ಜಿ.ಎನ್. ನಾಗರಾಜ್

ಮಾರ್ಕ್ವೆಜ್ರವರ ನಿಧನ ವಿಶ್ವ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರು ಬರೆದ ಭಾಷೆ ಸ್ಪಾನಿಷ್ ಸಾಹಿತ್ಯದಲ್ಲಂತೂ ಅವರಿಗೆ ಸಮನಾರಿಲ್ಲವೆಂದೇ ಹೆಗ್ಗಳಿಕೆ. ಸ್ಪಾನಿಷ್ ಭಾಷೆಯಲ್ಲಿ ಅವರ ಕೃತಿಗಳ ಮುದ್ರಣವನ್ನು  ಬೈಬಲ್ನ ಮುದ್ರಣ ಮಾತ್ರ ಹಿಂದಿಕ್ಕಲು ಸಾಧ್ಯವಾಗಿದೆ.  ಅವರ ಮೇರು ಕೃತಿ `ನೂರು ವರ್ಷಗಳ ಏಕಾಂತ’ ಒಟ್ಟು ಆರು ಕೋಟಿಗಿಂತ ಹೆಚ್ಚು ಮುದ್ರಣಗೊಂಡಿದೆ. ಅವರ ಎಲ್ಲಾ ಕಾದಂಬರಿಗಳು, ಸಣ್ಣಕಥೆಗಳು, ಲೇಖನಗಳು, ಆತ್ಮ ಕಥೆ ಇದೇ ರೀತಿ ಓದಿಸಿಕೊಂಡಿವೆ. ಬ್ರೆಜಿಲ್ನಲ್ಲಿ ಅವರ ಕಾದಂಬರಿಯ ಪ್ರತಿಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ಮೇಲೆ ಧಾಳಿ ಮಾಡಿ ಅಲ್ಲಿದ್ದ ಪ್ರತಿಗಳನ್ನೆಲ್ಲಾ ಕದ್ದೊಯ್ದು ಓದಿದರಂತೆ. ಇಂತಹ ಕೀತರ್ಿ ದಕ್ಕಿದ ಇಪ್ಪತ್ತನೆಯ ಶತಮಾನದ ಬರಹಗಾರ ಇವರೊಬ್ಬರೇ.

makvez

ಇಂತಹ ಅಸಮಾನ್ಯ ಬರಹಗಾರನಿಗೆ ಕನ್ನಡ ಲೋಕ ಸೂಕ್ತವಾಗಿ ನೆನಪಿಸಿಕೊಂಡು ತನ್ನ ಕಾಣಿಕೆಯನ್ನರ್ಪಿಸಿದೆ. ಟೀವಿ ಮಾಧ್ಯಮಗಳು ಅವರ ನಿಧನವನ್ನು ಸುದ್ದಿಯಾಗಿ ಕಡೆಗಣಿಸಿದರೂ ಪತ್ರಿಕೆಗಳು ಉತ್ತಮ ಲೇಖನಗಳನ್ನು ಬರೆಸಿ ಪ್ರಕಟಿಸಿವೆ. ವಿಜಯ ಕನರ್ಾಟಕ ಪತ್ರಿಕೆಯಂತೂ ಮೂರು ನಾಲ್ಕು ದಿನಗಳ ಕಾಲ ಹಲವು ಸಾಹಿತಿ, ವಿಮರ್ಶಕರ ಲೇಖನಗಳನ್ನು ಪ್ರಕಟಿಸಿತು. ಪ್ರಜಾವಾಣಿ ಪತ್ರಿಕೆಯೇ ಮೊದಲು ಅವರ ನಿಧನದ ಸುದ್ದಿಯನ್ನು ಪ್ರಕಟಿಸಿತಾದರೂ ಒಂದು ಒಳ್ಳೆಯ ಲೇಖನದ ಮೂಲಕ ವಿಜಯ ಕನರ್ಾಟಕವನ್ನು ಹಿಂಬಾಲಿಸಿತು.

ಈ ಎಲ್ಲಾ ಬರಹಗಳು ಸಾಹಿತಿಯಾಗಿ ಮಾತ್ರ ಅವರ ಹಿರಿಮೆಯನ್ನು ಗುರುತಿಸಿದವು. ಅವರ ಎಡಪಂಥೀಯ ಚಟುವಟಿಕೆಗಳು, ಚಳುವಳಿಗಳಲ್ಲಿ ಅವರ ಭಾಗವಹಿಸುವಿಕೆ ಕನ್ನಡದ ಪತ್ರಿಕೆಗಳಿಗೆ ಅಪಥ್ಯವಾದವು. ಒಬ್ಬ ವ್ಯಕ್ತಿಯನ್ನು ಅವರ ಎಲ್ಲಾ ಚಿಂತನೆ, ಚಟುವಟಿಕೆಗಳ ಜೊತೆಗೆ ಸಮಗ್ರವಾಗಿ ಗುರುತಿಸಬೇಕೆಂಬುದನ್ನು, ಅವು ಒಂದರೊಡನೊಂದು ಹೆಣೆದುಕೊಂಡ ಅವಿಭಾಜ್ಯ ಅಂಗವೆಂಬುದನ್ನು ಮರೆತವು. ಒಬ್ಬ ಮಹಾಶಯನಂತೂ ಎಂತಹ ಅಸಹ್ಯದ ಹೇಳಿಕೆ ಮಾಡಿದನೆಂದರೆ ಮಾರ್ಕ್ವೆಜ್ರವರು ಸವರ್ಾಧಿಕಾರಿಗಳ ಬಗ್ಗೆ ಬರೆದ ಕಾದಂಬರಿಯನ್ನು ಕ್ಯೂಬಾದ ಸವರ್ಾಧಿಕಾರಿಯಾಗಿದ್ದ ಕ್ಯಾಸ್ಟ್ರೋ ಬಗ್ಗೆ ಎಂದು ಹೇಳಿ ತನ್ನ ಅಜ್ಞಾನವನ್ನು ಪ್ರದಶರ್ಿಸಿದ. ಅವನು ಮಾರ್ಕ್ವೆಜ್ನ ಕೃತಿಗಳಲ್ಲಿ ಉತ್ತಮವಾದದ್ದನ್ನು ಆಯ್ಕೆ ಮಾಡಿ ಸಂಪಾದಿಸಿದ ವಾಚಿಕೆಯೊಂದರ ಸಂಪಾದಕ ಎಂಬುದು ವಿಪರ್ಯಾಸ.

ಎಡಪಂಥೀಯ ಚಳುವಳಿಯಲ್ಲಿ ಮಾರ್ಕ್ವೆಜ್
ಮಾರ್ಕ್ವೆಜ್ರವರ ಬಾಲ್ಯ ಜೀವನದ ಕಳೆದ ಲ್ಯಾಟಿನ್ ಅಮೆರಿಕದ ಕೊಲಂಬಿಯಾ ದೇಶದ ಅರಕಾಟಕ ಎಂಬ ಸಣ್ಣ ಪಟ್ಟಣದ ಪರಿಸರ ಮತ್ತು ಅಲ್ಲಿ ಅವರು ಹುಟ್ಟಿದ ಒಂದೇ ವರ್ಷದಲ್ಲಿ ನಡೆದ ಘಟನೆಗಳೇ ಅವರನ್ನು ತಮ್ಮ ಜೀವನದ ಉದ್ದಕ್ಕೂ ದೃಢ ಎಡಪಂಥೀಯನನ್ನಾಗಿಸಿತು. ಅವರು ಹುಟ್ಟಿದ ಆ ಪ್ರದೇಶವನ್ನು  `ಯುನೈಟೆಡ್ ಫ್ರೂಟ್ ಕಂಪನಿ’ ಎಂಬ ಅಮೇರಿಕದ ಕಂಪನಿ ಆವರಿಸಿಕೊಂಡಿತ್ತು. ಅದು ಅಲ್ಲಿ ರೈತರಿಗೆ ಬಾಳೆಹಣ್ಣು ಬೆಳೆಸಲು ಹಚ್ಚಿ ಅವರ ಉತ್ಪನ್ನವನ್ನು ಕೊಂಡು ಪ್ಯಾಕ್ ಮಾಡಿ ಅಮೇರಿಕಕ್ಕೆ ಸಾಗಿಸುವ ಕೆಲಸ ಮಾತ್ರ ಮಾಡುತ್ತಿದ್ದರೂ ಅಲ್ಲಿಯ ರೈತರ ಹಾಗೂ ಇತರರ ಬದುಕನ್ನು ತನ್ನ ಮುಷ್ಠಿಯಲ್ಲಿರಿಸಿಕೊಂಡಿತ್ತು. ಇಡೀ ಲ್ಯಾಟಿನ್ ಅಮೇರಿಕದಲ್ಲಿ ವಿವಿಧೆಡೆ ತನ್ನ ಹಿಡಿತವನ್ನು ಸ್ಥಾಪಿಸಿದ್ದ ಈ ಕಂಪನಿ ಬಾಳೆಹಣ್ಣು ವ್ಯಾಪಾರದಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ಕಂಪನಿಯೆನಿಸಿತು. ಇದೇ ಕಂಪನಿಯ ಬಗ್ಗೆಯೇ ಚಿಲಿಯ ಕವಿ, ನೊಬೆಲ್ ಪ್ರಶಸ್ಥಿ ವಿಜೇತ, ಪ್ಯಾಬ್ಲೋ ನೆರುಡರವರು ಈ ಕಂಪನಿಯ ಹೆಸರಿನ ಪ್ರಸಿದ್ಧ ಕವಿತೆ ಬರೆದಿರುವುದು.   ಈ ಕಂಪನಿಯ ಶೋಷಣೆಯಿಂದಾಗಿ  ಬವಣೆ ಪಡುತ್ತಿದ್ದ ರೈತರು, ಕೆಲಸಗಾರರು 1928 ರಲ್ಲಿ, ಮಾರ್ಕ್ವೆಜ್ ಹುಟ್ಟಿದ ಒಂದೇ ವರ್ಷದ ನಂತರ ದಂಗೆಯೆದ್ದರು. ಆಗ ಅಲ್ಲಿಯ ಸಕರ್ಾರದ ಬೆಂಬಲದೊಂದಿಗೆ ಒಂದು ಮಾರಣ ಹೋಮವನ್ನೇ ನಡೆಸಿತು ಈ ಕಂಪನಿ. ಸಾವಿರಾರು ಜನರು ಸಾವಿಗೀಡಾದರು. ಇಡೀ ಪ್ರದೇಶದ ಜೀವನವೇ ಅಲ್ಲೋಲ ಕಲ್ಲೋಲವಾಯಿತು. ಈ ಕಂಪನಿಯ ಹಾಳು ಬಿದ್ದ ಕಟ್ಟಡಗಳನ್ನು ನೋಡುತ್ತಾ, ಈ ಮಾರಣ ಹೋಮದ ಬಗ್ಗೆ ಅಸಂಖ್ಯ ಕಥೆಗಳನ್ನು ತನ್ನ ಅಜ್ಜ, ಅಜ್ಜಿ ಮತ್ತು ನೆರೆಹೊರೆಯವರಿಂದ ಕೇಳುತ್ತಾ ಬೆಳೆದ ಮಾರ್ಕ್ವೆಜ್ ಮುಂದೆ ಪತ್ರಿಕಾ ವರದಿಗಾರರಾದರು. ಆಗ ಕೊಲಂಬಿಯಾ ದೇಶವನ್ನು ಆಳುತ್ತಿರುವವರ, ಅಲ್ಲಿಯ ಸವರ್ಾಧಿಕಾರದ ವಿವಿಧ ಮುಖಗಳ ಪರಿಚಯವಾಯಿತು. ಆ ಸಮಯದಲ್ಲಿಯೇ 1948ರಲ್ಲಿ ಆರಂಭವಾಗಿ 1960ರ ಮಧ್ಯ ಭಾಗದವರೆಗೆ ಮುಂದುವರೆದ ಹಿಂಸಾಕಾಂಡದಲ್ಲಿ 2 ರಿಂದ ಮೂರು ಲಕ್ಷ ಜನರು ಹತರಾದರು. ಈ ಸವರ್ಾಧಿಕಾರ  ಹಾಗೂ ಹಿಂಸಾಕಾಂಡವನ್ನು ಚೆನ್ನಾಗಿ ಅರ್ಥೈಸಿಕೊಂಡ ಕಮ್ಯೂನಿಸ್ಟರತ್ತ ಆಕಷರ್ಿತರಾದರು ಮಾಕ್ವರ್ೆಜ್. ಭೂಗತವಾಗಿದ್ದ ಈ ಪಕ್ಷದ ಗುಪ್ತ ಸಭೆಗಳಲ್ಲಿ ಭಾಗವಹಿಸಿದರು. ಆದರೆ ಅಲ್ಲಿನ ಪರಿಸ್ಥಿತಿಯಲ್ಲಿ ಅವರಿಗೆ ಪಕ್ಷದ ಸದಸ್ಯತ್ವ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಲಾಯಿತು.

ಅಮೇರಿಕದ ಸಾಮ್ರಾಜ್ಯಶಾಹಿ ಮತ್ತು ಆಳುವ ವರ್ಗದ ಗುಟ್ಟುಗಳನ್ನು ಬಯಲಿಗೆಳೆದರು ಅಲ್ಲಿಂದ ಅವರು ತಮ್ಮ ವರದಿ, ಲೇಖನಗಳಲ್ಲಿ ಅಮೇರಿಕದ ಸಾಮ್ರಾಜ್ಯಶಾಹಿಗಳು ಮತ್ತು ಅಲ್ಲಿನ ಆಳುವ ವರ್ಗದ ಗುಟ್ಟುಗಳನ್ನು ಬಯಲಿಗೆಳೆಯತೊಡಗಿದರು. ಇದರಿಂದ ಕೊಲಂಬಿಯಾದಲ್ಲಿ ಆಗಲೂ ಈಗಲೂ ಪ್ರಬಲವಾಗಿರುವ ಮಾಫಿಯಾ ಕೂಟಗಳಿಂದ ಜೀವ ಬೆದರಿಕೆಗಳು ಎದುರಾದವು. ಅವರು ಯೂರೋಪಿಗೆ ತಮ್ಮ ಪತ್ರಿಕೆಯ ವರದಿಗಾರರಾಗಿ ಕಳುಹಿಸಲ್ಪಟ್ಟರು.

ಅದೇ ಸಮಯದಲ್ಲಿ ಅವರು ಬರಹಗಾರರಾಗಿ ಹೊರ ಹೊಮ್ಮಿದರು. ಅವರ ಮುಖ್ಯ ಕಾದಂಬರಿ `ನೂರು ವರ್ಷಗಳ ಏಕಾಂತ’ವನ್ನು ಬರೆಯುತ್ತಿರುವಾಗ ಬಡತನ ಅವರನ್ನು ಕಾಡ ತೊಡಗಿತ್ತು. 18 ತಿಂಗಳ ಕಾಲ ಎಡಬಿಡದೆ ಬರೆದ ಈ ಸಮಯದಲ್ಲಿ ಅವರ ಕಾರು ಮಾರಿದರೂ ಜೀವನ ಕಷ್ಠವಾದಾಗ ಪತ್ನಿ ಸುತ್ತ ಮುತ್ತ ಇದ್ದ ಎಲ್ಲ ಅಂಗಡಿಗಳಲ್ಲಿ ಸಾಲ, ಮನೆಯ ಮಾಲೀಕನ ಬಳಿ 9 ತಿಂಗಳ ಬಾಡಿಗೆ ಬಾಕಿ ಇಂತಹ ಪರಿಸ್ಥಿತಿಯನ್ನು ಎದುರಿಸಿದರು. ಪುಸ್ತಕವನ್ನು ಮುದ್ರಿಸಲೆಂದು ಕಳುಹಿಸಲೂ ಅಂಚೆ ವೆಚ್ಚಕ್ಕೆ ಪತ್ನಿಯ ಬಳಿ ಇದ್ದ ಸಣ್ಣ ಆಭರಣ, ನೀರು ಕಾಯಿಸುವ ವಿದ್ಯುತ್ ರಾಡ್ ಇವುಗಳನ್ನು ಮಾರಿ ಕಳುಹಿಸಬೇಕಾಯಿತು. ಆಗಲೂ ಅದನ್ನು ಎರಡು ಭಾಗ ಮಾಡಿ ಒಂದು ಭಾಗ ಮಾತ್ರ ಕಳುಹಿಸಬೇಕಾಯಿತಂತೆ. ತಮಾಶೆಯೆಂದರೆ ಹಾಗೆ ಕಳುಹಿಸುವಾಗ ಅವರ ಪತ್ನಿ ಮೊದಲ ಭಾಗಕ್ಕೆ ಬದಲಾಗಿ ಎರಡನೇ ಭಾಗವನ್ನು ಕಳುಹಿಸಿಬಿಟ್ಟರಂತೆ. ಆದರೆ ಪ್ರಕಾಶಕರು ಅದನ್ನೇ ನೋಡಿ ಆಕಷರ್ಿತರಾಗಿ ಉಳಿದ ಭಾಗವನ್ನು ಕಳುಹಿಸಲು ಹಣ ಕಳುಹಿಸಿಕೊಟ್ಟರಂತೆ. ಹೀಗೆ ಬರೆಯಲ್ಪಟ್ಟ ಈ ಕಾದಂಬರಿ ಪ್ರಕಟವಾದ ಕೆಲವೇ ದಿನಗಳಲ್ಲಿ ಬಹಳ ಜನಪ್ರಿಯವಾಗಿಬಿಟ್ಟಿತು. ಅಂದಿನಿಂದ ಅವರು ತಿರುಗಿ ನೋಡಬೇಕಾಗಿ ಬರಲಿಲ್ಲ.

ಈ ಕಾದಂಬರಿ ಅವರಿಗೆ ಇಡೀ ಖಂಡದಲ್ಲಿ ಪ್ರಸಿದ್ಧಿಯನ್ನು ಹಾಗೂ ಪ್ರಸಿದ್ಧರ ಸ್ನೇಹವನ್ನು ಒದಗಿಸಿತು. ಅದನ್ನು ಅವರು ಮುಂದೆ ತಮ್ಮ ಜೀವನದುದ್ದಕ್ಕೂ ಎಡಪಂಥೀಯ ವಿಚಾರ ಧಾರೆ,  ರಾಜಕೀಯದ ಬಗ್ಗೆ ಬರೆಯುವುದಕ್ಕೆ ಮೀಸಲಿಟ್ಟರು. ಕ್ಯೂಬಾದ ಕ್ರಾಂತಿ ನಡೆಯುತ್ತಿದ್ದ ಸಮಯದಲ್ಲಿ ಅಲ್ಲಿಗೆ ಧಾವಿಸಿ ಅದರ ಪ್ರತ್ಯಕ್ಷ ವಿವರಣೆ ನೀಡಿದರು. ವಿಯೆಟ್ನಾಂ ಮೇಲಿನ ಅಮೇರಿಕದ ಧಾಳಿಯ ಬಗ್ಗೆ, ಚಿಲಿಯಲ್ಲಿ ಪ್ರಗತಿಪರ, ಪ್ರಜಾಸತ್ತಾತ್ಮಕವಾಗಿ ಆರಿಸಲ್ಪಟ್ಟ ಸಕರ್ಾರವನ್ನು ಕಿತ್ತು ಹಾಕಿ, ಅದರ ಅ ಧ್ಯಕ್ಷ ಅಲೆಂಡೇ ಯವರನ್ನು ಕೊಂದು ಅಮೇರಿಕ ಹೇರಿದ ದಬ್ಬಾಳಿಕೆಯ ಬಗ್ಗೆ, ಆಫ್ರಿಕಾದ ಹೊರಾಟಗಳ ಬಗ್ಗೆ, ಸೋವಿಯೆತ್ ಒಕ್ಕೂಟ, ಪೂರ್ವ ಯುರೋಪಿನ ಸಮಾಜವಾದೀ ದೇಶಗಳ ಬಗ್ಗೆ ಬರೆದರು. ಅದಕ್ಕಾಗಿ ಒಂದು ಪತ್ರಿಕೆಯನ್ನೇ ಕೊಂಡರು, ನಡೆಸಿದರು. ಅಲ್ಲಿಯ ಬೇರೆ ಬೇರೆ ಸವರ್ಾಧಿಕಾರಿಗಳು ಹಾಗೂ ಭೂಗತ ಹೋರಾಟಗಾರರ ನಡುವೆ ಸಂಧಾನ ನಡೆಸಿದರು. ಇದರಿಂದ ಅವರು ಮೂರು ದಶಕಗಳ ಕಾಲ, ಮುಂದೆ ಬಿಲ್ ಕ್ಲಿಂಟನ್  ಸಹಾಯವನ್ನು ಬಯಸುವವರೆಗೆ ಮಾರ್ಕ್ವೆಜ್ ಅಮೇರಿಕ ಸಕರ್ಾರದ  ಬಹಿಷ್ಕಾರಕ್ಕೆ ಒಳಗಾದರು. ಅಷ್ಟು ಮಾತ್ರವಲ್ಲ ಯಾವಾಗ ಬೇಕಾದರೂ ಕೊಲಂಬಿಯಾ ಮತ್ತಿತರ ದೇಶಗಳ ಪ್ರತಿಗಾಮಿ ಮಾಫಿಯಾಗಳಿಂದ ಕೊಲೆಯಾಗುವ ಸಂಭವವನ್ನು ಎದುರಿಸುತ್ತಾ ಬದುಕಿದರು. ಅದರಿಂದಾಗಿ ಅವರು ತಮ್ಮ ದೇಶ ಹಾಗೂ ತಮ್ಮಂದಿರು, ಬಂಧುಗಳನ್ನು ಬಿಟ್ಟು ಮೆಕ್ಸಿಕೋ ದೇಶದಲ್ಲಿ ಖಾಯಂ ಆಗಿ ನೆಲಸಬೇಕಾಯಿತು. ಕೊನೆಗೆ ಅವರ ಅಂತ್ಯವೂ, ಅಂತ್ಯ ಸಂಸ್ಕಾರವೂ ಮೆಕ್ಸಿಕೋದಲ್ಲಿಯೇ ಆಯಿತು.

ಕ್ಯೂಬಾಕ್ಕೆ ವರದಿ ಮಾಡಹೋದ ಅವರು ಅಲ್ಲಿಯೇ ಎರಡು ವರ್ಷ ನೆಲಸಿ ಆ ದೇಶದ ಸ್ವತಂತ್ರ ಸುದ್ದಿ ಸಂಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡಿದರು. ಅದರ ಉಪ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಅಲ್ಲಿಯ  ಸಿನೆಮಾ ತರಬೇತಿ ಸಂಸ್ಥೆಯ ನಿದರ್ೇಶಕ ಮಂಡಳಿಯಲ್ಲಿ ಕೆಲಸ ಮಾಡಿದರು. ಅಮೇರಿಕ ಮತ್ತು ಕ್ಯೂಬಾದ ನಡುವೆ ಕೂಡ ಸಂಧಾನಕಾರರಾಗಿ ಮುಖ್ಯ ಪಾತ್ರ ವಹಿಸಿದರು. ಅನೇಕ ಲ್ಯಾಟಿನ್ ಅಮೇರಿಕದ ಎಡಪಂಥೀಯ ಲೇಖಕರು ಕ್ಯೂಬಾ ವಿರುದ್ಧ ತಿರುಗಿದಾಗ ಕೂಡಾ ಕ್ಯೂಬಾದ ಮಿತ್ರನಾಗಿ ಉಳಿದರು. ಅದರಿಂದ ಜೊತೆಯ ಸಾಹಿತಿಗಳಿಂದ ಟೀಕೆ, ಅಪಹಾಸ್ಯಗಳಿಗೆ ಒಳಗಾದರು ಕೂಡ. ಆದರೆ ಅವರ ಮತ್ತು ಫಿಡೆಲ್ ಕ್ಯಾಸ್ಟ್ರೋರವರ 5 ದಶಕಗಳ ಸ್ನೇಹಕ್ಕೆ ಕೊನೆಯವರೆಗೂ ಚ್ಯುತಿ ಬರಲಿಲ್ಲ. ಅವರು ಫಿಡೆಲ್ ಕ್ಯಾಸ್ಟ್ರೋರವರ ದೀರ್ಘ ಸಂದರ್ಶನ ನಡೆಸಿ ಬರೆದ ಪುಸ್ತಕ  ಕ್ಯಾಸ್ಟ್ರೋ ಹಾಗೂ ಕ್ಯೂಬಾದ ಬಗ್ಗೆ ಅನೇಕ ಒಳನೋಟಗಳನ್ನು ನೀಡುತ್ತದೆ.

ಇಂದು ಲ್ಯಾಟಿನ್ ಅಮೇರಿಕದಲ್ಲಿ,  ಅಲ್ಲಿಯ ಅಮೇರಿಕ ಬೆಂಬಲಿತ ಸವರ್ಾಧಿಕಾರಿಗಳ ಆಡಳಿತವನ್ನು ಕಿತ್ತು ಹಾಕಿ ಎಡ ಪಂಥೀಯ ಸಕರ್ಾರಗಳು ಬೆಳೆದು ಬರುತ್ತಿರುವಾಗ, ಅವುಗಳನ್ನು ಉರುಳಿಸಲು ಅಮೆರಿಕ ಅನೇಕ ಒಳಸಂಚುಗಳನ್ನು ನಡೆಸುತ್ತಿರುವಾಗ ಮಾಕ್ವರ್ೆಜ್ ರವರ ಅಗತ್ಯ ಬಹಳವಾಗಿತ್ತು. ಅಂತಹ ಒಬ್ಬ ಎಡ ಪಂಥೀಯ ಚಳುವಳಿಗಳ ಹಾಗೂ ಶೋಷಿತ ಜನತೆಯ ಮಿತ್ರ ಇನ್ನಿಲ್ಲ. ಆದರೆ ಅವರ ಕೃತಿಗಳು ಜಗತ್ತಿನಲ್ಲಿ ಅನೇಕ ಸಾಹಿತಿಗಳಿಗೆ ಸ್ಪೂತರ್ಿಯನ್ನು ನೀಡಿವೆ. ನೀಡುತ್ತಿವೆ. ಓದುಗರ ಮನದಲ್ಲಿ ಸಮಾಜವನ್ನು ಅರ್ಥ ಮಾಡಿಕೊಳ್ಳುವ ಹಾಗೂ ಕ್ರಿಯಾಶೀಲರಾಗುವ ಹೊಸ ಹೊಳಹುಗಳನ್ನು ನೀಡುತ್ತವೆ.

ಎಡಪಂಥೀಯ ಚಳುವಳಿಗಳಿಗೆ ಸಂಬಂಧಿಸಿ ಅವರ ಇಂತಹ ನಡವಳಿಕೆ ಹೊಸತೇನಲ್ಲಾ ಎಂಬುದು ನಮಗೆ ಮತ್ತೆ ಮತ್ತೆ ಅನೇಕ ರೀತಿಯಲ್ಲಿ ಸಾಬೀತಾಗುತ್ತಲೇ ಇದೆ. ತೀರಾ ಇತ್ತೀಚಿನ ಒಂದು ಉದಾಹರಣೆಯೆಂದರೆ ಪಾಕಿಸ್ತಾನದ ಬಾಲಕಿಯರ ಶಿಕ್ಷಣದ ಹಕ್ಕಿನ ಹೋರಾಟಗಾತರ್ಿ ಮಲಾಲಳದ್ದು. ಶಿಕ್ಷಣ ಪಡೆಯುತ್ತಿದ್ದ ಹುಡುಗಿಯರ ಮೇಲೆ ತಾಲಿಬಾನ್ ಎಸಗುತ್ತಿದ್ದ ಧಾಳಿಯನ್ನು ಎದುರಿಸುವ ಕೆಚ್ಚು ಅವಳಲ್ಲಿ ಮೂಡಿದ್ದರಲ್ಲಿ ಪಾಕಿಸ್ತಾನದ ಕಮ್ಯೂನಿಸ್ಟ್ ಪಕ್ಷ ಮತ್ತು ಅದರ ನೇತೃತ್ವದ ಎಡಪಂಥೀಯ ವಿದ್ಯಾಥರ್ಿ ಚಳುವಳಿಯ ಮುಖ್ಯ ಪಾತ್ರ ಇದೆ ಎಂಬುದನ್ನು ಯಾರೂ ಬರೆಯ ಹೋಗುವುದಿಲ್ಲ. ಅವಳ ಜನಪ್ರಿಯ ಜೀವನ ಚರಿತ್ರೆ, ಆತ್ಮ ಚರಿತ್ರೆಗಳಲ್ಲಿ ಈ ಪ್ರಸ್ತಾಪವೇ ಇಲ್ಲ. ಇತ್ತೀಚೆಗೆ ನಡೆದ ಪಾಕಿಸ್ತಾನ ಕಮ್ಯೂನಿಸ್ಟ್ ಪಕ್ಷದ ಮಹಾಧಿವೇಶನಕ್ಕೆ ಮಲಾಲ ಬಹಳ ಒಳ್ಳೆಯ ಸಂದೇಶವನ್ನು ಬರೆದು ಕಳುಹಿಸಿದ್ದಳು ಎಂಬ ವಿಷಯವನ್ನು ಯಾವ ಪತ್ರಿಕೆ-ಮಾಧ್ಯಮವೂ ಪ್ರಕಟಿಸಲೇ ಇಲ್ಲ.

ಹೆಲೆನ್ ಕೆಲ್ಲೆರ್ ವಿಷಯದಲ್ಲಿ
ಹೆಲೆನ್ ಕೆಲ್ಲೆರ್ ಜಗತ್ತಿನ ಅಂಗವಿಕಲರ ಚಳುವಳಿಯಲ್ಲಿ, ಮುಖ್ಯವಾಗಿ ಅಂಧರ ಸಂಘಟನೆಗಳು ಆರಾಧಿಸುವ ಹೆಸರು. ಅಲ್ಲೆಲ್ಲ ಕಡೆ ಆಕೆಯ ಛಾಯಾಚಿತ್ರ ಕಂಗೊಳಿಸುತ್ತದೆ. ಹುಟ್ಟು ಕುರುಡಿಯಾಗಿದ್ದರೂ ಅವಳ ಮೇಲ್ವಿಚಾರಕಿಯ ನೆರವಿನಿಂದ ವಿದ್ಯಾಭ್ಯಾಸ ಹಾಗೂ ಪದವಿಗಳನ್ನು ಪಡೆದು ಒಬ್ಬ ಒಳ್ಳೆಯ ಬರಹಗಾತರ್ಿಯಾಗಿ ಖ್ಯಾತಳಾದಳು. ಅಂಧರ ಹಾಗೂ ಇತರ ಅಂಗವಿಕಲ ಕಲ್ಯಾಣಕ್ಕಾಗಿ ದುಡಿದಳು. ಇದನ್ನು ಈ ಎಲ್ಲಾ ಕಡೆ ನೆನಪಿಸಿಕೊಳ್ಳಲಾಗುತ್ತದೆ. ಆದರೆ ಶಿಕ್ಷಣ ಪಡೆದ ನಂತರ ಅವಳು ಅಂದಿನ ಅಮೇರಿಕದ ಕಮ್ಯೂನಿಸ್ಟ್ ಪಕ್ಷವಾಗಿದ್ದ ಸೋಷಿಯಲಿಸ್ಟ್ ಪಕ್ಷದ ಸದಸ್ಯಳಾಗಿದ್ದಳು. ಅನೇಕ ಕಾಮರ್ಿಕ ಹೋರಾಟಗಳಲ್ಲಿ ಭಾಗವಹಿಸಿದಳು. ಯುದ್ಧ ವಿರೋಧಿ ಚಳುವಳಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದಳು. ಇವೆಲ್ಲವುಗಳಿಂದ ಅವಳು ಪಡೆದ ತಿಳುವಳಿಕೆ, ಸ್ಪೂತರ್ಿ, ನೆರವು ಅವಳು ಅಂಗವಿಕಲರ ಚಳುವಳಿಯಲ್ಲಿ ದೊಡ್ಡ ಪಾತ್ರ ವಹಿಸುವುದಕ್ಕೆ ಕಾರಣವಾಯಿತು ಎಂಬುದನ್ನು ಅವಳ ಅಸಂಖ್ಯ ಜೀವನ ಚರಿತ್ರೆಗಳು ವಿವರಿಸುವುದಿಲ್ಲ. ಅದು ಅಂಗವಿಕಲರ ಚಳುವಳಿಯಲ್ಲಿ ಅಜ್ಞಾತ ಸಂಗತಿಯನ್ನಾಗಿ ಮಾಡಲಾಗಿದೆ. ಕಮ್ಯೂನಿಸ್ಟ್ ಸಿದ್ಧಾಂತ ಎಲ್ಲಿ ಜನಪ್ರಿಯವಾಗಿ ತಮ್ಮ ಕಾರ್ಪೋರೇಟ್ ದುಲರ್ಾಭಕ್ಕೆ ಕುತ್ತು ತರುತ್ತದೋ ಎಂಬ ಭಯದಿಂದ ಇಡೀ ವ್ಯವಸ್ಥೆಯೇ ಹೇಗೆಲ್ಲಾ ಅದರ ಪ್ರಸಾರವನ್ನು ತಡೆಗಟ್ಟುತ್ತದೆ ಎಂಬುದನ್ನು ಈ ಪ್ರಸಂಗಗಳು ಹೇಳುತ್ತವೆ. ಇದು ಜಗತ್ತಿನೆಲ್ಲಾ ಕಮ್ಯೂನಿಸ್ಟರು ತಮ್ಮ ಸಿದ್ಧಾಂತವನ್ನು ಜನರಿಗೆ ತಿಳಿಸುವುದನ್ನೇ ಒಂದು ಸವಾಲಾಗಿ ಸ್ವೀಕರಿಸಬೇಕು. ಮಾಧ್ಯಮ-ಪತ್ರಿಕೆ, ಶಿಕ್ಷಣ ವ್ಯವಸ್ಥೆ, ಸಾಹಿತ್ಯ, ಸಿನೆಮಾಗಳ ಬಹಿಷ್ಕಾರವನ್ನು, ವಿರೂಪವನ್ನು ಎದುರಿಸಿ ದುಡಿಯುವ ಜನರಿಗೆ ವಿವರಿಸಲು ನಿರಂತರ ಹಾಗೂ ಸೃಜನಶೀಲವಾಗಿ ಹೊಸ ಹೊಸ ವಿಧಾನಗಳನ್ನು ಹುಡುಕಬೇಕು ಎಂಬುದನ್ನು ನಮ್ಮ ಮುಂದಿಡುತ್ತವೆ.
0