ನಿವೇಶನ ನೀಡಿದೆ. ಮನೆ ಕಟ್ಟಲು ಸರಕಾರದ ನೆರವು ಇದೆ. ಇಂದಿರಾ ಆವಾಸ್ ಯೋಜನೆ, ಇತ್ಯಾದಿಗಳನ್ನು ಬಳಸುತ್ತಿದ್ದೇವೆ.

ಪ್ರಶ್ನೆ : ಸರ್ಕಾರದ ಆಯ-ವ್ಯಯಕ್ಕಾಗಿ ಹಣ ಸಂಪನ್ಮೂಲ ಸಂಗ್ರಹ, ನಿರ್ವಹಣೆ ಹೇಗಿದೆ?
ನಾವು ಗ್ರಾಮೀಣ ಕೃಷಿಕರ ಮೇಲೆ ಭೂ ಕಂದಾಯ, ತೆರಿಗೆ ವಿಧಿಸುವುದಿಲ್ಲ ಉಳಿದಂತೆ ತೆರಿಗೆ ಸಂಗ್ರಹ ನಮ್ಮ ಪ್ರಮುಖ ಆದಾಯ. ನಾವು ವೆಚ್ಚಗಳನ್ನು ಕಡಿತಮಾಡುವ ಕ್ರಮಗಳನ್ನು ಆರಂಭದಿಂದಲೂ ಕೈ ಗೊಂಡಿದ್ದೇವೆ. ಬಂದ ಹಣದಲ್ಲಿ ಪ್ರತಿಯೊಂದು ಪೈಸೆಯನ್ನು ಜನರಿಗಾಗಿ ವಿನಿಯೋಗಿಸುತ್ತೇವೆ. ನಾವು ಆದ್ಯತೆಗಳಾಧಾರದಲ್ಲಿ ಜಾಗೃತಿಯಿಂದ, ಗಂಭೀರವಾಗಿ ಖಚರ್ು ಮಾಡುತ್ತೇವೆ. ನಮಗೆ ಹಲವಾರು ಮಿತಿಗಳಿವೆ. ನಾವೀಗ ಆದಾಯದ ಜಾಲವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ.

ಒಂದು ರಾಜಕೀಯ ಪ್ರಶ್ನೆ. ಇಷ್ಟ್ಟು ವರುಷಗಳು ನಿರಂತರವಾಗಿ ರಾಜ್ಯದಲ್ಲಿ ಎಡರಂಗದ ಸರ್ಕಾರವಿರುವಾಗ ಈಗಲೂ ಕಾಂಗ್ರೆಸ್ ರಾಜ್ಯದಲ್ಲಿ ಶೇ. 47% ರಷ್ಟು ಜನ ಬೆಂಬಲವನ್ನು ಕಾಯ್ದುಕೊಂಡಿದೆ. ಈ ಸ್ಥಿತಿಗೆ ಕಾರಣವಾದ ಅಂಶಗಳೇನು? ನೆಲೆ ವಿಸ್ತರಣೆಗೆ ಕ್ರಮಗಳೇನು?

ಇದು ಅಸಹಜವಾದದ್ದೇನಲ್ಲ. ಕಾಂಗ್ರೆಸ್ಗೆ ದೇಶದಲ್ಲಿ ಇರುವಂತೆ ಇಲ್ಲೂ ಬೆಂಬಲವಿದೆ. ಕೇಂದ್ರದಲ್ಲಿ ಅದು ಅಧಿಕಾರದಲ್ಲಿದೆ, ಸಾಕಷ್ಟು ಬಲವಿದೆ, ಅಪಾರ ಸಂಪನ್ಮೂಲಗಳಿವೆ. ಹಣ, ಮಾಧ್ಯಮಗಳ ಮೇಲೆ ಅದರ ಹಿಡಿತವಿದೆ. ಮುಖ್ಯವಾಗಿ ವರ್ಗ ಸಮಾಜದಲ್ಲಿ ಇದು ಸಹಜವೂ ಹೌದು. ಆದರೆ ನಾವು ಈ ಸವಾಲುಗಳ ವಿರುದ್ದ ಹೋರಾಡುತ್ತಾ ಅವರನ್ನು ಹಂತ ಹಂತವಾಗಿ ಸೋಲಿಸುತ್ತ ನಮ್ಮ ಬೆಂಬಲದ ನೆಲೆಯನ್ನು ವಿಸ್ತರಿಸುತ್ತಾ ಹೋಗಬೇಕು. ಈಗ ಅದರ ವಿಸ್ತರಣೆಯಾಗುತ್ತಿದೆ. ಮುನ್ನಡೆಯಲು ನಾವು ಇನ್ನಷ್ಟು ಕ್ರಮ ವಹಿಸುತ್ತೇವೆ.

ಈ ಕಾಲಘಟ್ಟದಲ್ಲಿ ಯುವಜನರ ಸಂಖ್ಯೆ ಹೆಚ್ಚುತ್ತಿದೆ. ಮಧ್ಯಮ ವರ್ಗದ ಬೆಳವಣಿಗೆಯೂ ಆಗುತ್ತಿದೆ. ಅಂದರೆ ಅವರ ನಿರೀಕ್ಷೆಗಳೂ ಬೆಳೆಯುತ್ತಿವೆ. ತ್ರಿಪುರಾದ ಸನ್ನಿವೇಶದಲ್ಲಿಯೂ ಈ ಹೊಸ ಬೆಳವಣಿಗೆಗಳಾಗುತ್ತಿವೆ. ಈ ಹೊಸ ಸನ್ನಿವೇಶವನ್ನು ಹೇಗೆ ಎದುರಿಸುತ್ತೀರಿ? ಇದು ಸವಾಲು ಅಲ್ಲವೇ?

ಚುನಾವಣೆಯ ಸಂದರ್ಭದಲ್ಲಿ ಯುವಜನರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ನಾವು ಯುವಜನರು ಹಾಗೂ ಮಧ್ಯಮವರ್ಗದ ಜನರ ನಡುವೆ ನಿರಂತರ ಕೆಲಸ ಮಾಡುತ್ತಿದ್ದೇವೆ. ಅವರ ಪ್ರಜಾಸತ್ತಾತ್ಮಕ ಸಂಘಟನೆಗಳ ಮೂಲಕ ಅವರನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ. ಯಶಸ್ಸನ್ನೂ ಕಂಡಿದ್ದೇವೆ. ಆದರೆ ಇದು ಅತ್ಯಂತ ಕಠಿಣವಾದ ಕೆಲಸ. ನಾವು ಸೂಕ್ತ ಗಮನ, ಎಚ್ಚರ ವಹಿಸದಿದ್ದಲ್ಲಿ ಹೆಚ್ಚಿನ ಸಮಸ್ಯೆ ಎದುರಾಗಬಹುದು. ಆದ್ದರಿಂದಲೇ ತಾಳ್ಮೆ, ಶ್ರದ್ದೆಯಿಂದ ಈ ವಿಭಾಗಗಳ ನಡುವೆ ಕೆಲಸ ಮಾಡುತ್ತಿದ್ದೇವೆ.

ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಿತಿಯೇನು ಮತ್ತು ಉದ್ಯೋಗದ ಸ್ಥಿತಿ ಹೇಗಿದೆ?
ಜನರ ಜೀವನಮಟ್ಟವನ್ನು ಮತ್ತಷ್ಟು ಸುಧಾರಿಸುವುದು ನಮ್ಮ ಆದ್ಯತೆ. ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿತವಾದ ಎಲ್ಲಾ ಅಂಶಗಳೂ ನಮಗೆ ಅಷ್ಟೆ ಸಮಾನವಾಗಿ ಮುಖ್ಯವಾಗಿವೆ. ಇದರಲ್ಲಿ ನಾವು ಉದ್ಯೋಗಗಳ ಹೆಚ್ಚಳಕ್ಕೆ ಹೆಚ್ಚಿನ ಒತ್ತನ್ನು ಕೊಟ್ಟಿದ್ದೇವೆ. ಎಲ್ಲಾ ಪ್ರದೇಶಗಳ ನಡುವಿನ ಸಂಪರ್ಕ ಸುಲಲಿತವಾಗಲು ರಸ್ತೆಗಳ ನಿಮರ್ಾಣ, ವಿದ್ಯುತ್ ಉತ್ಪಾದನೆ ಮತ್ತು ಅದರ ಸೂಕ್ತ ಬಳಕೆಗೆ ಗಮನ ನೀಡಿದ್ದೇವೆ. ಇನ್ನಷ್ಟು ಅದನ್ನು ಹೆಚ್ಚಿಸುವೆವು. ಈ ಹಿನ್ನೆಲೆಯಲ್ಲಿಯೂ ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ನಿರೀಕ್ಷಿಸುತ್ತೇವೆ. ಕೈಗಾರಿಕೆ ಎನ್ನುವಾಗ ಬೃಹತ್ ಉದ್ಯಮಗಳೇ ಎಂದರ್ಥವಲ್ಲ. ಸಣ್ಣ ಪುಟ್ಟ ಕೈಗಾರಿಕೆ. ಗ್ರಾಮೀಣ, ಗುಡಿ ಕೈಗಾರಿಕೆಗಳಂತಹವಕ್ಕೂ ಗಮನ ಹರಿಸುತ್ತಿದ್ದೇವೆ. ಅಲ್ಲದೇ ನಮ್ಮಲ್ಲಿ ಪೆಟ್ರೋಲಿಯಂ ಗ್ಯಾಸ್ ಸಂಪನ್ಮೂಲವಿದೆ. ಅದರ ಆಧಾರಿತವಾಗಿ ವಿದ್ಯುತ್ ಉತ್ಪಾದನಾ ಸ್ಥಾವರಗಳ ನಿಮರ್ಾಣ ಕಾರ್ಯ ನಡೆದಿದೆ. ಇದನ್ನು ಹೊಂದಿಕೊಂಡು ಹಲವಾರು ಉದ್ದಿಮೆಗಳೂ ಬೆಳೆಯುತ್ತವೆ. ರಬ್ಬರ್ ಉತ್ಪಾದನೆ ಉದ್ದಿಮೆ ಇನ್ನೊಂದು ಸಾಧ್ಯತೆಯಿರುವ ಕ್ಷೇತ್ರ. ಅಲ್ಲದೇ ಹಣ್ಣು, ಕೃಷಿ ತೋಟಗಾರಿಕಾ ಸಂಸ್ಕರಣೆಗಳು ಸಹ. ಇವಲ್ಲದೇ ಮುಖ್ಯವಾಗಿ ಪ್ರವಾಸೋದ್ಯಮವು ಹೆಚ್ಚಿನ ಸಾಧ್ಯತೆಗಳನ್ನು ಹೊಂದಿದೆ.

ಶಿಕ್ಷಣದ ಸ್ಥಿತಿಯೇನು?
ಕೆಳಹಂತದಿಂದ ಕಾಲೇಜ್ ಮಟ್ಟದವರೆಗೂ ಶಿಕ್ಷಣ ಉಚಿತವಿದೆ. ಅದನ್ನು ಪೂರ್ಣವಾಗಿ ಸಾರ್ವತ್ರಿಕಗೊಳಿಸುವ ಪ್ರಯತ್ನವಿದೆ. ಗುರಿ ತಲುಪಲು ತೀರಾ ಹತ್ತಿರದಲ್ಲಿದ್ದೇವೆ.

ಭಾಷಾ ನೀತಿಯೇನು?
ಎಲ್ಲಾ ಭಾಷೆಗಳಿಗೂ ನಾವು ಸಮಾನ ಸ್ಥಾನ, ಅವಕಾಶ ನೀಡಿದ್ದೇವೆ. ಮುಖ್ಯವಾಗಿ ಬಂಗಾಳಿ ಹಾಗೂ ಕೋಕ್ ಬರೋಕ್ ಭಾಷೆಗಳನ್ನು ಹೆಚ್ಚಿನ ಜನ ಮಾತನಾಡುತ್ತಾರೆ. ಇದಲ್ಲದೇ ರಾಜ್ಯದಲ್ಲಿರುವ ಇತರೆ ಭಾಷೆಗಳನ್ನಾಡುವ ಹಲವು ಸಣ್ಣ ಸಣ್ಣ ಜನಾಂಗಗಳಿವೆ. ಅವೆಲ್ಲವನ್ನು ಸಂರಕ್ಷಿಸಿ, ಬೆಳೆಸಲು ಒಂದು ಪತ್ಯೇಕವಾದ ನಿದರ್ೇಶನಾಲಯವನ್ನು ರಚಿಸಲಾಗಿದೆ.

ಬುಡಕಟ್ಟು ಜನರ ಆಭಿವೃದ್ದಿಯತ್ತ್ತ ಎಡರಂಗದ ಗಮನವೇನು?
ಅತೀ ಹೆಚ್ಚಿನ ಗಮನ ನೀಡುತ್ತಿದ್ದೇವೆ. ಬುಡಕಟ್ಟು ಜನ ನಮ್ಮ ಬೆಂಬಲದ ಬೆನ್ನೆಲುಬು. ಈ ವಿಭಾಗಗಳ ಶಿಕ್ಷಣ, ಸಾಮಾಜಿಕ, ಆರ್ಥಿಕ ಸ್ಥಾನಮಾನದ ಉನ್ನತೀಕರಣಕ್ಕೆ ನಿರಂತರ ಶ್ರಮಿಸುತ್ತಿದ್ದೇವೆ. ಆದ್ದರಿಂದಲೇ ಅವರೆಲ್ಲಾ ಸದಾ ನಮ್ಮೊಂದಿಗೆ ಇದ್ದಾರೆ.

ಹೀಗೆ ಹೇಳುತ್ತಲೇ ‘ಆಗಬಹುದೇ’ ಎಂದು ನಿರ್ಗಮನದ ಸೂಚನೆ ನೀಡಿದರು. ಅವರು ಮಾಚರ್್ 6 ರ ಸಂಪುಟ ಪ್ರಮಾಣ ವಚನ, 7 ರ ವಿಜಯೋತ್ಸವದ ಸಿದ್ದತೆಯಲ್ಲಿದ್ದರು. ಅವರಿಗೆ ಧನ್ಯವಾದ ಹೇಳಿ ಬೀಳ್ಕೊಂಡೆ.
(ಸಂದರ್ಶನ: ಮಾಚರ್್ 4- 2013 ಅಗರ್ತಲಾ)

ಬೆಲೆ ಕುಸಿತದ ಆತಂಕದಲ್ಲಿ ರೇಷ್ಮೆ ಬೆಳೆಗಾರರು

ನಿರೂಪಣೆ : ಮಹೇಶ್ ಊಗಿನಹಳ್ಳಿ.

ರೇಷ್ಮೆಗೆ ಈಗ ಏನೋ ಬಹಳಷ್ಟು ಬೆಲೆ ದೊರೆಯುತ್ತಿರುವ ಸಂದರ್ಭವನ್ನು ಬಳಸಿ ರೇಷ್ಮೆ ಉದ್ದಿಮೆಯನ್ನು ವಿಸ್ತರಿಸಿ ಬಲಪಡಿಸಬೇಕಾದ ಸರ್ಕಾರ ವಿದೇಶದಿಂದ ಸುಂಕರಹಿತ ರೇಷ್ಮೆ ಆಮದು ನಿರ್ಧಿರ ಕೈಗೊಂಡು ರೈತ ಕೃಷಿಕರನ್ನು ಆತಂಕಕ್ಕೆ ತಳ್ಳಿದೆ.

ಭಾರತದ ಕೈಗಾರಿಕೆ ಮತ್ತು ಕೃಷಿ ಅಭಿವೃದ್ಧಿಯಲ್ಲಿ ರೇಷ್ಮೆ ಉದ್ದಿಮೆ ತನ್ನದೇ ಆದ ಪ್ರಭಾವವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ನಮ್ಮಲ್ಲಿ ಪೂರೈಕೆಯ ಕೊರತೆ ಉಂಟಾಗಿವೆ. 2009 ಮತ್ತು 10ರ ನಮ್ಮ ದೇಶದ ಒಟ್ಟು ಕಚ್ಛಾ ರೇಷ್ಮೆಯ ಬೇಡಿಕೆ ಪ್ರಮಾಣ 25,343 ಮೆಟ್ರಿಕ್ ಟನ್ ಆದರೆ ದೇಶದ ಒಟ್ಟು ಉತ್ಪಾದನೆಯ ಸ್ಥಿತಿ 17,798 ಮೆಟ್ರಿಕ್ ಟನ್ ಮಾತ್ರ. ಕೊರತೆಯ ಪ್ರಮಾಣ 7,545 ಮೆಟ್ರಿ ಟನ್, ಇದೇ ಪ್ರಕಾರದಲ್ಲಿ ನಮ್ಮ ದೇಶದ ಫ್ಯಾಬ್ರಿಕ್ (ಬಟ್ಟೆ) ಉತ್ಪಾದನೆಯ ಬೇಡಿಕೆ ಪ್ರಮಾಣ 8,295 ಚದರ ಲಕ್ಷ ಮೀಟರ್ ಇದೆ. ನಮ್ಮಲ್ಲಿ ಉತ್ಪಾದಿಸಲ್ಪಡುತ್ತಿರುವ ಪ್ರಮಾಣ 5,019 ಚದರ ಲಕ್ಷ ಮೀಟರ್ ಮಾತ್ರ. ಇನ್ನೂ 3,276 ಚದರ ಲಕ್ಷ ಮೀಟರ್ ಕೊರತೆಯನ್ನು ಬೇರೆ ಬೇರೆ ದೇಶಗಳ ಮೂಲಕ ಆಮದು ಮಾಡಿಕೊಳ್ಳಬೇಕಾಗಿದೆ ಎಂಬುದು ಅಷ್ಟೇ ಸತ್ಯಾಂಶವಾಗಿದೆ.

ರೇಷ್ಮೆ ಬೆಳೆಗಾರರು, ಮೊಟ್ಟೆ ಉತ್ಪಾದಕರು, ರೀಲರ್ಸ ಇತ್ಯಾದಿ ಸಂಬಂಧಿಸಿದ ಉದ್ದಿಮೆದಾರರು ಬೀದಿಪಾಲು ನಮ್ಮದು ಗ್ರಾಮಗಳ ದೇಶ. ಈ ನಮ್ಮ 56, 918 ಗ್ರಾಮಗಳಲ್ಲಿ 81,7605 ರಷ್ಟು ರೈತ ಕುಟುಂಬಗಳು ನೇರವಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ ಎಂಬುದಾಗಿ ಸಕರ್ಾರ ಹೇಳುತ್ತಿದೆ. ಆದರೆ ಇದು ವಾಸ್ತವ ಅಲ್ಲ. ನಿಜವಾದ ಸತ್ಯ ಏನೆಂದರೆ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಬೆಳೆಯುತ್ತಿದ್ದಾರೆ. ಇದಕ್ಕೆ ಸರಿಯಾದ ರೀತಿಯ ಪ್ರೋತ್ಸಾಹ ದೊರಕುತ್ತಿಲ್ಲ.

ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.50 ರಷ್ಟು ಕರ್ನಾಟಕ ರಾಜ್ಯದ ಪಾಲು ಇದೆ. ಆದುದರಿಂದ ಕರ್ನಾಟಕ ರಾಜ್ಯ ಸರ್ಕಾರವನ್ನು ಎಚ್ಚರಿಸಬೇಕು. ಜೊತೆಗೆ ಕರ್ನಾಟಕದ ರೇಷ್ಮೆ ಬೆಳೆಗಾರರನ್ನು ಅಧಿಕ ಸಂಖ್ಯೆಯಲ್ಲಿ ಸಂಘಟಿಸಿ, ಸರ್ಕಾರದ ರೈತ ವಿರೋಧಿ ನೀತಿಯನ್ನು ತಿಳಿಸಬೇಕಾಗಿದೆ. ಚೀನಾದಿಂದ ಆಮದು ಆಗಲಿರುವ 7,545 ಮೆಟ್ರಿಕ್ ಟನ್ನಲ್ಲಿ ಸುಮಾರು ಶೇ.30ರಷ್ಟು ತೆರಿಗೆ ರಹಿತವಾಗಿ ಆಮದು ಆಗುತ್ತಿದೆ. ಇದಲ್ಲದೆ ಕೇಂದ್ರ ಸರ್ಕಾರ ಆಗಸ್ಟ್ 10, 2010 ರಂದು ನೊಟಿಫಿಕೇಶನ್ ಹೊರಡಿಸಿ ಸುಂಕರಹಿತವಾಗಿ ಈ ವರ್ಷಕ್ಕೆ 2500 ಮೆಟ್ರಿಕ್ ಟನ್ ರೇಷ್ಮೆಯನ್ನು ಚೀನಾದಿಂದ ಆಮದು ಮಾಡಿಕೊಳ್ಳಲು ಹೊರಟಿದೆ. ಇದರಿಂದ ರೇಷ್ಮೆ ಉದ್ದಿಮೆ ಕ್ಷೇತ್ರದಲ್ಲಿ ಪ್ರತಿಕೂಲ ಪರಿಸ್ಥಿತಿ ಉಂಟಾಗುತ್ತಿದೆ. ಏಕೆಂದರೆ ಚೀನಾ ಮತ್ತಿತರೆ ದೇಶಗಳಿಂದ ಆಮದು ಆಗುತ್ತಿರುವ 1 ಕೆ.ಜಿ. ರೇಷ್ಮೆಗೆ 2090 ರೂ. ಇದೆ. ಇದಕ್ಕೆ ಶೇ.31 ತೆರಿಗೆ ವಿಧಿಸಿದರೆ 641 ರೂ.ಗಳು ಪ್ರತಿ ಕೆ.ಜಿ.ಗೆ ಹೆಚ್ಚಾಗುತ್ತದೆ. ಆಗ ಒಂದು ಕೆ.ಜಿ.ಯ ರೇಷ್ಮೆ ದರ 2,731 ರೂ.ಗಳಾಗುತ್ತದೆ. ಇದೇ ಪ್ರಮಾಣದಲ್ಲಿ ನಮ್ಮ ದೇಶದ ಸ್ಥಳೀಯ ಮಾರುಕಟ್ಟೆಯಲ್ಲಿಯೂ ಇಷ್ಟು ಪ್ರಮಾಣದ ಬೆಲೆ ಇದೆ. ಆದರೆ ಚೀನಾದ ಸುಂಕರಹಿತ ರೇಷ್ಮೆ ಕೆ.ಜಿ.ಗೆ 2,090 ರೂಪಾಯಿಗೆ ಮಾರುಕಟ್ಟೆಯಲ್ಲಿ ದೊರಕುವುದಾದರೆ ನಮ್ಮ ದೇಶದ ರೇಷ್ಮೆಗಿಂತ 700 ರೂ. ಕಡಿಮೆ ಆಗುತ್ತದೆ. ಹಾಗಾಗಿ ದೊಡ್ಡ ಪ್ರಮಾಣದ ಬಂಡವಾಳ ಶಾಹಿಗಳು, ಮಾರಾಟಗಾರರು, ನಮ್ಮ ದೇಶದ ರೇಷ್ಮೆಯನ್ನು ಕೊಳ್ಳದೆ ಚೀನಾದ ರೇಷ್ಮೆಗೆ ಮಾರುಹೋಗುತ್ತಾರೆ. ಇದರಿಂದಾಗಿ ದೇಶೀಯ ರೇಷ್ಮೆಗೆ ಬೇಡಿಕೆ ಇಲ್ಲದೆ ರೇಷ್ಮೆ ಬೆಳೆಗಾರರು, ಮೊಟ್ಟೆ ಉತ್ಪಾದಕರು, ಚಾಕಿ ಕೇಂದ್ರದ ಮಾಲೀಕರು, ರಿಲರ್ಸ್ ಗಳು, ಸಣ್ಣ ಮತ್ತು ಅತೀ ಸಣ್ಣ ನೇಕಾರರು ಬಹಳ ಆತಂಕಕ್ಕೆ ಒಳಗಾಗಬೇಕಾಗುತ್ತದೆ. ಬೀದಿಪಾಲಾಗುತ್ತಾರೆ. ಇವತ್ತು ರೈತನಿಗೆ ಒಂದು ವರ್ಷದಿಂದ 200 ರಿಂದ 250 ರೂ.ಗಳು 1 ಕೆ.ಜಿ. ಗೂಡಿಗೆ ಬೆಲೆ ಸಿಗುತ್ತಿದೆ. ಇವುಗಳಿಂದ ರೈತ ತಾನು ಸುಧಾರಿಸಿಕೊಂಡು ತನ್ನ ರೇಷ್ಮೆ ಬೆಳೆಯನ್ನು ವಿಸ್ತರಣದ ಆಲೋಚನೆಯಲ್ಲಿ ತೊಡಗಿದ್ದರೆ ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಈ ಅವಕಾಶವನ್ನು ಬಳಸಿಕೊಂಡು ರಾಷ್ಟ್ರದ ಒಟ್ಟು ಬೇಡಿಕೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಮತ್ತು ಉತ್ತಮ ಪೂರೈಕೆಯನ್ನು ಮಾಡಬಹುದಾಗಿದೆ. ಆದರೆ ಇದರತ್ತ ಯೋಚಿಸುತ್ತಿಲ್ಲ.

ಉದ್ಯೋಗ ಸೃಷ್ಟಿ ಮತ್ತು ರೈತಪರ ಕಾಳಜಿ ಇಲ್ಲದ ಸರ್ಕಾರ

ರೇಷ್ಮೆ, ಕೃಷಿ ಮತ್ತು ಉದ್ಯಮವನ್ನು ಯಾವ ರೀತಿ ಅಭಿವೃದ್ಧಿಪಡಿಸಿದರೆ ದೇಶದ ಉದ್ಯೋಗ ಸೃಷ್ಟಿ ಆಗುತ್ತದೆ. ಇದರಿಂದ ಆರ್ಥಿಕತೆ ವೃಧ್ಧಿಸುವುದಲ್ಲದೆ, ಸಂಪೂರ್ಣವಾಗಿ ಆಮದನ್ನು ನಿಲ್ಲಿಸಿ ರಫ್ತು ಮಾಡಲು ಮುಂದಾಗಬಹುದು. ಇದರಿಂದ ನೇಕಾರರ ಮತ್ತು ಜವಳಿ ವ್ಯಾಪಾರಿಗಳ ಸ್ಥಿತಿ ಸುಧಾರಿಸಲ್ಪಡುತ್ತದೆ. ಇದೊಂದು ನಿಜವಾಗಿಯೂ ಸುವರ್ಣಾವಕಾಶ ಎಂಬುದಾಗಿ ಕರೆಯಬಹುದು. ಆದರೆ ಕೇಂದ್ರ ಸರ್ಕಾರ, ಇವರ ವಿರುದ್ಧ ಸುಂಕರಹಿತ ಆಮದು ಮಾಡಲು ಹೊರಟಿರುವುದು ನಾಚಿಕೆ ವಿಷಯ.

ಕೇಂದ್ರ ಸರ್ಕಾರದ ಕುಂಟುನೆಪಗಳು

ಚೀನಾದ ರೇಷ್ಮೆಗೂ ಮತ್ತು ದೇಶೀಯ ರೇಷ್ಮೆಗೂ ತುಂಬಾ ವ್ಯತ್ಯಾಸವೇನೂ ಇಲ್ಲ. ಆದರೆ ಸರ್ಕಾರ ಕೆಲವು ಕುಂಟುನೆಪಗಳನ್ನು ನೀಡುತ್ತಿದೆ. ಮೊದಲನೆಯದಾಗಿ ಗುಣಮಟ್ಟ, 2ನೆಯದು ದೇಶದ ರೇಷ್ಮೆ ಉತ್ಪಾದನೆಯ ಕೊರತೆ, 3ನೇಯದಾಗಿ ರೇಷ್ಮೆ ಗೂಡಿನ ದರ ಹೆಚ್ಚಾಗಿರುವುದರಿಂದ ನೇಕಾರರಿಗೆ ರೇಷ್ಮೆ (ಕಚ್ಛಾ) ದರ ಹೆಚ್ಚಾಗುತ್ತದೆ. ಇದರಿಂದ ನಷ್ಟದಲ್ಲಿ ಇರುವ ನೇಕಾರರಿಗೆ ಆಮದು ರೇಷ್ಮೆಯಿಂದ ಸಹಾಯವಾಗುತ್ತದೆ ಎಂಬುದಾಗಿ ಕತೆ ಕಟ್ಟಿ ಸುಳ್ಳು ಸುಳ್ಳಾಗಿ ಕುಂಟು ನೆಪ ಹೇಳುತ್ತಿದೆ.

ಬಂಡವಾಳಶಾಹಿ ಮತ್ತು ಕೋಟ್ಯಾಧಿಪತಿಗಳಿಗೆ ಮಣೆ :”

ಈ ನೀತಿ ಜಾರಿಯಿಂದಾಗಿ, ಸೂರತ್, ವಾರಣಾಸಿ, ತಮಿಳುನಾಡಿನಲ್ಲಿರುವ ಕೋಟ್ಯಾಧಿ ಪತಿಗಳು ಮತ್ತು ರಾಜ್ಯದ ಕಾಂಗ್ರೆಸ್ ಮುಖಂಡರಾದ ಟಿ.ವಿ.ಮಾರುತಿ ಇಂತಹವರಿಗೆ ಇದರಿಂದ ಉಪಯೋಗ ಇದೆ. ಶೇ.98 ಸಣ್ಣ ಪುಟ್ಟ ನೇಕಾರರಿಗೆ ಮತ್ತು ರೈತರಿಗೆ ಅನ್ಯಾಯವಾಗುತ್ತದೆ. ಇಂತಹ ದುರುದ್ದೇಶದಿಂದಾಗಿ ದೊಡ್ಡ ದೊಡ್ಡ ಬಂಡವಾಳಶಾಹಿ ಕೋಟ್ಯಾಧಿಪತಿಗಳು ಕೆಲವು ಕಾಂಗ್ರೆಸ್ ಮುಖಂಡರುಗಳು ದಯಾನಿಧಿ ಮಾರನ್ ಮೇಲೆ ಒತ್ತಡ ತಂದು ಲಾಬಿ ಮಾಡುತಿದ್ದಾರೆ. ಬಿಜೆಪಿಯ ರಾಷ್ಟ್ರ ನಾಯಕರಾದ ಅನಂತಕುಮಾರ್, ಕಟ್ಟಾ ಸುಬ್ರಮಣ್ಯ ನಾಯ್ಡು ಸಹ ನವದೆಹಲಿಗೆ ತೆರಳಿ, ಸುಂಕರಹಿತ ರೇಷ್ಮೆ ಆಮದನ್ನು ಮಾಡಿಸಲು ತುಂಬಾ ಶ್ರಮ ಪಟ್ಟಿದ್ದರೆಂದು ವರದಿಗಳಿವೆ. ಕೋಟ್ಯಾಧಿಪತಿಗಳ ಸೇವೆಯಲ್ಲಿ ಕಾಂಗ್ರೆಸ್ ಬಿಜೆಪಿ ಒಂದಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ ಅಲ್ಲವೇ?! ಸರ್ಕಾರವುಇದಕ್ಕೆ ತಾಳಹಾಕಿ ಕುಣಿಯಲು ಹೊರಟಿದೆ.

ಹೋರಾಟದ ಸ್ವರೂಪ :

ಲಕ್ಷಾಂತರ ರೈತರು, ನೇಕಾರರು, ಚಾಕಿ ಸಾಕಾಣಿಗಾರರು, ರೀಲರ್ಸ್ ಗಳ ಹಿತ ಕಾಯಲು ಅಖಿಲ ಭಾರತ ಮಟ್ಟದ ಹೋರಾಟವನ್ನು ನಡೆಸಬೇಕಾಗಿದೆ. ಈ ಹೋರಾಟ ಮಾಡಲು ಸೆಪ್ಟೆಂಬರ್ 9, 10 ರಂದು ಬೆಂಗಳೂರಿನಲ್ಲಿ ಅಖಿಲ ಭಾರತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಎಐಕೆಎಸ್ ಕೇಂದ್ರ ಸಮಿತಿ ಪರವಾಗಿ ಜಂಟಿ ಕಾರ್ಯದರ್ಶಿ ಕಾಂ.ವಿಜುಕೃಷ್ಣ ಆಂಧ್ರಪ್ರದೇಶದ ರೈತಸಂಘದ ಮತ್ತು ರೇಷ್ಮೆ ಬೆಳೆಗಾರ ಸಂಘದ ಅಧ್ಯಕ್ಷರಾದ ಟಿ.ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿಗಳು ಹಾಗು ತಮಿಳುನಾಡು ರೈತಸಂಘದ ರಾಜ್ಯ ಮುಖಂಡರಾದ ಎಸ್. ದಯಾನಿಧಿ ಮತ್ತು ಪಶ್ಚಿಮ ಬಂಗಾಳ, ಕೇರಳ, ರಾಜ್ಯಗಳ ಮುಖಂಡರುಗಳು ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು, ಮಂಡ್ಯ ಇತ್ಯಾದಿ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೇಷ್ಮೆ ಬೆಳೆಗಾರರು ಮೊಟ್ಟೆ ಉತ್ಪಾದಕರು, ಚಾಕಿ ಸಾಕಾಣಿಕೆದಾರರು, ರೀಲರ್ಸ್ ಗಳು ಭಾಗವಹಿಸಿ ಕೇಂದ್ರ ಸರ್ಕಾರದ ಈ ಧೋರಣೆ ವಿರುದ್ಧ ಅಖಿಲ ಭಾರತ ಮಟ್ಟದ ಹೋರಾಟವನ್ನು ನಡೆಸಲು ತೀರ್ಮಾನಿಸಲಾಗಿದೆ.

ಹೋರಾಟದ ವಿವಿಧ ಹಂತಗಳು

1.ರೇಷ್ಮೆ ಬೆಳೆಯೋ ರಾಜ್ಯದಲ್ಲಿ ಆಯಾಯ ರಾಜ್ಯಗಳ ಮುಖ್ಯಮಂತ್ರಿ, ರಾಜ್ಯದ ರೇಷ್ಮೆ ಮಂತ್ರಿಗಳಿಗೆ ರೇಷ್ಮೆ ಬೆಳೆಯುವ ಪ್ರದೇಶದಿಂದ ಆಯ್ಕೆ ಆಗಿರುವ ಎಂ.ಪಿ.ಗಳಿಗೆ ಮನವಿ ಸಲ್ಲಿಸುವುದು.

2.ಸೆಪ್ಟೆಂಬರ್ 30 ರೊಳಗೆ ಕೇಂದ್ರೀಯ ರೇಷ್ಮೆ ಮಂಡಳಿ (ಸಿಎಸ್ಬಿ)ಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳಿಗೆ ಮನವಿ ನೀಡುವುದು.

3.ಅಕ್ಟೋಬರ್ ಮೊದಲನೆ ವಾರ ಪ್ರಧಾನ ಮಂತ್ರಿಗಳು ಮತ್ತಿತರ ಕೇಂದ್ರ ಸಚಿವರಿಗೆ ಮನವಿ.

4.ಅಕ್ಟೋಬರ್ ಕೊನೆ ವಾರದಲ್ಲಿ ಕೇಂದ್ರ ರೇಷ್ಮೆ ಮಂಡಳಿ (ಸಿಎಸ್ಬಿ) ಬೆಂಗಳೂರು ಕಛೇರಿ ಎದುರು ಅಖಿಲ ಭಾರತ ರ್ಯಾಲಿ ಮತ್ತು ಪ್ರತಿಭಟನೆ ಮಾಡುವುದು.

5.ಮೇಲಿನ ಹೋರಾಟಕ್ಕೆ ಪೂರಕವಾಗಿ ರೇಷ್ಮೆ ಬೆಳೆಯುವ ರಾಜ್ಯದಲ್ಲಿ ರೇಷ್ಮೆ ಬೆಳೆಗಾರರನ್ನು ಉದ್ದಿಮೆದಾರರನ್ನು, ಜಿಲ್ಲಾ ಮತ್ತು ರಾಜ್ಯ ಸಮಾವೇಶಗಳನ್ನು ಮಾಡಿ, ಹೋರಾಟ ಸಮಿತಿಗಳನ್ನು ರಚಿಸುವುದು.

ಈ ಮೇಲ್ಕಂಡ ಹೋರಾಟದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದಿಕ್ಕಾರಗಳನ್ನು ಹಾಕಿ ಒಟ್ಟು ರಾಷ್ಟ್ರದ ರೇಷ್ಮೆ ಬೆಳೆಗಾರ ಮತ್ತು ಉದ್ದಿಮೆದಾರ, ನೇಕಾರರ ಹಿತಕಾಯುವಂತೆ ಎಚ್ಚರಿಸಲಾಗುತ್ತದೆ.

ಭಾರತದಲ್ಲಿ ರಾಜ್ಯವಾರು (ಹಿಪ್ಪುನೇರಳೆ) ರೇಷ್ಮೆ ಉತ್ಪಾದನೆ

ಮೆಟ್ರಿಕ್ ಟನ್ಗಳಲ್ಲಿ

ಕ್ರ.ಸಂ. 200909 200910 ಶೇ.

1.ಆಂಧ್ರಪ್ರದೇಶ 4492 5119 31.37 

2.ಆಸ್ಸಾಂ 14 16

3.ಅರುನಾಚಲ ಪ್ರದೇಶ 4 3

4.ಬಿಹಾರ 9 16

5.ಛತ್ತೀಸ್ಗರ್ 5 7

6.ಹಿಮಾಚಲಪ್ರದೇಶ 22 24

7.ಜಮ್ಮು ಮತ್ತು ಕಾಶ್ಮೀರ 102 102

8.ಜಾರ್ಖಂಡ್ 1 2

9.ಕರ್ನಾಟಕ 7238 7360 45.11

10.ಕೇರಳ 20 22

11.ಮಧ್ಯಪ್ರದೇಶ 96 115

12.ಮಹಾರಾಷ್ಟ್ರ 200 213

13.ಮಣಿಪುರ 96 101

14.ಮಿಜೋರಾಂ 9 11

15.ಮೇಘಾಲಯ 2 3

16.ನಾಗಾಲ್ಯಾಂಡ್ 2 3

17.ಓರಿಸ್ಸಾ 4 8

18.ಪಂಜಾಬ್ 4 4

19.ರಾಜಸ್ಥಾನ 2

20.ಸಿಕ್ಕಿಂ 1 2

21.ತಮಿಳುನಾಡು 1411 1233 7.55

22.ತ್ರಿಪುರಾ 8 12

23. ಉತ್ತರಖಾಂಡ 17 14

24.ಉತ್ತರಪ್ರದೇಶ 42 59

25.ಪಶ್ಚಿಮ ಬಂಗಾಳ 1809 1865 11.43

ಒಟ್ಟು 15610 16315

0