ಸಂಪುಟ 10, ಸಂಚಿಕೆ 6 ಫೆಬ್ರವರಿ 07, 2016  

ಕನಿಷ್ಟ ಕೂಲಿಯನ್ನು ಮಾಸಿಕ 18,000 ರೂ.  ನಿಗದಿಗೊಳಿಸಬೇಕು, ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ನಿಷೇಧಿಸಬೇಕು, ಹಾಲಿ ಮುನಿಸಿಪಾಲಿಟಿ, ಆಸ್ಪತ್ರೆ, ನಿಗಮ ಮಂಡಳಿಗಳಲ್ಲಿ, ಹಾಸ್ಟಲ್, ಖಾಸಗಿ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಅಂಗನವಾಡಿ, ಬಿಸಿ ಊಟ, ಆಶಾಗಳಲ್ಲಿ ದುಡಿಯುತ್ತಿರುವ  ನೌಕರರ  ಸೇವೆಯನ್ನು ಖಾಯಂಗೊಳಿಸಬೇಕು, ಹಾಗು ಅನುಧಾನ ಕಡಿತವನ್ನು ನಿಲ್ಲಿಸಿ, ಮುಂದಿನ  ಬಜೆಟ್ ನಲ್ಲಿ  ಪೂರ್ಣ ಅನುಧಾನ ನೀಡಬೇಕು, ಕೇಂದ್ರ ಸರ್ಕಾರ  ರೈತ -ಕಾರ್ಮಿಕರ  ಪರವಾದ  ನೀತಿಯನ್ನು ಜಾರಿಗೊಳಿಸಬೇಕು ಮೊದಲಾದ  ಬೇಡಿಕೆಗಳ ಜಾರಿಗಾಗಿ ಫೆಬ್ರವರಿ 05ರಂದು ದೇಶದ ಎಲ್ಲಾ ಕಡೆಗಳಲ್ಲಿ ಕಾರ್ಮಿಕರ ಪ್ರತಿಭಟನೆ ನಡೆಲಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಿನಾಕ್ಷಿ ಸುಂದರಂ ತಿಳಿಸಿದರು.

ಅವರು ದಿನಾಂಕ 24-01-2016ರಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಸಂಘಟನೆಯ ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆಯ ತೀರ್ಮಾನಗಳ ಬಗ್ಗೆ ತಿಳಿಸಲು ತುಮಕೂರು ನಗರದಲ್ಲಿ ಏರ್ಪಡಿಸಿದ್ದ ಸಭೆಯನ್ನು ಉದ್ದೆಶಿಸಿ ಮಾತನಾಡುತ್ತಿದ್ದರು, ಮುಂದುವರಿದು ಮಾತನಾಡಿದ  ಅವರು ಕಾರ್ಮಿಕ ವರ್ಗವು  ಐಕ್ಯತೆಯಿಂದ ಚಳುವಳಿ ಯಶಸ್ವಿಗೊಳಿಸಲು  ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಸೈಯದ್ ಮುಜಿಬ್ ಅವರು ಮಾತನಾಡಿ ರಾಜ್ಯ ಸರ್ಕಾರವೂ   ಕಾರ್ಮಿಕರ ಕನಿಷ್ಟ ಕೂಲಿಯನ್ನು ಕಡಿತ ಮಾಡಲು ಹೋರಡುವ ಕ್ರಮವನ್ನು ಕೈಬಿಡುವಂತೆ ಆಗ್ರಹಿಸಿದರು ಹಾಗು ಬೀಡಿ ಕಾರ್ಮಿಕರ ತುಟಿಭತ್ಯೆ ನೀಡದಂತೆ ಅದೇಶಿಸಿರುವುದನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುಬ್ರಮಣ್ಯ, ಜಿಲ್ಲಾ ಖಚಾಂಜಿ ಜಿ. ಕಮಲ, ಕಟ್ಟಡ ಕಾರ್ಮಿಕರ ಸಂಘ ಜಿಲ್ಲಾಧ್ಯಾಕ್ಷರಾದ ಬಿ.ಉಮೇಶ, ಗ್ರಾಮ ಪಂಚಾಯತಿ ನೌಕರರ ಸಂಘದ ನಾಗೇಶ್, ಅಂಗನವಾಡಿ ನೌಕರರ ಸಂಘದ ಗುಲ್ಜಾರ್ ಬಾನು, ಶಾಂತಕುಮಾರಿ, ಅನಸೂಯ, ಕೈಗಾರಿಕ ಕಾರ್ಮಿಕ ಸಂಘದ ಮುಖಂಡರಾದ ದಿಸಾ ಲೋಕೆಶ್. ಷಣ್ಮುಗಪ್ಪ, ಶಶಿಕುಮಾರ, ಶಿವಕುಮಾರ್, ಸಂದೀಪ್ ಗೌಡ ಮತ್ತಿತರರು ಹಾಜರಿದ್ದರು.

DSC_0900 (1)